For Quick Alerts
ALLOW NOTIFICATIONS  
For Daily Alerts

ತೂಕವನ್ನು ಇಳಿಸಲು ಅನುಸರಿಸಿ ಆಯುರ್ವೇದ ಮಾರ್ಗ...

By Jaya subramanya
|

ದೇಹದ ತೂಕವು ಮಿತಿಮೀರಿ ಏರಿಕೆಯಾಗುತ್ತಿದೆ ಎಂದಾದಲ್ಲಿ ಇದು ನಿಮ್ಮ ಸೌಂದರ್ಯಕ್ಕೆ ಕಪ್ಪುಚುಕ್ಕೆ ಇದ್ದಂತೆ. ಬಾಯಿ ಚಪಲಕ್ಕೆ ಕಡಿವಾಣ ಹಾಕಿದಾಗ ಮಾತ್ರವೇ ಆರೋಗ್ಯಕರ ತೂಕವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಆದರೆ ಇಂದಿನ ಜೀವನ ಶೈಲಿಯಲ್ಲಿ ಇದು ಕೊಂಚ ಕಷ್ಟದ ಮಾತೇ ಆಗಿದೆ. ಮನೆಯಲ್ಲಿ ತಿಂಡಿ ತಯಾರಿಸಲು ಸಮಯ ಸಾಲದಾಗುತ್ತಿದೆ ಎಂದಾದಾಗ ನಾವು ಹೋಟೆಲ್ ಇಲ್ಲವೇ ಫಾಸ್ಟ್ ಫುಡ್ ಕೇಂದ್ರಗಳತ್ತ ಕಾಲು ಹಾಕುತ್ತೇವೆ. ಇವರು ಬಳಸುವ ಅತಿಯಾದ ಎಣ್ಣೆಯುಕ್ತ ಆಹಾರ ಪದಾರ್ಥಗಳು ನಮ್ಮ ದೇಹವನ್ನು ರೋಗದ ಗೂಡಾಗಿ ಪರಿವರ್ತಿಸಿ ಬೊಜ್ಜೆಂಬ ಸ್ಲೋ ಪಾಯಿಸನ್‌ಗೆ ನಾವು ಬಲಿಯಾಗುವಂತೆ ಮಾಡುತ್ತದೆ. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಹೋಟೆಲ್‌ನಲ್ಲೂ ಆರೋಗ್ಯಕರ ಆಹಾರ ಪದ್ಧತಿಯನ್ನು ನಾವು ಅನುಸರಿಸುವ ಮೂಲಕ ನಮ್ಮ ಆರೋಗ್ಯವನ್ನು ತೂಕವನ್ನು ನಾವು ಸುಸ್ಥಿತಿಯಲ್ಲಿರಿಸಬಹುದು. ಆದರೆ ಈ ಪದ್ಧತಿಯನ್ನು ನಾವು ಅನುಸರಿಸುವುದೇ ಇಲ್ಲ. ಅಲ್ಲಿರುವ ತರೇಹವಾರಿ ಆಹಾರಗಳನ್ನು ಕಂಡ ಕೂಡಲೇ ನಮ್ಮ ಶಪಥ ಕರಗಿ ನೀರಾಗುತ್ತದೆ ಅಂತೆಯೇ ಡಯಟ್ ಸೂತ್ರವನ್ನು ನಾಳೆ ಪಾಲಿಸಿದರಾಯಿತು ಎಂಬ ತೀರ್ಮಾನಕ್ಕೆ ನಾವು ಬಂದುಬಿಡುತ್ತೇವೆ. ತೂಕ ಇಳಿಸಿಕೊಳ್ಳಲು ನೈಸರ್ಗಿಕ ಜ್ಯೂಸ್, ಪ್ರಯತ್ನಿಸಿ ನೋಡಿ

ಅಂತೂ ಇಂತೂ ಕಠಿಣ ಡಯಟ್ ಬೇಡ ಎಂಬ ತೀರ್ಮಾನಕ್ಕೆ ಬಂದಿರುವವರಿಗೆ ಇಲ್ಲಿದೆ ಆಯುರ್ವೇದ ಪದ್ಧತಿಯ ಮೂಲಕ ದೇಹದ ತೂಕವನ್ನು ನಿಯಂತ್ರಿಸುವ ಸರಳ ವಿಧಾನ ವಾತ, ಪಿತ್ತ ಮತ್ತು ಕಫ ಎಂಬ ಮೂರು ದೇಹ ಪ್ರಕಾರಗಳಿಗೆ ಆಯುರ್ವೇದದಲ್ಲಿ ಔಷಧಿ ಇರುವುದರಿಂದ ಈ ದೋಷಗಳನ್ನು ಪರಿಹರಿಸುವುದರ ಮೂಲಕ ಅತಿಯಾದ ತೂಕಕ್ಕೆ ಕಡಿವಾಣವನ್ನು ಹಾಕಬಹುದಾಗಿದೆ. ಇಲ್ಲಿ ಐದು ಆಯುರ್ವೇದಿಕ್ ಪರಿಹಾರಗಳನ್ನು ನಾವು ನೀಡುತ್ತಿದ್ದು ಇದನ್ನು ಪಾಲಿಸುವುದರ ಮೂಲಕ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳ ಬಹುದಾಗಿದೆ.

