Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು!
ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಪ್ರತಿಯೊಬ್ಬರ ಜೀವನದ ಮೇಲೆಯೂ ಇದು ಪರಿಣಾಮ ಬೀರುವುದು ನೋಡಬಹುದು. ಹಲವು ಗ್ರಹಗಳ ಚಲನೆಯಿಂದ ಶುಭ ಹಾಗೂ ಅಶುಭ ಯೋಗಕ್ಕೆ ಕಾರಣವಾಗುವುದು. ಗ್ರಹಗಳು ನಿರ್ಧಿಷ್ಟ ರಾಶಿಯಲ್ಲಿ ಚಲಿಸುವಾಗ ಮತ್ತೊಂದು ಗ್ರಹದೊಂದಿಗೆ ಸಂಯೋಗವಾಗುವ ವಿದ್ಯಮಾನವು ಕೂಡ ಅತ್ಯಂತ ಪ್ರಮುಖ ಘಟನೆ ಎಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ವ್ಯಕ್ತಿಯ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಾಯಿಸಿದಾಗ, ಅವರ ಜೀವನದ ಅನುಭವಗಳು ಪರಿಣಾಮವಾಗಿ ಬದಲಾಗುತ್ತವೆ. ಕೆಲವೊಮ್ಮೆ ಕಷ್ಟದ ಸಮಯಗಳು ಸುಲಭವಾಗುತ್ತವೆ ಮತ್ತು ಕೆಲವೊಮ್ಮೆ ಸಂದರ್ಭಗಳು ಸವಾಲಿನದ್ದಾಗುತ್ತವೆ.

ವೈದಿಕ ಜ್ಯೋತಿಷ್ಯದಲ್ಲಿ ಕೆಲವು ಗ್ರಹಗಳ ಸಂಯೋಜನೆಗಳನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ ಹಾಗೆ ಉಳಿದ ಕೆಲವು ರಾಶಿಗಳಿಗೆ ಇದು ಅಶುಭವೂ ಹೌದು. ಸೂರ್ಯ ಮತ್ತು ಬುಧದ ಸಂಯೋಗವನ್ನು ಸಹ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಉಂಟಾಗುವ ಸಂಯೋಗವು ಯೋಗಗಳ ರೂಪಿಸಲು ಕಾರಣವಾಗುತ್ತದೆ.
ಸದ್ಯ ಈಗ ಮಾರ್ಚ್ 7ರಂದು ಸಂಜೆ 4:29ಕ್ಕೆ ಸೂರ್ಯ ಮತ್ತು ಬುಧನು ಒಂದೇ ಡಿಗ್ರಿಯಲ್ಲಿ ಚಲಿಸುತ್ತಾರೆ. ಇದು ಬಹು ಸಮಯದ ಹಾಗೆ ಅಪರೂಪದ ಬುಧಾದಿತ್ಯ ಯೋಗಕ್ಕೆ ಕಾರಣವಾಗಲಿದೆ. ಈ ಸಮಯದಲ್ಲಿ ಆರ್ಥಿಕ ಲಾಭಗಳು, ಹೆಚ್ಚಿದ ಸೌಕರ್ಯಗಳು ಮತ್ತು ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಸೂಚಿಸುತ್ತದೆ. ಈ ಅಪರೂಪದ ಯೋಗವು ಯಾವ ರಾಶಿಯವರಿಗೆ ಲಾಭದಾಯಕವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಸಮಯ ಹೊಸ ವೃತ್ತಿ ನಿರೀಕ್ಷೆಗಳನ್ನು ತರುತ್ತದೆ. ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗಲಿದೆ. ಸರ್ಕಾರಿ ವೃತ್ತಿ ಸಂಬಂಧಿತ ದೊಡ್ಡ ಅಡ್ಡಿಗಳನ್ನು ನಿವಾರಿಸಿಕೊಳ್ಳುವಿರಿ. ಹಾಗೆ ಯಾರ ಬಳಿಯಾದರು ನಿಮ್ಮ ಹಣ ಸಿಲುಕಿದ್ದರೆ ಈ ಸಮಯದಲ್ಲಿ ಪಡೆಯಬಹುದು. ವ್ಯಾಪಾರದಲ್ಲಿ ಸಕಾರಾತ್ಮಕ ಫಲಿತಾಂಶಗಳ ಪಡೆಯಬಹುದು. ಹೆಚ್ಚುವರಿಯಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಶಂಸೆ ಸಿಗಲಿದೆ. ಆದಾಯದಲ್ಲಿನ ಉತ್ತಮ ಹೆಚ್ಚಳದಿಂದಾಗಿ ನಿಮ್ಮಲ್ಲಿ ಮಾನಸಿಕ ನೆಮ್ಮದಿ ಸಿಗಲಿದೆ.
