Latest Updates
-
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ!
ಸದೃಢ ಪುರುಷರ ಆರೋಗ್ಯದ ಗುಟ್ಟು, ವ್ಯಾಯಮದಿಂದ ರಟ್ಟು!
ನಮ್ಮ ಸುತ್ತಮುತ್ತಲ ಜನರನ್ನು ಕೊಂಚ ಗಮನವಿಟ್ಟು ಅವಲೋಕಿಸಿದರೆ ಹೆಚ್ಚಿನವರು ತಮ್ಮದೇ ಯಾವುದೋ ಚಿಂತೆಯಲ್ಲಿ ಮುಳುಗಿರುವುದು ಕಂಡುಬರುತ್ತಾರೆ. ಅದರಲ್ಲೂ ಪುರುಷರ ಗಹನೆ ಇನ್ನೂ ಹೆಚ್ಚು. ದೈಹಿಕವಾಗಿ ಇಲ್ಲಿದ್ದರೂ ಮನಸ್ಸು ಎಲ್ಲೆಲ್ಲೋ ಓಡುತ್ತಿರುತ್ತದೆ. ಯಾವುದೇ ಕೆಲಸಕ್ಕೂ ನಿಧಾನವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ಕೆಲವು ಪುರುಷರು ಮಾತ್ರ ಸತತವಾಗಿ ಲವಲವಿಕೆಯನ್ನು ತೋರುತ್ತಾರೆ. ಯಾವುದೇ ಕೆಲಸಕ್ಕೂ ಹಸನ್ಮುಖಿಗಳಾಗಿ ಮುನ್ನುಗ್ಗುತ್ತಾರೆ.
ತಮಗೆ ಬಂದ ಕೆಲಸವನ್ನು ತಕ್ಷಣವೇ ಪ್ರಾರಂಭಿಸಿಬಿಡುತ್ತಾರೆ. ನಡುನಡುವೆ ಹಾಡೊಂದನ್ನು ಗುನುಗುತ್ತಾ ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ಮುಗಿಸುತ್ತಾರೆ. ಇವರ ಚೈತನ್ಯದ ಗುಟ್ಟೇನು ಎಂದು ಕೊಂಚ ವಿಚಾರಿಸಿದರೆ ಪ್ರತಿದಿನವೂ ಅವರು ನಿಯಮಿತವಾಗಿ ವ್ಯಾಯಾಮ ಮಾಡುತ್ತಿರುವ ಗುಟ್ಟು ಹೊರಬರುತ್ತದೆ. ಬೆಳಗ್ಗಿನ ವ್ಯಾಯಾಮದ ಪರಿಣಾಮಕಾರಿ ಪ್ರಯೋಜನಗಳು
ಹೌದು, ನಿತ್ಯದ ಬೆಳಗಿನ ವ್ಯಾಯಾಮ, ಯೋಗಾಭ್ಯಾಸ ಅಥವಾ ಯಾವುದೇ ದೈಹಿಕ ಚಟುವಟಿಕೆ ಇಡಿಯ ದಿನದ ಉಲ್ಲಾಸಕ್ಕೆ ಮತ್ತು ಚೈತನ್ಯಕ್ಕೆ ಕಾರಣವಾಗಿದೆ. ಈ ಪುರುಷರು ಇತರರಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು ಅಲ್ಲದೇ ಪ್ರಣಯದಲ್ಲಿಯೂ ವ್ಯಾಯಾಮ ಮಾಡದ ದಿನಕ್ಕಿಂತ ಹೆಚ್ಚಿನ ಚೈತನ್ಯವನ್ನು ತೋರಬಲ್ಲರು. ವಾಸ್ತವವೆಂದರೆ ನಮ್ಮ ಶರೀರ ಇಡಿಯ ದಿನ ದೈಹಿಕವಾಗಿ ಚಟುವಟಿಕೆಯಿಂದಿರಬೇಕು ಎಂತಲೇ ನಿರ್ಮಿಸಲ್ಪಟ್ಟಿದೆ. ದೇಹದ ಕೊಬ್ಬು ಕರಗಿಸಲು ಅತ್ಯುತ್ತಮ ವ್ಯಾಯಾಮಗಳು
ಬನ್ನಿ ವ್ಯಾಯಾಮದಿಂದ ಯಾವ ರೀತಿಯ ಉಪಯೋಗಗಳಿವೆ ಎಂಬ ಬಗ್ಗೆ ದೈಹಿಕ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ನಲ್ಲಿ ವಿವರಿಸಲಾಗಿದೆ, ಮುಂದೆ ಓದಿ..

ವಾಸ್ತವಾಂಶ 1)
ಪ್ರತಿದಿನ ಬೆಳಿಗೆ ಹದಿನೈದು ನಿಮಿಷ ವ್ಯಾಯಾಮ ಮಾಡಿದರೆ ಮುಂದಿನ ಎಂಟರಿಂದ ಹತ್ತು ಗಂಟೆಗಳ ಕಾಲ ನಿಮ್ಮ ಮನೋಭಾವವನ್ನು ಧನಾತ್ಮಕ ರೀತಿಯಲ್ಲಿರಿಸಲು ಸಾಧ್ಯವಾಗುತ್ತದೆ.

ವಾಸ್ತವಾಂಶ 2)
ಈ ನಿಟ್ಟಿನಲ್ಲಿ ನಡೆದ ಸಂಶೋಧನೆಯಿಂದ ನಿತ್ಯ ವ್ಯಾಯಾಮ ಮಾಡುವ ಪುರುಷರು ಇತರರಿಗಿಂತ ಹೆಚ್ಚು ಚಟುವಟಿಕೆಯುಳ್ಳವರೂ, ಹುರುಪುಳ್ಳವರೂ ಸಂತೋಷಭರಿತರೂ ಆಗಿರುತ್ತಾರೆ.

