Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕಾಲುಗಳ ಸ್ನಾಯುವಿನ ಆರೋಗ್ಯಕ್ಕೆ, ಒಂದಿಷ್ಟು ಸರಳೋಪಾಯ
ಪಂಚಾಂಗ ಗಟ್ಟಿಯಾಗಿದ್ದರೆ ಮನೆ ಕೂಡ ಹೆಚ್ಚು ಕಾಲ ಬಾಳಿಕೆ ಬರುವುದು ಮತ್ತು ಅದು ಗಟ್ಟಿಮುಟ್ಟಾಗಿರುತ್ತದೆ. ಮನೆ ಅಂತಲ್ಲ, ಯಾವುದೇ ಆದರೂ ಅದರ ಮೂಲ ಗಟ್ಟಿಯಾಗಿದ್ದರೆ ಮಾತ್ರ ಎಲ್ಲವೂ ಸರಿಯಾಗಿರುತ್ತದೆ. ಇಲ್ಲವಾದರೆ ಎಲ್ಲವೂ ಟೊಳ್ಳುಟೊಳ್ಳಾಗಿರುವುದು. ನಮ್ಮ ದೇಹವು ಕೂಡ ಹಾಗೆ. ಸಂಪೂರ್ಣ ದೇಹವನ್ನು ಹೊತ್ತುಕೊಳ್ಳಬಲ್ಲ ಕಾಲುಗಳು ತುಂಬಾ ಗಟ್ಟಿಯಾಗಿರಬೇಕು. ನಿದ್ದೆ ಕೆಡಿಸುವ ಕಾಲುಗಳ ಸ್ನಾಯು ಸೆಳೆತಕ್ಕೆ ಸೂಕ್ತ ಮನೆಮದ್ದು
ಇಲ್ಲವಾದರೆ ನಮ್ಮ ದೇಹವು ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನೋವು, ಸ್ನಾಯುಸೆಳೆತ, ಉರಿ, ಊದಿಕೊಳ್ಳುವಿಕೆ, ದೇಹದ ಅಸಮತೋಲನ ಇತ್ಯಾದಿ ದೇಹದಲ್ಲಿ ನಿತ್ರಾಣ ಉಂಟುಮಾಡಿ ಜೀವನವು ಚಟುವಟಿಕೆ ಇಲ್ಲದಂತೆ ಮಾಡುತ್ತದೆ. ದೇಹದಲ್ಲಿ ನಿತ್ರಾಣ ಉಂಟಾದರೆ ಅದು ಇನ್ನು ಹಲವಾರು ರೋಗಗಳನ್ನು ದೇಹದಲ್ಲಿ ಸೇರಿಸಿಕೊಂಡು ಆಟವಾಡುತ್ತದೆ.
ಸರಿಯಾದ ವ್ಯಾಯಾಮ ಮತ್ತು ಆಹಾರ ಕ್ರಮದಿಂದ ಕಾಲುಗಳಲ್ಲಿ ಇರುವಂತಹ ನಿಶ್ಯಕ್ತಿಯನ್ನು ಹೋಗಲಾಡಿಸಬಹುದಾಗಿದೆ. ನಮ್ಮ ಕಾಲುಗಳು ಯಾಕೆ ದುರ್ಬಲಗೊಳ್ಳುವುದು ಮತ್ತು ಕಾಲುಗಳ ಸ್ನಾಯುಗಳಿಗೆ ಯಾವ ರೀತಿಯಿಂದ ಶಕ್ತಿ ತುಂಬಬಹುದು? ಕಾಲುಗಳಲ್ಲಿನ ಸ್ನಾಯುಗಳ ನಿಶ್ಯಕ್ತಿಯು ಸಣ್ಣ ಮಟ್ಟದ ನಿತ್ರಾಣ ಅಥವಾ ಸಂಪೂರ್ಣ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇದು ಒಂದು ಕಾಲು ಅಥವಾ ಎರಡು ಕಾಲುಗಳಿಗೆ ಭಾದಿಸಬಹುದು. ಕಾಲುಗಳ ಸ್ನಾಯುಗಳ ದುರ್ಬಲತೆಗೆ ಕೆಲವು ಸಾಮಾನ್ಯ ಕಾರಣಗಳು ಹಾಗೂ ಅದಕ್ಕೆ ಚಿಕಿತ್ಸೆಯನ್ನು ಇಲ್ಲಿ ತಿಳಿಸಿಕೊಡಲಾಗಿದೆ...

