Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ
"ವೃಕ್ಷ" ಎಂದರೆ ಮರ ಮತ್ತು "ಆಸನ" ಎಂದರೆ ಭಂಗಿ ಎಂದರ್ಥ. ವೃಕ್ಷಾಸನ ಎಂಬುದು ಯೋಗದಲ್ಲಿ ಬರುವ ಒಂದು ಪ್ರಮಖ ಆಸನ. ಭಂಗಿಯಲ್ಲಿದ್ದಾಗ ವ್ಯಕ್ತಿಯು ಮರದಂತೆ ಕಾಣುವುದರಿಂದಾಗಿ ಇದಕ್ಕೆ ಈ ಹೆಸರು ಬಂದಿದೆ. ಈ ಆಸನದಲ್ಲಿ ನೀವು ಇತರೆ ಆಸನಗಳಂತೆ ಕಣ್ಣನ್ನು ಮುಚ್ಚುವುದಿಲ್ಲ. ಜೊತೆಗೆ ನೀವು ಈ ಆಸನದಲ್ಲಿ ಒಂಟಿ ಕಾಲಿನಲ್ಲಿ ನಿಲ್ಲಬೇಕಾಗುತ್ತದೆ. ಕಡಿಮೆ ರಕ್ತದೊತ್ತಡ ಸಮಸ್ಯೆಯ ಲಕ್ಷಣ ಮತ್ತು ಕಾರಣ
ಕಡಿಮೆ ರಕ್ತದೊತ್ತಡವನ್ನು ಹೈಪೊಟೆನ್ಶನ್ ಎಂದು ಕರೆಯುತ್ತಾರೆ. ಇದರಲ್ಲಿ ಒತ್ತಡ ಕಡಿಮೆಯಿರುವುದರಿಂದಾಗಿ, ಇದಕ್ಕೆ ಕಡಿಮೆ ರಕ್ತದೊತ್ತಡ ಎಂದು ಕರೆಯುತ್ತಾರೆ. ಒತ್ತಡ ಕಡಿಮೆಯಿರುವ ಕಾರಣ ಅಂಗಾಂಗಗಳಿಗೆ ರಕ್ತದ ಪೂರೈಕೆ ಕಡಿಮೆಯಾಗುತ್ತದೆ. ಏನೇ ಆಗಲಿ ಕಡಿಮೆ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡ ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕಡಿಮೆ ರಕ್ತದೊತ್ತಡದ ಲಕ್ಷಣಗಳು ತಲೆ ಸುತ್ತುವಿಕೆ, ದೃಷ್ಟಿ ಮಂದವಾಗುವಿಕೆ, ತಲೆ ನೋವು, ಆಯಾಸ, ಮೂರ್ಛೆಗೂ ಕಾರಣವಾಗಬಹುದು. ಈ ರೋಗ ಲಕ್ಷಣಗಳು ಒಬ್ಬ ವ್ಯಕ್ತಿಯು ಕುಳಿತಲ್ಲಿಂದ ಎದ್ದ ತಕ್ಷಣ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವೈದ್ಯಕೀಯವಾಗಿ ಇದನ್ನು ಆರ್ಥೊಸ್ಟ್ಯಾಟಿಕ್ ಹಪೊಟೆನ್ಶನ್ ಎಂದು ಕರೆಯುತ್ತಾರೆ.

ಇದರ ಫಲಿತಾಂಶವಾಗಿ ರೋಗಿಗೆ ಹೃದಯಾಘಾತ, ಮೂತ್ರಪಿಂಡದ ವೈಫಲ್ಯ ಅಥವಾ ಪಾರ್ಶ್ವವಾಯು ಸಹ ಸಂಭವಿಸಬಹುದು. ಹಾಗಾಗಿ ಈ ಸಮಸ್ಯೆಯಿರುವವರು ಇತರೆ ಕಾಯಿಲೆಗಳಿಂದ ದೂರ ಉಳಿಯಲು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ವೈದ್ಯಕೀಯ ತಪಾಸಣೆಯ ಮತ್ತೊಂದು ಪ್ರಯೋಜನ ಎಂದರೆ ಸಮಸ್ಯೆಗಳನ್ನು ಮೊದಲೇ ಗುರುತಿಸಿ, ಅವುಗಳಿಗೆ ಚಿಕಿತ್ಸೆಯನ್ನು ನೀಡಬಹುದು.
