ಬೆನ್ನು,ತೊಡೆಯ ಸ್ನಾಯುಗಳ ನೋವಿಗೆ-ಸುಪ್ತ ಪಾದಾಂಗುಷ್ಠಾಸನ

By Vani nayak
Subscribe to Boldsky

ಒಂದೇ ಸ್ಥಳದಲ್ಲಿ ಬಹಳ ಸಮಯದವರೆಗೆ ಕೂತು ಕೆಲಸ ಮಾಡಿದರೆ, ಬೆನ್ನು ನೋವು ಹಾಗೂ ತೊಡೆ ಭಾಗದ ಸ್ನಾಯುಗಳ ಬಿಗಿಯಾಗುವಿಕೆ ಖಂಡಿತ ಆಗುತ್ತದೆ. ಇಂತಹ ಸಂದರ್ಭದಲ್ಲಿ ಯೋಗಾಸನವು ಸಮಸ್ಯೆಗೆ ಪರಿಹಾರವನ್ನು ಕೊಡುತ್ತದೆ.

ಅದರಲ್ಲೂ ಸುಪ್ತ ಪಾದಾಂಗುಷ್ಠಾಸನವನ್ನು ಮಾಡಿದರೆ ಬೆನ್ನು ನೋವು ಹಾಗು ತೊಡೆ ಭಾಗದ ಸ್ನಾಯುಗಳ ಬಿಗಿಯಾಗುವಿಕೆಯನ್ನು ತಡೆಯುತ್ತದೆ.

supta padangusthasana For Backache & Strengthening Thigh Muscles
 

ಹಲವು ಕಾರಣಗಳಲ್ಲಿ ಇದೂ ಒಂದು ಇರಬಹುದು. ಆದರೆ ಗಾಯಗಳು, ಉಳುಕು ಕೂಡ ಬೆನ್ನು ನೋವಿಗೆ ಮತ್ತು ತೊಡೆಭಾಗದ ಬಿಗಿಯಾಗುವಿಕೆಗೆ ಕಾರಣವಾಗಬಹುದು. ಇದರ ತೀವ್ರತೆ ನೋವು ಅನುಭವಿಸಿದವರಿಗೇ ಗೊತ್ತಿರುತ್ತದೆ. ಭುಜ, ಕೈ ತೋಳುಗಳ ಬಲವೃದ್ಧಿಗೆ-ಪಿಂಚ ಮಯೂರಾಸನ

ಇಂತಹ ನೋವಿನ ಸಮಸ್ಯೆಗೆ ಹಲವಾರು ಔಷಧಿಗಳು, ನೋವು ಶಮನಕ ಸ್ಪ್ರೇಗಳು ಸುಲಭವಾಗಿ ಲಭ್ಯವಿರುತ್ತದೆ ಮತ್ತು ತಕ್ಷಣಕ್ಕೆ ಪರಿಹಾರವನ್ನು ಕೊಡುತ್ತದೆ. ಆದರೆ ಮರುಕಳಿಸಿದರೆ ಕಷ್ಟವಾಗುತ್ತದೆ.

ಇಂತಹ ಸಂದರ್ಭಗಳಲ್ಲಿ, ಬೆನ್ನು ನೋವಿಗೆ ಪರಿಹಾರ ಕಂಡುಕೊಳ್ಳಲು ತೊಡೆ ಭಾಗದ ಸ್ನಾಯುಗಳನ್ನು ಸದೃಢ ಮಾಡಲು ಅತ್ಯಂತ ಸುಲಭವಾದ ಉಪಾಯವೆಂದರೆ ಯೋಗಾಸನವನ್ನು ಅಭ್ಯಾಸ ಮಾಡುವುದು. ಇದನ್ನು ಅಭ್ಯಾಸ ಮಾಡುವುದರಿಂದ ದೀರ್ಘಕಾಲದ ಪರಿಹಾರ ಸಿಕ್ಕಂತಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮವೂ ಬೀರುವುದಿಲ್ಲ.

