For Quick Alerts
ALLOW NOTIFICATIONS  
For Daily Alerts

ಯೋಗ ಟಿಪ್ಸ್: ವೀರಾಸನ - ಪಚನ ಕಾರ್ಯಕ್ಕೆ ಸಹಕಾರಿ

By Vani nayak
|

ನಮ್ಮ ದೈನಂದಿನ ಜೀವನದಲ್ಲಿ, ಒಂದಲ್ಲ ಒಂದು ಬಾರಿಯಾದರೂ, ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆಗಳೊಲ್ಲಂದಾದ ಅಜೀರ್ಣದ ಸಮಸ್ಯೆಯನ್ನು ನಾವೆಲ್ಲ ಎದುರಿಸಿಯೇ ಇರುತ್ತೇವೆ. ಹೊಟ್ಟೆಯಲ್ಲಿ ಹುಣ್ಣು (ಅಲ್ಸರ್), ಪಿತ್ತಗಲ್ಲು (ಗಾಲ್ ಸ್ಟೋನ್), ಮೂಲಾವ್ಯಾಧಿ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಈ ಅಜೀರ್ಣದ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತದೆ. ಆರೋಗ್ಯಕರ ಜೀವನಶೈಲಿಗೆ ಬೇಕು ನಿತ್ಯ ಯೋಗ

ಸರಿಯಾದ ಆಹಾರ ಸೇವನೆಯ ಪದ್ಧತಿಯನ್ನು ಪಾಲಿಸದವರಿಗೂ ಈ ಸಮಸ್ಯೆ ಕಾಡಬಹುದು. ಕೆಲವೊಮ್ಮೆ, ಆಹಾರದ ಅಲರ್ಜಿ ಕೂಡ ಕಾರಣವಾಗಬಹುದು. ಇಂಥಹ ಪರಿಸ್ಥಿತಿಯಲ್ಲಿ ನಾವು ಒಂದು ಗುಳಿಗೆಯನ್ನು ತೆಗೆದುಕೊಳ್ಳುವ ಮೂಲಕವೋ ಅಥವಾ ಮನೆ ಔಷಧಿಯನ್ನು ತೆಗೆದುಕೊಳ್ಳುವ ಮೂಲಕವೋ ತಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ.

Virasana (Hero Pose) To Aid In Digestion

ಇವೆಲ್ಲವೂ ತಾತ್ಕಾಲಿಕ ಪರಿಹಾರವನ್ನು ಕೊಡುತ್ತದೆ ಹೊರತು, ಶಾಶ್ವತವಾಗಿ ಪರಿಹಾರವನ್ನು ಕೊಡುವುದಿಲ್ಲ. ಆದರೆ ಯೊಗಾಸನದಿಂದ ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು. ಗರ್ಭ ಕಂಠದ ನೋವಿಗೆ ಅರ್ಧ ಮತ್ಸ್ಯೇಂದ್ರಾಸನ

ಅಜೀರ್ಣದ ಸಮಸ್ಯೆಯಿಂದ ಹೊರಬರಲು ವೀರಾಸನದ ಅಭ್ಯಾಸವು ಬಹಳ ಸಹಾಯಕಾರಿಯಾಗಿದೆ. ಈ ಆಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. ವೀರ ಎಂದರೆ "ಕೆಚ್ಚೆದೆಯ ಮನುಷ್ಯ" ಹಾಗು ಆಸನ ಎಂದರೆ "ಭಂಗಿ" ಎಂದರ್ಥ.

