For Quick Alerts
ALLOW NOTIFICATIONS  
For Daily Alerts

ಪಚನ ಕ್ರಿಯೆ ವೃದ್ಧಿಸಲು ಅನುಸರಿಸಿ-ಅಷ್ಟವಕ್ರಾಸನ

By Vani naik
|

ಜೀರ್ಣಕ್ರಿಯೆ ಸಮಸ್ಯೆಯಿದ್ದರೆ, ಉಬ್ಬಿದ ಹೊಟ್ಟೆ, ಇರುಸುಮುರುಸು, ಕರುಳಿನಲ್ಲಿ ಕಿರಿಕಿರಿ ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ನಮ್ಮ ಆರೋಗ್ಯದ ಮೇಲೇ ಪರಿಣಾಮ ಬೀರಿ, ದಿನ ನಿತ್ಯದ ಚಟುವಟಿಕೆಗಳನ್ನು ಮಾಡಲು ತೊಂದರೆಯಾಗುತ್ತದೆ.

ಔಷಧಿ ಅಂಗಡಿಗಳಲ್ಲಿ ಸಿಗುವ ಗುಳಿಗೆಗಳನ್ನು ತೆಗೆದು ಕೊಳ್ಳುವುದರಿಂದ ಆ ಕ್ಷಣಕ್ಕೆ ಪರಿಹಾರವನ್ನು ಕಂಡು ಕೊಳ್ಳಬಹುದು. ಆದರೆ ಈ ಅಭ್ಯಾಸವನ್ನೇ ರೂಢಸಿಕೊಂಡರೆ, ಎಷ್ಟರಮಟ್ಟಿಗೆ ಸುರಕ್ಷಿತ ಎಂಬುದು ಪ್ರಶ್ನೆಯಾಗಿ ಉಳಿದುಬಿಡುತ್ತದೆ. ಯೋಗ ಟಿಪ್ಸ್: ವೀರಾಸನ - ಪಚನ ಕಾರ್ಯಕ್ಕೆ ಸಹಕಾರಿ

ಸಹಜವಾಗಿ, ಗುಳಿಗೆಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಆಗುತ್ತವೆ. ಅಜೀರ್ಣ ಸಮಸ್ಯೆಯನ್ನು ತಡೆಗಟ್ಟಲು, ಪಚನ ಕಾರ್ಯವನ್ನು ವೃದ್ಧಿಸಲು ಯಾವ ಕ್ರಮವನ್ನು ಕೈಗೊಳ್ಳಬೇಕು ಎಂಬ ಪ್ರಶ್ನಗೆ, ಯೋಗಾಭ್ಯಾಸ ಎಲ್ಲಾ ವಿಧಾನಗಳಗಿಂತ ಅತ್ಯಂತ ಸುಲಭವಾದದ್ದು, ನೈಸರ್ಗಿಕವಾದದ್ದು ,ಅಡ್ಡ ಪರಿಣಾಮಗಳಾಗದೇ ಇರುವಂಥಹುದು ಎಂದು ತಿಳಿದು ಬಂದಿದೆ.

Astavakrasana (Eight Angle Pose) To Improve Digestion

ಅಷ್ಟವಕ್ರಾಸನವನ್ನು ಅಭ್ಯಾಸ ಮಾಡುವುದರಿಂದ ಪಚನ ಕಾರ್ಯ ಉತ್ತಮವಾಗಲು ನೆರವಾಗುತ್ತದೆ. ಅಷ್ಟವಕ್ರಾಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಅಷ್ಟ" ಎದರೆ 8 ಎಂದರ್ಥ. "ವಕ್ರ" ನೇರವಿಲ್ಲದ ಅಥವಾ ಸೊಟ್ಟ ಎಂದರ್ಥ. "ಆಸನ" ಎಂದರೆ ಭಂಗಿ ಎಂದರ್ಥ.

ಮೊಟ್ಟಮೊದಲು ಈ ಆಸನವನ್ನು ಅಭ್ಯಾಸ ಮಾಡುವವರಿಗೆ ಕಷ್ಟವಾಗಬಹುದು. ಈ ಆಸನವನ್ನು ಹಾಕಲು, ಕಾಲುಗಳು ಮತ್ತು ಸೊಂಟ ಶಕ್ತಿಯುತವಾಗಿದ್ದು, ನಮ್ಯತೆ ಹೊಂದಿರಬೇಕು. ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದರೆ, ಕ್ರಮೇಣ ಸುಲಭವಾಗುತ್ತದೆ. ಈ ಆಸನವನ್ನು ಹಾಕುವ ಬಗೆ ಹೇಗೆ ಎಂಬುದನ್ನು ತಿಳಿಯೋಣ. ಯೋಗ ಟಿಪ್ಸ್: ಸ್ನಾಯುಗಳ ಸದೃಢತೆಗೆ ಚತುರಂಗ ದಂಡಾಸನ

