March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!

ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 07 (March 07 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಈ ದಿನವು ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಾಗಿ ತರಲಿದೆ. ನೀವು ಅಂದುಕೊಂಡಿದ್ದ ಕೆಲಸದಲ್ಲಿ ಹಲವು ರೀತಿಯ ಅಡ್ಡಿಗಳ ನೋಡಬಹುದು. ನಿಮಗೆ ಸೇರಬೇಕಿದ್ದ ಹಣ ಕೈ ತಪ್ಪಬಹುದು. ನಿಮಗೆ ಅನಾರೋಗ್ಯ ಕಾಡಬಹುದು.

ವೃಷಭ ರಾಶಿ

ವೃಷಭ ರಾಶಿ ಜನರಲ್ಲಿ ಈ ದಿನವು ಸಮಸ್ಯೆಗಳ ತರಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ಮಟ್ಟದ ವಿಚಾರಗಳು ಚಿಂತೆಯ ತರಲಿದೆ. ನೀವು ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿದ್ದರೆ ಅವರಿಂದ ಒತ್ತಡಗಳು ಹೆಚ್ಚಾಗಬಹುದು.

March-07-2025-daily-horoscope-prediction

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಈ ದಿನ ಮಿಶ್ರಫಲವಿದೆ. ಗೃಹಿಣಿಯರು ಹಾಗೆ ನಿರುದ್ಯೋಗಿ ಯುವತಿಯರಿಗೆ ಕಷ್ಟಕರವಾದ ದಿನವಾಗಬಹುದು. ನಿಮ್ಮಲ್ಲಿದ್ದ ದೊಡ್ಡ ಸಮಸ್ಯೆಯೊಂದು ಮತ್ತೆ ಕಾಡಬಹುದು. ಅನಾರೋಗ್ಯ ಸಂಬಂಧಿತ ವಿಚಾರದಲ್ಲಿ ಎಚ್ಚರದಿಂದ ಇರುವುದು ಉತ್ತಮ.

ಕರ್ಕ ರಾಶಿ

ಕರ್ಕ ರಾಶಿ ಜನರಿಗೆ ಇಂದು ಉತ್ತಮ ದಿನ. ನೀವು ಮಾಡಬೇಕಿದ್ದ ಅಥವಾ ಅರ್ಧಕ್ಕೆ ನಿಲ್ಲಿಸಿರುವ ಕೆಲಸಗಳನ್ನು ಪೂರ್ಣ ಮಾಡುವಿರಿ. ಸಮಸ್ಯೆಗಳಿಂದ ನಿಮಗೆ ಮುಕ್ತಿ ಪಡೆಯುವ ದಿನ. ಹಣಕಾಸು ವ್ಯವಹಾರ ಮಾಡುವಾಗ ಎಚ್ಚರದಿಂದ ಇರುವುದು ಉತ್ತಮ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಮಿಶ್ರಫಲ. ಹಣಕಾಸು ವಿಚಾರದಲ್ಲಿ ನೀವು ಅಂದುಕೊಂಡಂತೆ ನಡೆಯದೆ ಇರಬಹುದು. ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚಾಗಬಹುದು. ಪ್ರಮಾಣಿಕ ಶ್ರಮವನ್ನು ಗುರುತಿಸಲಾಗುತ್ತದೆ. ಮನೆಯ ವಿಚಾರದವೊಂದು ನಿಮಗೆ ಸಂತಸ ತರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಲ್ಲಿ ಈ ದಿನವು ಅನುಕೂಲವನ್ನು ತರಲಿದೆ, ಆಪ್ತರಿಗೆ ನೀವು ಹಣಕಾಸಿನ ನೆರವು ನೀಡುವಿರಿ. ಹೊಸ ಉದ್ಯೋಗ ಸಂಬಂಧ ನಿಮಗೆ ಉತ್ತಮ ಸುದ್ದಿ ಬರಲಿದೆ. ದಿನದ ಅಂತ್ಯದಲ್ಲಿ ನಿಮಗೆ ಖರ್ಚುಗಳಿವೆ. ಪತ್ನಿ ಮನ ನೋವಿಸುವ ಕೆಲಸ ಮಾಡಬಹುದು.

