For Quick Alerts
ALLOW NOTIFICATIONS  
For Daily Alerts

ಮೂವತ್ತರ ಬಳಿಕ ಪುರುಷರು, ಸಾಮರ್ಥ್ಯ ಕಳೆದುಕೊಳ್ಳುತ್ತಾರಂತೆ!

By Super Admin
|

ಸಾಮಾನ್ಯವಾಗಿ ಪಾದರಸದಂತೆ ಚುರುಕಾಗಿದ್ದ ಪುರುಷರು ಮೂವತ್ತು ದಾಟುತ್ತಿದ್ದಂತೆಯೇ ಸುಸ್ತಾಗಿರುವಂತೆ ಕಾಣತೊಡಗುತ್ತಾರೆ. ಎಲ್ಲರಲ್ಲಿ ಅಲ್ಲದಿದ್ದರೂ ಹತ್ತರಲ್ಲಿ ಏಳು ಜನರು ನಿಃಶಕ್ತಿಗೆ ಒಳಗಾಗಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಇದಕ್ಕೆ ಸಂಶೋಧನೆ ಏಕೆ?

ನಮ್ಮ ಸುತ್ತಮುತ್ತಲಲ್ಲಿರುವ ಜನರನ್ನೇ ಕೊಂಚ ಅವಲೋಕಿಸಿದರೂ ಮೂವತ್ತು ದಾಟಿದ ಯುವಕರು ಹಿಂದಿನ ಆಟೋಟ, ಸೈಕಲ್ ತುಳಿಯುವುದು, ಮುಂಜಾನೆಯ ಜಾಗಿಂಗ್, ನಡೆಯುವುದು ಮೊದಲಾದವುಗಳಿಗೆ ನಿಧಾನಕ್ಕೆ ತಿಲಾಂಜಲಿಯಿಡುತ್ತಾ ಟೀವಿ ನೋಡುವುದು, ಕಾರು-ಬೈಕ್ ಬಳಸುವುದು, ಮುಂಜಾನೆ ತಡವಾಗಿ ಏಳುವುದು, ಕೊಂಚ ದೂರ ಹೋಗಲೂ ಸೋಮಾರಿತನ ತೋರುವುದು ಮೊದಲಾದವುಗಳನ್ನು ಗಮನಿಸಬಹುದು.

ಇದಕ್ಕೆ ಹೆಚ್ಚಿನವರಲ್ಲಿ ಉತ್ತಮಗೊಂಡ ಅವರ ಜೀವನಶೈಲಿ ಅಥವಾ ಆರ್ಥಿಕ ಸುಧಾರಣೆಯ ಮೂಲಕ ಸೋಮಾರಿಗಳಾಗಿರುವುದು ಕಾರಣವಾದರೆ ಉಳಿದವರಲ್ಲಿ ಅನುವಂಶೀಯವಾದ ಕಾರಣಗಳಿವೆ. ಉತ್ಸಾಹ ಕುಂಠಿತವಾಗಲು ಪ್ರಮುಖವಾದ ಕಾರಣವೆಂದರೆ ಕೆಲಸದಲ್ಲಿ ಒತ್ತಡ. ಪುರುಷರ ಆಕರ್ಷಕ ಮೈಕಟ್ಟಿಗೆ ಸತ್ವಯುತ ಆಹಾರ

ಬೆಳಿಗೆ ಮನೆಯಿಂದ ಹೊರಟು ಆಫೀಸ್ ಸೇರುವವರೆಗೆ ರಸ್ತೆಯಲ್ಲಿನ ಟ್ರಾಫಿಕ್ ಜಾಂ, ವ್ಯಾಯಾಮಕ್ಕೆ ಸಮಯ ಮತ್ತು ಇಚ್ಛಾಶಕ್ತಿಯ ಕೊರತೆ, ಮೆದುಳಿಗೆ ಅತೀವವಾದ ಕೆಲಸ, ಅನಾರೋಗ್ಯಕರ ಸಿದ್ಧ ಆಹಾರ, ಯಾಂತ್ರಿಕ ಏಕತಾನತೆ ಮೊದಲಾದ ಹತ್ತು ಹಲವು ಕಾರಣಗಳೂ ಪುರುಷರಲ್ಲಿ ಟೆಸ್ಟೋಸ್ಟೆರೋನ್ ಎಂಬ ರಸದೂತವನ್ನು ಕಡಿಮೆಗೊಳಿಸಿ ಸುಸ್ತು ಹೆಚ್ಚಿಸಬಹುದು. ಇದಕ್ಕೆ ಕಾರಣಗಳೇನು ಎಂಬ ಕುರಿತು ಅಮೂಲ್ಯ ಮಾಹಿತಿಯನ್ನು ಕೆಳಗಿಸ ಸ್ಲೈಡ್ ಷೋ ಮೂಲಕ ನೀಡಲಾಗಿದೆ.... ಪುರುಷ ಹಾರ್ಮೋನ್ ವೃದ್ಧಿಸಲು ಟಿಪ್ಸ್

