For Quick Alerts
ALLOW NOTIFICATIONS  
For Daily Alerts

ಯೋಗ ಟಿಪ್ಸ್: ಸ್ನಾಯುಗಳ ಸದೃಢತೆಗೆ ಚತುರಂಗ ದಂಡಾಸನ

By Vani Naik
|

ಸ್ನಾಯುಗಳ ಅಶಕ್ತತೆಯಿಂದ ನಮ್ಮ ದೈನಂದಿಕ ಚಟುವಟಿಕೆಗಳು, ನಮ್ಮ ಚಲನವಲನಗಳು ಏರುಪೇರಾಗುತ್ತದೆ. ನಮ್ಮ ದೇಹದಲ್ಲಿ ಸ್ನಾಯುಗಳು ಬಹಳ ಮುಖ್ಯವಾದ ಅಂಗವಾಗಿದೆ. ಇದಕ್ಕೆ ಸ್ವಲ್ಪಕೂಡ ಹಾನಿಯಾದರೂ, ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ಅಡ್ಡಿ ಮಾಡುತ್ತದೆ. ಕೇವಲ ಚಟುವಟಿಕೆಗಳಿಗಷ್ಟೇ ಅಲ್ಲದೇ, ಹೃದಯಕ್ಕೂ ಸಹ ಕೆಡಕುಂಟು ಮಾಡುತ್ತದೆ.

ಅಷ್ಟೇ ಅಲ್ಲದೇ ರಕ್ತ ಸಂಚಾರಕ್ಕೂ ಅಡ್ಡಿ ಪಡಿಸಿ, ಪಚನ ಕಾರ್ಯವೂ ಸರಿಯಾಗಿ ಆಗದೆ, ದೈಹಿಕ ಆರೋಗ್ಯವು ಹದಗೆಡುತ್ತದೆ. ಸರಿಯಾದ ಸಮಯದಲ್ಲಿ ಕಾಳಜಿ ವಹಿಸದಿದ್ದರೆ, ಇದರಿಂದ ಅನೇಕ ಸಮಸ್ಯೆಗಳಾಗಿ, ಹಾಸಿಗೆ ಹಿಡಿದು ಮಲಗುವ ಪ್ರಸಂಗವೂ ಬರಬಹುದು. ಸದೃಢ ಕಾಲುಗಳಿಗಾಗಿ ಅನುಸರಿಸಿ 'ಪರಿವೃತ್ತ ತ್ರಿಕೋನಾಸನ'

Chaturanga Dandasana To Strengthen The Muscles

ಆದ್ದರಿಂದ ನಾವು ನಮ್ಮ ಸ್ನಾಯುಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಪ್ರಶ್ನಗೆ, ಔಷಧಿ ಅಂಗಡಿಗಳಲ್ಲಿ ಸಾಕಷ್ಟು ಪೌಷ್ಠಿಕಾಂಶಗಳನ್ನು ಒದಗಿಸುವ ಪೂರಕಗಳು ದೊರೆಯುತ್ತವೆ. ಇದನ್ನು ನಾವು ದಿನ ನಿತ್ಯದ ಆಹಾರದ ಜೊತೆಗೆ ತೆಗೆದುಕೊಂಡು ತಕ್ಕ ಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಇದರಿಂದ ನಿಮ್ಮ ಸ್ನಾಯುಗಳ ಬಲ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. ಆದರೆ, ಇವೆಲ್ಲವೂ ತಾತ್ಕಾಲಿಕ ಪರಿಹಾರವಾಗಿರುತ್ತದೆ. ನೀವು ಶಾಶ್ವತವಾದ ಪರಿಹಾರವನ್ನು ಹುಡುಕುತ್ತಿದ್ದರೆ, ಯೋಗಾಭ್ಯಾಸವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದು.

ಸ್ನಾಯುಗಳ ಬಲವರ್ಧನೆಗೆ ಚತುರಂಗ ದಂಡಾಸನ ಉತ್ತಮವಾದದ್ದು. ಈ ಆಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಚತುರ್" ಎಂದರೆ ನಾಕು ಎಂದರ್ಥ."ಅಂಗ" ಎಂದರೆ ಅವಯವ ಎಂದರ್ಥ. "ದಂಡ" ಎಂದರೆ ಕೋಲು ಎಂದರ್ಥ. "ಆಸನ" ಎಂದರೆ ಭಂಗಿ ಎಂದರ್ಥ. ಈ ಆಸನವನ್ನು ಕ್ರಮವಾಗಿ ಹಾಕುವ ಬಗೆಯನ್ನು ತಿಳಿಯೋಣ. ಚತುರಂಗ ದಂಡಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ: ಸದೃಢ ಸ್ನಾಯುಗಳ ಆರೋಗ್ಯಕ್ಕೆ-ಪರಿಗಾಸನ