ರಕ್ತದೊತ್ತಡವನ್ನು ಪರೀಕ್ಷಿಸಲು ರಕ್ತ ಪರೀಕ್ಷೆ, ಕಾರ್ಡಿಯಾಕ್ ಪರೀಕ್ಷೆ ಮತ್ತು ರೇಡಿಯೋಲಾಜಿಕಲ್ ವಿಧಾನಗಳಿಗೆ ಒಳಪಡುತ್ತೀರಿ. ಆದರೆ ನಿಮಗೆ ಎದುರಾಗುವ ದೊಡ್ಡ ಪ್ರಶ್ನೆ ಇದರ ಕುರಿತಾಗಿ ಜಾಗರೂಕರಾಗಿರುವುದು ಹೇಗೆ? ಹೇಗೆ ಎಂಬುದಕ್ಕೆ ಉತ್ತರ ಸರಳ. ಅದಕ್ಕಾಗಿ ವೃಕ್ಷಾಸನ ಮಾಡಿ. ಇದು ನಿಮಗೆ ರಕ್ತದೊತ್ತಡದ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ.
ಆಸನವನ್ನು ಮಾಡುವ ವಿಧಾನ
ಹಂತ 1. ಸುಮ್ಮನೆ ನೇರವಾಗಿ ನಿಲ್ಲಿ, ನಿಮ್ಮ ಕೈಗಳು ತನ್ನ ಸ್ಥಿತಿಯಲ್ಲಿ ಆರಾಮವಾಗಿರಲಿ.
ಹಂತ 2. ನೀವು ನೇರವಾಗಿ ನಿಂತು ಸಮತೋಲನ ಕಾಯ್ದುಕೊಳ್ಳಬೇಕು. ಯಾವ ಕಾಲಿನ ಮೇಲೆ ನಿಮಗೆ ಭಾರ ಬಿಟ್ಟರೆ ಅನುಕೂಲವಾಗುತ್ತದೆಯೋ, ತಿಳಿದುಕೊಂಡು ಅದರ ಮೇಲೆ ಭಾರ ಬಿಡಿ. ನಿಮಗೆ ಬಲಗಾಲು ಶಕ್ತಿಶಾಲಿಯಾಗಿದ್ದು, ಅದರ ಮೇಲೆ ಭಾರ ಬಿಡುತ್ತಾ, ಎಡಗಾಲನ್ನು ತೆಗೆದು ಚಿತ್ರದಲ್ಲಿ ತೋರಿಸಿರುವಂತೆ ಬಲಗಾಲಿನ ಮೇಲೆ ಇಡಿ. ಇದನ್ನು ಎಡಗಾಲಿನ ಮೇಲೆ ಬೇಕಾದರು ಪ್ರಯೋಗಿಸಬಹುದು.
ಹಂತ 3. ಈ ಸ್ಥಿತಿಯಲ್ಲಿ ನಿಮ್ಮ ಬಲಗಾಲು ನೇರವಾಗಿ ಇದೆಯೆಂದು ಖಚಿತಪಡಿಸಿಕೊಳ್ಳಿ.
ಹಂತ 4. ಯಾವಾಗ ನೀವು ಸಮತೋಲನವನ್ನು ಕಾಯ್ದುಕೊಂಡಿದ್ದೀರಿ ಎಂದು ಅನಿಸುತ್ತದೆಯೋ, ಆಗ ಚೆನ್ನಾಗಿ ಉಸಿರಾಡಿ. ಹಾಗೆಯೇ ಉಸಿರನ್ನು ಎಳೆದುಕೊಳ್ಳುತ್ತಾ ನಿಮ್ಮ ಕೈಯನ್ನು ತಲೆಯ ಮೇಲೆ ನಮಸ್ಕಾರ ಸ್ಥಿತಿಗೆ ತನ್ನಿ.
ಹಂತ 5. ದೂರದಲ್ಲಿರುವ ಯಾವುದಾದರು ವಸ್ತುವನ್ನು ನೋಡಿ, ಇದರಿಂದ ನಿಮ್ಮ ಸ್ಥಿತಿಯು ಸಮತೋಲನದಲ್ಲಿರುತ್ತದೆ.