ಮೆಂತೆ

ಮೆಂತೆ

ಭಾರತೀಯ ಅಡುಗೆ ಮನೆಯಲ್ಲಿ ಹೆಚ್ಚು ಲಭ್ಯವಾಗುವ ಮೆಂತೆಯ ಕಮಾಲು ಹೆಚ್ಚಿನವರಿಗೆ ಗೊತ್ತಿಲ್ಲ. ದೇಹದ ಕೊಬ್ಬು ಕರಗಿಸುವ ಅದ್ಭುತ ಮದ್ದಾಗಿರುವ ಇದು ಫೈಬರ್ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಕ್ಯಾಲೋರಿ ಇಲ್ಲವೇ ಇಲ್ಲ ಮತ್ತು ಹಸಿವಾಗುವಿಕೆಯನ್ನೂ ಇದು ತಡೆಯುತ್ತದೆ. ಇದು ಆಯುರ್ವೇದದಲ್ಲಿ ತಿಳಿಸಿರುವ ಉತ್ತಮ ಪರಿಹಾರವಾಗಿದೆ. ರಾತ್ರಿ ಒಂದು ಚಮಚದಷ್ಟು ಮೆಂತೆಯನ್ನು ನೆನೆಸಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಈ ನೀರನ್ನು ಸೇವಿಸಿ. ಹುರಿದ ಮೆಂತೆ ಬೀಜಗಳನ್ನು ಮೊಸರು ಅಥವಾ ಸಲಾಡ್‌ಗಳಲ್ಲಿ ಬಳಸಿ.

ಅಲೋವೆರಾ

ಅಲೋವೆರಾ

ನಿಜಕ್ಕೂ ಅದ್ಭುತ ಗಿಡಮೂಲಿಕೆಯಾಗಿ ಅಲೋವೆರಾ ಪ್ರಸಿದ್ಧಗೊಂಡಿದೆ. ಉತ್ತಮ ತ್ವಚೆ, ಉತ್ತಮ ಜೀರ್ಣಕ್ರಿಯೆ, ತೂಕ ಇಳಿಕೆ ಮತ್ತು ಸರ್ವದನ್ನೂ ಒಂದೇ ಸಮಯದಲ್ಲಿ ಮಾಡುವ ಮಾಂತ್ರಿಕ ಗಿಡಮೂಲಿಕೆ ಇದಾಗಿದೆ. ನಿರ್ವಿಷಗೊಳಿಸಲು ಇದು ಸಹಕಾರಿಯಾಗಿದ್ದು, ಚಯಾಪಚಯ ಕ್ರಿಯೆಯನ್ನು ಇದು ಹೆಚ್ಚಿಸುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ. ಲಿಂಬೆ ರಸದೊಂದಿಗೆ ಅಲೋವೆರಾವನ್ನು ಬಳಸಿ. ಇದಕ್ಕೆ ಜೇನನ್ನು ಸೇರಿಸಿಕೊಳ್ಳಿ. ನಿಮ್ಮ ದೇಹದ ತೂಕ ಇಳಿಕೆ ಪ್ರಕ್ರಿಯೆಯೊಂದಿಗೆ ಇದೂ ಕೂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಲೋಳೆ ಸರ ಜ್ಯೂಸ್- ಇನ್ನು ತೂಕ ಇಳಿಸಲು ರೆಡಿಯಾಗಿ..!

