ಪ್ರತಿ ದಿನ ಇಂತಹ ಜ್ಯೂಸ್ ಕುಡಿದರೆ-ದೇಹದ ತೂಕ ಇಳಿಯುವುದು

Posted By: Lekhaka
Subscribe to Boldsky

ತೂಕ ಕಳೆದುಕೊಳ್ಳಲು ನೀವು ಬಹಳಷ್ಟು ಸಲ ಪ್ರಯತ್ನಿಸಿರಬಹುದು. ಆದರೆ ತೂಕ ಕಳೆದುಕೊಳ್ಳಬೇಕೆಂದು ವ್ಯಾಯಾಮ, ಔಷಧಿ ಸೇವಿಸಿದರೂ ನಿಮ್ಮ ತೂಕ ಕಡಿಮೆಯಾಗುತ್ತಿಲ್ಲವೆಂದಾದರೆ ನೀವು ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿಲ್ಲವೆಂದು ಹೇಳಬಹುದು. ಹೌದು, ಹೆಚ್ಚಿನವರಿಗೆ ಕಡಿಮೆ ಕ್ಯಾಲೋರಿ ಇರುವಂತಹ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ. ಇಂತಹ ಸಮಯದಲ್ಲಿ ಎಷ್ಟೇ ವ್ಯಾಯಾಮ ಮಾಡಿದರೂ ತೂಕ ಇಳಿಯುವುದಿಲ್ಲ.

ಇದಕ್ಕಾಗಿ ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಪಾನೀಯಗಳು ಇವೆ. ಇದು ದೇಹವನ್ನು ನಿರ್ವಿಷಗೊಳಿಸುವುದು. ಇದರಿಂದ ನಿಮ್ಮ ದೇಹದ ತೂಕ ಕೂಡ ಕಡಿಮೆಯಾಗುವುದು. ಇದಕ್ಕೆ ನೀವು ಹೆಚ್ಚು ಶ್ರಮ ಕೂಡ ವಹಿಸಬೇಕೆಂದಿಲ್ಲ. ಮನೆಯಲ್ಲಿ ಪಾನೀಯಗಳನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳಲು ಮುಂದಕ್ಕೆ ಓದುತ್ತಾ ಸಾಗಿ....

ಸೌತೆಕಾಯಿ ಮತ್ತು ಗ್ರೇಪ್ ಫ್ರೂಟ್

ಸೌತೆಕಾಯಿ ಮತ್ತು ಗ್ರೇಪ್ ಫ್ರೂಟ್

ತೂಕ ಕಳೆದುಕೊಳ್ಳುವ ವಿಚಾರಕ್ಕೆ ಬಂದರೆ ಸೌತೆಕಾಯಿ ಮತ್ತು ಗ್ರೇಪ್ ಫ್ರೂಟ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಆದರೆ ಇವೆರಡನ್ನು ಜತೆಯಾಗಿ ಸೇರಿಸಿದರೆ ಮತ್ತಷ್ಟು ರುಚಿಕರವಾಗಿರುದಲ್ಲದೆ ತೂಕ ಕಳೆದುಕೊಳ್ಳಲು ಒಳ್ಳೆಯ ನಿರ್ವಿಷ ಪಾನೀಯವಾಗಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ಕೆಲವು ತುಂಡು ಸೌತೆಕಾಯಿ ಮತ್ತು ಗ್ರೇಪ್ ಫ್ರೂಟ್ ನ್ನು ನೀರಿಗೆ ಹಾಕಿ ಮತ್ತು ಅದಕ್ಕೆ ಸ್ವಲ್ಪ ಲಿಂಬೆ ಹಿಂಡಿಕೊಳ್ಳಿ. ಇದನ್ನು ಕುಡಿಯುವ ಮೊದಲು ಫ್ರಿಡ್ಜ್ ನಲ್ಲಿ ಸ್ವಲ್ಪ ಹೊತ್ತು ಇಡಿ. ಇದು ತೂಕ ಕಳೆದುಕೊಳ್ಳಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಒಳ್ಳೆಯ ಪಾನೀಯ.

ಸೇಬು, ದಾಲ್ಚಿನ್ನಿ ನೀರು

ಸೇಬು, ದಾಲ್ಚಿನ್ನಿ ನೀರು

ಇದು ಅತ್ಯುತ್ತಮವಾದ ಪಾನೀಯ ಮತ್ತು ನೀರಿಗೆ ಕೂಡ ಇದು ಒಳ್ಳೆಯ ರುಚಿ ನೀಡುವುದು. ಇದು ದೇಹಕ್ಕೆ ಶಮನ ನೀಡುವುದು.ದಾಲ್ಚಿನ್ನಿಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದು. ಇದರಿಂದ ತೂಕ ಇಳಿಯುವುದು. ಸೇಬಿನ ಕೆಲವು ತೆಳುವಾದ ತುಂಡುಗಳನ್ನು ಮತ್ತು ದಾಲ್ಚಿನ್ನಿ ಚಕ್ಕೆ ಅಥವಾ ಹುಡಿಯನ್ನು ನೀರಿಗೆ ಹಾಕಿಕೊಂಡು ಅದನ್ನು ದಿನವಿಡಿ ಕುಡಿಯಿರಿ.

