For Quick Alerts
ALLOW NOTIFICATIONS  
For Daily Alerts

ಜಿಮ್ಮಿನಲ್ಲಿ ಏನು ಮಾಡಬೇಕು ಏನು ಮಾಡಬಾರದು

By Arpitha Rao
|

ದೇಹದ ತೂಕವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಲು ಹೆಚ್ಚಿನ ಜನರು ಜಿಮ್ ಮತ್ತು ವ್ಯಾಯಾಮದ ಮೊರೆ ಹೋಗುತ್ತಿರುವುದು ಕಾಣಬಹುದು.ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಕೂಡ.ಆದರೆ ಜಿಮ್ ಮಾಡುವಾಗ ತಜ್ಞರ ಸಲಹೆ ಇಲ್ಲದೆ ನಮಗೆ ಇಷ್ಟ ಬಂದಂತೆ ಮಾಡುವುದರಿಂದ ಕೂಡ ದೇಹಕ್ಕೆ ಹಾನಿ ಸಂಭವಿಸಬಹುದು.ದೇಹಕ್ಕೆ ಅತಿ ಹೆಚ್ಚು ಒತ್ತಡವನ್ನು ಒಂದೇ ಭಾರಿ ನೀಡಿದರು ಕೂಡ ಗಾಯಗಳು ಸಂಭವಿಸಬಹುದು.

ಪ್ರತಿಯೊಬ್ಬರಿಗೂ ಜಿಮ್ ನ ಬಗ್ಗೆ ತಮ್ಮದೇ ಆದ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ತಿಳಿದಿವೆ ಎಂದುಕೊಂಡಿರುತ್ತಾರೆ.ನಾವು ಅವುಗಳ ಬಗ್ಗೆ ಹೆಚ್ಚು ತಿಳಿಸಲು ಬಯಸುತ್ತೇವೆ.

ನೀವು ನಿಮಗೆ ಫಿಟ್ನೆಸ್ ಬಗ್ಗೆ ಸಾಕಷ್ಟು ತಿಳಿದಿದೆ ಎಂದು ಹೇಳಿದರೆ ತಜ್ಞರು ಹೇಳುವ ಪ್ರಕಾರ ಸಾಕಷ್ಟು ಗಾಯಗಳು ಕೇವಲ ಸ್ನೇಹಿತರು,ಸಹ ಕೆಲಸಗಾರರು,ಅಥವಾ ಟಿವಿ ಯಲ್ಲಿ ನೋಡುವುದು ಇದರಿಂದ ಸಂಭವಿಸುತ್ತವೆ ಎನ್ನುತ್ತಾರೆ.ಆದ್ದರಿಂದ ಕೇವಲ ಅವರಿವರಿಂದ ಕೇಳಿದುದನ್ನು ನಂಬಬೇಡಿ.

Some dos and don'ts of gymming
ತಜ್ಞರು ಹೇಳುವ ಪ್ರಕಾರ ಸಾಕಷ್ಟು ನಂಬಿಕೆಗಳು ಗಾಯಗಳಾಗುವಂತೆ ಮಾಡಿ ನಿಮಗೆ ಹೆಚ್ಚು ವರ್ಕ್ ಔಟ್ ಮಾಡಲು ಆಗದಂತೆ ಮಾಡಿಬಿಡುತ್ತವೆ.ಗಾಯಗಳಾಗದಂತೆ ತಡೆಯಲು ಕೆಲವು ತಪ್ಪು ಮಾಹಿತಿಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ,ಓದಿ ತಿಳಿಯಿರಿ ಮತ್ತು ಮುಂದೆ ಯಾವುದೇ ರೀತಿಯ ಸಮಸ್ಯೆ ಬರದಂತೆ ತಡೆಯಿರಿ.