ದೀರ್ಘಕಾಲ ಸ್ನಾಯುಗಳ ಚಟುವಟಿಕೆ ಇಲ್ಲದಿರುವುದು
ಸ್ನಾಯುಗಳ ದುರ್ಬಲತೆಗೆ ಇದು ಒಂದು ಪ್ರಮುಖ ಕಾರಣವಾಗಿದೆ. ಸ್ನಾಯುಗಳ ದುರ್ಬಲತೆಯನ್ನು ಹೋಗಲಾಡಿಸಲು ನೀವು ಪ್ರತೀದಿನ 30 ನಿಮಿಷಗಳ ಕಾಲ ನಡೆಯಬೇಕು. ಯೋಗ, ಈಜು, ಜಾಗಿಂಗ್ ಮತ್ತು ಓಡುವುದು ಇತ್ಯಾದಿ ಸ್ನಾಯುಗಳು ಬಲಗೊಳ್ಳಲು ಮಾಡಬೇಕಾದ ಇತರ ಚಟುವಟಿಕೆಗಳು. ವ್ಯಾಯಾಮ ಮಾಡಲು ನಿಮಗೆ ಕಷ್ಟವಾಗುತ್ತಿದ್ದರೆ ಹತ್ತಿರದ ನರತಜ್ಞರನ್ನು ಭೇಟಿ ಮಾಡಿ.

ಬೆನ್ನು ಮೂಳೆಯ ನರ ಸಂಕುಚಿತಗೊಳ್ಳುವುದು
ಇದನ್ನು ಇನ್ನೊಂದು ಅರ್ಥದಲ್ಲಿ ಸೆಟೆದುಕೊಂಡ ನರವೆಂದು ಹೇಳಲಾಗುತ್ತದೆ. ಕಾಲುಗಳ ಸ್ನಾಯುಗಳ ದೌರ್ಬಲ್ಯಕ್ಕೆ ಇದು ಮತ್ತೊಂದು ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ನರತಜ್ಞರನ್ನು ಕಾಣಬೇಕು. ನರತಜ್ಞರು ನಿಮಗೆ ನಿಧಾನವಾಗಿ ಮಾಡುವಂತಹ ಮಸಾಜ್ ಬಗ್ಗೆ ತಿಳಿಸಬಹುದು. ಇದರಿಂದ ರಕ್ತಸಂಚಲನ ಉಂಟಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುವುದು.

ನರಸ್ನಾಯು ರೋಗ
ಕಾಲುಗಳ ಸ್ನಾಯುಗಳ ದುರ್ಬಲತೆಗೆ ಇದು ಒಂದು ಕಾರಣವಾಗಬಹದು. ವೈದ್ಯರಿಂದ ಔಷಧಿ ಪಡೆಯುವುದರೊಂದಿಗೆ ಕಾಲುಗಳನ್ನು ನೇರವಾಗಿ ಮೇಲಕೆತ್ತುವುದು, ಸಣ್ಣಪುಟ್ಟ ಯೋಗ ಇತ್ಯಾದಿ ವ್ಯಾಯಾಮಗಳನ್ನು ಮಾಡುತ್ತಿರಬೇಕು. ಇಂತಹ ವ್ಯಾಯಾಮ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಕಾಲುಗಳ ದೌರ್ಬಲ್ಯ
ಕೆಲವು ರೀತಿಯ ಮದ್ದಿನಿಂದ ಇದು ಗುಣಮುಖವಾಗುವುದು. ಇಂತಹ ಸಂದರ್ಭದಲ್ಲಿ ವೈದ್ಯರು ಕೆಲವೊಂದು ವ್ಯಾಯಾಮಗಳನ್ನು ಸೂಚಿಸಿರುತ್ತಾರೆ. ಇದನ್ನು ಕಡ್ಡಾಯವಾಗಿ ಮಾಡಬೇಕು.

