For Quick Alerts
ALLOW NOTIFICATIONS  
For Daily Alerts

ಸೊಂಟ ಭಾಗದ ಸ್ನಾಯುಗಳ ಸದೃಢತೆಗೆ 'ವಿಪರೀತ ಶಲಭಾಸನ'

ಸಾಮಾನ್ಯವಾಗಿ ಕೆಲಸಕ್ಕೆ ಹೋಗುವವರಲ್ಲಿ ಅದರಲ್ಲೂ ಬಹಳ ತಾಸುಗಳ ಕಾಲ ಕುಳಿತು ಕೆಲಸ ಮಾಡುವವರಲ್ಲಿ, ಸೊಂಟ ನೋವು ಹಾಗೂ ಬೆನ್ನು ನೋವು ಅಧಿಕವಾಗಿ ಕಂಡು ಬರುತ್ತದೆ. ಆದರೆ ಇಂತಹ ನೋವುಗಳಿಗೆ ಯೋಗಾಸಗಳ ಮೂಲಕ ಸಾಂತ್ವನ ಪಡೆಯಬಹುದು...

By Vani nayak
|

ವಿಪರೀತ ಶಲಭಾಸನವನ್ನು ಸೂಪರ್ ಮ್ಯಾನ್ ಪೋಸ್ ಎಂತಲೂ ಕರೆಯುತ್ತಾರೆ. ಹಾರಾಡುವ ಸೂಪರ್ ಮ್ಯಾನ್ ನನ್ನು ಹೋಲುವಂತೆ ಈ ಆಸನದ ಭಂಗಿ ಇರುವುದರಿಂದ ಸೂಪರ್ ಮ್ಯಾನ್ ಪೋಸ್ ಎಂಬ ಹೆಸರು ಬಂದಿದೆ. ಬೆನ್ನು ನೋವು ಅಥವಾ ಸೊಂಟನೋವಿನಿಂದ ಬಳಲುವವರು ಈ ಆಸನವನ್ನು ಅಭ್ಯಾಸ ಮಾಡುವುದು ಒಳ್ಳೆಯದು.

ಈ ಆಸನವನ್ನು ಹಾಕುವುದು ಬಹಳ ಸುಲಭ. "ವಿಪರೀತ" ಎಂದರೆ ಪ್ರತಿಲೋಮ(ಉಲ್ಟಾ) ಎಂದರ್ಥ, "ಶಲಭ" ಎಂದರೆ ಮಿಡತೆ ಎಂದರ್ಥ ಮತ್ತು "ಆಸನ" ಎಂದರೆ ಭಂಗಿ ಎಂದರ್ಥ. ವಿಪರೀತ ಶಲಭಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ: ಕುತ್ತಿಗೆ, ಸೊಂಟ ನೋವು ನಿವಾರಣೆಗೆ-'ಭಾರಧ್ವಾಜಾಸನ'

1. ಹೊಟ್ಟೆಯು ನೆಲಕ್ಕೆ ತಾಕುವಂತೆ ಮಲಗಿಕೊಳ್ಳಿ. ಕಾಲ್ಬೆರಳುಗಳು ಕೂಡ ನೆಲದ ಮೇಲಿರಿಸಿರಬೇಕು. ನಿಮ್ಮ ಗದ್ದವನ್ನು ನೆಲಕ್ಕೆ ತಾಕುವಂತಿರಿಸಿರಬೇಕು.