ಅಜೀರ್ಣ ಸಮಸ್ಯೆಯನ್ನು ಹೊರತುಪಡಿಸಿ, ಇನ್ನು ಹಲವಾರು ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಈ ವೀರಾಸನದ ಅಭ್ಯಾಸವು ಉಪಯುಕ್ತವಾಗಿದೆ. ಕಾಲುಗಳ ನಮ್ಯತೆಯನ್ನು ವೃದ್ಧಿಸಲು, ಆಸ್ತಮ ತೊಂದರೆಯಿಂದ ಹೊರಬರಲು ಈ ಆಸಲವು ನೆರವಾಗುತ್ತದೆ. ಅಷ್ಟೇ ಅಲ್ಲದೆ, ಆತ್ರೈಟಿಸ್, ರಕ್ತದೊತ್ತಡ, ಬೆನ್ನು ನೋವು, ಕೀಲು ನೋವು, ಗರ್ಭಾವಸ್ಥೆಯಲ್ಲಿರುವ ಹೆಂಗಸರಿಗೆ ಕಾಲಿನ ಊತ ಮುಂತಾದ ಹಲವಾರು ತೊಂದರೆಗಳನ್ನು, ಈ ಆಸನವನ್ನು ಅಭ್ಯಾಸ ಮಾಡುವುದರಿಂದ ನಿವಾರಿಸಬಹುದು. ಈ ಆಸನವನ್ನು ಹಾಕಲು ಕ್ರಮಬದ್ಧವಾಗಿ ವಿವರಣೆ ಹಾಗು ಅದರಿಂದಾಗುವ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ.

1. ನೆಲದ ಮೇಲೆ ಮಂಡಿಯನ್ನು ಊರಿ ಅಂದರೆ, ಸರಿಯಾಗಿ ಸೊಂಟದ ಕೆಳಭಾಗದಲ್ಲಿ ನೇರವಾಗಿ ಮಂಡಿಯನ್ನು ಊರಬೇಕು ಹಾಗು ಕೈಗಗಳನ್ನು ಮಂಡಿಯ ಮೇಲಿರಿಸಬೇಕು.
2. ಎರಡೂ ಮಂಡಿಗಳನ್ನು ಹತ್ತಿರ ತಂದು, ಪಾದಗಳನ್ನು ಅಗಲಿಸಬೇಕು.
3. ಪಾದಗಳ ಮೇಲ್ಭಾಗವನ್ನು, ನೀವು ಯೋಗಾಭ್ಯಾಸ ಮಾಡಲು ಬಳಸುವ ಚಾಪೆ ಅಥವಾ ಕಂಬಳಿಯ ಮೇಲೆ ಅದುಮಬೇಕು.
4. ನಿಧಾನವಾಗಿ ನಿಮ್ಮ ಪೃಷ್ಠ ಭಾಗವನ್ನು ನಿಮ್ಮ ಎರಡೂ ಹಿಮ್ಮಡಿಯ ನಡುವೆ ತಂದು ಕಂಬಳಿಯ ಮೇಲೆ ಕುಳಿತುಕೊಳ್ಳಿ.
5. ನಿಮ್ಮ ಮಂಡಿಯ ಮೇಲೆ ಯಾವುದೇ ತರಹದ ತಿರುಚಿನ ಅನುಭವ ಆಗದೇ ಇರುವಂತೆ ಖಚಿತಪಡಿಸಿಕೊಳ್ಳಿ.
6. ನಿಮ್ಮ ಕಾಲ್ಬೆರಳುಗಳು ಹಿಂದಕ್ಕೆ ಹೊರಗೆ ಕಾಣುವಂತಿರಬೇಕು. ಗಿರಿಗೆಗಳನ್ನು (ಅಂದರೆ ಆಂಕಲ್) ಒಳಗೆ ಎಳದುಕೊಳ್ಳುವುದರಿಂದ ನಿಮ್ಮ ಮಂಡಿಗಳಿಗೆ ರಕ್ಷಣೆ ಸಿಗುತ್ತದೆ.
7. ಹೊಕ್ಕಳನ್ನು ಒಳಗೆ ಎಳೆದುಕೊಂಡು ದೀರ್ಘವಾಗಿ ಉಸಿರಾಡಿಸಬೇಕು. ಎತ್ತರವಾಗಿ ಕೂಡಬೇಕು.
8. ಇದೇ ಭಂಗಿಯಲ್ಲಿ 30 ಕ್ಷಣಗಳ ಕಾಲ ಇರಬೇಕು. ನಿಧಾನವಾಗಿ, ಆಸನವನ್ನು ಹಾಕಲು ಅನುಸರಿಸಿದ ಕ್ರಮವನ್ನೇ ಅನುಸರಿಸಿ ಹೊರಗೆ ಬರಬೇಕು. ಕೈಕಾಲುಗಳ ಆರೋಗ್ಯ ವೃದ್ಧಿಗೆ ಅನುಸರಿಸಿ ವಸಿಷ್ಠಾಸನ