ಸೌತೆಕಾಯಿ ಮತ್ತು ಲಿಂಬೆ ನೀರು

ಸೌತೆಕಾಯಿ ಮತ್ತು ಲಿಂಬೆ ನೀರು

ಲಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಈ ಪಾನೀಯವು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೆ ವಿಷಕಾರಿ ಅಂಶಗಳನ್ನು ಹೊರಹಾಕುವುದು. ಸೌತೆಕಾಯಿಯು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ ಮತ್ತು ಇದು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು. ಕೆಲವು ತುಂಡು ಸೌತೆಕಾಯಿಯನ್ನು ಒಂದು ಬಾಟಲಿ ನೀರಿಗೆ ಹಾಕಿ ಮತ್ತು ಅದಕ್ಕೆ ಲಿಂಬೆರಸ ಹಿಂಡಿ. ಒಳ್ಳೆಯ ರುಚಿಗೆ ಪುದೀನಾ ಹಾಕಬಹುದು.

ಶುಂಠಿ ಮತ್ತು ಲಿಂಬೆ ನೀರು

ಶುಂಠಿ ಮತ್ತು ಲಿಂಬೆ ನೀರು

ಶುಂಠಿಯು ಯಾವಾಗಲೂ ತುಂಬಾ ಉಪಯುಕ್ತ ಗಿಡಮೂಲಿಕೆ ಮತ್ತು ಇದರಲ್ಲಿ ನೋವು ನಿವಾರಕ ಗುಣಗಳು ಇವೆ. ಲಿಂಬೆಯಲ್ಲೂ ದೇಹಕ್ಕೆ ಬೇಕಾಗುವ ಹಲವಾರು ಪ್ರಯೋಜನಕಾರಿ ಗುಣಗಳು ಇವೆ. ಈ ಪಾನೀಯ ತಯಾರಿಸಲು ಕೆಲವು ತುಂಡು ಲಿಂಬೆ ಮತ್ತು ತುರಿದ ಶುಂಠಿಯನ್ನು ನೀರಿಗೆ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಲಿಂಬೆರಸ ಕೂಡ ಹಾಕಿ. ಇದನ್ನು ದಿನವಿಡಿ ಹೀರುತ್ತಾ ಇರಿ.

ಆಪಲ್ ಸೀಡರ್ ವಿನೇಗರ್ ನೀರು

ಆಪಲ್ ಸೀಡರ್ ವಿನೇಗರ್ ನೀರು

ತೂಕ ಕಳೆದುಕೊಳ್ಳಲು ಆ್ಯಪಲ್ ಸೀಡರ್ ವಿನೇಗರ್ ತುಂಬಾ ಪರಿಣಾಮಕಾರಿ. ಈ ಪಾನೀಯ ತಯಾರಿಸಲು ಒಂದು ತುಂಡು ಮಾಡಿದ ಸೇಬು, ಎರಡು ಚಮಚ ಆ್ಯಪಲ್ ಸೀಡರ್ ವಿನೇಗರ್ ನ್ನು ಸ್ವಲ್ಪ ನೀರಿಗೆ ಹಾಕಿ ಮತ್ತು ಅದಕ್ಕೆ ಸ್ವಲ್ಪ ಲಿಂಬೆ ರಸ ಬೆರೆಸಬಹುದು. ಜ್ಯೂಸರ್ ಗೆ ಹಾಕಿ ಇದನ್ನು ಮಿಶ್ರಣ ಮಾಡಿಕೊಳ್ಳಿ. ಆದರೆ ಸೇಬಿನ ತುಂಡುಗಳನ್ನು ಹಾಕಬೇಡಿ. ಮಿಶ್ರಣವಾದ ಬಳಿಕ ಅದಕ್ಕೆ ಸೇಬಿನ ತುಂಡು ಹಾಕಿ ಪಾನೀಯವನ್ನು ಸವಿಯಿರಿ.

ಚಹಾ

ಚಹಾ

ವಿಶ್ವದೆಲ್ಲೆಡೆಯಲ್ಲಿ ಚಹಾ ಕುಡಿಯುವವರ ಸಂಖ್ಯೆ ಎಷ್ಟೋ ಕೋಟಿ ಇರಬಹುದು. ಚಹಾ ಕುಡಿಯುವುದರಿಂದ ಕೆಲವೊಂದು ಆರೋಗ್ಯ ಲಾಭಗಳು ಕೂಡ ಇದೆ. ಶುಂಠಿ ಚಹಾ, ಪುದೀನಾ ಚಹಾ ಮತ್ತು ಗ್ರೀನ್ ಟೀ ತೂಕ ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಮಗೆ ನೆರವಾಗುವುದು. ಪರಿಣಾಮಕಾರಿ ಫಲಿತಾಂಶಕ್ಕಾಗಿ ದಿನದಲ್ಲಿ 3-5 ಕಪ್ ನಷ್ಟು ಕುಡಿಯಿರಿ.