Viparita Shalabhasana

2. ನಿಮ್ಮ ಕಾಲುಗಳು ಒಂದಕ್ಕೊಂದು ಹತ್ತಿರವಿರಬೇಕು.
3. ಈಗ, ನಿಮಗೆ ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಮುಂದಕ್ಕೆ ತೋಳುಗಳನ್ನು ಚಾಚಬೇಕು.
4. ನಿಧಾನವಾಗಿ, ಇತರ ಯೋಗಾ ಭಂಗಿಯಂತೆ ಇಲ್ಲಿಯೂ ಕೂಡ ಉಸಿರೆಳೆದುಕೊಳ್ಳುವುದು ಹಾಗು ಉಸಿರು ಬಿಡುವುದನ್ನು ಮಾಡಬೇಕು. ಉಸಿರನ್ನು ಎಳೆದುಕೊಳ್ಳುವಾಗ, ನಿಮ್ಮ ಎದೆಯನ್ನು, ತೋಳನ್ನು, ಕಾಲುಗಳನ್ನು ಮತ್ತು ತೊಡೆಗಳನ್ನು ನೆಲದ ಮೇಲೆತ್ತಬೇಕು. ಆಗ ನಿಮಗೆ ನೀವು ಸೂಪರ್ ಮ್ಯಾನ್ ಭಂಗಿಯಲ್ಲಿರುವಂತೆ ಅನುಭವ ಕೊಡುತ್ತದೆ.
5. ನಿಮ್ಮ ಮಂಡಿ ಮತ್ತು ಮೊಣ ಕೈಗಳನ್ನು ನೇರವಾಗಿರಿಸಬೇಕು.
6. ಮುಖದಲ್ಲಿ ಮಂದಹಾಸವಿಟ್ಟು ಈ ಆಸನವನ್ನು ಹಾಕಬೇಕು. ನಿಧಾನವಾಗಿ ಉಸಿರಾಡಿಸುತ್ತಿರಬೇಕು. ನಿಧಾನವಾಗಿ ಕಾಲುಗಳನ್ನು ಹಾಗು ಕೈಗಳನ್ನು ಹಿಗ್ಗಿಸಿ ಚಾಚಬೇಕು.
7. ಸ್ವಲ್ಪ ದಿನಗಳಲ್ಲಿಯೇ ಈ ಆಸನವನ್ನು ಹಾಕಲು ಸುಲಭವಾಗಿ ಕಲಿಯುತ್ತೀರಿ. ಈ ಆಸನವನ್ನು ಅಭ್ಯಾಸ ಮಾಡುವುದು ಕಷ್ಟವಲ್ಲವಾದ್ದರಿಂದ ಒಮ್ಮೆ ಆಸನವನ್ನು ಹಾಕಲು ಪ್ರಯತ್ನಿಸಿ ನೋಡಿ.
8. ಉಸಿರಾಟದ ಮೇಲೆ ಹಾಗು ದೇಹವನ್ನು ಹಿಗ್ಗಿಸುವುದರ ಮೇಲೆ ಹೆಚ್ಚು ಗಮನವಿರಬೇಕು.
9. ಈಗ ಉಸಿರನ್ನು ಹೊರಬಿಡುವಾಗ, ಮೆತ್ತಗೆ ಎದೆಯ ಭಾಗವನ್ನು, ಕೈಗಳನ್ನು ಮತ್ತು ಕಾಲುಗಳನ್ನು ಕೆಳಗೆ ತರಬೇಕು. ಬೆನ್ನು,ತೊಡೆಯ ಸ್ನಾಯುಗಳ ನೋವಿಗೆ-ಸುಪ್ತ ಪಾದಾಂಗುಷ್ಠಾಸನ

ವಿಪರೀತ ಶಲಭಾಸನದಿಂದಾಗುವ ಇತರ ಲಾಭಗಳು
*ಎದೆ ಭಾಗದ ಸ್ನಾಯುಗಳನ್ನು, ಮತ್ತು ಕೈ, ಕಾಲು, ಕಿಬ್ಬೊಟ್ಟೆ, ಸೊಂಟಭಾಗದ ಸ್ನಾಯುಗಳನ್ನು, ಭುಜಗಳನ್ನು ಗಟ್ಟಿಗೊಳಿಸುತ್ತದೆ.
* ಕಿಬ್ಬೊಟ್ಟೆ ಹಾಗು ಸೊಂಟದ ಸಾಂಧ್ರತೆಯನ್ನು ಹೆಚ್ಚಿಸುತ್ತದೆ.
* ಎದೆಯನ್ನು ಹಿಗ್ಗಿಸುತ್ತದೆ.
* ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ.

ಎಚ್ಚರಿಕೆ:
ಹೊಟ್ಟೆ, ಸೊಂಟ, ಕುತ್ತಿಗೆ, ಭುಜ ಅಥವಾ ಕೈಗಳ ಶಸ್ತ್ರ ಚಿಕಿತ್ಸೆಯಾದ್ದಲ್ಲಿ, ಈ ಆಸನವನ್ನು ಮಾಡತಕ್ಕದ್ದಲ್ಲ. ಗರ್ಭಾವಸ್ಥೆಯಲ್ಲಿರುವಾಗಲಂತೂ ಈ ಆಸನವನ್ನು ಮಾಡಲೇಬಾರದು. ಈ ನಿಟ್ಟಿನಲ್ಲಿ ಎಚ್ಚರಿಕೆವಹಿಸಬೇಕಾಗುತ್ತದೆ.

English summary

Viparita Shalabhasana To Strengthen Lower Back Muscles

Viparita Shalabhasana is also termed as the superman pose. It resembles the flying pose of Superman and hence it is also called the superman pose. This pose is considered to be excellent in curing back problems, and is recommended in case you have are facing this issue. It's quite easy to perform this pose. "Viparita" means inverted or reversed, "shalabh" means locust and "asana" means pose or posture.
X
Desktop Bottom Promotion