ಶರೀರದ ಸಾಮರ್ಥ್ಯದ ಗರಿಷ್ಟ ಬಳಕೆಯಿಂದ ಸುಸ್ತು

ಶರೀರದ ಸಾಮರ್ಥ್ಯದ ಗರಿಷ್ಟ ಬಳಕೆಯಿಂದ ಸುಸ್ತು

ನಮ್ಮ ಶರೀರದ ಪ್ರತಿ ಅಂಗಕ್ಕೂ ತನ್ನದೇ ಆದ ಸಾಮರ್ಥ್ಯವಿದೆ. ಆ ಸಾಮರ್ಥ್ಯಕ್ಕೂ ಮೀರಿ ಕೆಲಸ ನೀಡಿದರೆ ಸ್ವಾಭಾವಿಕವಾಗಿಯೇ ಬಳಲಿಕೆ ಉಂಟಾಗುತ್ತದೆ. ಕೆಲಸದ ಒತ್ತಡದ ಮೂಲಕ ಮೆದುಳಿಗೆ ನೀಡುವ ಅತಿಹೆಚ್ಚಿನ ಹೊರೆ ಮೆದುಳಿನ ಸಾಮರ್ಥ್ಯದ ಗರಿಷ್ಟವನ್ನು ಮುಟ್ಟುವುದರಿಂದ, ಇದನ್ನು ತಣಿಸಲು ಹೃದಯಕ್ಕೆ ಹೆಚ್ಚಿನ ರಕ್ತದ ಅಗತ್ಯವಿದೆ. ಬೇರೆ ಉಪಾಯವಿಲ್ಲದೇ ಹೃದಯ ದೇಹದ ಬೇರೆಡೆ ಕಳಿಸಬೇಕಾಗಿದ್ದ ರಕ್ತವನ್ನು ಮೆದುಳಿಗೆ ಕಳುಹಿಸುವುದರಿಂದ ಬೇರೆಲ್ಲಾ ಅಂಗಗಳಿಗೆ ಅಗತ್ಯವಿದ್ದಷ್ಟು ಶಕ್ತಿ ಸಿಗದಿರುವುದು ಸುಸ್ತಾಗಲು ಒಂದು ಕಾರಣವಾಗಿದೆ. ಒಂದು ವೇಳೆ ಮೆದುಳಿಗೆ ವಿಶ್ರಾಂತಿ ನೀಡದೇ ಇದ್ದರೆ ಸುಸ್ತು ಹೆಚ್ಚಾಗಿ ತಲೆತಿರುಗಿ ಬೀಳುವ ಸಾಧ್ಯತೆಯೂ ಇದೆ.