ಮಿಥುನ ರಾಶಿ
ಈ ಅವಧಿಯು ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಬಲರಾಗುವ ಅವಕಾಶಗಳ ತರಲಿದೆ, ಅದರಲ್ಲೂ ನಿಮ್ಮ ಉದ್ಯಮ ಸಂಬಂಧಿತ ಲಾಭಗಳು ಹೆಚ್ಚಾಗಲಿದೆ. ಹೂಡಿಕೆಗಳು, ಉಳಿತಾಯಗಳು ಹೆಚ್ಚಾಗಲಿದೆ. ಸಿಲುಕಿರುವ ಹಣವನ್ನು ಮರುಪಡೆಯಬಹುದು ಮತ್ತು ಅಪೂರ್ಣ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಕುಟುಂಬದಲ್ಲಿನ ಸಮಸ್ಯೆಗಳು ಬಗೆಹರಿಸಿಕೊಳ್ಳುವಿರಿ. ಆಪ್ತರೊಬ್ಬರಿಂದ ನಿಮಗೆ ಕೆಲಸದಲ್ಲಿನ ಸಹಕಾರವು ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾರೆ. ಪೂರ್ವಜರ ಆಸ್ತಿಯಿಂದ ಪ್ರಯೋಜನಗಳ ಸಾಧ್ಯತೆಗಳಿವೆ. ರಾಜಕೀಯ ಅಥವಾ ಸಾಮಾಜಿಕ ವಲಯದಲ್ಲಿ ತೊಡಗಿಸಿಕೊಂಡಿರುವವರಿಗೆ ಹೊಸ ಜವಾಬ್ದಾರಿಗಳು ಸಿಗುತ್ತವೆ. ನಿಮ್ಮ ಹಣಕಾಸಿನ ವಿಚಾರವಾಗಿ ಇರುವ ಸಮಸ್ಯೆಗಳು, ಅಡ್ಡಿಗಳು ಹಂತ ಹಂತವಾಗಿ ನಿವಾರಣೆಯಾಗಲಿದೆ. ಅನೇಕರಿಗೆ ಈ ಸಮಯವು ವ್ಯಾಪಾರ ಸಂಬಂಧಿತ ವಿಚಾರದಲ್ಲಿ ಶುಭ ತರಲಿದೆ. ಅನೇಕರಿಗೆ ಈ ಸಮಯವು ದೃಢ ಸಂಕಲ್ಪ ಮಾಡುವ ಸಮಯವೂ ಆಗಿರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಹೊಸ ಆದಾಯದ ಮೂಲಗಳು ಹೊರಹೊಮ್ಮಬಹುದು. ಆದಾಯದಲ್ಲಿ ಹೆಚ್ಚಳವು ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಸಾಧ್ಯತೆಯಿದೆ. ಹೆಚ್ಚುವರಿಯಾಗಿ ಅವರು ಕೆಲಸದಲ್ಲಿ ಮೇಲಧಿಕಾರಿಗಳಿಂದ ಬೆಂಬಲ ಮತ್ತು ಪ್ರಗತಿಗೆ ಅವಕಾಶಗಳನ್ನು ಪಡೆಯುವಿರಿ. ನಿಮ್ಮ ಹಣಕಾಸಿನ ಮೂಲದಲ್ಲಿ ಹೆಚ್ಚಳವಾಗಬಹುದು. ಸ್ವಂತ ಉದ್ಯೋಗದಲ್ಲಿ ಶುಭವಿದೆ. ವಾಹನ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