ಉಪ್ಪು ನೀರಿನ ಸ್ವಚ್ಛತೆ

ಉಪ್ಪು ನೀರಿನ ಸ್ವಚ್ಛತೆ

ನೀವು ನಿರ್ವಿಷಗೊಳಿಸುವ ಪಥ್ಯ ಮಾಡುವ ಮೊದಲು ಈ ಪಾನೀಯವನ್ನು ಬಳಸಿ ದೇಹದಲ್ಲಿರುವ ಎಲ್ಲಾ ವಿಷವನ್ನು ಹೊರಹಾಕಿ. ಮೇಲೆ ಹೇಳಿದಂತೆ ಈ ಪಾನೀಯವು ದೇಹದ ಎಲ್ಲಾ ವಿಷಯವನ್ನು ಹೊರಹಾಕುವುದು. ನೀರಿಗೆ ಕೆಲವು ಚಮಚ ಉಪ್ಪು ಬೆರೆಸಿ ಮತ್ತು ಇದನ್ನು ಕುಡಿದು ಆರಾಮ ಮಾಡಿ. ಇದು ತಕ್ಷಣ ದೇಹದಿಂದ ವಿಷ ಹೊರಹಾಕುವ ಕಾರಣ ನೀವು ಇದಕ್ಕೆ ತಯಾರಾಗಿ ಇರಬೇಕು.

ಕ್ರಾನ್ ಬೆರ್ರಿ ಜ್ಯೂಸ್

ಕ್ರಾನ್ ಬೆರ್ರಿ ಜ್ಯೂಸ್

ಕ್ರಾನ್ ಬೆರ್ರಿ ಜ್ಯೂಸ್ ದೇಹವನ್ನು ಶುದ್ಧೀಕರಿಸುವುದು ಮಾತ್ರಲ್ಲದೆ ದೇಹದ ಚಯಾಪಚಯ ಕ್ರಿಯೆ ಹೆಚ್ಚಿಸುವುದು. ಚಯಾಪಚಯ ಕ್ರಿಯೆ ಹೆಚ್ಚಿದರೆ ಅದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ಕ್ರಾನ್ ಬೆರ್ರಿ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸುವುದು ಮತ್ತು ಈ ವೇಳೆ ನೀವು ತೂಕ ಹೆಚ್ಚಿಸಿಕೊಳ್ಳುವುದಿಲ್ಲ. ಈ ಪಾನೀಯವು ದೇಹದಲ್ಲಿರುವ ಆಲ್ಕೋಹಾಲ್ ಮತ್ತು ನಿಕೋಟಿನ್ ನ್ನು ಹೊರಹಾಕುವುದು.

ಲಿಂಬೆಯಿಂದ ಶುದ್ಧೀಕರಣ

ಲಿಂಬೆಯಿಂದ ಶುದ್ಧೀಕರಣ

ಲಿಂಬೆಯು ತುಂಬಾ ಪ್ರಯೋಜಕಾರಿ ಹಣ್ಣಾಗಿದೆ. ಇದನ್ನು ನಿರ್ವಿಷಗೊಳಿಸುವ ಇತರ ಪಾನೀಯಗಳಿಗೆ ಸೇರಿಸಬಹುದು ಅಥವಾ ಲೆಮೊನಡೆ ಬಳಸಬಹುದು. ಲೆಮೊನಡೆ ತಾಜಾತನ ನೀಡುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಇದು ನಿಮಗೆ ಸ್ವಚ್ಛ ಹಾಗೂ ಕಾಂತಿಯುತ ಚರ್ಮ ನೀಡುವುದು.

ಎಲೆಕೋಸು ಸಾರು

ಎಲೆಕೋಸು ಸಾರು

ದೇಹ ನಿರ್ವಿಷಗೊಳಿಸುವಾಗ ತುಂಬಾ ಭಿನ್ನ ಅನುಭವ ಪಡೆಯಲು ನೀವು ಎಲೆಕೋಸಿನ ಸಾರು ಪ್ರಯತ್ನಿಸಿ. ಕ್ಯಾರೆಟ್, ಬಸಲೆ ಮತ್ತು ಈರುಳ್ಳಿ ಜತೆಗೆ ಎಲೆಕೋಸು ಹಾಕಿ ಬೇಯಿಸಿ. ಹೆಚ್ಚು ತರಕಾರಿ ಸೇರಿಸಿದಷ್ಟು ಒಳ್ಳೆಯದು. ಇದು ನಿಮ್ಮ ದೇಹಕ್ಕೆ ತುಂಬಾ ಆರೋಗ್ಯಕರ ಮತ್ತು ಪರಿಣಾಮಕಾರಿ. ಈ ಪಾನೀಯಗಳನ್ನು ನೀವು ತುಂಬಾ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ತಯಾರಿಸಬಹುದು.

English summary

10 Amazing Homemade Weight Loss Detox Drinks

If you are really trying to lose weight, then you should do it the right way or else you are going to gain more weight rather than losing it. Many people find it really hard to stick to low-calorie foods when it comes to weight loss. But why go through such a struggle when these interesting homemade detox drinks can help you shed that extra pound? Let's have a look at these drinks which you could DIY at your home!