For Quick Alerts
ALLOW NOTIFICATIONS  
For Daily Alerts

ಯೋಗ ಟಿಪ್ಸ್: ಕುತ್ತಿಗೆ ನೋವು ನಿವಾರಣೆಗೆ 'ಶಿಶು ಆಸನ'

By Vani Nayak
|

ಕುತ್ತಿಗೆ ನೋವಿಂದ ನಿಮಗೆ ಬಹಳ ತೊಂದರೆ ಆಗುತ್ತಿದೆಯೇ? ನಿಮ್ಮ ಕೆಲಸ ಕಾರ್ಯಗಳಿಗೆ ಮತ್ತು ದಿನ ನಿತ್ಯದ ಚಟುವಟಿಕೆಗಳಿಗೆ ಅಡ್ಡಿ ಆಗುತ್ತಿದೆಯೇ? ಹಾಗಿದ್ದಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳುವುದು ಅವಶ್ಯಕ. ದೀರ್ಘಕಾಲದ ಪರಿಹಾರವನ್ನು ನೈಸರ್ಗಿಕ ರೀತಿಯಲ್ಲಿ ಕಂಡುಕೊಳ್ಳಬೇಕಾದ್ದಲ್ಲಿ ಯೋಗಾಸನವನ್ನು ಅಭ್ಯಾಸ ಮಾಡುವುದು ಒಳ್ಳೆಯದು.

ಶಿಶು ಆಸನ ಕುತ್ತಿಗೆ ನೋವು ನಿವಾರಣೆಗೆ ಒಂದು ಉತ್ತಮವಾದ ಆಸನವಾಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು "ಚೈಲ್ಡ್ ಪೋಸ್" ಎಂತಲೂ ಕರೆಯುತ್ತಾರೆ.

Shishuasana

ಇತ್ತೀಚೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ. ಅದರಲ್ಲೂ ಮೇಜಿನ ಮುಂದೆ ಕುಳಿತು ಧೀರ್ಘ ಕಾಲದವರೆಗೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರಿಗೆ ಇದರ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಶುರುವಿನಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಂಡರೂ ಮುಂದೆ ಆ ನೋವಿನ ಪ್ರಮಾಣ ಹೆಚ್ಚಾಗಿ ತಡೆಯಲು ಸಾಧ್ಯವಾಗದಷ್ಟು ತೊಂದರಯನ್ನುಂಟು ಮಾಡುತ್ತದೆ. ಕುತ್ತಿಗೆ ಗಟ್ಟಿಯಾಗಿ ತಿರುಗಿಸಲಿಕ್ಕೂ ಬಾರದಂತಾಗುತ್ತದೆ.

ಸಾಧಾರಣವಾಗಿ, ಕುತ್ತಿಗೆ ನೋವು ಕಾಣಿಸಿಕೊಂಡಲ್ಲಿ ಮೊಟ್ಟ ಮೊದಲಿಗೆ ನಾವು ನೋವು ನಿವಾರಕ ಗುಳಿಗೆಗಳನ್ನೋ ಅಥವಾ ಸ್ಪ್ರೇಗಳನ್ನೋ ಬಳಸುತ್ತೇವೆ. ಇವೆಲ್ಲವೂ ಆ ಸಮಯಕ್ಕೆ ಪರಿಹಾರವನ್ನು ಕೊಟ್ಟರೂ ಧೀರ್ಘ ಕಾಲದ ಪರಿಹಾರವನ್ನು ಕೊಡುವುದಿಲ್ಲ. ಕೇವಲ ತಾತ್ಕಾಲಿಕ ಪರಿಹಾರವಾಗಿರುತ್ತದೆ. ಆದ್ದರಿಂದ ಯೋಗಾಭ್ಯಾಸವನ್ನು ಅಳವಡಿಸಿಕೊಂಡರೆ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಸಿಕ್ಕಂತಾಗುತ್ತದೆ. ಬೆನ್ನೇರಿ ಕಾಡುವ ಕುತ್ತಿಗೆ ನೋವಿಗೆ ಸರಳ ಟಿಪ್ಸ್