ವಾಸ್ತವಾಂಶ 3)
ನಿತ್ಯ ನಿಯಮಿತವಾಗಿ ಮಾಡುವ ವ್ಯಾಯಾಮದಿಂದ ದೇಹದಲ್ಲಿ ಎಂಡಾರ್ಫಿನ್ ಎಂಬ ರಸದೂತ ಬಿಡುಗಡೆಯಾಗುತ್ತದೆ. ಇದು ನಮ್ಮ ಮನಸ್ಸನ್ನು ಉಲ್ಲಸಿತವಾಗಿಡಲು, ಮನಸ್ಸನ್ನು ಹೆಚ್ಚು ಕೇಂದ್ರೀಕರಿಸಲು, ಒತ್ತಡವನ್ನು ತಡೆದುಕೊಳ್ಳಲು, ಭಾವನೆಗಳನ್ನು ಹತ್ತಿಕ್ಕಲು ನೆರವಾಗುತ್ತದೆ.

ವಾಸ್ತವಾಂಶ 4)
ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವವರು ಇತರರಿಗಿಂತ ಮನಸ್ಸಿನ ಒತ್ತಡವನ್ನು ಸಮರ್ಥವಾಗಿ ಎದುರಿಸಬಲ್ಲವರಾಗಿರುತ್ತಾರೆ. ಇದು ನಿತ್ಯ ವ್ಯಾಯಾಮ ಮಾಡುವುದರ ಅತ್ಯುತ್ತಮ ಪ್ರಯೋಜನವಾಗಿದೆ.

ವಾಸ್ತವಾಂಶ 5)
ನಿತ್ಯವೂ ವ್ಯಾಯಾಮವನ್ನು ಒಂದು ಅಭ್ಯಾಸದಂತೆ ಅನುಸರಿಸುವವರಲ್ಲಿ ಖಿನ್ನತೆ ಮತ್ತು ಉದ್ವೇಗಗಳೆರಡನ್ನೂ ನಿಯಂತ್ರಿಸುವ ಕ್ಷಮತೆ ಇತರರಿಗಿಂತ ಹೆಚ್ಚಿರುತ್ತದೆ.

ವಾಸ್ತವಾಂಶ 6)
ವಾರದಲ್ಲಿ ಮೂರುದಿನವಾದರೂ ಪ್ರತಿದಿನ ಸುಮಾರು ಮೂವತ್ತು ನಿಮಿಷಗಳ ಕಾಲ ದೈಹಿಕ ಕಸರತ್ತು ಮಾಡಿರುವವರು ಮಾನಸಿಕವಾಗಿ ಹೆಚ್ಚು ಸಬಲರಾಗಿರುತ್ತಾರೆ.

ವಾಸ್ತವಾಂಶ 7)
ನಿತ್ಯವೂ ವ್ಯಾಯಾಮವನ್ನು ಮಾಡುತ್ತಾ ತಮ್ಮ ಶರೀರವನ್ನು ಕಟ್ಟುಮಸ್ತಾಗಿರಿಸುವವರು ಜೀವನದಲ್ಲಿ ಹೆಚ್ಚಿನ ಸಂತೋಷ ಪಡುವವರೂ, ಇತರರಿಗೆ ಪ್ರೇರಣೆ ನೀಡುವವರೂ ಹಿಡಿದ ಕೆಲಸವನ್ನು ಪೂರೈಸುವವರೂ ಆಗಿರುತ್ತಾರೆ.

ವಾಸ್ತವಾಂಶ 8)
ನಿತ್ಯದ ವ್ಯಾಯಾಮವನ್ನು ದಿನಚರಿಯಂತೆ ಆಚರಿಸುವವರು ಸಿಟ್ಟು, ದುಃಖ ಮೊದಲಾದ ಭಾವನೆಗಳನ್ನು ಇತರರಿಗಿಂತ ಹೆಚ್ಚು ಸಮರ್ಪಕವಾಗಿ ನಿಭಾಯಿಸಲು ಸಮರ್ಥರಿರುತ್ತಾರೆ.

ವಾಸ್ತವಾಂಶ 9)
ನಿತ್ಯದ ವ್ಯಾಯಾಮದ ಬಳಿಕ ಕೊಂಚಹೊತ್ತಿನ ಧ್ಯಾನವನ್ನು ಅನುಸರಿಸುವವರು ಶಾಂತತೆ ಮತ್ತು ಜೀವನದಲ್ಲಿ ತೃಪ್ತಿಯನ್ನು ಅನುಭವಿಸುವವರಾಗಿರುತ್ತಾರೆ.

ವಾಸ್ತವಾಂಶ 10)
ನಿತ್ಯದ ವ್ಯಾಯಾಮ ಮತ್ತು ಕಸರತ್ತನ್ನು ಒಂದು ಮಹತ್ವಾಕಾಂಕ್ಷೆಯ ಕ್ರೀಡೆಯಂತೆ ಪಾಲಿಸುವವರು ರಾತ್ರಿ ಸಂಗಾತಿಯೊಂದಿಗಿನ ಸಮಯದಲ್ಲಿ ಅಪ್ರತಿಮ ಪರಾಕ್ರಮ ತೋರುತ್ತಾರೆ.



Click it and Unblock the Notifications