ತುಲಾ ರಾಶಿ

ಇಂದು ಗೃಹಿಣಿತರಿಗೆ ಪ್ರಯಾಣ ಮಾಡಬೇಕಾದ ದಿನವಾಗುತ್ತಿದೆ. ಎಲ್ಲರೊಂದಿಗೆ ತಾಳ್ಮೆಯಿಂದ ಇರುವುದು ಉತ್ತಮ. ದಾಂಪತ್ಯ ವಿಚಾರದಲ್ಲಿ ಎದುರಿಸಿರುವ ಸಮಸ್ಯೆಗಳು ದೊಡ್ಡದಾಗಬಹುದು. ವ್ಯಾಪಾರಿ ಮಂದಿಗೆ ಲಾಭದಾಯಕ ದಿನವಾಗುತ್ತಿದೆ. ಆಪ್ತರ ಭೇಟಿಯಾಗಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಈ ದಿನ ಮಿಶ್ರಫಲ ತರಲಿದೆ, ನಿಮ್ಮ ಹಣಕಾಸು ವಿಚಾರವಾಗಿ ನೀವು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಸ್ವಂತ ವ್ಯವಹಾರದಲ್ಲಿ ಲಾಭ ಮಾಡುವ ಅವಕಾಶ ಪಡೆಯಲಿದ್ದೀರಿ. ವಾಹನ ಸಂಬಂಧಿತ ವಿಚಾರದಲ್ಲಿ ತಾಳ್ಮೆ ಇಟ್ಟುಕೊಳ್ಳಿ.

ಧನು ರಾಶಿ

ಧನು ರಾಶಿ ಜನರಿಗೆ ಈ ದಿನವು ಆರಾಮದಾಯಕ ದಿನ. ನೀವು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ದಾಂಪತ್ಯ ವಿಚಾರವಾಗಿ ನೀವು ಅನುಭವಿಸಿದ್ದ ಚಿಂತೆ ದೂರಾಗಲಿದೆ. ಮಕ್ಕಳ ಆರೋಗ್ಯದಲ್ಲಿ ಏರು ಪೇರು ಸಂಭವಿಸಬಹುದು. ಖರ್ಚುಗಳ ಮೇಲೆ ನಿಗಾ ಇಡಿ.

ಮಕರ ರಾಶಿ

ಮಕರ ರಾಶಿಯ ಜನರಲ್ಲಿ ಈ ದಿನವು ಪ್ರಯಾಣಗಳಿಂದ ತುಂಬಿದೆ. ದಿನದ ಅಂತ್ಯದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಸದಸ್ಯರೊಬ್ಬರ ಆಸ್ಪತ್ರೆ ಖರ್ಚುಗಳನ್ನು ನಿಭಾಯಿಸಬೇಕಾಗುತ್ತದೆ. ವಾಹನ ವಿಚಾರದಲ್ಲಿ ಶುಭವಿದೆ.

ಕುಂಭ ರಾಶಿ

ಕುಂಭ ರಾಶಿ ಜನರಿಗೆ ಇಂದು ಉತ್ತಮ ದಿನ. ಗೃಹಿಣಿಯರಿಗೆ ದಿಢೀರ್ ಧನಲಾಭವಿದೆ. ದಿನದಲ್ಲಿ ಪ್ರಯಾಣಗಳನ್ನು ಮುಂದೂಡುತ್ತೀರಿ. ಕೃಷಿ ಸಂಬಂಧಿತ ವಿಚಾರವಾಗಿ ನೀವು ಹೆಚ್ಚು ಸಂತಸ ಪಡುವಿರಿ. ದಾಂಪತ್ಯ ವಿಚಾರದಲ್ಲಿ ತಾಳ್ಮೆಯಿಂದಿರಿ.

ಮೀನ ರಾಶಿ

ಮೀನ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ದಿನದ ಆರಂಭದಲ್ಲಿ ಧನಲಾಭವಿದೆ. ಪ್ರೇಮಿಗಳಿಗೆ ಈ ದಿನ ಶುಭವಿದೆ. ಪ್ರವಾಸಗಳ ಕೈಗೊಳ್ಳಬಹುದು. ಯಾರಿಗಾದರು ಹಣ ನೀಡುವ ಕೆಲಸಕ್ಕೆ ಮುಂದಾಗಬಹುದು. ಕೆಲಸದಲ್ಲಿ ಪ್ರಶಂಸೆ ಪಡೆಯುವಿರಿ.

English summary

March-07-2025-daily-horoscope-prediction-for-12-zodiac-signs-in-kannada

Here is Horoscope Today, 07 March Horoscope: Daily Horoscope Prediction For 12 Zodiac signs In Kannada
Story first published: Saturday, March 7, 2026, 5:00 [IST]
X
Desktop Bottom Promotion