For Quick Alerts
ALLOW NOTIFICATIONS  
For Daily Alerts

ಅತಿಯಾದ ವ್ಯಾಯಮ ಆರೋಗ್ಯಕ್ಕೆ ಕಾದಿದೆ ಗಂಡಾಂತರ!

By Manu
|

ನಮಗೆ ಏಕತಾನತೆಯನ್ನು ಸಹಿಸಲು ಸಾಧ್ಯವಿಲ್ಲ. ಅಂದರೆ ಯಾವುದೇ ಕೆಲಸವನ್ನು ಪದೇ ಪದೇ ಮರುಕಳಿಸುವುದು. ಆಹಾರವೂ ಅಷ್ಟೇ, ನಮಗೆ ಒಂದೇ ರೀತಿಯ ಆಹಾರವನ್ನು ಸತತವಾಗಿ ತಿನ್ನಲು ಸಾಧ್ಯವಿಲ್ಲ. ಅಂತೆಯೇ ನಮ್ಮ ನಿತ್ಯದ ಶಾರೀರಿಕ ಚಟುವಟಿಕೆಗಳು ಸಹಾ. ಒಂದೇ ರೀತಿಯ ಚಟುವಟಿಕೆಯನ್ನು ಶರೀರವೂ ಸಹಿಸುವುದಿಲ್ಲ. ಒಂದೇ ದಾರಿಯಲ್ಲಿ ಓಡಾಟವನ್ನು ಸಹಿಸಲು ಸಾಧ್ಯವಿಲ್ಲವೆಂದೇ ಬಸ್ಸುಗಳ ಚಾಲಕರನ್ನೂ ಆಗಾಗ ಬದಲಿಸುತ್ತಿರುತ್ತಾರೆ.

overtraining

ಒಂದು ವೇಳೆ ನೀವು ನಿತ್ಯವೂ ವ್ಯಾಯಮ ಮಾಡುವವರಾಗಿದ್ದರೆ ನಿತ್ಯವೂ ಒಂದೇ ಬಗೆಯ ವ್ಯಾಯಾಮಗಳನ್ನು ಮಾಡದಿರುವಂತೆ, ನಿತ್ಯವೂ ಬದಲಿಸುವಂತೆ ವ್ಯಾಯಾಮಶಿಕ್ಷಕರು ಸಲಹೆ ನೀಡುವುದೂ ಇದೇ ಕಾರಣಕ್ಕೆ. ಜಿಮ್ಮಿನಲ್ಲಿ ಏನು ಮಾಡಬೇಕು ಏನು ಮಾಡಬಾರದು

ಆದರೆ ನಿತ್ಯ ಬದಲಿಸಿದರೂ ಒಂದು ಹಂತದಲ್ಲಿ ನಿಮ್ಮ ಎಲ್ಲಾ ವ್ಯಾಯಾಮಗಳಿಗೂ ದೇಹ ಒಗ್ಗಿ ಹೋಗುತ್ತದೆ. ಕೆಲವರು ಅಗತ್ಯಕ್ಕಿಂತಲೂ ಹೆಚ್ಚು ವ್ಯಾಯಾಮ ಮಾಡಿ ಈ ಏಕತಾನತೆಯನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಒಂದು ವೇಳೆ ನಿಮ್ಮ ಅನುಭವವೂ ಇದೇ ಆಗಿದ್ದರೆ ನಿಮಗೆ ಅರಿವೇ ಇಲ್ಲದಂತೆ ನಿಮ್ಮ ದೇಹ ಕೆಲವು ತೊಂದರೆಗಳಿಂದ ಬಳಲುತ್ತಿರಬಹುದು. ಇದನ್ನು ದೇಹದ ಕೆಲವು ನೋವುಗಳು ಸೂಚನೆ ನೀಡುತ್ತವೆ. ಬನ್ನಿ ಇವು ಯಾವುದು ಎಂಬುದನ್ನು ಮುಂದೆ ಓದಿ...

overtraining

ದಣಿದ ಕಾಲುಗಳು

ಹಿಂದೆ ಎಷ್ಟೋ ದೂರದವರೆಗೆ ಸುಲಭವಾಗಿ ನಿಧಾನಗತಿಯಲ್ಲಿ ಓಡುತ್ತಿದ್ದ ನಿಮಗೆ ಈಗ ಕೊಂಚ ದೂರವೂ ಭಾರಿಯಾಗಿ ಕಂಡುಬರುತ್ತಿದೆಯೇ, ಅಲ್ಲದೇ ಹಿಂದಿನ ಗತಿಯನ್ನು ಪಡೆಯಲು ಹೆಚ್ಚು ಕಷ್ಟಪಡಬೇಕಾಗಿ ಬರುತ್ತಿದೆಯೇ? ಕಾಲುಗಳು ಹೆಚ್ಚು ಸುಸ್ತಾದಂತೆ, ಹೆಚ್ಚು ನೋವು ಕಂಡುಬರುತ್ತಿದೆಯೇ, ಇದು ನಿಮ್ಮ ಕಾಲಿನ ಸ್ನಾಯುಗಳು ತೀರಾ ದಣಿದು ಘಾಸಿಗೊಂಡಿರುವ ಸ್ಪಷ್ಟ ಸೂಚನೆಯಾಗಿದೆ. ಈ ಸ್ಥಳದಲ್ಲಿ ಹೊಸ ಸ್ನಾಯುಗಳು ಬೆಳೆಯಲು ಕಾಲಾವಕಾಶ ಬೇಕಾಗಿದೆ ಎಂದು ಸೂಚನೆ ನೀಡುತ್ತಿದೆ.

