For Quick Alerts
ALLOW NOTIFICATIONS  
For Daily Alerts

ದೇವರೇ, ಈ ದೇಹದ ಕೊಬ್ಬನ್ನು ಹೇಗಪ್ಪಾ ಕರಗಿಸುವುದು?

By Super
|

ಸ್ಥೂಲಕಾಯ ಯಾವಾಗ ಆವರಿಸಿಕೊಂಡಿತೆಂದೇ ಹೆಚ್ಚಿನವರಿಗೆ ಅರಿವಿರುವುದಿಲ್ಲ. ಬಂದ ಬಳಿಕ ಇದನ್ನು ಕರಗಿಸಲು ಮಾಡುವ ಕಸರತ್ತುಗಳು ನೀರಿನಲ್ಲಿ ಹೋಮ ಮಾಡಿದಂತೆಯೇ ಆಗುತ್ತದೆ. ಅದರಲ್ಲೂ ಕೊಬ್ಬು ಸೊಂಟದ ಸುತ್ತಮುತ್ತ ಹೆಚ್ಚು ಹೆಚ್ಚಾಗಿ ತುಂಬಿಕೊಳ್ಳುವುದೇ ಎಲ್ಲರ ಚಿಂತೆಗೆ ಕಾರಣ. ಆರೋಗ್ಯವನ್ನು ಪರೀಕ್ಷಿಸಿದ ವೈದ್ಯರು ತೂಕ ಕಡಿಮೆ ಮಾಡಿಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ಇದನ್ನು ಕಳೆದುಕೊಳ್ಳುವುದು ಹೇಗೆ ಎಂಬುದೇ ದೊಡ್ಡ ಚಿಂತೆ. ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

ಸಾಮಾನ್ಯವಾಗಿ ತೂಕ ಹೆಚ್ಚುವುದು ಪುರುಷ ಮತ್ತು ಮಹಿಳೆಯರಲ್ಲಿ ಸಮಾನವಾಗಿ ಕಂಡುಬಂದರೂ ಮಹಿಳೆಯರನ್ನು ಹೆಚ್ಚು ಕಾಡುತ್ತದೆ. ಅದರಲ್ಲೂ ನಡುಭಾಗದಲ್ಲಿ ಅತಿ ಹೆಚ್ಚು ತುಂಬಿಕೊಳ್ಳುವ ಕೊಬ್ಬು ಸಹಜ ಸೌಂದರ್ಯವನ್ನೇ ಕುಂದಿಸುತ್ತದೆ. ಇದಕ್ಕೆ ದೇಹದ ಹಾರ್ಮೋನುಗಳು ನೇರವಾಗಿ ಕಾರಣವಾದರೂ ಪರೋಕ್ಷವಾಗಿ ಅತಿಹೆಚ್ಚಾಗಿ ಸೇವಿಸುವ ಸಿದ್ಧ ಮತ್ತು ಅನಾರೋಗ್ಯಕರ ಆಹಾರಗಳು, ರುಚಿಗಾಗಿ ಅಜಿನೋಮೋಟೋ ಸೇರಿಸಿರುವ ಆಹಾರಗಳನ್ನು ಸೇವಿಸುವುದು, ಅತಿ ಹೆಚ್ಚು ಸಕ್ಕರೆ ಸೇವಿಸುವುದು ಮೊದಲಾದವೆಲ್ಲಾ ಜೊತೆಯಾಗಿ ಕಾರಣವಾಗುತ್ತದೆ. ಏನೇ ಕಸರತ್ತು ಮಾಡಿದರೂ, ಬೊಜ್ಜು ಕರಗದಿರಲು ಕಾರಣಗಳೇನು?

