For Quick Alerts
ALLOW NOTIFICATIONS  
For Daily Alerts

ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ ಸ್ಮಾರ್ಟ್ ಯೋಗ!

By Art of living
|

ನಿಮ್ಮ ಮೊಬೈಲ್ ಫೋನ್‌ನಿಂದಾಗಿ ನಿಮ್ಮ ಕತ್ತಿನಲ್ಲಿ ನೋವಿದೆಯೆ? ಅಥವಾ ತಲೆಯಲ್ಲಿ? ಅಥವಾ ಭುಜಗಳಲ್ಲಿ? ಮುಂದುವರಿದ ತಂತ್ರಜ್ಞಾನದ ಶಕೆಯಲ್ಲಿ ನಾವಿದ್ದೇವೆ ಮತ್ತು ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಯಂತ್ರವೆಂದರೆ ಮೊಬೈಲ್ ಫೋನ್‌ಗಳು ಶಿಕ್ಷಣದಿಂದ ಆರೋಗ್ಯದವರೆಗೆ, ವೈಯಕ್ತಿಕ ಸಂಬಂಧಗಳಿಂದ ವ್ಯಾಪಾರದವರೆಗೆ, ಮೊಬೈಲ್ ಫೋನ್‌ಗಳು ನಮ್ಮ ಜಗತ್ತಿನಲ್ಲಿ ಮೂಲಭೂತವಾದ ಪರಿವರ್ತನೆಯನ್ನು ತಂದಿವೆ.

ಆದರೆ ಇವುಗಳ ವ್ಯಾಪಕವಾದ ಬಳಕೆಯಿಂದಾಗಿ ಅಥವಾ ದುರ್ಬಳಕೆಯಿಂದಾಗಿ ನಮ್ಮ ಜೀವನಶೈಲಿಯಲ್ಲಿ ಕೆಲವು ಸಮಸ್ಯೆಗಳನ್ನೂ ತಂದಿವೆ. ಉದಾಹರಣೆಗೆ, ನೀವು ಈ ಲೇಖನವನ್ನು ನಿಮ್ಮ ಮೊಬೈಲ್‍ನಿಂದ ಓದುತ್ತಿದ್ದರೆ ನಿಮ್ಮ ತೋಳುಗಳು ನಿಮ್ಮ ಬದಿಯಲ್ಲಿರುತ್ತದೆ, ನಿಮ್ಮ ಬೆನ್ನು ಬಗ್ಗಿರುತ್ತದೆ, ಕತ್ತು ಮುಂದಕ್ಕೆ ಬಗ್ಗಿರುತ್ತದೆ. ಅಲ್ಲವೆ? ಈ ಭಂಗಿಯಿಂದ ನಿಮಗೆ ನೋವಾಗುತ್ತಿರಬಹುದು ಮತ್ತು ಇದರ ಬಗ್ಗೆ ನಿಮಗೆ ಅರಿವಿರಬಹುದು ಅಥವಾ ಅರಿವಿಲ್ಲದೆಯೂ ಇರಬಹುದು. ಚಿಕಿತ್ಸಕರು "ಟೆಕ್ಸ್ಟ್ ನೆಕ್" ಎಂದು ಈ ಸ್ಥಿತಿಯನ್ನು ಕರೆಯುತ್ತಾರೆ ಮತ್ತು ನಿಮ್ಮಲ್ಲಿ ಈ ಸ್ಥಿತಿಯು ಆರಂಭವಾಗುತ್ತಿರಬಹುದು. ಒತ್ತಡ ನಿವಾರಣೆಗಾಗಿ ಇಲ್ಲಿದೆ 10 ಯೋಗಾಸನಗಳು!

Smart Yoga for smart phone Users

"ಟೆಕ್ಸ್ಟ್ ನೆಕ್" ಎಂಬುದು ಜೀವನಶೈಲಿಯಿಂದ ಉಂಟಾಗುತ್ತಿರುವ ಸ್ಥಿತಿ. ಇದರಿಂದಾಗಿ ಕತ್ತಿನಲ್ಲಿ ಮತ್ತು ಬೆನ್ನಿನಲ್ಲಿ ನೋವುಂಟಾಗುತ್ತದೆ ಮತ್ತು ಅನಾರೋಗ್ಯಕರವಾಗಿ ಬಗ್ಗಿರುವ ಭಂಗಿಯಲ್ಲಿ ಬಹಳ ಹೊತ್ತು ಇರುವುದರಿಂದ ಈ ಸ್ಥಿತಿ ಉಂಟಾಗುತ್ತದೆ.