ತಪ್ಪು ನಂಬಿಕೆ 1:-ಟ್ರೆಡ್ ಮಿಲ್ ನಲ್ಲಿ ಓಡುವುದು ರಸ್ತೆಯಲ್ಲಿ ಓಡುವುದಕ್ಕಿಂತ ನಿಮ್ಮ ಮಂಡಿಗೆ ಕಡಿಮೆ ಒತ್ತಡ ಕೊಡುತ್ತದೆ:
ನೀವು ರಸ್ತೆಯಲ್ಲಿ ಓಡಿ ಅಥವಾ ಟ್ರೆಡ್ ಮಿಲ್ ನಲ್ಲಿ,ಯಾವುದರಲ್ಲಿ ಓಡಿದರು ಅದರಿಂದ ನಿಮ್ಮ ಮಂಡಿಗೆ ಪರಿಣಾಮ ಆಗುತ್ತದೆ ಏಕೆಂದರೆ ನಿಮ್ಮ ಇಡೀ ದೇಹದ ಭಾರ ಈ ಜಾಯಿಂಟ್ ಗಳ ಮೇಲೆ ಬೀಳುತ್ತಿರುತ್ತದೆ.ಈ ಮಂಡಿಗೆ ಒತ್ತಡ ಬೀಳುವುದನ್ನು ತಡೆಯಲು ಹೆಚ್ಚು ಹೊತ್ತು ಸತತವಾಗಿ ಓಡುವುದನ್ನು ತಡೆಯಿರಿ.

ತಪ್ಪು ನಂಬಿಕೆ 2:-ಆಬ್ ಯಂತ್ರಗಳು ಹೊಟ್ಟೆ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ:
ನೀವು ನಿಮ್ಮ ಹೊಟ್ಟೆ ಭಾಗದಲ್ಲಿ ಶೇಖರಗೊಂಡ ಕೊಬ್ಬನ್ನು ತೆಗೆದುಹಾಕಲು ಸಾಕಷ್ಟು ಜಾಹೀರಾತುಗಳನ್ನು ನೋಡಿರಬಹುದು ಆದರೆ ಅದನ್ನೆಲ್ಲ ನಂಬಬೇಡಿ.ಆಬ್ ಮಷಿನ್ ನಿಮ್ಮ ಸ್ನಾಯುಗಳನ್ನು ಬಲಯುತವಾಗಿಸಲು ಸಹಕರಿಸುತ್ತದೆ,ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ಮಾತ್ರ ಕೊಬ್ಬನ್ನು ಕರಗಿಸಲು ಸಾಧ್ಯ.ತಜ್ಞರು ಹೇಳುವ ಪ್ರಕಾರ ಹೃದಯ ಸಂಬಂಧಿ ಮತ್ತು ಬಲ ನೀಡುವ ತರಬೇತಿ ಇವುಗಳನ್ನು ಮಾಡುವುದರ ಮೂಲಕ ದೇಹದ ಕೊಬ್ಬನ್ನು ಕರಗಿಸಿಕೊಳ್ಳಬಹುದು.

ತಪ್ಪು ನಂಬಿಕೆ 3:-ಏರೋಬಿಕ್ ವರ್ಕ್ ಔಟ್ ಮಾಡಿ ಮುಗಿಸಿದ ನಂತರವೂ ನಿಮ್ಮ ಚಯಪಚಯ ಕ್ರಿಯೆ ಹೆಚ್ಚುತ್ತದೆ:-
ಇದು ಸ್ವಲ್ಪ ಮಟ್ಟಿಗೆ ನಿಜವಾದರೂ ನೀವು ಅಂದುಕೊಂಡಷ್ಟು ಅಲ್ಲ.ಏರೋಬಿಕ್ ಮಾಡಿದ ನಂತರವೂ ನಿಮ್ಮ ಚಯಾಪಚಯ ಕ್ರಿಯೆ ನಡೆಯುವುದು ಖಂಡಿತ ಆದರೆ ಅದರ ಗಾತ್ರ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ.ಬಹುಶಃ ನೀವು ದಿನದಲ್ಲಿ ಕೇವಲ 20 ರಷ್ಟು ಹೆಚ್ಚು ಕ್ಯಾಲೋರಿ ಕಳೆದುಕೊಳ್ಳಬಹುದು.

