Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ-ತೂಕ ಇಳಿಸಿಕೊಳ್ಳಿ!
ಅಯ್ಯೋ ದೇವರೇ! ಅವನನ್ನು ನೋಡ್ಲ....ಹೆಂಗಿದ್ದವ ಹೆಂಗಾಗಿದ್ದಾನೆ. ಮೊದಲು ಗಾಳಿಯಲ್ಲಿ ತೇಲಾಡುತ್ತಿದ್ದ. ಈಗ ಭೂಮಿಗೆ ಭಾರವಾದಂಗಿದ್ದಾನೆ... ಇಂತಹ ಮಾತುಗಳು ಬೊಜ್ಜು ದೇಹದವರನ್ನು ನೋಡಿದಾಗ ಬರುವುದು ಸಹಜ. ಕೆಲವೊಮ್ಮೆ ನಾವು ಬಯಸದೆ ಇದ್ದರೂ ಬೊಜ್ಜು ಬೆಳೆದಿರುತ್ತದೆ. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ಒಮ್ಮೆ ಬೊಜ್ಜು ದೇಹವನ್ನು ಸೇರಿಕೊಂಡರೆ ಕಥೆ ಬಿಡಿ. ಮತ್ತೆ ಅದನ್ನು ಕರಗಿಸಲು ಹರಸಾಹಸ ಪಡಬೇಕಾಗುತ್ತದೆ. ಸಮಯದ ಪರಿವೆ ಇಲ್ಲದೆ ಆಹಾರ ಸೇವನೆ, ನಿರಂತರವಾಗಿ ಕುಳಿತುಕೊಂಡೇ ಕೆಲಸ ಮಾಡುವುದು, ಫಾಸ್ಟ್ ಫುಡ್, ಹಾರ್ಮೋನು ವ್ಯತ್ಯಾಸ, ಅನುವಂಶೀಯತೆ ಇತ್ಯಾದಿ ಬೊಜ್ಜು ಬೆಳೆಯಲು ಪ್ರಮುಖ ಕಾರಣವಾಗಿದೆ. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್
ದೇಹದ ತೂಕವನ್ನು ಇಳಿಸಿಕೊಳ್ಳುವುದು ತುಂಬಾ ಕಷ್ಟಕರ. ಇದಕ್ಕಾಗಿ ಸತತ ಪರಿಶ್ರಮಪಡಬೇಕಾಗುತ್ತದೆ. ದೇಹವನ್ನು ದಂಡಿಸಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ತೂಕ ಇಳಿಸಿಕೊಳ್ಳಬಹುದು. ಬೊಜ್ಜು ಕರಗಿಸಿದೆ ಹಾಗೆ ಬಿಟ್ಟರೆ ಇದರಿಂದ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳು ಮುಂದೆ ನಿಮ್ಮನ್ನು ಕಾಡಬಹುದು. ಪರಿಣಾಮಕಾರಿಯಾಗಿರುವ ಕೆಲವೊಂದು ಸಲಹೆಗಳನ್ನು ರಾತ್ರಿ ವೇಳೆ ಪಾಲಿಸಿಕೊಂಡರೆ ಒಂದೇ ತಿಂಗಳಲ್ಲಿ ಐದು ಕೆ.ಜಿ. ತೂಕ ಕಳೆದುಕೊಳ್ಳಬಹುದು.

ಗಿಡಮೂಲಿಕೆ(ಹರ್ಬಲ್) ಟೀ
ರಾತ್ರಿ ಊಟವಾದ ಬಳಿಕ ಒಂದು ಕಪ್ ಹರ್ಬಲ್ ಟೀ ಕುಡಿದರೆ ಅದು ಹೊಟ್ಟೆಯ ಬೊಜ್ಜನ್ನು ತುಂಬಾ ವೇಗವಾಗಿ ಕರಗಿಸುತ್ತದೆ. ಹರ್ಬಲ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ತೂಕ ಕಳೆದುಕೊಳ್ಳಲು ನೆರವಾಗುವುದು.

ಪ್ರೋಟೀನ್ ಯುಕ್ತ ರಾತ್ರಿ ಊಟ ಸೇವಿಸಿ
ಪನೀರ್, ಬೀನ್ಸ್ ಮತ್ತು ಗಜ್ಜರಿ ಇತ್ಯಾದಿಗಳಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಇದನ್ನು ರಾತ್ರಿಯೂಟಕ್ಕೆ ಬಳಸಿಕೊಳ್ಳಿ. ಕೊಬ್ಬಿನ ಕೋಶಗಳ ವಿರುದ್ಧ ಪ್ರೋಟೀನ್ ಹೋರಾಡುತ್ತದೆ.

ಲಘು ರಾತ್ರಿಯೂಟ
ಸಲಾಡ್, ಸೂಪ್, ರೊಟ್ಟಿ ಮತ್ತು ಯಾವುದಾದರೂ ತರಕಾರಿ ಪಲ್ಯವನ್ನು ಒಳಗೊಂಡಿರುವ ರಾತ್ರಿ ಊಟವು ಹಗುರವಾಗಿರಲಿ. ಇದನ್ನು ಪಾಲಿಸಿಕೊಂಡು ಹೋದರೆ ಬೊಜ್ಜನ್ನು ಬೇಗನೆ ಕರಗಿಸಬಹುದು.