ಅಷ್ಟವಕ್ರಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ಮೊದಲಿಗೆ, ದಂಡಾಸನದಂತೆ ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಬೇಕು.
2. ನಿಧಾನವಾಗಿ ನಿಮ್ಮ ಬಲ ಮೊಣಕಾಲನ್ನು ಬಾಗಿಸಿ, ನಿಮ್ಮ ಬಲಗಾಲಿನ ಅಂಗಾಲನ್ನು ಬಲಗಡೆಯ ಪೃಷ್ಠಭಾಗಕ್ಕೆ ತರಬೇಕು.
3. ನಿಧಾನವಾಗಿ ಬಲತೋಳನ್ನು ಬಲಮಂಡಿಯ ಕೆಳಗೆ ತರಬೇಕು.
4. ಬಲ ಅಂಗಾಲನ್ನು ನೆಲದಿಂದ ಮೇಲಕ್ಕೆ ತರಬೇಕು.
5. ಬಲ ಮಂಡಿಯನ್ನು ಬಲ ಭುಜದ ಮೇಲೆ ತರಬೇಕು.


6. ಎಡಗಾಲನ್ನು ನೇರವಾಗಿರಿಸಬೇಕು.
7. ಎರಡೂ ಅಂಗೈಗಳನ್ನು ನೆಲದ ಮೇಲೆ ಅದುಮಬೇಕು.
8. ನಿಧಾನವಾಗಿ ಎಡಗಾಲನ್ನು ಎತ್ತಿ, ಎಡ ಕಣಕಾಲು ಬಲಕಣಕಾಲನ್ನು ಮೇಲೆ ಬರುವಂತೆ ಮಾಡಿ.
9. ಎರಡೂ ಕಾಲುಗಳನ್ನು ನೇರವಾಗಿರಿಸಿ , ನಿಧಾನವಾಗಿ ಎರಡೂ ಕಾಲುಗಳನ್ನು ದೇಹದ ಬಲಭಾಗಕ್ಕೆ ತರಬೇಕು.
10. ಧೀರ್ಘವಾಗಿ ಉಸಿರಾಡಿಸಿ, ಕೆಲ ಕ್ಷಣಗಳ ಕಾಲ ಅದೇ ಭಂಗಿಯಲ್ಲಿದ್ದು, ನಿಧಾನವಾಗಿ ಭಂಗಿಯಿಂದ ಹೊರ ಬರಬೇಕು.

ಅಷ್ಟವಕ್ರಾಸನದಿಂದಾಗುವ ಇತರ ಲಾಭಗಳು
*ಮಣಿಕಟ್ಟು ಮತ್ತು ತೋಳುಗಳನ್ನು ಬಲಗೊಳಿಸುತ್ತದೆ.
*ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಗೊಳಿಸುತ್ತದೆ.
*ದೇಹದ ಸಮತೋಲನವನ್ನು ಕಾಪಾಡುತ್ತದೆ.
*ದೇಹದಿಂದ ಟಾಕ್ಸಿನ್ ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
*ಒಳತೊಡೆಗಳನ್ನು ಬಲಗೊಳಿಸುತ್ತದೆ.

ಎಚ್ಚರಿಕೆ:
ಯಾರಿಗೆ ಮಣಿಕಟ್ಟಿನಲ್ಲಿ, ಮೊಣಕೈಯಲ್ಲಿ ಅಥವಾ ಭುಜಗಳಲ್ಲಿ ಗಾಯಗಳು ಆಗಿದೆಯೋ ಅವರು, ಈ ಆಸನವನ್ನು ಮಾಡತಕ್ಕದ್ದಲ್ಲ. ನುರಿತ ಯೋಗಾ ತರಬೇತಿದಾರರ ಸಲಹೆ ಸೂಚನೆ ಮೇರೆಗೆ ಮಾಡುವುದು ಒಳ್ಳೆಯದು.

English summary

Astavakrasana (Eight Angle Pose) To Improve Digestion

Astavakrasana is one yoga asana which helps to improve digestion. The word Astavakrasana comes from the Sanskrit word 'Asta' which means eight, 'Vakra' which means curved or bent and 'Asana' which means pose. Initially for beginners Astavakrasana might be difficult. Strength and flexibilty of the legs and hips are required to perform the asana. However, with continuous practise it becomes easier. Here is the step-wise procedure to perform Astavakrasana. Have a look.
X
Desktop Bottom Promotion