overtraining

ಸ್ನಾಯುಗಳ ನೋವು ಬಹಳ ದಿನಗಳವರೆಗೆ ಕಾಡುವುದು

ಹೊಸದಾಗಿ ಓಡುವವರಿಗೆ ಒಂದೇ ದಿನದಲ್ಲಿ ಸ್ನಾಯುಗಳ ನೋವು ಕಾಣಿಸಿಕೊಳ್ಳುತ್ತದೆ. ಆದರೆ ನಿತ್ಯವೂ ಓಡಿ ಅಭ್ಯಾಸವುಳ್ಳವರಿಗೆ ಹೆಚ್ಚು ಬಾಧಿಸಬಾರದು. ಒಂದು ವೇಳೆ ಈ ನೋವು ಸತತವಾಗಿ 72 ಗಂಟೆಗಳವರೆಗೆ ಬಾಧಿಸುತ್ತಿದ್ದರೆ ನಿಮ್ಮ ವ್ಯಾಯಾಮಗಳು ನಿಮ್ಮ ಸಾಮರ್ಥ್ಯಕ್ಕೂ ಮೀರಿವೆ ಎಂದು ತಿಳಿಯಬೇಕು. ನಿಮ್ಮ ನಿತ್ಯದ ವ್ಯಾಯಾಮಗಳ ಪ್ರಮಾಣವನ್ನು ಕಡಿಮೆಗೊಳಿಸಿ ಕೊಂಚ ವಿಶ್ರಾಂತಿ ಪಡೆಯಲು ಇದು ಸಕಾಲವಾಗಿದೆ. ಆದ್ದರಿಂದ ಯಾವುದೇ ವ್ಯಾಯಾಮವನ್ನು ನಿಮ್ಮ ಸಾಮರ್ಥ್ಯಕ್ಕೂ ಮೀರಿ ಅನುಸರಿಸುವುದು ಅನಾರೋಗ್ಯಕರವಾಗಿದೆ.

overtraining

ಆಗಾಗ ಕಾಡುವ ಗಾಯಗಳು

ಸಾಮರ್ಥ್ಯಕ್ಕೂ ಹೆಚ್ಚುವ ವ್ಯಾಯಾಮದ ಹಪಾಹಪಿಯ ಕಾರಣ ಆಗಾಗ ಗಾಯಗಳಾಗುತ್ತಿರುತ್ತವೆ. ಒಂದು ವೇಳೆ ಸತತ ಗಾಯಗಳಾಗುತ್ತಿದ್ದರೆ ನಿಮ್ಮ ವ್ಯಾಯಾಮ ಹೆಚ್ಚಾಗಿದೆ ಎಂದು ತಿಳಿಯಬೇಕು. ಅಲ್ಲದೇ ಗಾಯಗೊಂಡ ಬಳಿಕ ಇದು ಮಾಗಲು ಸಮಯಾವಕಾಶ ನೀಡಬೇಕು. ಅಂದರೆ ವ್ಯಾಯಾಮದ ಪ್ರಮಾಣವನ್ನು ಕಡಿಮೆ ಮಾಡಬೇಕು. ಒಂದು ವೇಳೆ ಇದನ್ನು ಕಡೆಗಣಿಸಿದರೆ ಗಾಯ, ಉಳುಕು ಮೊದಲಾದವು ಇನ್ನೂ ಹೆಚ್ಚಾಗಿ ಕಾಡುತ್ತವೆ.

overtraining

ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು....