supta padangusthasana For Backache & Strengthening Thigh Muscles
 

ಬೆನ್ನು ನೋವಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ತೊಡೆ ಭಾಗದ ಸ್ನಾಯುಗಳನ್ನು ಸದೃಢ ಮಾಡಲು ಸುಪ್ತ ಪಾದಾಂಗುಷ್ಠಾಸನವನ್ನು ಅಭ್ಯಾಸ ಮಾಡುವುದು ಅತ್ಯಂತ ಉತ್ತಮವಾದ ವಿಧಾನ. ಯೋಗ ಟಿಪ್ಸ್: ಅಸ್ತಮಾ ವಿರುದ್ಧ ಹೋರಾಡಲು 'ಪಾಶಾಸನ'

ಈ ಆಸನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದಾಗ ಕಷ್ಟವೆನಿಸಬಹುದು. ಯಾವುದಾದರೂ ಆಧಾರ ಪಡೆದುಕೊಂಡು ಮಾಡಬಹುದು. ಆದರೆ ನಿರಂತರ ಅಭ್ಯಾಸ ಮಾಡುವುದರಿಂದ ಕ್ರಮೇಣ ಸುಲಭವಾಗುತ್ತದೆ. ಈ ಕೆಳಗೆ ಸುಪ್ತ ಪಾದಾಂಗುಷ್ಠಾಸನವನ್ನು ಅಭ್ಯಾಸ ಮಾಡುವ ಬಗೆ ಹೇಗೆ ಎಂದು ಕೊಡಲಾಗಿದೆ. ಸುಪ್ತ ಪಾದಾಂಗುಷ್ಠಾಸನನವನ್ನು ಹಾಕಲು ಕ್ರಮಬಧ್ಧವಾದ ವಿವರಣೆ

1. ಮೊದಲಿಗೆ, ನೆಲದ ಮೇಲೆ ಮಲಗಿಕೊಳ್ಳಿ.

2. ಕಾಲುಗಳನ್ನು ಚಾಚಿ ಮತ್ತು ಕೈಗಳನ್ನು ಎರಡೂ ಬದಿಯಲ್ಲಿ ಆರಾಮವಾಗಿರಿಸಿ.

3. ನಿಧಾನವಾಗಿ ನಿಮ್ಮ ಬಲ ಮಂಡಿಯನ್ನು ಬಾಗಿಸಿ ಮತ್ತು ನಿಮ್ಮ ತೊಡೆಯು ಎದೆ ಭಾಗದ ಸಮೀಪದಲ್ಲಿರಿಸಿ.

4. ಎಡಗಾಲನ್ನು ನೇರವಾಗಿ ನೆಲದ ಮೇಲೆ ಚಾಚಿರಬೇಕು.

5. ಯೋಗ ಸ್ಟ್ರಾಪನ್ನು ಬಲ ಅಂಗಾಲಿಗೆ ಬಿಗಿಯಾಗಿ ಸುತ್ತುಕೊಳ್ಳಿ.

6. ಮಂಡಿಯನ್ನು ನೇರವಾಗಿಸಿ ಸ್ಟ್ರಾಪನ್ನು ಕೆಳಗೆ ಎಳೆಯಿರಿ.

7. ಎರಡೂ ಭುಜಗಳು ನೆಲಕ್ಕೆ ಒತ್ತಿರಬೇಕು.

8. ಪೃಷ್ಠಭಾಗವನ್ನೂ ಕೂಡ ನೆಲದ ಮೇಲೆ ಆರಾಮವಾಗಿರಿಸಬೇಕು.

9. ಕುತ್ತಿಗೆಯ ಹಿಂಭಾಗವನ್ನು ಹಿಗ್ಗಿಸಬೇಕು.

10. ನಿಮ್ಮ ದೃಷ್ಟಿಯನ್ನು ನಿಮ್ಮ ಬಲಗಾಲ ತೋರ್ಬೆರಳ ಮೇಲೆ ಕೇಂದ್ರೀಕರಿಸಬೇಕು.

11. ಒಂದು ನಿಮಿಷಗಳ ಕಾಲ ಅದೇ ಭಂಗಿಯಲ್ಲಿರಿ.