ಒಂದು ವೇಳೆ ನಿಜವಾಗಿಯೂ ನಿಮಗೆ ಈ ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಲೇಬೇಕೆಂಬ ಇಚ್ಛೆಯಿದ್ದರೆ ಮೊತ್ತ ಮೊದಲಾಗಿ ಬೇಕಾಗಿರುವುದು ದೃಢನಿಶ್ಚಯ. ಇನ್ನುಳಿದಂತೆ ಏನು ಮಾಡಬೇಕೆಂಬುದನ್ನು ಕೆಳಗಿನ ಸ್ಲೈಡ್ ಶೋ ವಿವರಿಸುತ್ತದೆ.

ಎದೆಯ ಭಾಗದ ಕೊಬ್ಬು ಕರಗಿಸಲು

ಎದೆಯ ಭಾಗದ ಕೊಬ್ಬು ಕರಗಿಸಲು

ಸ್ಥೂಲಕಾಯದಲ್ಲಿ ಸೊಂಟದ ಬಳಿಕ ದೇಹದಲ್ಲಿ ತುಂಬಿಕೊಳ್ಳುವ ಭಾಗವೆಂದರೆ ಎದೆ ಮತ್ತು ಪಕ್ಕೆಲುಬುಗಳ ಭಾಗ. ಇದಕ್ಕೆ ಮುಖ್ಯ ಕಾರಣ ಅನಾರೋಗ್ಯಕರ ಆಹಾರ ಮತ್ತು ಅತಿ ಹೆಚ್ಚಿನ ಸಕ್ಕರೆಯ ಸೇವನೆ. ಈ ಕೊಬ್ಬನ್ನು ಕರಗಿಸಲು ನಿಮ್ಮ ಆಹಾರದಲ್ಲಿ ಸಕ್ಕರೆ ಅತಿ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಸಿದ್ಧ ಆಹಾರಗಳ ಮೋಹವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎದೆಯ ಭಾಗದ ಕೊಬ್ಬು ಕರಗಿಸಲು

ಎದೆಯ ಭಾಗದ ಕೊಬ್ಬು ಕರಗಿಸಲು

ದೃಢನಿಶ್ಚಯ ಮಾಡಿ ಒಂದೂ ದಿನ ಬಿಡದಂತೆ (ರಜಾದಿನಗಳನ್ನೂ ಸೇರಿಸಿ) ಒಂದು ತಿಂಗಳವರೆಗೆ ಬೆಳಿಗ್ಗೆ ಮತ್ತು ಸಂಜೆ ಅರ್ಧ ಗಂಟೆ ಕಾಲ ವೇಗವಾಗಿ ಕೈಬೀಸಿ ನಡೆಯಬೇಕು. ಶ್ವಾಸವನ್ನು ಪೂರ್ಣವಾಗಿ ಒಳಗೆಳೆದು ಹೊರಬಿಡಬೇಕು.

ಸೊಂಟದ ಕೊಬ್ಬು ಕರಗಿಸಲು

ಸೊಂಟದ ಕೊಬ್ಬು ಕರಗಿಸಲು

ಮಹಿಳೆಯರ ಚಿಂತೆಗೆ ಕಾರಣವಾಗಿರುವ ಸೊಂಟದ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ದೊಡ್ಡ ಕಮ್ರಾವಾಗಿರುವ ಸೊಂಟವನ್ನು ಮತ್ತೊಮ್ಮೆ ಬಳುಕುವ ಕಮರ್ ಆಗಿಸಲು ಯೋಗಾಭ್ಯಾಸವೇ ಅತ್ಯುತ್ತಮ ಪರಿಹಾರ. ಇದಕ್ಕೆ ಪ್ರಮುಖ ಕಾರಣ ಮನಸ್ಸಿನ ಒತ್ತಡ, ಖಿನ್ನತೆ ಮತ್ತು ಉದ್ವಿಗ್ನತೆ. ಇವು ಮಹಿಳೆಯರಲ್ಲಿ ಕೆಲವು ಹಾರ್ಮೋನುಗಳನ್ನು ಹೆಚ್ಚು ಸ್ರವಿಸುವಂತೆ ಮಾಡಿ ಸೊಂಟದ ಸುತ್ತಳತೆ ಹೆಚ್ಚಿಸುತ್ತದೆ.

