For Quick Alerts
ALLOW NOTIFICATIONS  
For Daily Alerts

ಬರೀ ಎರಡೇ ವಾರಗಳಲ್ಲಿ ಬರೋಬ್ಬರಿ 5 ಕೆ.ಜಿ ತೂಕ ಇಳಿಸಿಕೊಳ್ಳಿ!

By Super Admin
|

ಸ್ಥೂಲಕಾಯ ಇಂದು ನಿಧಾನವಾಗಿ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ಈಗ ಇರುವ ಬಟ್ಟೆಗಳು ಬಿಗಿಯಾಗಿರುವುದು ಅಥವಾ ಅಂಗಡಿಯಲ್ಲಿ 'ನಿಮ್ಮ ಸೈಜ್ ನಮ್ಮ ಹತ್ತಿರ ಇಲ್ಲ' ಎಂಬ ಮಾತು ಕೇಳಿಬರುವಾಗ ನಮ್ಮ ತೂಕದ ಮೇಲೆ ಸಿಟ್ಟು ಬಂದು ಇದನ್ನು ಹೇಗಾದರೂ ಇಳಿಸಬೇಕೆಂಬ ಇರಾದೆ ಸ್ಥೂಲಕಾಯ ಹೊಂದಿರುವ ಎಲ್ಲರ ಮನದಲ್ಲಿಯೂ ಮೂಡುತ್ತದೆ. ಊಟ ಕಡಿಮೆ ಮಾಡಿದರೆ, ತೂಕ ಕಡಿಮೆಯಾಗುವುದಿಲ್ಲ!

ಆದರೆ ಸಂಕಲ್ಪ ಮಾತ್ರ ಹೊಂದಿದರೆ ಸಾಕೇ? ಮುನ್ನಡೆಯಬೇಡವೇ? ಸೋಮಾರಿತನ, ನಾಳೆ ಪ್ರಾರಂಭಿಸೋಣ ಎನ್ನುವ ಮಾತುಗಳೆಲ್ಲಾ ನಮ್ಮ ಸ್ಥೂಲಕಾಯವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ಹಾಗಾದರೆ ಹುಟ್ಟಾ ಸೋಮಾರಿಗಳಾಗಿರುವ ನಾವು ಏನು ಮಾಡಬೇಕು? ನಿಮ್ಮ ಆಹರಕ್ರಮವನ್ನು ಕೊಂಚ ಬದಲಿಸಿಕೊಳ್ಳಬೇಕು. ಆದರೆ ಇದಕ್ಕೆ ಮಾತ್ರ ಕೊಂಚ ದೃಢಮನಸ್ಸು ಅಗತ್ಯ.

ಸುಲಭವಾಗಿ ಲಭ್ಯವಿರುವ ಆಹಾರ ಸಾಮಾಗ್ರಿಗಳಿಂದ ನಿಮ್ಮ ನಿತ್ಯದ ಆಹಾರಕ್ರಮವನ್ನು ಬದಲಿಸುವ ಮೂಲಕ ಕೆಲವೇ ದಿನಗಳಲ್ಲಿ ಸ್ಥೂಲಕಾಯ ಇಳಿಯುತ್ತಾ ಬರುವುದನ್ನು ಕಂಡುಕೊಳ್ಳಬಹುದು. ಬನ್ನಿ, ಈ ಶಕ್ತಿ ಇರುವ ಒಂದು ಪೇಯವನ್ನು ಹೇಗೆ ತಯಾರಿಸಬಹುದೆಂದು ನೋಡೋಣ: ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

Natural Ingredients Can Reduce 5 Kilos In 2 Weeks!

ಅಗತ್ಯವಿರುವ ಸಾಮಾಗ್ರಿಗಳು
* ಹಾಗಲಕಾಯಿ - ನಾಲ್ಕರಿಂದ ಐದು, ಹೊರಸಿಪ್ಪೆ ಸುಲಿದು ಬೀಜ ನಿವಾರಿಸಿದ ತಿರುಳು
* ಅರಿಶಿನ ಪುಡಿ - ಒಂದು ಚಿಕ್ಕ ಚಮಚ
* ಜೇನು ಒಂದು ದೊಡ್ಡ ಚಮಚ ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ಹಾಗಲಕಾಯಿ ಕಹಿ ಎಂಬ ಒಂದೇ ಅವಗುಣ ಬಿಟ್ಟರೆ ಇದರಂತಹ ಅತ್ಯುತ್ತಮ ತರಕಾರಿ ಇನ್ನೊಂದಿಲ್ಲ. ಇದನ್ನು ಜೀರ್ಣಿಸಿಕೊಳ್ಳಲು ಅನಿವಾರ್ಯವಾಗಿ ಸಂಗ್ರಹವಾಗಿದ್ದ ಕೊಬ್ಬನ್ನು ದೇಹ ಬಳಸಿಕೊಳ್ಳಲೇಬೇಕಾಗುವುದೇ ತೂಕ ಇಳಿಸಲು ಸಾಧ್ಯವಾಗುವ ಗುಟ್ಟು.