ಈ ಆಸನವನ್ನು ಕಲಿಯಲು ಪ್ರಾರಂಭಿಕ ಹಂತದಲ್ಲಿರುವವರು ಕುಳಿತುಕೊಳ್ಳಲು ದಿಂಬುಗಳನ್ನು ಆಧಾರವಾಗಿ ಬಳಸಬಹುದು.
ಕೆಲವರು ಧ್ಯಾನ ಮಾಡಲು ಈ ಆಸನವನ್ನು ಹಾಕುತ್ತಾರೆ. ಈ ಆಸನವನ್ನು ಖಾಲಿ ಹೊಟ್ಟೆಯಲ್ಲೇ ಮಾಡಬೇಕೆಂದೇನೂ ಇಲ್ಲ. ಮುಂಜಾನೆ ಅಥವಾ ಸಂಜೆ, ಯಾವಾಗಲಾದರೂ ಈ ಆಸನವನ್ನು ಅಭ್ಯಾಸಿಸಬಹುದು. ಆದರೆ, ಮುಂಜಾನೆ ಮಾಡುವುದು ಹೆಚ್ಚು ಸೂಕ್ತ.

ಈ ಆಸನದಿಂದಾಗುವ ಇತರೆ ಲಾಭಗಳು
ಆಸ್ತಮ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುತ್ತದೆ. ಬೆನ್ನೆಲಬಿನ ನಮ್ಯತೆಯನ್ನು ಹೆಚ್ಚಿಸುತ್ತದೆ. ರಕ್ತ ಸಂಚಾರ ವೃದ್ಧಿಸಿ, ಕಾಲು ನೋವನ್ನು ಶಮನ ಮಾಡುತ್ತದೆ. ಜೀರ್ಣ ಕ್ರಿಯೆಯನ್ನು ವೃದ್ಧಿಸಿ, ವಾಯು ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ.

ಎಚ್ಚರಿಕೆ
ಹೃದ್ರೋಗ ಸಂಬಂಧಪಟ್ಟ ಸಮಸ್ಯೆಗಳಿರುವವರು, ಮಂಡಿ ಅಥವಾ ಪಾದಗಳಲ್ಲಿ ಗಾಯಕ್ಕೊಳಗಾದವರು ಈ ವೀರಾಸನವನ್ನು ಮಾಡಬಾರದು. ಒಂದು ವೇಳೆ, ಮಾಡಿದರೂ ತಜ್ಞರ ಸಲಹೆ ಸೂಚನೆಗಳ ಮೇರೆಗೆ ಮಾಡತಕ್ಕದ್ದು. ಈ ಟಾಪ್ 10 ಕೊಡುಗೆ ಯೋಗ ಮಾಡುವವರಿಗೆ ಮಾತ್ರ

English summary

Virasana (Hero Pose) To Aid In Digestion

Indigestion is one common health problem that all of us might have experienced at one point or the other in our day-to-day lives. It may occur due to existing health problems like ulcer, gallstones, haemorrhoids, etc, or it may be due to poor eating habits or certain food allergies. The first thing we do when we have indigestion is to pop in one pill or take up some home remedy which works for the time being.
X
Desktop Bottom Promotion