ರಾತ್ರಿಯೂಟ ಸಮಯಬದ್ಧವಾಗಿರಲಿ
ರಾತ್ರಿ ಪಾರ್ಟಿಗೆ ಹೋಗಿ ಅಲ್ಲಿ ಮಧ್ಯರಾತ್ರಿವರೆಗೆ ಸಿಕ್ಕಿದೆಲ್ಲವನ್ನು ತಿನ್ನುವುದಲ್ಲ. ಬದಲಿಗೆ ರಾತ್ರಿ ವೇಳೆ ಊಟಕ್ಕೆ ಸರಿಯಾದ ಸಮಯವನ್ನು ಆಯ್ಕೆ ಮಾಡಿಕೊಳ್ಳಿ. ರಾತ್ರಿ ಊಟಕ್ಕೆ ಒಂದು ಸಮಯ ನಿಗದಿ ಮಾಡಿ ಮತ್ತು ಅದನ್ನು ಪಾಲಿಸಿಕೊಂಡು ಹೋಗಿ. ಊಟದ ಬಳಿಕ ಲಘುವಾಗಿ ಸ್ವಲ್ಪ ವ್ಯಾಯಾಮ ಮಾಡಿ.

ನಡೆಯಿರಿ
ರಾತ್ರಿ ಊಟದ ಬಳಿಕ ಸ್ವಲ್ಪ ನಡೆಯಬೇಕು ಅಥವಾ ಲಘು ವ್ಯಾಯಾಮ ಮಾಡಬೇಕು ಎಂದು ಹೇಳಲಾಗುತ್ತದೆ. ಯಾಕೆಂದರೆ ಇದರಿಂದ ಹೆಚ್ಚಿನ ಕ್ಯಾಲರಿಯನ್ನು ದಹಿಸಬಹುದು.

ಹವಾನಿಯಂತ್ರಣ ಬಳಸಿ
ಹವಾನಿಯಂತ್ರಣ ಬಳಸಿದರೆ ಕೊಬ್ಬು ಹೇಗೆ ಕರಗುತ್ತದೆ ಎಂದು ಪ್ರಶ್ನಿಸಬಹುದು. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ವಾತಾವರಣ ತಂಪಾಗಿದ್ದಷ್ಟು ದೇಹದಲ್ಲಿರುವ ಕೊಬ್ಬು ವೇಗವಾಗಿ ಕರಗುತ್ತದೆಯಂತೆ!

ಪುದೀನಾ ಜ್ಯೂಸ್ ಕುಡಿಯಿರಿ
ರಾತ್ರಿ ಊಟವಾದ ಬಳಿಕ ಅಡುಗೆ ಕೋಣೆಗೆ ಹೋಗಿ ಸಕ್ಕರೆ ಹಾಕದೆ ಪುದೀನಾ ಜ್ಯೂಸ್ ಮಾಡಿಕೊಂಡು ಕುಡಿದರೆ ಆರೋಗ್ಯ ಮತ್ತು ಕೊಬ್ಬು ಕರಗಿಸಲು ಅದು ನೆರವಾಗುವುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುದೀನಾ ಜ್ಯೂಸ್ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು:
* ಸ್ವಲ್ಪ ಪುದೀನಾ ಎಲೆ
* 1 ನಿಂಬೆರಸ
* 3 ಚಮಚ ಸಕ್ಕರೆ
* ಚಿಟಿಕೆಯಷ್ಟು ಉಪ್ಪು
* 1/2 ಚಮಚ ಜೀರಿಗೆ ಪುಡಿ
* 1/2 ಚಮಚ ಕರಿಮೆಣಸಿನ ಪುಡಿ
* ನೀರು

ತಯಾರಿಸುವ ವಿಧಾನ
1. ಪುದೀನಾ ಎಲೆಯನ್ನು ನೀರಿನಲ್ಲಿ ಹಾಕಿ ಮಿಕ್ಸಿಯಲ್ಲಿ ಅರೆಯಬೇಕು.
2. ಈಗ ಈ ಪುದೀನಾ ನೀರಿಗೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಫ್ರಿಜ್‌ನಲ್ಲಿಡ ಬೇಕು.
ಈ ಪುದೀನಾ ಜ್ಯೂಸ್ ಬಾಯಾರಿಕೆಯನ್ನು ನೀಗಿಸುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು.
ಹೊರಗಡೆ ಹೋಗುವಾಗ ನೀರಿನ ಬದಲು ಈ ಜ್ಯೂಸ್ ಕೊಂಡೊಯ್ಯಬಹುದು. (ನೆನಪಿಡಿ ಜ್ವರ ಹಾಗೂ ಶೀತವಿರುವಾಗ ಫ್ರಿಜ್‌ನಲ್ಲಿರುವ ಪುದೀನಾ ಜ್ಯೂಸ್ ಕುಡಿಯಬೇಡಿ)



Click it and Unblock the Notifications