ಅಲ್ಲದೇ ಹಾಗಲಕಾಯಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಇದರೊಂದಿಗೆ ಅರಿಶಿನ ಮತ್ತು ಜೇನು ತಮ್ಮ ಉತ್ತಮ ಗುಣಗಳನ್ನು ಸೇರಿಸಿ ಜೀವರಾಸಾಯನಿಕ ಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ ಹಾಗೂ ಇದಕ್ಕಾಗಿ ಕೊಬ್ಬನ್ನು ಬಳಸಿಕೊಂಡು ದಹಿಸುವ ಕ್ರಿಯೆ ಇನ್ನಷ್ಟು ಹೆಚ್ಚುತ್ತದೆ.

ಈ ಪೇಯವನ್ನು ದಿನದ ಪ್ರಥಮ ಆಹಾರವಾಗಿ ಕುಡಿದಾಗ ನಿಧಾನವಾಗಿ ತೂಕ ಇಳಿಯುತ್ತಾ ಬರುವುದನ್ನು ಕೆಲ ದಿನಗಳಲ್ಲಿಯೇ ಗಮನಿಸಬಹುದು. ಚೋಟುದ್ದ ಹಾಗಲಕಾಯಿ-ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿ

ಆದರೆ ಸುಮ್ಮನೇ ಕುಡಿಯುವುದು ಮಾತ್ರ ಸಾಲದು, ಕೊಂಚ ವ್ಯಾಯಾಮವೂ ಬೇಕು. ನಿಮಗೆ ಸೂಕ್ತವಾದ ವ್ಯಾಯಮವನ್ನು ಆಯ್ದುಕೊಂಡು ಅನುಸರಿಸುವುದು, ಒಂದು ವೇಳೆ ಇದಕ್ಕೆ ಅನುಮತಿ ಇಲ್ಲದಿದ್ದರೆ ಸುಲಭವಾದ ನಡಿಗೆಯೂ ಬೇಕಾದಷ್ಟಾಯಿತು.

ಈ ಪೇಯ ತಯಾರಿಸುವ ವಿಧಾನ
*ಮೇಲೆ ತಿಳಿಸಿದ ಮೂರೂ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ. ಕೊಂಚ ನೀರು ಬೇಕಿದ್ದರೆ ಸೇರಿಸಬಹುದು. ಇನ್ನು ಈ ಜ್ಯೂಸ್ ಅನ್ನು ಸೋಸದೇ ಹಾಗೇ ಗಟಗಟ ಕುಡಿದುಬಿಡಿ.


*ಪ್ರಾರಂಭದಲ್ಲಿ ಈ ಕಹಿ ಅಷ್ಟೊಂದು ಇಷ್ಟವಾಗದಿರಬಹುದು. ಆದರೆ ದಿನಗಳೆದಂತೆ ಅಭ್ಯಾಸವಾಗಿ ಕುಡಿಯುವುದು ಸುಲಭವಾಗುತ್ತದೆ.
*ಮಧುಮೇಹಿಗಳಿಗೆ ಜೇನು ಸಲ್ಲದಾದುದರಿಂದ ವೈದ್ಯರ ಸಲಹೆ ಪಡೆದು ಜೇನಿನ ಬದಲು ಕ್ಯಾಲೋರಿ ರಹಿತ ಸಕ್ಕರೆ ಬೆರೆಸಿ ಸೇವಿಸಬಹುದು.
English summary

Natural Ingredients Can Reduce 5 Kilos In 2 Weeks!

Natural remedies for weight loss can be prepared right at home, with common ingredients that are easily available. So, if you are looking for a herbal remedy for weight loss, you can try this homemade drink, made 3 powerful natural ingredients, have a look at how it is made, here.
X
Desktop Bottom Promotion