ಸೊಂಟದ ಕೊಬ್ಬು ಕರಗಿಸಲು

ಸೊಂಟದ ಕೊಬ್ಬು ಕರಗಿಸಲು

ಸಮರ್ಪಕ ಯೋಗಾಸನಗಳಿಂದ ಮತ್ತು ಕಟ್ಟುನಿಟ್ಟಿನ ಆಹಾರಕ್ರಮದಿಂದ ಸೊಂಟದ ಸುತ್ತಳತೆ ಕಡಿಮೆಯಾಗುತ್ತದೆ. ಆದರೆ ಇದಕ್ಕೆ ಕೆಲವಾರು ತಿಂಗಳುಗಳೇ ಬೇಕು. ಆದ್ದರಿಂದ ತಾಳ್ಮೆ ವಹಿಸುವುದು ಅಗತ್ಯ.

ನಿತಂಬಗಳ ಭಾಗದಲ್ಲಿ

ನಿತಂಬಗಳ ಭಾಗದಲ್ಲಿ

ರುಚಿಗಾಗಿ ಅಜಿನೋಮೋಟೋ ಅಥವಾ ಮೋನೋಸೋಡಿಯಂ ಗ್ಲುಟಮೇಟ್ ಸೇರಿಸಿದ ಆಹಾರದ ವ್ಯಸನಿಗಳಲ್ಲಿ ಈ ತೊಂದರೆ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಅಜಿನೋಮೋಟೋ ಸೇವಿಸಿದ ಮಹಿಳೆಯರ ನಿತಂಬಗಳು ಅತಿಹೆಚ್ಚಾಗಿ ತುಂಬಿಕೊಂಡಿರುತ್ತವೆ. ಇದಕ್ಕೆ ಅಜಿನೋಮೋಟೋ ಕೆಲವು ಹಾರ್ಮೋನುಗಳ ಸ್ರವಿಕೆಯಲ್ಲಿ ಏರುಪೇರು ಮಾಡುವುದೇ ಕಾರಣ.

ನಿತಂಬಗಳ ಭಾಗದಲ್ಲಿ

ನಿತಂಬಗಳ ಭಾಗದಲ್ಲಿ

ಇದಕ್ಕೆ ಪರಿಹಾರವೆಂದರೆ ಅಜಿನೋಮೋಟೋ ಸಹಿತ ಇತರ ಎಲ್ಲಾ ಸಿದ್ಧ ಆಹಾರ ಮತ್ತು ಕೊಬ್ಬಿನ ಆಹಾರಗಳನ್ನು ತ್ಯಜಿಸುವುದು ಮತ್ತು ಕಟ್ಟುನಿಟ್ಟಾಗಿ ನಿತ್ಯವೂ ವ್ಯಾಯಾಮ ಮಾಡುವುದು. ವ್ಯಾಯಮಶಾಲೆಯಲ್ಲಿ ತೂಕ ಎತ್ತುವ, ಬಸ್ಕಿ ಹೊಡೆಯುವ ವ್ಯಾಯಮಗಳನ್ನು ನಿತ್ಯವೂ ಅನುಸರಿಸಬೇಕು. ಈ ತೊಂದರೆಯುಳ್ಳವರು ಹೆಚ್ಚು ಹೊತ್ತು ಕುಳಿತುಕೊಳ್ಳದೇ ನಡೆದಾಡುತ್ತಲೇ ಇರಬೇಕು.

ತೋಳುಗಳ ಕೊಬ್ಬು ಕರಗಿಸಲು

ತೋಳುಗಳ ಕೊಬ್ಬು ಕರಗಿಸಲು

ತೋಳುಗಳ ಸುತ್ತಳಗೆ ಪ್ರಮುಖ ಕಾರಣವೆಂದರೆ ಸಿದ್ಧ ಆಹಾರಗಳು ಮತ್ತು ಚಟುವಟಿಕೆಯಿಲ್ಲದೇ ಇರುವ ದೇಹ. ಈ ಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ತೂಕವನ್ನು ಎತ್ತುವುದೇ ಉತ್ತಮ ಮಾರ್ಗ. ಡಂಬೆಲ್ ವ್ಯಾಯಾಮಗಳು ಇದಕ್ಕೆ ಅತ್ಯುತ್ತಮ.