ತಪ್ಪು ನಂಬಿಕೆ 4:-ಸ್ವಿಮ್ಮಿಂಗ್ ದೇಹದ ತೂಕವನ್ನು ಬೇಗ ಕಳೆದುಕೊಳ್ಳಲು ಸಹಕರಿಸುತ್ತದೆ-
ಪ್ರತಿದಿನ ಈಜುವುದರಿಂದ (ಸ್ವಿಮ್ಮಿಂಗ್) ನಿಮ್ಮ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಒತ್ತಡ ಕಡಿಮೆ ಆಗುತ್ತದೆ,ಸ್ನಾಯುಗಳು ಬಲಿಷ್ಟವಾಗುತ್ತವೆ ಎಂಬುದು ಸತ್ಯ.ಆದಾಗ್ಯೂ ಇದು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಹೆಚ್ಚು ಸಹಾಯಕವಲ್ಲ.ನೀರು ನಿಮಗೆ ಬೆಂಬಲವಾಗಿರುವ ಕಾರಣ ನೀವು ಸಾಕಷ್ಟು ಕಷ್ಟಪಡುವ ಅಗತ್ಯ ಸ್ವಿಮ್ಮಿಂಗ್ ನಲ್ಲಿ ಇರುವುದಿಲ್ಲ.ಸ್ವಿಮ್ಮಿಂಗ್ ನಿಮಗೆ ಹೆಚ್ಚು ಹಸಿವಾಗುವಂತೆ ಮಾಡುವುದರಿಂದ ನೀವು ಕೊನೆಯಲ್ಲಿ ಅಧಿಕ ಆಹಾರ ಸೇವಿಸುವ ಸಂಭವ ಹೆಚ್ಚಿರುತ್ತದೆ.

ತಪ್ಪು ನಂಬಿಕೆ 5:-ಎಲ್ಲಾ ರೀತಿಯ ಬೆನ್ನು ನೋವುಗಳನ್ನು ಯೋಗದಿಂದ ಹೋಗಲಾಡಿಸಬಹುದು
ಸ್ನಾಯು ಸಂಬಂಧಪಟ್ಟ ಕಾರಣದಿಂದಾಗಿ ನಿಮಗೆ ಬೆನ್ನು ನೋವು ಬಂದಿದ್ದರೆ ಅದನ್ನು ಯೋಗಾದಿಂದ ಹೋಗಲಾಡಿಸಬಹುದು ಆದರೆ ಡಿಸ್ಕ್ ತೊಂದರೆಯಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ಯೋಗ ಪರಿಹಾರವಲ್ಲ.ಆದ್ದರಿಂದ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ.

ತಪ್ಪು ನಂಬಿಕೆ 6:-ವರ್ಕ್ ಔಟ್ ಮಾಡುವಾಗ ಬೆವರಲೇ ಬೇಕು !
ವ್ಯಾಯಾಮ ಮಾಡುವಾಗ ಬೆವರಲೇ ಬೇಕು ಎಂದು ತಿಳಿಯಬೇಡಿ.ಬೆವರದೇ ಕೂಡ ನಿಮ್ಮ ಕ್ಯಾಲೋರಿ ಕಡಿಮೆ ಆಗುವ ಸಾಧ್ಯತೆ ಇದೆ.ವಾಕಿಂಗ್ ಮತ್ತು ಕಡಿಮೆ ವ್ಯಾಯಾಮದಿಂದ ಇದು ಸಾಧ್ಯ.

ತಪ್ಪು ನಂಬಿಕೆ 7:-ಸ್ವಲ್ಪ ಬ್ರೇಕ್ ತೆಗೆದುಕೊಂಡ ನಂತರ ಮತ್ತೆ ಮೊದಲಿನಂತೆಯೇ ಒಂದೇ ದಿನದಲ್ಲಿ ಹೆಚ್ಚು ವರ್ಕ್ ಔಟ್ ಮಾಡುವುದು!
ಈ ರೀತಿ ಎಂದೂ ಮಾಡಲು ಹೋಗಬೇಡಿ.ಇದರಿಂದ ನಿಮ್ಮ ದೇಹಕ್ಕೆ ಹಾನಿ ಸಂಭವಿಸುತ್ತದೆ.ನೀವು ವರ್ಕ್ ಔಟ್ ಮಾಡುತ್ತಿರುವಾಗ ಓಕೆ ಎಂದೆನಿಸಿದರೂ ಕೂಡ ನಂತರದಲ್ಲಿ ಇದು ನಿಮ್ಮ ದೇಹಕ್ಕೆ ಪರಿಣಾಮ ಬೀರುತ್ತದೆ.ನೀವು ಸ್ವಲ್ಪ ದಿನ ಅಥವಾ ವಾರಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರೆ ನಂತರ ನಿಮಗೆ ವರ್ಕ್ ಔಟ್ ಮಾಡಲು ಹೆಚ್ಚು ಆಸಕ್ತಿ ಇರಬಹುದು ಆದರೆ ಈ ರೀತಿ ಒಂದೇ ದಿನದಲ್ಲಿ ಮಾಡುವುದರಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ.ಇದು ನಿಮಗೆ ತಕ್ಷಣಕ್ಕೆ ಯಾವುದೇ ಪರಿಣಾಮ ಬೀರದಿದ್ದರೂ ಕೂಡ ನಂತರದಲ್ಲಿ ಹೆಚ್ಚು ತೊಂದರೆಯಾಗಬಹುದು.

