For Quick Alerts
ALLOW NOTIFICATIONS  
For Daily Alerts

10 ಅಸಾಮಾನ್ಯ ಕಾಯಿಲೆಗಳಿಗೆ ಮದ್ದು ಯೋಗದಲ್ಲಿದೆ!

|

ಯೋಗಾಭ್ಯಾಸವು ಯಾವುದೇ ರೀತಿಯ ಕಾಯಿಲೆಯನ್ನು ವಾಸಿಮಾಡಬಲ್ಲುದು. ಪ್ರತೀದಿನ ಯೋಗಾಭ್ಯಾಸವನ್ನು ಮಾಡುವುದರಿಂದ ಕಾಯಿಲೆಗಳನ್ನು ತಡೆಗಟ್ಟಬಹುದು ಮತ್ತು ವಾಸಿಕೂಡ ಮಾಡಬಹುದು.

ಯೋಗಾಭ್ಯಾಸವನ್ನು ಪ್ರತಿದಿನ ತಪ್ಪದೇ ಮಾಡುವುದರಿಂದ ದೀರ್ಘಕಾಲ ಕಾಡುವಂತಹ ಅಸ್ತಮಾ ಮತ್ತು ಸಂಧಿವಾತಗಳಂತಹ ಕಾಯಿಲೆಗಳನ್ನು ವಾಸಿಮಾಡಿಕೊಳ್ಳಬಹುದು. ಸಕ್ಕರೆ ಕಾಯಿಲೆಯನ್ನು ವಾಸಿ ಮಾಡಲಾಗದಿದ್ದರೂ ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಯೋಗಾಸನದಿಂದ ಕೆಲವು ಗಂಭೀರ ಕಾಯಿಲೆಗಳನ್ನು ಕೂಡ ವಾಸಿಮಾಡಬಹುದೆಂದು ಬೋಲ್ಡ್ ಸ್ಕೈ ವರದಿ ಹೇಳುತ್ತದೆ.

ಯೋಗಾಸನದಿಂದ ವಾಸಿ ಮಾಡಬಹುದಾದ 10 ಅಸಾಮಾನ್ಯ ಕಾಯಿಲೆಗಳು ಹೀಗಿವೆ:

ಅಸ್ತಮಾ

ಅಸ್ತಮಾ

ಅಸ್ತಮಾದ ನಿಯಂತ್ರಣಕ್ಕೆ ಯೋಗಾಸನ ಪರಿಣಾಮಕಾರಿ ಔಷಧಿಯಿದ್ದಂತೆ. ಅಸ್ತಮಾ ನಿಮ್ಮನ್ನು ಕಾಡಿದಾಗ ಯೋಗ ನಿಮಗೆ ದೀರ್ಘಕಾಲದ ಪರಿಹಾರವನ್ನು ನೀಡುತ್ತದೆ.

ಸಕ್ಕರೆ ಕಾಯಿಲೆ

ಸಕ್ಕರೆ ಕಾಯಿಲೆ

ಸಕ್ಕರೆ ಕಾಯಿಲೆ ವಾಸಿಯಾಗುವುದಿಲ್ಲ. ಇನ್ಸುಲಿನ್ನ್ ಗಳು ಕೂಡ ಇದನ್ನು ನಿಯಂತ್ರಿಸಲು ಹೆಚ್ಚು ಸಹಕಾರಿಯಲ್ಲ. ಆದರೆ ಯೋಗಾಸನವು ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಕರಿಸುತ್ತವೆ

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡವು ಉಂಟಾಗಲು ಕಾರಣಗಳು ಹಲವು. ಯೋಗಾಸನ ಮತ್ತು ಧ್ಯಾನವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಇದನ್ನು ವಾಸಿಮಾಡಲು ಸಾಧ್ಯ.

ಅಜೀರ್ಣ

ಅಜೀರ್ಣ

ಅಜೀರ್ಣ ಕಾಯಿಲೆಯಲ್ಲ ಆದರೆ ಇಂದು ಕೆಲಸಕ್ಕೆ ಹೋಗುವವರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಯೋಗಾಸನವನ್ನು ಅಭ್ಯಾಸ ಮಾಡುವುದರಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಮೈಗ್ರೇನ್

ಮೈಗ್ರೇನ್

ಮೆದುಳಿಗೆ ಸಮರ್ಪಕವಾದ ರಕ್ತ ಸಂಚಾರ ಉಂಟಾಗದಿದ್ದಾಗ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುತ್ತದೆ. ಶೀರ್ಷಾಸನವನ್ನು ಅಭ್ಯಾಸ ಮಾಡುವುದರಿಂದ ಈ ಬಗೆಯ ತಲೆನೋವಿನಿಂದ ಪಾರಾಗಬಹುದು.