ಕರಿಬೇವು

ಕರಿಬೇವು

ಕೊಬ್ಬು ಕರಗಿಸುವ ಅದ್ಭುತ ಗಿಡಮೂಲಿಕೆಯಾಗಿದೆ ಕರಿಬೇವು. ತೂಕ ಇಳಿಕೆಯಲ್ಲಿ ಈ ಔಷಧೀಯ ಸಸ್ಯದ್ದು ಅದರದ್ದೇ ಆದ ಹೆಸರಿದೆ. ತೂಕ ಇಳಿಸುವ ಅಂಶಗಳಲ್ಲದೆ, ನಿಮ್ಮ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಉತ್ಕರ್ಷಣ ನಿರೋಧಿ ಅಂಶಗಳೂ ಇದರಲ್ಲಿದೆ. ಸಣ್ಣ ಕರುಳು ಮತ್ತು ಹೊಟ್ಟೆಯ ಉತ್ತಮ ಕಾರ್ಯನಿರ್ವಹಣೆಗೆ ಇದು ಸಹಾಯ ಮಾಡುತ್ತದೆ. ನೀವು ತಯಾರಿಸುವ ದಾಲ್ ಮತ್ತು ಪಲ್ಯದಲ್ಲಿ ಕೂಡ ಕರಿಬೇವನ್ನು ಬಳಸಬಹುದಾಗಿದೆ. ಬಿಸಿನೀರಿನಲ್ಲಿ ಇದನ್ನು ಕುದಿಸಿ ನಂತರ ಅದನ್ನು ಸೇವಿಸಿ.

ತ್ರಿಫಲ

ತ್ರಿಫಲ

ತೂಕವನ್ನು ನಿಯಂತ್ರಣದಲ್ಲಿರಿಸುವ ಆರೋಗ್ಯ ಔಷಧವಾಗಿರುವ ತ್ರಿಫಲ ಹರಿತಾಕಿ, ಬಿಬಿತಾಕಿ ಮತ್ತು ಆಮ್ಲತಾಕಿ ಹೀಗೆ ಮೂರು ಮಿಶ್ರಣಗಳ ಗಿಡಮೂಲಿಕೆಯಾಗಿದೆ. ನಿತ್ಯವೂ ಇದನ್ನು ಸೇವಿಸುವುದರಿಂದ ಉತ್ತಮ ಜೀರ್ಣಕ್ರಿಯೆಯನ್ನು ಇದು ಖಾತ್ರಿಪಡಿಸಿ ನೀವು ಸೇವಿಸುವ ಆಹಾರದಿಂದ ಹೆಚ್ಚಿನ ನ್ಯೂಟ್ರಿಷನ್ ದೊರೆಯುವಂತೆ ಮಾಡುತ್ತದೆ. ಇದರಿಂದ ಹಸಿವು ನಿಮಗೆ ಕಡಿಮೆ ಉಂಟಾಗುತ್ತದೆ.

ಬಳಕೆ

ಬೆಚ್ಚಗಿನ ನೀರಿನಲ್ಲಿ ಒಂದು ಚಮಚದಷ್ಟು ತ್ರಿಫಲ ಹುಡಿಯನ್ನು ಹಾಕಿಕೊಂಡು ಒಂದು ತಿಂಗಳಿನವರೆಗೆ ಸೇವಿಸಿ. ಉತ್ತಮ ಫಲಿತಾಂಶ ದೊರೆಯುತ್ತದೆ.

ಗುಗ್ಗಲ್

ಗುಗ್ಗಲ್

ಆಯುರ್ವೇದದ ಪ್ರಕಾರ, ನಿಮ್ಮ ಕಫದಲ್ಲಿ ಉಂಟಾಗುವ ಅನಿಯಂತ್ರಣ ತೂಕ ಹೆಚ್ಚಾಗುವಿಕೆ ಕಾರಣವಾಗಿದೆ. ಆಯುರ್ವೇದ ಗಿಡಮೂಲಿಕೆಗಳನ್ನು ತೂಕ ಇಳಿಕೆಗೆ ಬಳಸಬಹುದಾಗಿದ್ದು ಇದರಲ್ಲಿ ಗುಗ್ಗಲ್ ಕೂಡ ಒಂದು. ಕರುಳಿನಿಂದ ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಗುಗ್ಗಲ್ ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಇದು ಏರಿಸುತ್ತದೆ ಇದರಿಂದ ತೂಕ ಇಳಿಕೆಯಾಗುತ್ತದೆ. ಬಿಸಿ ನೀರಿನಲ್ಲಿ ಗುಗ್ಗಲ್ ಅನ್ನು ಸೇವಿಸುವುದು ಪರಿಣಾಮಕಾರಿಯಾಗಿ ನಿಮ್ಮ ತೂಕವನ್ನು ಇಳಿಸುತ್ತದೆ.

English summary

5 Best Ayurvedic Remedies For Weight Loss

According to Ayurveda, a human body is made up of one of these three doshas. Therefore, a diet in accordance with your doshas will suit you the best. The next step in losing your weight is introducing Ayurvedic herbs in your life, which make weight loss much more easier. So, here are the 5 best Ayurvedic remedies to reduce weight gain.
X
Desktop Bottom Promotion