1. ನಿಂತ ಭಂಗಿಯಿಂದ ನಿಧಾನವಾಗಿ ಕೆಳಗೆ ಬನ್ನಿ, ನಾಯಿಯ ಭಂಗಿಯನ್ನು ಹೋಲುವಂತೆ.
2. ನಿಮ್ಮ ಎರಡೂ ಕಾಲುಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ.
3. ನಿಮ್ಮ ದೇಹವನ್ನು ನೆಲಕ್ಕಿಂತ ಸ್ಪಲ್ಪ ಮೇಲಿರುವ ಹಾಗೆ ಕೆಳಗೆ ಇಳಿಸಿ.
4. ನಿಮ್ಮ ಎರಡೂ ಭುಜಗಳನ್ನು ಬೆನ್ನಿನ ಹಿಂಭಾಗಕ್ಕೆ ಮಾಡಿ ಬೆನ್ನೆಲಬನ್ನು ನೇರವಾಗಿರಿಸಿ.
5. ನಿಮ್ಮ ದೇಹ ನೆಲಕ್ಕೆ ಸಮಾನಾಂತರವಿರಬೇಕು.
6. ನಿಮ್ಮ ಕಾಲ್ಬೆರಳು ಹಾಗು ನಿಮ್ಮ ಅಂಗೈ ನಿಮ್ಮ ದೇಹಕ್ಕೆ ಆಧಾರವಾಗಿರಬೇಕು. ಮೊಣಕೈ ನೆಲಕ್ಕೆ ತಾಕಬಾರದು.
7. ಕಾಲುಗಳು ನೇರವಾಗಿರಬೇಕು.
8. ಕುತ್ತಿಗೆಯೂ ಸಹ ನೇರವಾಗಿರಬೇಕು.
9. ಅಂಗೈ ಮತ್ತು ಕಾಲ್ಬೆರಳುಗಳನ್ನು ನೆಲದ ಮೇಲೆ ಅದುಮಬೇಕು.
10. ನಿಧಾನವಾಗಿ ಉಸಿರಾಡಿಸಿ, ಅದೇ ಭಂಗಿಯಲ್ಲಿ 10-20 ಸೆಕೆಂಡುಗಶು ಇರಬೇಕು.
11. ನಿಧಾನವಾಗಿ ಆ ಭಂಗಿಯಿಂದ ಹೊರಗೆ ಬರಬೇಕು.

ಚತುರಂಗ ದಂಡಾಸನದಿಂದಾಗುವ ಇತರ ಲಾಭಗಳು:
*ಕಿಬ್ಬೊಟ್ಟೆಯ ಸ್ನಾಯುಗಳು ಸದೃಢವಾಗುತ್ತದೆ. ದೇಹವು ಸಮತೋಲನವಾಗಿದ್ದು, ನಮ್ಯತೆಯನ್ನು ಕಾಪಾಡುತ್ತದೆ. *ಮಣಿಕಟ್ಟು ಮತ್ತು ತೋಳುಗಳ ಬಲವನ್ನು ಹೆಚ್ಚಿಸುತ್ತದೆ.
*ಬೆನ್ನೆಲುಬಿನ ಬಲವನ್ನು ಹೆಚ್ಚಿಸುತ್ತದೆ.
*ಬೆನ್ನು ನೋವನ್ನು ನಿವಾರಿಸುತ್ತದೆ.

ಎಚ್ಚರಿಕೆ:
ಯಾರಿಗೆ ಸೊಂಟ ನೋವಿದೆಯೊ, ಮಣಿಕಟ್ಟು ಹಾಗು ಭುಜದಲ್ಲಿ ಗಾಯಗಳಾಗಿದೆಯೋ, ಅವರು ಹಾಗು ಗರ್ಭಿಣಿ ಸ್ತ್ರೀಯರು ಚತುರಂಗ ದಂಡಾಸನವನ್ನು ಮಾಡತಕ್ಕದ್ದಲ್ಲ. ನುರಿತ ಯೋಗಾ ತರಬೇತಿದಾರರಿಂದ ಸಲಹೆ, ಸೂಚನೆಯ ಮೇರೆಗೆ ಮಾಡುವುದು ಹೆಚ್ಚು ಸೂಕ್ತ.

English summary

Chaturanga Dandasana To Strengthen The Muscles

Chaturanga Dandasana commonly known as the Four Limbed Staff Pose is one such yoga asana which helps in strengthening the muscles. The word Chaturanga Dandasana comes from the Sanskrit words, 'Chatur' which means four, 'Anga' which means limbs, 'Danda' which means staff and 'Asana' which means pose. Here is the step-wise procedure to perform Chaturanga Dandasana. Take a look.
X
Desktop Bottom Promotion