ತೋಳುಗಳ ಕೊಬ್ಬು ಕರಗಿಸಲು

ತೋಳುಗಳ ಕೊಬ್ಬು ಕರಗಿಸಲು

ವ್ಯಾಯಾಮಶಾಲೆಗೆ ಹೋಗಲು ಪುರುಸೊತ್ತಿಲ್ಲದಿದ್ದರೆ ಮನೆಯಲ್ಲಿ ನೀರಿನ ಎರಡು ಬಕೆಟ್ಟುಗಳನ್ನು ಕೈಗಳು ಅರ್ಧ ಮಡಚುವಷ್ಟು ಮೇಲಕ್ಕೆತ್ತಿ ಇತ್ತಿಂದತ್ತ, ಅತ್ತಿಂದಿತ್ತ ಎತ್ತಿ ಇಡುವುದರಿಂದಲೂ ಉತ್ತಮ ಪರಿಣಾಮ ಪಡೆಯಬಹುದು.

ಹೊಟ್ಟೆಯ ಕೊಬ್ಬು ಕರಗಿಸಲು

ಹೊಟ್ಟೆಯ ಕೊಬ್ಬು ಕರಗಿಸಲು

ಹೊಟ್ಟೆ ಮುಂದೆ ಬಂದಿದ್ದರೆ ಹೆಚ್ಚಿನವರು ಇದನ್ನು ಹೊಟ್ಟೆ ದೊಡ್ಡದಾಗಿದೆ ಎಂದೇ ತಿಳಿಯುತ್ತಾರೆ. ವಾಸ್ತವವಾಗಿ ಹೊಟ್ಟೆಯ ಸುತ್ತ ತುಂಬಿಕೊಂಡಿರುವ ಕೊಬ್ಬು ಬೆನ್ನುಮೂಳೆಯ ಕಾರಣ ಹಿಂದೆ ಹೋಗಲಾರದೆ ಜಠರವನ್ನೇ ಮುಂದೆ ತಳ್ಳುತ್ತದೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ Atherogenic Metabolic Obesity ಎಂದು ಕರೆಯುತ್ತಾರೆ. ಇದಕ್ಕೆ ಪ್ರಮುಖ ಕಾರಣ ಮದ್ಯಪಾನ ಅಥವಾ ಮಾಂಸ ಅಥವಾ ಪಿಷ್ಟ ಹೆಚ್ಚಿರುವ ಆಹಾರವನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು. ಬಿಯರ್ ನಿಯಮಿತವಾಗಿ ಕುಡಿಯುವವರಲ್ಲಿ ಇದನ್ನು ಪ್ರಮುಖವಾಗಿ ಗಮನಿಸಬಹುದು.

