For Quick Alerts
ALLOW NOTIFICATIONS  
For Daily Alerts

ರಕ್ತ ಪರಿಚಲನೆಯ ಕ್ಷಮತೆಗೆ ಅನುಸರಿಸಿ ಸಾಲಂಭ ಭುಜಂಗಾಸನ

By Manu
|

ಸಂಸ್ಕೃತದಲ್ಲಿ ಸಾಲಂಭ ಎಂದರೆ ಬೆಂಬಲ, ಭುಜಂಗ ಅಂದರೆ ಹೆಡೆಯೆತ್ತಿ ನಿಂತ ನಾಗ ಮತ್ತು ಆಸನ ಎಂದರೆ ಭಂಗಿ ಎಂಬ ಅರ್ಥವಿದೆ. ಯೋಗಾಸನಗಳಲ್ಲಿ ಅತ್ಯಂತ ಸುಲಭವಾದ ಆಸನಗಳಲ್ಲೊಂದಾದ ಈ ಆಸನದಿಂದ ದೇಹದಲ್ಲಿ ರಕ್ತ ಪರಿಚಲನೆ ಉತ್ತಮಗೊಳ್ಳುವುದು ಹಾಗೂ ಯೋಗಾಸನವನ್ನು ಇತ್ತೀಚೆಗೆ ಪ್ರಾರಂಭಿಸಿದವರಿಗೆ ಅತಿ ಸೂಕ್ತವಾದ ಆಸನವಾಗಿದೆ.

ನಮ್ಮ ರಕ್ತಪರಿಚಲನೆಯ ಪ್ರಮುಖ ಕಾರ್ಯವೆಂದರೆ ಶ್ವಾಸಕೋಶಗಳಿಂದ ಆಮ್ಲಜನಕವನ್ನು ಕೊಂಡೊಯ್ದು ದೇಹದ ಇತರ ಭಾಗಗಳಿಗೆ ಮತ್ತು ಪ್ರತಿ ಅಂಗಾಂಶಕ್ಕೆ ಒದಗಿಸುವುದು. ನಮ್ಮ ಜೀವವೇ ಈ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದ್ದು ಇದರಲ್ಲಿ ಯಾವುದೇ ಏರುಪೇರು ಉಂಟಾದರೆ ಹೃದಯ ಸ್ತಂಭನ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಶ್ವಾಸಕೋಶದ ತೊಂದರೆಗಳು ಮೊದಲಾದವು ಎದುರಾಗುತ್ತವೆ. ಆದ್ದರಿಂದ ನಮ್ಮ ರಕ್ತಪರಿಚಲನೆಯನ್ನು ಅತ್ಯುತ್ತಮವಾಗಿರಿಸಿಕೊಳ್ಳುವ ಮೂಲಕ ಆರೋಗ್ಯವನ್ನೂ ಉತ್ತಮವಾಗಿರಿಸಿಕೊಳ್ಳಬಹುದು. ಮಹಿಳೆಯರಿಗೆ ಸಿಹಿ ಸುದ್ದಿ: ರಕ್ತ ಪರಿಚಲನೆ ಹೆಚ್ಚಿಸಲು ಸೂಕ್ತ ಸಲಹೆ

ಆರೋಗ್ಯವನ್ನು ಉತ್ತಮವಾಗಿಸಲು ಯೋಗಾಸನ ಅದ್ಭುತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಮಯಾಭಾವ, ಮಾನಸಿಕವಾದ ಸಿದ್ಧತೆಯ ಕೊರತೆ ಮೊದಲಾದವುಗಳಿಂದ ಒಂದು ವೇಳೆ ಯೋಗಾಸನದಿಂದ ದೂರವೇ ಉಳಿದಿದ್ದರೆ ಯೋಗವನ್ನು ಮತ್ತೊಮ್ಮೆ ಪ್ರಾರಂಭಿಸಲು ಈ ಆಸನ ನಿಮಗೆ ಪ್ರೇರಣೆ ನೀಡಲಿದೆ. ಬನ್ನಿ ಈ ಆಸನವನ್ನು ಅನುಸರಿಸುವ ಬಗೆ ಹಾಗೂ ಇದರ ಪ್ರಯೋಜನಗಳನ್ನು ನೋಡೋಣ:

Salamba Bhujangasana (Sphinx Pose) To Improve Blood Circulation

ಹಂತಹಂತವಾಗಿ ಅನುಸರಿಸುವ ಬಗೆ:

1. ಮೊದಲು ಹೊಟ್ಟೆಯ ಮೇಲೆ ಬೋರಲಾಗಿ ಮಲಗಿಕೊಳ್ಳಿ. ಗಲ್ಲ ನೆಲಕ್ಕೆ ತಾಕುವಂತಿರಲಿ, ಕಾಲುಬೆರಳುಗಳ ಉಗುರುಗಳು ನೆಲಕ್ಕೆ ತಾಕುವಂತಿರಲಿ, ಅಂದರೆ ಬೆರಳುಗಳು ಮಡಚಿರಬಾರದು.

2. ಎರಡೂ ಕಾಲುಗಳು ಪರಸ್ಪರ ತಾಕುವಂತಿರಬೇಕು, ಹಿಮ್ಮಡಿಗಳು ಜೊತೆಯಾಗಿರಬೇಕು.

3. ಎರಡು ಹಸ್ತಗಳು ನೆಲಕ್ಕೆ ತಾಕುವಂತೆ ಇದ್ದು ಸೊಂಟದ ಕೊಂಚ ಪಕ್ಕದಲ್ಲಿ ಮೊಣಕೈ ಮಡಚಿದ ಸ್ಥಿತಿಯಲ್ಲಿರಬೇಕು.

4. ಈಗ ಉಸಿರನ್ನು ಪೂರ್ಣವಾಗಿ ಎಳೆದುಕೊಳ್ಳುತ್ತಾ ತಲೆಯನ್ನು ಮೇಲಕ್ಕೆತ್ತಬೇಕು, ಹಾಗೂ ಕುತ್ತಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದೆ ಎಳೆಯಬೇಕು. ಶರೀರದ ಮುಂಭಾಗ ಹೊಟ್ಟೆಯವರೆಗೆ ಮಾತ್ರ ನೆಲಕ್ಕೆ

ತಾಕುವಂತಿದ್ದು ಎದೆಯ ಭಾಗ ನಿಂತಿರಬೇಕು. ಕೈಗಳು ತೊಂಭತ್ತು ಡಿಗ್ರಿಯಲ್ಲಿ ಮಡಚಿರಬೇಕು. ಒಂದು ರೀತಿಯಲ್ಲಿ ಪುಟ್ಟ ಮಗು ಕೈಗಳಿಂದ ಮೇಲೇಳುವ ಪ್ರಯತ್ನದಲ್ಲಿ ತಲೆ ಎತ್ತುವ ರೀತಿಯಲ್ಲಿರಬೇಕು. ರಕ್ತ ಸಂಚಾರ ವೃದ್ಧಿಸುವುದು ಹೇಗೆ ?

5. ಈ ಹಂತ ಪೂರ್ಣಗೊಂಡಾಗ ಉಸಿರೂ ಪೂರ್ಣವಾಗಿರಬೇಕು. ಈ ಹಂತದಲ್ಲಿ ಬೆನ್ನನ ಹುರಿ ಪ್ರಾರಂಭದಲ್ಲಿ ಕೊಂಚ ನೋವು ಅನ್ನಿಸಿದರೂ ಕ್ರಮೇಣ ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಹೊತ್ತು ಉಸಿರು ಕಟ್ಟಿ ಹೀಗೇ ಇರಬೇಕು.