ಸೊಂಟ ನೋವು/ ಬೆನ್ನಿನ ಕೆಳ ಭಾಗದ ನೋವು

ಸೊಂಟ ನೋವು/ ಬೆನ್ನಿನ ಕೆಳ ಭಾಗದ ನೋವು

ಇದೊಂದು ದೀರ್ಘಕಾಲ ಕಾಡುವಂತಹ ನೋವು. ಇದು ಸಾಮಾನ್ಯವಾಗಿ ಒಂದೇಕಡೆ ಕೂತು ಕೆಲಸ ಮಾಡುವವರಲ್ಲಿ ಮತ್ತು ಕೆಲವು ಬಗೆಯ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡವರಲ್ಲಿ ಕಂಡುಬರುತ್ತದೆ. ತಾಡಸನವನ್ನು ಅಭ್ಯಾಸ ಮಾಡಿದರೆ ಇದು ಪರಿಹಾರವಾಗುತ್ತದೆ.

ಸಂಧಿವಾತ

ಸಂಧಿವಾತ

ಸಂಧಿವಾತವು ಕೀಲುಗಳಲ್ಲಿ ಅಸಾಧ್ಯ ನೋವುಂಟುಮಾಡುತ್ತದೆ. ದುರಾದೃಷ್ಟವೆಂದರೆ ಇದನ್ನು ಗುಣಪಡಿಸಲು ಯಾವುದೇ ಔಷಧವಿಲ್ಲ. ಆದರೆ ಯೋಗಾಭ್ಯಾಸವು ಸಂಧಿವಾತದ ನೋವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಯಕೃತ್ತಿನ ಸಮಸ್ಯೆಗಳು

ಯಕೃತ್ತಿನ ಸಮಸ್ಯೆಗಳು

ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗಾಭ್ಯಾಸ ಮಾಡುವುದು ಒಳ್ಳೆಯದು. ಇದು ಹೊಟ್ಟೆಯಲ್ಲಿನ ರಕ್ತಪರಿಚಲನೆಯನ್ನು ಕೂಡ ಹೆಚ್ಚು ಮಾಡುತ್ತದೆ.

ಖಿನ್ನತೆ

ಖಿನ್ನತೆ

ಯೋಗಾಭ್ಯಸವು ಖಿನ್ನತೆಗೆ ಒಂದು ಪರಿಣಾಮಕಾರಿ ಔಷಧ. ನಿಮಗೆ ಖಿನ್ನತೆಯನ್ನು ದೂರ ಸರಿಸಲು ಯಾವುದೇ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳಲು ಇಷ್ಟವಿಲ್ಲವೆಂದರೆ ಉತ್ತಾಸನದಂತಹ ಆಸನಗಳನ್ನು ಅಭ್ಯಾಸ ಮಾಡಿ.

ಪಾಲಿಸಿಸ್ಟಿಕ್ ಓವರಿ ಅಥವ ಪಿಸಿಒಎಸ್

ಪಾಲಿಸಿಸ್ಟಿಕ್ ಓವರಿ ಅಥವ ಪಿಸಿಒಎಸ್

ಇದು ಹಾರ್ಮೋನುಗಳ ತೊಂದರೆಯಿಂದ ಹೆಂಗಸರಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ತೊಂದರೆ. ಇದು ಅಂಡಾಶಯಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅನಿಯಮಿತ ಋತುಚಕ್ರ ಇದರ ಪ್ರಮುಖ ಲಕ್ಷಣ. ಇದರಿಂದ ಬಂಜೆತನ ಕೂಡ ಉಂಟಾಗಬಹುದು.

English summary

10 Diseases That Can Be Treated With Yoga

Yoga can cure chronic diseases such as asthma and arthritis, if done regularly. Yoga can not cure diabetes, but it is effective in controlling blood sugar at normal levels. Here are some of the serious diseases that can be cured by yoga, as reported by Boldsky.
 
X
Desktop Bottom Promotion