ಹೊಟ್ಟೆಯ ಕೊಬ್ಬು ಕರಗಿಸಲು

ಹೊಟ್ಟೆಯ ಕೊಬ್ಬು ಕರಗಿಸಲು

ಇದಕ್ಕೆ ಉತ್ತಮ ಪರಿಹಾರವೆಂದರೆ ಮದ್ಯಪಾನ, ಬಿಯರ್, ಹೆಚ್ಚಿನ ಪ್ರಮಾಣದ ಮಾಂಸಾಹಾರ, ಹೆಚ್ಚಿನ ಪ್ರಮಾಣದ ಸಕ್ಕರೆ, ಪಿಷ್ಟ ಮೊದಲಾದವನ್ನು ತ್ಯಜಿಸಬೇಕು. ವ್ಯಾಯಮಶಾಲೆಯಲ್ಲಿರುವ ಇಳಿಜಾರಿನ ವ್ಯಾಯಾಮ (inclined plane) ಹೊಟ್ಟೆಯ ಕೊಬ್ಬು ಕರಗಿಸಲು ಅತ್ಯುತ್ತಮ. ಇಳಿಜಾರಿನಲ್ಲಿ ತಲೆಯನ್ನು ಕೆಳಭಾಗದಲ್ಲಿರಿಸಿ ನಿಧಾನವಾಗಿ ಮೊಣಗಂಟಿಗೆ ಹಣೆಯನ್ನು ತಾಕಿಸಲು ಯತ್ನಿಸಿ ಹಿಂದಿರುಗುವಾಗಲೂ ನಿಧಾನವಾಗಿಯೇ ಹಿಂದಿರುಗಬೇಕು.

ತೊಡೆಯ ಕೊಬ್ಬು

ತೊಡೆಯ ಕೊಬ್ಬು

ತೊಡೆಯ ಕೊಬ್ಬು ಪುರುಷರಿಗಿಂತಲೂ ಮಹಿಳೆಯರಿಗೇ ಹೆಚ್ಚು ಕಾಡುತ್ತದೆ. ಇದೊಂದು ಆನುವಂಶೀಯವಾಗಿ ಬರುವ ತೊಂದರೆಯಾಗಿದ್ದು ಸರಳವಾದ ವ್ಯಾಯಾಮಗಳಿಂದ ಕರಗಿಸಲು ಸಾಧ್ಯ.

ತೊಡೆಯ ಕೊಬ್ಬು

ತೊಡೆಯ ಕೊಬ್ಬು

ಮೆಟ್ಟಿಲು ಹತ್ತುವುದು, ವೇಗದ ನಡಿಗೆ, ನಿಧಾನಗತಿಯ ಓಟ ಮೊದಲಾದವುಗಳಿಂದ ತೊಡಯ ಕೊಬ್ಬು ಕರಗುತ್ತದೆ.

ಮನೆಮದ್ದುಗಳು

ಮನೆಮದ್ದುಗಳು

ಕೊಬ್ಬು ಕರಗಿಸಲು ಕೆಲವು ಮನೆಮದ್ದುಗಳೂ ಲಭ್ಯವಿವೆ. ಬೆಳಿಗ್ಗೆದ್ದ ಕೂಡಲೇ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕ ಲಿಂಬೆ (ದೊಡ್ಡದಾದರೆ ಅರ್ಧ) ರಸವನ್ನು ಹಿಂಡಿ ಒಂದು ಚಮಚ ಜೇನು ಸೇರಿಸಿ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನೆಮದ್ದುಗಳು

ಮನೆಮದ್ದುಗಳು

ಬಳಿಕ ಸುಮಾರು ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬಳಿಕ ಉಪಾಹಾರದ ರೂಪದಲ್ಲಿ ಚೆಕ್ಕೆಯ ಪುಡಿಯನ್ನು ಚಿಮುಕಿಸಿದ ಬ್ರೆಡ್ ಸೇವಿಸಬೇಕು. ಮತ್ತು ಇಡಿಯ ದಿನ ಸಾಕಷ್ಟು ನೀರು ಕುಡಿಯಬೇಕು. ಈ ವಿಧಾನವನ್ನು ನಿರಂತರವಾಗಿ ಅನುಸರಿಸಿದರೆ ಮೂರು ತಿಂಗಳ ಬಳಿಕ ಪರಿಣಾಮ ಕಂಡುಬರಲು ಪ್ರಾರಂಭವಾಗುತ್ತದೆ.

English summary

Ways To Get Rid Of These Fats In Your Body

Does your body feel heavy and lethargic? Do you find yourself putting on weight only in certain areas of your body? Well, if yes, here are some of the things you need to do immediately to lose weight and start a healthier lifestyle. It is believed that when you know the reason behind the weight gain in that particular part of the body, only then you will realise and understand accordingly how to lose weight.
X
Desktop Bottom Promotion