ವಿಟಮಿನ್ ಡಿ ಕೊರತೆ
ವಿಟಮಿನ್ ಡಿ ಕೊರತೆ ಇದ್ದರೆ ಕಾಲುಗಳ ಸ್ನಾಯುಗಳು ದುರ್ಬಲಗೊಳ್ಳುತ್ತದೆ ಎಂದು ಅಧ್ಯಯನಗಳು ಹೇಳಿವೆ. ಸೂರ್ಯನ ಕಿರಣಗಳಲ್ಲಿ ಈ ವಿಟಮಿನ್ ಲಭ್ಯವಿದ್ದು, ಬೆಳಗ್ಗಿನ ಅವಧಿಯಲ್ಲಿ ಸುಮಾರು 10-15 ನಿಮಿಷಗಳ ಕಾಲ ಸೂರ್ಯನ ಬಿಸಿಲಿಗೆ ಮೈಯೊಡ್ಡಿದರೆ ಕಾಲುಗಳಲ್ಲಿ ಇರುವ ದೌರ್ಬಲ್ಯವನ್ನು ಹೋಗಲಾಡಿಸಬಹುದು. ವಿಟಮಿನ್ ಡಿ ಹೆಚ್ಚಿರುವ ಬಂಗುಡೆ, ಸಾಲ್ಮನ್, ಸಾರವರ್ಧಿತ ಹಾಲು, ಕಿತ್ತಳೆ ರಸ ಮತ್ತು ಏಕದಳ ಧಾನ್ಯಗಳನ್ನು ಹೆಚ್ಚಾಗಿ ಬಳಸಿ.

ನಿರ್ಜಲೀಕರಣ
ನಿರ್ಜಲೀಕರಣದಿಂದ ಕಾಲುಗಳ ಸ್ನಾಯುಗಳು ದುರ್ಬಲ ಹಾಗೂ ಸ್ನಾಯು ಸೆಳೆತ ಉಂಟಾಗಲು ಕಾರಣ. ಹೆಚ್ಚಿನ ನೀರು ಕುಡಿಯಿರಿ ಮತ್ತು ಹಣ್ಣುಗಳ ಜ್ಯೂಸ್ ಗಳನ್ನು ಕುಡಿಯುವುದರಿಂದ ನಿಮ್ಮ ದೇಹವು ನೀರಿನಾಂಶವನ್ನು ಪಡೆದು ಕಾಲುಗಳ ಸ್ನಾಯುಗಳು ಬಲಗೊಳ್ಳುವುದು. ಕ್ಯಾಲ್ಸಿಯಂ ಅಧಿಕವಾಗಿರುವ ಹಾಲನ್ನು ಕುಡಿದರೆ ಸ್ನಾಯುಗಳು ಬಲಗೊಳ್ಳುವುದು.

ಅತಿಯಾದ ಚಟುವಟಿಕೆ
ಕಾಲುಗಳು ದುರ್ಬಲಗೊಳ್ಳಲು ಇದು ಮತ್ತೊಂದು ಕಾರಣವಾಗಿದೆ. ಒತ್ತಡದ ಕೆಲಸದ ಮಧ್ಯೆ ಸ್ವಲ್ಪ ವಿಶ್ರಾಂತಿ ಪಡೆದು ನಿಮ್ಮ ದೇಹದ ಆಯಾಸವನ್ನು ನೀಗಿಸಿ ಇದರಿಂದ ಕಾಲುಗಳಿಗೂ ಶಕ್ತಿ ಬರುವುದು.

ವೈದ್ಯಕೀಯ ಕಾರಣಗಳು
ಮಧುಮೇಹ, ರಕ್ತಹೀನತೆ ಕಾಲುಗಳಲ್ಲಿನ ನಿಶ್ಯಕ್ತಿಗೆ ಮತ್ತೊಂದು ಕಾರಣವಾಗಬಹುದು. ವೈದ್ಯರು ಸೂಚಿಸಿದಂತಹ ಔಷಧಿ ಮತ್ತು ಪೋಷಕಾಂಶಗಳನ್ನು ಒಳಗೊಂಡ ಆಹಾರದಿಂದ ಕಾಲುಗಳಲ್ಲಿನ ದೌರ್ಬಲ್ಯವು ನಿವಾರಣೆಯಾಗುವುದು. ಕಾಲುಗಳಲ್ಲಿನ ನಿಶ್ಯಕ್ತಿಗೆ ಕಾರಣವೇನೆಂದು ಮೊದಲು ತಿಳಿದುಕೊಂಡು ಸರಿಯಾದ ಚಿಕಿತ್ಸೆ ಮಾಡಿದರೆ ಯಾವುದೇ ಸಮಸ್ಯೆ ಕಾಣಿಸದು.



Click it and Unblock the Notifications