12. ಧೀರ್ಘವಾಗಿ ಉಸಿರಾಡಿ ಮಂಡಿಯನ್ನು ಎದೆಭಾಗಕ್ಕೆ ತಂದುಕೊಂಡು ಯೋಗ ಸ್ಟ್ರಾಪನ್ನು ತೆಗೆದುಬಿಡಿ.

13. ನಿಧಾನವಾಗಿ ಆ ಭಂಗಿಯಿಂದ ಹೊರ ಬಂದು, ಇದೇ ಕ್ರಮವನ್ನು ಇನ್ನಂದು ಕಾಲಿಗೂ ಅನುಸರಿಸಿ. ಕೆಳ ಬೆನ್ನು ನೋವಿಗೆ ಒಂದೇ ಪರಿಹಾರ 'ಮರೀಚ್ಯಾಸನ'    

supta padangusthasana For Backache & Strengthening Thigh Muscles
 

ಸುಪ್ತ ಪಾದಾಂಗುಷ್ಠಾಸನದಿಂದಾಗುವ ಇತರ ಲಾಭಗಳು

*ಕಣಕಾಲಿನ ಹಿಂಭಾಗ ಮತ್ತು ಮಂಡಿರಜ್ಜನ್ನು ಹಿಗ್ಗಿಸಲು ನೆರವಾಗುತ್ತದೆ.

*ಮಂಡಿಯನ್ನು ಹಿಗ್ಗಿಸಲು ನೆರವಾಗುತ್ತದೆ.

*ಬೆನ್ನು ನೋವಿನಿಂದ ಬಳಲುವವರಿಗೆ ಪರಿಹಾರ ಕೊಡುತ್ತದೆ.

*ಬಂಜೆತನ ಇರುವವರಿಗೆ ನೆರವಾಗುತ್ತದೆ.

*ಅತಿ ಹೆಚ್ಚು ರಕ್ತದೊತ್ತಡ ಇರುವವರಿಗೆ ಸಹಾಯ ಮಾಡುತ್ತದೆ.

*ಪ್ರಾಸ್ಟೇಟ್ ಗ್ರಂಥಿಯನ್ನು ಉತ್ತೇಜಿಸುತ್ತದೆ.

*ಸೊಂಟ ಭಾಗವನ್ನು ಮತ್ತು ತೊಡೆ ಸಂದನ್ನು ಹಿಗ್ಗಿಸಲು ನೆರವಾಗುತ್ತದೆ.

ಎಚ್ಚರಿಕೆ

*ಬೆನ್ನು ನೋವಿಗೆ ಪರಿಹಾರ ಕಂಡುಕೊಳ್ಳಲು ಹಾಗು ತೊಡೆ ಭಾಗದ ಸ್ನಾಯುಗಳನ್ನು ಸದೃಢ ಮಾಡಲು ಸುಪ್ತ ಪಾದಾಂಗುಷ್ಠಾಸನವನ್ನು ಅಭ್ಯಾಸ ಮಾಡುವುದು ಅತ್ಯಂತ ಉತ್ತಮವಾದ ವಿಧಾನ.

*ಆದರೆ ಈ ಆಸನವನ್ನು ಅತಿ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.

*ಯಾರಿಗೆ ತಲೆ ನೋವಿದೆಯೋ ಮತ್ತು ಡೈಯೇರಿಯ ಇರುವವರು ಈ ಆಸನವನ್ನು ಹಾಕತಕ್ಕದ್ದಲ್ಲ. ಹಾಗು ಅತಿ ಹೆಚ್ಚು ರಕ್ತದೊತ್ತಡ ಇರುವವರೂ ಕೂಡ ನುರಿತ ಯೋಗಾ ತರಬೇತಿದಾರರಿಂದ ಮಾಡುವುದು ಒಳ್ಳೆಯದು.

For Quick Alerts
ALLOW NOTIFICATIONS
For Daily Alerts

    English summary

    supta padangusthasana For Backache & Strengthening Thigh Muscles

    Practising Supta Padangusthasana commonly known as the Reclining Hand To Big Toe Pose is one of the best ways to get relief from backache and make the thigh muscles strong. Have a look at the step-wise procedure to perform Supta Padangusthasana.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more