ಒಂದು ವೇಳೆ ನಿಮ್ಮ ವ್ಯಾಯಾಮ ಅತಿಯಾಗಿದ್ದರೆ ದೇಹ ಅನಿವಾರ್ಯವಾಗಿ ಈ ಹೆಚ್ಚಿನ ವ್ಯಾಯಾಮಕ್ಕಾಗಿ ಹೆಚ್ಚಿನ ಶಕ್ತಿ ಮತ್ತು ಇತರ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ. ಪರಿಣಾಮವಾಗಿ ಆರೋಗ್ಯಕ್ಕೆ ಅಗತ್ಯವಾದ ಇತರ ವ್ಯವಸ್ಥೆಗಳಿಗೆ ಕಡಿಮೆ ಮಾಡಬೇಕಾಗಿ ಬರುತ್ತದೆ. ದೇಹದ ರೋಗನಿರೋಧಕ ವ್ಯವಸ್ಥೆಯೂ ಇದರಲ್ಲಿ ಒಂದು. ಇದರ ಕಾರಣ ಚಿಕ್ಕ ಪುಟ್ಟ ಶೀತ ಕೆಮ್ಮುಗಳು ಬಹಳವಾಗಿ ಕಾಡುತ್ತವೆ. ಅಲ್ಲದೇ ಇದರಿಂದ ಶಮನಗೊಳ್ಳಲು ಇತರರಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.

ಚರ್ಮದ ಸೋಂಕು

ಒಂದು ವೇಳೆ ನಿಮ್ಮ ವ್ಯಾಯಾಮ ಅತಿಯಾದರೆ ನಿಮ್ಮ ದೇಹ ಕೆಲವು ಅಲರ್ಜಿಕಾರಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಂದರೆ ವಿಪರೀತವಾದ ಬೆವರು ಚರ್ಮದ ಸೂಕ್ಷ್ಮರಂಧ್ರಗಳನ್ನು ಹಿಗ್ಗಿಸಿ ಜೇನುಹಲ್ಲೆಯಂತಾಗಿಸುತ್ತದೆ. ಇದಕ್ಕೆ hive ಎಂದು ಕರೆಯುತ್ತಾರೆ. ಇದರಲ್ಲಿ ಸೋಂಕುಕಾರಕ ಕಣಗಳು ಸುಲಭವಾಗಿ ಕುಳಿತುಕೊಂಡು ಸೋಂಕು ಉಂಟುಮಾಡುತ್ತವೆ.

overtraining

ಇದು ಚಿಕ್ಕ ಚಿಕ್ಕ ಕೆಂಪು ಗುಳ್ಳೆಯ ರೂಪ ಪಡೆಯುತ್ತದೆ. ಬೆನ್ನಿನ ಹಿಂಭಾಗ, ಭುಜ, ಕಂಕುಳು, ತೋಳಿನ ಹೊರಭಾಗ ಮೊದಲಾದ ಕಡೆ ಇದು ಅತಿಹೆಚ್ಚಾಗಿದ್ದು ತುರಿಕೆ ವಿಪರೀತವಾಗಿರುತ್ತದೆ. ತುರಿಸಿದಷ್ಟೂ ಇದು ಹೆಚ್ಚುತ್ತಾ ಹೋಗುತ್ತದೆ. ಬಿಸಿ ತಾಪಮಾನದಲ್ಲಿ ಹೆಚ್ಚು ಬೆವರು ಸುರಿಸುವ ಪಟುಗಳಿಗೆ ಈ ತೊಂದರೆ ಹೆಚ್ಚಾಗಿ ಕಾಡುತ್ತದೆ.

ನಿದ್ರಾಹೀನತೆ

overtraining

ವ್ಯಾಯಾಮಶಾಲೆಯಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದಂತೆಯೇ ಹೆಚ್ಚು ಹೆಚ್ಚು ನಿದ್ರಾಹೀನತೆಗೆ ಒಳಗಾಗುವುದನ್ನು ಕಂಡುಕೊಳ್ಳಲಾಗಿದೆ. ಸಾಧಾರಣ ಮಟ್ಟಿನ ವ್ಯಾಯಾಮ ಸುಖನಿದ್ದೆಗೆ ಸಹಕಾರಿಯಾಗಿದೆ. ಆದರೆ ಇದೊಂದು ಹಂತದವರೆಗೆ ಮಾತ್ರ. ಇದಕ್ಕೂ ಹೆಚ್ಚು ವ್ಯಾಯಮ ಮಾಡಿದರೆ ನಿಮ್ಮ ದೇಹ ಸದಾ ಸುಸ್ತಾಗಿದ್ದು ದೇಹಕ್ಕೆ ವ್ಯಾಯಾಮದ ಮೂಲಕ ಕಳೆದುಕೊಂಡಿದ್ದ ಶಕ್ತಿಯನ್ನು ಮರುಕಳಿಸಲು ಮೆದುಳನ್ನು ಎಚ್ಚರವಾಗಿಡಿಸುವುದು ಅನಿವಾರ್ಯವಾಗುತ್ತದೆ. ನಿದ್ರೆ ಬರ್ತಾ ಇಲ್ವಾ? ಮನೆ ಮದ್ದು ಇಲ್ಲಿದೆ

English summary

signs you are overtraining and need to change your workout routine ...

As a fitness enthusiast, you take your workouts seriously and never go a day without it. But have your muscles been sore all the time? Have you been facing any difficulty falling asleep? Fitness expert says these could be signs that you are over exercising. Click next to know what signs to watch out for!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more