ತಪ್ಪು ನಂಬಿಕೆ 8:-ಮಷಿನ್ ಗಳು ತಪ್ಪು ತಿಳಿಸುವ ಸಾಧ್ಯತೆ ಇಲ್ಲವೇ ಇಲ್ಲ
ನಿಮ್ಮ ವ್ಯಾಯಾಮ ಮಾಡುವ ಮಷಿನ್ ನಿಮಗೆ ಬೇಕಾದ ಭಂಗಿ ತರಿಸುತ್ತದೆ ಎಂದು ತಿಳಿಯಬೇಡಿ,ಇದು ನೀವು ನಿಮ್ಮ ಎತ್ತರ ಮತ್ತು ದಪ್ಪದ ಆದಾರದ ಮೇಲೆ ಮಷಿನ್ ಅನ್ನು ಫಿಕ್ಸ್ ಮಾಡಿದ್ದರೆ ಮಾತ್ರ ಸಾಧ್ಯ.ನೀವೇ ನಿರ್ಧರಿಸುವ ಮೊದಲು ತಜ್ಞರಲ್ಲಿ ನಿಮಗೆ ಸರಿಯಾದ ಸ್ಪೀಡ್ ಯಾವುದು ಎಂಬುದನ್ನು ಕೇಳಿ ಖಚಿತಪಡಿಸಿಕೊಳ್ಳಿ.ಈ ರೀತಿ ಮಾಡುವುದರಿಂದ ನಿಮಗಾಗುವ ಹಾನಿಯನ್ನು ತಡೆಯಬಹುದು.

ತಪ್ಪು ನಂಬಿಕೆ 9:-ನೋವು ಒಳ್ಳೆಯದು!
ಹೆಚ್ಚು ನೋವಾದರೆ ಮಾತ್ರ ಹೆಚ್ಚು ತೂಕ ಕಳೆದುಕೊಳ್ಳಬಹುದು ಎಂಬುದನ್ನು ನಂಬಬೇಡಿ.ವರ್ಕ್ ಔಟ್ ಮಾಡಿದ ನಂತರ ಸ್ವಲ್ಪ ಮಟ್ಟಿನ ವೇದನೆ ಇರುವುದು ಸಹಜ ಆದರೆ ತುಂಬಾ ನೋವಾಗುವಂತೆ ವರ್ಕ್ ಔಟ್ ಮಾಡುವುದು ಕೂಡ ಸೂಕ್ತವಲ್ಲ.ತಜ್ಞರು ಹೇಳುವ ಪ್ರಕಾರ ನೀವು ವ್ಯಾಯಾಮ ಮಾಡುವಾಗ ಯಾವುದೇ ಕಾರಣಕ್ಕೂ ಅತಿಯಾಗಿರಬಾರದು.ನಿಮಗೆ ಹೆಚ್ಚು ನೋವಾದರೆ ನೀವು ವ್ಯಾಯಾಮ ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಅಥವಾ ನಿಮಗಾದ ಗಾಯಕ್ಕೆ ಇನ್ನಷ್ಟು ಒತ್ತಡ ನೀಡುತ್ತಿದ್ದೀರಿ ಎಂದರ್ಥ.

English summary

Some dos and don'ts of gymming

Everyone seems to have their own theory on the do's and don'ts ofgymming. We separate the wheat from the chaff.
Story first published: Tuesday, December 10, 2013, 10:45 [IST]
X
Desktop Bottom Promotion