ಹಂತ 6. ನಿಮ್ಮ ಬೆನ್ನು ಮೂಳೆ ನೇರವಾಗಿದೆ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ನೀವು ಅದರ ಸಹಾಯವನ್ನು ಪಡೆದುಕೊಳ್ಳುತ್ತೀರಿ. ಆಳವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಮ್ಮ ದೇಹವು ಈಗ ನೇರವಾಗಿ, ಎತ್ತರವಾಗಿ, ದೃಢವಾಗಿ ಇರುವಂತೆ ಭಾಸವಾಗುತ್ತದೆ. ನಿಧಾನವಾಗಿ ಮತ್ತು ಆಳವಾಗಿ ಉಸಿರಾಡುತ್ತ ವಿಶ್ರಾಂತಿಯನ್ನು ಅನುಭವಿಸಿ. ಈ ಆಸನವನ್ನು ಮಾಡುವಾಗ ಮುಗುಳ್ನಗೆಯಿಂದ ಮಾಡಿ, ಆಗ ಮತ್ತಷ್ಟು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಹಂತ 7. ಈಗ ಮತ್ತೆ ಸಾಮಾನ್ಯ ಸ್ಥಿತಿಗೆ ಬನ್ನಿ, ಕೈಯಿಂದ ಆರಂಭಿಸಿ ಒಂದೊಂದೆ ಹಂತವನ್ನು ಹಿಮ್ಮುಖವಾಗಿ ಆರಂಭಿಸಿ. ಸ್ಥಿತಿಗೆ ಬನ್ನಿ.
ಹಂತ 8. ಈ ಆಸನವನ್ನು ಈಗ ವಿರುದ್ಧ ಕಾಲಿನಿಂದ ಆರಂಭಿಸಿ ಮತ್ತೊಮ್ಮೆ ಮಾಡಿ. ಇದರಿಂದ ಎರಡೂ ಕಾಲುಗಳಿಗೆ ವ್ಯಾಯಾಮ ದೊರೆಯುತ್ತದೆ. ಜೊತೆಗೆ ಯಾವುದೇ ಕಾರಣಕ್ಕು ಕಣ್ಣು ಮುಚ್ಚಬೇಡಿ ಮತ್ತು ನೀವು ನೋಡುತ್ತಿರುವ ವಸ್ತುವಿನ ಮೇಲಿನಿಂದ ದೃಷ್ಟಿಯನ್ನು ತೆಗೆಯಬೇಡಿ.
ಈ ಆಸನದ ಪ್ರಯೋಜನಗಳು
• ನೀವು ಸಂಪೂರ್ಣವಾಗಿ ಪುನಃಶ್ಚೇತನ ಪಡೆಯುತ್ತೀರಿ.
• ನಿಮ್ಮ ಬೆನ್ನು, ತೋಳುಗಳ ಹಿಗ್ಗುವಿಕೆ ಸಾಧ್ಯವಾಗುತ್ತದೆ
• ಏಕಾಗ್ರತೆ ಸುಧಾರಿಸುತ್ತದೆ
• ವಾತ ನರಗಳ ಸಮಸ್ಯೆ ಗುಣವಾಗುತ್ತದೆ
• ಸಮತೋಲನ ಸುಧಾರಿಸುತ್ತದೆ ಕಡಿಮೆ ರಕ್ತದೊತ್ತಡವುಂಟಾಗಲು ಪ್ರಮುಖ 10 ಕಾರಣಗಳು
ಎಚ್ಚರಿಕೆ
ಒಂದೊಮ್ಮೆ ನೀವು ಮೈಗ್ರೇನ್, ಅಧಿಕ ರಕ್ತದೊತ್ತಡ, ಇನ್ಸೋಮ್ನಿಯಾ, ಬೆನ್ನು ನೋವಿನ ಸಮಸ್ಯೆಗಳು ಮತ್ತು ಸ್ಪೊಂಡಿಲಿಟಿಸ್ ಸಮಸ್ಯೆಗಳು ಇದ್ದಲ್ಲಿ ಈ ಆಸನವನ್ನು ಪ್ರಯತ್ನಿಸಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