ಟೆಸ್ಟೋಸ್ಟೆರೋನ್ ರಸದೂತ

ಟೆಸ್ಟೋಸ್ಟೆರೋನ್ ರಸದೂತ

ಪುರುಷರ ಲಕ್ಷಣಗಳಿಗೆ ಟೆಸ್ಟೋಸ್ಟೆರೋನ್ ರಸದೂತ ಪ್ರಮುಖವಾದ ಕಾರಣವಾಗಿದೆ. ಇದೊಂದು ನಿತ್ಯ ಉತ್ಪಾದನೆಯಾಗುವ ರಸದೂತವಾಗಿದ್ದು ಇದರ ಏರಿಳಿತ ಅಥವಾ ಗುಣಮಟ್ಟದಲ್ಲಿ ಹೆಚ್ಚು ಕಡಿಮೆಯಾಗುವುದು ಹಲವು ಲಕ್ಷಣಗಳಿಗೆ ಮತ್ತು ತೊಂದರೆಗಳಿಗೆ ಕಾರಣವಾಗಿದೆ. ಬಕ್ಕತಲೆ, ನಿದ್ರಾಹೀನತೆ, ಕೊಬ್ಬು ಹೆಚ್ಚುವುದು, ಸ್ಥೂಲಕಾಯ ಮೊದಲಾದ ತೊಂದರೆಗಳಂತೆಯೇ ಸುಲಭವಾಗಿ ಸುಸ್ತಾಗುವುದೂ ಒಂದು ಕಾರಣವಾಗಿದೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ರಸದೂತ ಉತ್ಪತ್ತಿಯಾಗದೇ ಇರುವುದು ಸುಸ್ತಾಗಲು ಒಂದು ಪ್ರಮುಖ ಕಾರಣವಾಗಿದೆ.

ಥೈರಾಯ್ಡ್ ಗ್ರಂಥಿ

ಥೈರಾಯ್ಡ್ ಗ್ರಂಥಿ

ಒಂದು ವೇಳೆ ಥೈರಾಯ್ಡ್ ಗ್ರಂಥಿಯ ಸ್ರಾವ ಹೆಚ್ಚುಕಡಿಮೆಯಾದರೆ ಪುರುಷರಲ್ಲಿ ಮೈಕೈನೋವು, ಮಲಬದ್ಧತೆ, ಒಣಚರ್ಮ, ಕೂದಲು ತೆಳ್ಳಗಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡರೂ ವೈದ್ಯರಲ್ಲಿ ತಪಾಸಣೆಗೊಳಗಾಗುವುದು ಅಗತ್ಯವಾಗಿದೆ.

ನಿದ್ರಾಹೀನತೆ

ನಿದ್ರಾಹೀನತೆ

ನಮಗೆ ಸತತವಾದ ಆರು ಗಂಟೆಗಳ ನಿದ್ರೆ ಬೇಕು. ಒಂದು ವೇಳೆ ನಿದ್ರೆ ಸಮರ್ಪಕವಾಗಿಲ್ಲದಿದ್ದರೆ ದೇಹದ ಹಲವು ಕಾರ್ಯಗಳು ಸರಿಯಾಗಿ ನಡೆಯದೇ ಹಲವು ತೊಂದರೆಗಳು ಎದುರಾಗುತ್ತವೆ. ಇದರಲ್ಲಿ ಸುಸ್ತು ಸಹಾ ಒಂದು. ಇದೇ ಕಾರಣಕ್ಕೆ ದೇಹಕ್ಕೆ ಆಹಾರದಷ್ಟೇ ನಿದ್ರೆಯೂ ಅಗತ್ಯವಾಗಿದೆ.

ಮಾನಸಿಕ ಖಿನ್ನತೆ

ಮಾನಸಿಕ ಖಿನ್ನತೆ

ಖಿನ್ನತೆಗೆ ಕಾರಣಗಳು ಏನಿದ್ದರೂ ಪರಿಣಾಮ ಮಾತ್ರ ಅತೀವ ಸುಸ್ತು, ಆಸಕ್ತಿಯಿಲ್ಲದಿರುವುದು, ಕಳೆಗುಂದಿರುವುದು, ಯಾವುದೇ ಕೆಲಸಕ್ಕೆ ಉತ್ಸಾಹ ತೋರದಿರುವುದು, ಋಣಾತ್ಮಕ ಚಿಂತನೆ, ಊಟ ಬಿಡುವುದು ಮೊದಲಾದವು ಕಂಡುಬರುತ್ತವೆ. ಖಿನ್ನತೆಗೆ ಒಳಗಾಗಿದ್ದವರು ಸಾಧ್ಯವಾದಷ್ಟು ಇತರರೊಂದಿಗೆ ಬೆರೆತು ಯಾವುದಾದರೊಂದು ಕಾರ್ಯದಲ್ಲಿ ಮಗ್ನರಾಗುವುದು ಮುಖ್ಯ. ಖಿನ್ನತೆ ಹೆಚ್ಚಿದ್ದರೆ ವೈದ್ಯಕೀಯ ಸಲಹೆ ಅನಿವಾರ್ಯವಾಗಿದೆ.