ಶಿಶು ಆಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ

1. ಮೊದಲಿಗೆ ಮಂಡಿ ಊರಿ ನೆಲದ ಮೇಲೆ ಕೂರಬೇಕು.
2. ಪಾದಗಳಿಗೆ ಸಮೀಪವಿರುವಂತೆ ಮಂಡಿಗಳನ್ನು ಜೋಡಿಸಿ.
3. ನಿಧಾನವಾಗಿ ನಿಮ್ಮ ಹೆಡಕನ್ನು ಬಾಗಿಸಿ ಅದನ್ನು ತೊಡೆಯ ಮೇಲಿರಿಸಿ ಮತ್ತು ಹಣೆಯನ್ನು ನೆಲದ ಮೇಲಿರಿಸಬೇಕು.
4. ತೋಳುಗಳನ್ನು ದೇಹದ ಎರಡೂ ಬದಿಯಲ್ಲಿ ಇರಿಸಬೇಕು.
5. ನಂತರ ನಿಧಾನವಾಗಿ ಎದೆ ಭಾಗವನ್ನು ಮೆಲ್ಲಗೆ ತೊಡೆಗಳ ಮೇಲೆ ಅದುಮಬೇಕು.
6. ನಿಮ್ಮ ಪೃಷ್ಠ ಭಾಗವು ಹಿಮ್ಮಡಿಯ ಮೇಲಿರಿಸಬೇಕು.

7. ನಿಧಾನವಾಗಿ ನಿಮ್ಮ ತೋಳುಗಳನ್ನೂ ಚಾಚಬೇಕು. ಇದರಿಂದ ನಿಮ್ಮ ಹೆಡಕನ್ನೂ ಹಿಗ್ಗಿಸಿದಂತಾಗುತ್ತದೆ.
8. ಬೆನ್ನೆಲಬಿಗೆ ಕೂಡ ಹಿಗ್ಗುವಿಕೆಯ ಅನುಭವವಾಗಬೇಕು.
9. ನಂತರ ಉಸಿರಾಟದ ಮೇಲೆ ಗಮನ ಹರಿಸಬೇಕು.
10. ಕೆಲ ಕ್ಷಣಗಳ ಹೀಗೆಯೇ ಇದ್ದು ನಂತರ ಭಂಗಿಯಿಂದ ಹೊರಬರಬೇಕು.

ಶಿಶು ಆಸನದಿಂದಾಗುವ ಇತರ ಲಾಭಗಳು

*ಒತ್ತಡಗಳಿಂದ ಮುಕ್ತಗೊಳಿಸುತ್ತದೆ.
*ಬೆನ್ನೆಲಬನ್ನು ಹಿಗ್ಗಿಸಲು ನೆರವಾಗುತ್ತದೆ.
*ಮಲಬದ್ಧತೆಯನ್ನು ನಿವಾರಿಸುತ್ತದೆ.
*ಬೆನ್ನನ್ನು ಹಿಗ್ಗಿಸುವುದರಿಂದ ಅದಕ್ಕೆ ಆರಾಮ ಸಿಗುತ್ತದೆ.
*ಬೆನ್ನು ನೋವನ್ನು ಹೋಗಲಾಡಿಸುತ್ತದೆ.
*ಆಯಾಸವನ್ನು ಹೋಗಲಾಡಿಸುತ್ತದೆ.
*ಸ್ನಾಯುಗಳ ಹಿಗ್ಗುವಿಕೆಗೆ ನೆರವಾಗುತ್ತದೆ.
*ತೊಡೆಗಳನ್ನು ಮತ್ತು ಪಾದಗಳನ್ನು ಹಿಗ್ಗಿಸಿದಂತಾಗುತ್ತದೆ.

ಎಚ್ಚರಿಕೆ:

ಶಿಶು ಆಸನವು ಒತ್ತಡ ನಿವಾರಣೆಗೆ, ಕುತ್ತಿಗೆ ನೋವು ನಿವಾರಣೆಗೆ ನೆರವಾದರೂ ಬಹಳ ಎಚ್ಚರಿಗೆ ಈ ಆಸನವನ್ನು ಹಾಕಬೇಕಾಗುತ್ತದೆ. ಮಂಡಿಯಲ್ಲಿ ಗಾಯಗಳಾದವರು, ಗರ್ಭಿಣಿ ಸ್ತ್ರೀಯರು ಈ ಆಸನವನ್ನು ಮಾಡತಕ್ಕದ್ದಲ್ಲ. ನುರಿತ ಯೋಗ ತರಬೇತಿದಾರರಿಂದ ಸಲಹೆಯ ಮೇರೆಗೆ ಮಾಡುವುದು ಹೆಚ್ಚು ಸೂಕ್ತ.

English summary

Shishuasana (Child Pose) To Relieve Neck Pain

Is your neck pain bothering you too much? Is it affecting your work and also your day-to-day activities? Then surely you need to get it checked. And if you are looking out for a long term natural solution, then it is best to take up yoga. Shishuasana, which is commonly known as the Child Pose is one of the best yoga asanas that helps in providing relief from neck pain.
X
Desktop Bottom Promotion