6. ಬಳಿಕ ಉಸಿರು ನಿಧಾನವಾಗಿ ಬಿಡುತ್ತಾ ಮೊದಲಿನ ಹಂತಕ್ಕೆ ಬಂದ ಹಾಗೇ ಹಿಂದಿರುಗಬೇಕು. ಕೆಲವೊಮ್ಮೆ ಗಮನ ಹಣೆಯತ್ತ ಹರಿದಾಗ ಹಿಂದೆ ಹಿಮ್ಮಡಿಗಳು ಬೇರೆಯಾಗುವುದನ್ನು ಯೋಗಶಿಕ್ಷಕರು ಗಮನಿಸಿದ್ದಾರೆ. ಆದರೆ ಇದನ್ನು ಬೇರೆಬೇರೆಯಾಗಲು ಬಿಡಬಾರದು.

7. ಈ ಆಸನದಲ್ಲಿ ಕೊಂಚ ಪಳಗುತ್ತಾ ಬಂದಂತೆ ಕೈಗಳನ್ನು ಹಣೆಗಿಂತಲೂ ಮುಂದೆ ಒಂದಕ್ಕೊಂದು ಕಟ್ಟಿಕೊಂಡು ಪೂರ್ಣವಾಗಿ ಕೈಗಳು ನೀಳವಾಗುವಂತೆಯೂ ಈ ಆಸನವನ್ನು ಅನುಸರಿಸಬಹುದು. ಎರಡೂ ವಿಧಾನಗಳು ಒಂದೇ ಆದರೂ ಕೈಗಳನ್ನು ನೀಳವಾಗಿಸುವ ಮೂಲಕ ಹೆಚ್ಚಿನ ಫಲ ದೊರಕುತ್ತದೆ.

ಈ ಆಸನದ ಪ್ರಯೋಜನಗಳು
• ಬೆನ್ನುಹುರಿ ಉತ್ತಮಗೊಳ್ಳುತ್ತದೆ.
• ಹೊಟ್ಟೆಯ ಅಂಗಗಳಿಗೆ ಹೆಚ್ಚಿನ ಸೆಳೆತ ದೊರಕುವ ಮೂಲಕ ಅಂಗಗಳ ಕ್ಷಮತೆ ಹೆಚ್ಚುತ್ತದೆ.
• ಎದೆ ಮತ್ತು ಭುಜವನ್ನು ವಿಶಾಲವಾಗಿಸಲು ನೆರವಾಗುತ್ತದೆ.
• ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ.
• ದೇಹಕ್ಕೆ ನವಚೈತನ್ಯ ನೀಡುತ್ತದೆ.
• Rejuvenates the body

ಎಚ್ಚರಿಕೆ:
ಈ ಆಸನದಲ್ಲಿ ಹೊಟ್ಟೆಯ ಮೇಲೆ ಅತಿ ಹೆಚ್ಚಿನ ಭಾರ ಮತ್ತು ಒತ್ತಡ ಬೀಳುವ ಕಾರಣ ಗರ್ಭಿಣಿಯರು ಸರ್ವಥಾ ಈ ಆಸನವನ್ನು ಅನುಸರಿಸಕೂಡದು. ಅಂತೆಯೇ ಬೆನ್ನುನೋವು ಮತ್ತು ಬೆನ್ನುಹುರಿಯ ಚಿಕಿತ್ಸೆ ಪಡೆಯುತ್ತಿರುವವರೂ ಈ ಆಸನವನ್ನು ಯೋಗಶಿಕ್ಷಕರ ನೆರವಿಲ್ಲದೇ ಅನುಸರಿಸಬಾರದು.

English summary

Salamba Bhujangasana (Sphinx Pose) To Improve Blood Circulation

"Salamba" means Supported, "Bhujang" means Cobra in Sanskrit and "asana" is of course a pose. This asana is extremely easy to perform and is one of the choices as a beginner's pose. Now this pose is considered to be the best for improving blood circulation. The main task of the circulatory system is to supply oxygen to all the tissues of the body.
X
Desktop Bottom Promotion