ಕಬ್ಬಿಣಾಂಶದ ಕೊರತೆ

ಕಬ್ಬಿಣಾಂಶದ ಕೊರತೆ

ಆಹಾರದ ಮೂಲಕ ಲಭ್ಯವಾಗುವ ಕಬ್ಬಿಣದ ಅಂಶ ಕಡಿಮೆಯಾದರೆ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆ ಸುಸ್ತಿಗೆ ಮೂಲವಾಗಿದೆ. ಇದಕ್ಕಾಗಿ ಹಸಿರು ಸೊಪ್ಪುಗಳನ್ನು ಸೇವಿಸುವುದು ಅಗತ್ಯ.

ಇತರ ದೈಹಿಕ ಕಾರಣಗಳು

ಇತರ ದೈಹಿಕ ಕಾರಣಗಳು

ದೇಹದ ಯಾವುದೋ ಒಂದು ಅಂಗವೂ ತಮ್ಮ ಸಾಮರ್ಥಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ಉಳಿದ ಅಂಗಗಳೂ ತಮ್ಮ ಕಾರ್ಯವನ್ನು ನಿಧಾನಗೊಳಿಸಬೇಕಾಗುತ್ತದೆ. ಉದಾಹರಣೆಗೆ ಮೂತ್ರಪಿಂಡಗಳ ವೈಫಲ್ಯ, ಯಕೃತ್ ವೈಫಲ್ಯ, ಹೃದಯರೋಗ, ಮಧುಮೇಹ ಮೊದಲಾದ ತೊಂದರೆಗೆಳಿದ್ದರೆ ಪುರುಷರು ದೈಹಿಕ ಚಟುವಟಿಕೆಗಳಿಗೆ ಉತ್ಸಾಹ ತೋರುವುದು ಕಡಿಮೆ.

ಅಸಮರ್ಪಕ ಆಹಾರ

ಅಸಮರ್ಪಕ ಆಹಾರ

ಉತ್ತಮ ಆರೋಗ್ಯಕ್ಕೆ ಉತ್ತಮ, ಸಮತೋಲನದ ಆಹಾರ ಅಗತ್ಯವಾಗಿದೆ. ಕೆಲವರು ತಮ್ಮ ಆಹಾರಕ್ಕೆ ಅಥವಾ ಸೇವಿಸುವ ಸಮಯಕ್ಕೆ ಯಾವುದೇ ಆದ್ಯತೆ ನೀಡದೇ ಏನು ಸಿಕ್ಕಿತೋ ಅದು, ಯಾವಾಗ ಸಿಕ್ಕಿತೋ ಆವಾಗ ಎಂಬ ಮನಃಸ್ಥಿತಿಯಲ್ಲಿರುತ್ತಾರೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡದೇ ಬೇಡದ ಕೊಬ್ಬು ಮತ್ತು ಕೊಲೆಸ್ಟ್ರಾಲ್‌ಗಳನ್ನು ಭಾರೀ ಪ್ರಮಾಣದಲ್ಲಿ ದೇಹದಲ್ಲಿ ಸಂಗ್ರಹವಾಗುವಂತೆ ಮಾಡುತ್ತದೆ. ಇದು ಸ್ಥೂಲಕಾಯವನ್ನು ನೀಡಿದರೂ ಚೈನತ್ಯ ಅಥವಾ ದೇಹದಾಢ್ಯತೆಯನ್ನು ನೀಡುವುದಿಲ್ಲ. ಸೂಕ್ತ ಆಹಾರ ಮತ್ತು ವ್ಯಾಯಾಮ ಇಲ್ಲದಿರುವುದು ಸಹಾ ಸುಸ್ತುಗೆ ಮೂಲ ಕಾರಣಗಳಾಗಿವೆ.

English summary

What Causes Low Energy Levels In Men?

What causes low energy in males? Well, during teens, energy levels seem to soar but what happens after men cross 30 years of age? Well, a recent survey claims that nearly 7 out of 10 men complain lack of enough energy after crossing 30. Well, low energy levels in men can be linked to many lifestyle factors and some hormonal issues too. Today, lifestyles have changed and they demand lots of energy.
X
Desktop Bottom Promotion