ವಿಪರೀತ ಮೊಬೈಲ್ ಫೋನ್‌ಗಳ ಬಳಕೆಯಿಂದ, ಟ್ಯಾಬ್ಲೆಟ್‍ಗಳ, ಬಳಕೆಯಿಂದ ಈ ಸ್ಥಿತಿ ಉಂಟಾಗುತ್ತದೆ. ನಿಮ್ಮ ತಲೆಯನ್ನು ನೀವು ಒಂದು ಇಂಚಿನಷ್ಟು ಮುಂದೆ ಬಗ್ಗಿಸಿದರೂ ನಿಮ್ಮ ಬೆನ್ನುಮೂಳೆಯ ಮೇಲಿನ ಒತ್ತಡ ದ್ವಿಗುಣವಾಗುತ್ತದೆ. ಆದ್ದರಿಂದ, ನಿಮ್ಮ ತೊಡೆಯ ಮೇಲಿಟ್ಟುಕೊಂಡು ನಿಮ್ಮ ಸ್ಮಾರ್ಟ್‍ ಫೋನ್ ಅನ್ನು ನೋಡುತ್ತಿದ್ದರೆ, ನಿಮ್ಮ ಕತ್ತು ಹತ್ತು ಅಥವಾ 14 ಕೆಜಿ ತೂಕವನ್ನು ಎತ್ತಿಕೊಂಡಿರುವುದಕ್ಕೆ ಸರಿಸಮಾನವಾಗುತ್ತದೆ.

ಈ ಎಲ್ಲಾ ಹೆಚ್ಚಿನ ಒತ್ತಡದಿಂದ ನಿಮ್ಮ ಬೆನ್ನುಮೂಳೆಯ ಮೇಲೆ ಒತ್ತಡವು ಹೆಚ್ಚಿ, ಕ್ರಮವಾದ ಜೋಡಣೆಯಿಂದ ಹೊರಬಂದಂತಾಗುತ್ತದೆ. ಸ್ವಲ್ಪ ತಾಳಿ! ಈ ಯಾವ ಸಾಧನಗಳನ್ನೂ ಬಳಸಬಾರದೆಂದು ನಾವು ಈ ಲೇಖನದಲ್ಲಿ ಪ್ರತಿಪಾದಿಸುತ್ತಿಲ್ಲ. ಈ ಸಣ್ಣ ಸಾಧನಗಳಿಂದಾಗಿ ಎಲ್ಲರ ಜೀವನವೂ ಸುಗಮವಾಗಿದೆ. ಆದ್ದರಿಂದ, ಕೆಲವು ಸೂಚಿಗಳನ್ನು ಪಾಲಿಸಿ, ಅವುಗಳ ಅಡ್ಡಪರಿಣಾಮದಿಂದ ದೂರ ಉಳಿಯುವುದೇ ಲೇಸು.

ಕೆಲವು ಪರಿಣಾಮಕಾರಕವಾದ ಯೋಗದ ಸೂಚಿಗಳು:
ಬಲವಾದ, ನಮ್ಯವಾದ ಕತ್ತು ಮತ್ತು ಬೆನ್ನನ್ನು ಹೊಂದುವುದರಿಂದ ಅಸಹಜವಾದ ಒತ್ತಡಗಳನ್ನು ತಡೆದುಕೊಳ್ಳಬಹುದು. ಮೊಬೈಲ್ ಫೋನ್ ಗಳ ಬಳಕೆಯಿಂದ ಉಂಟಾಗುವ ಮೂಳೆಗಳ - ಸ್ನಾಯುಗಳ ಸಮಸ್ಯೆಗಳನ್ನು ಇದರಿಂದ ತಡೆಗಟ್ಟಬಹುದು. ಕೆಲವು ವ್ಯಾಯಾಮಗಳನ್ನು ಮಾಡಿದರೆ ಒತ್ತಡದಲ್ಲಿರುವ ಬೆನ್ನು ಮತ್ತು ಕತ್ತಿನ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರೊಡನೆ ಚಾಟಿಂಗ್ ಮಾಡುವ ಸಲುವಾಗಿ ಟೆಕ್ಟ್ಸ್‍ಗಳನ್ನು ಕಳುಹಿಸುತ್ತಿರುವಾಗ ನಿಮಗುಂಟಾಗುವ ಕಿವುಚುವಿಕೆ ಮತ್ತು ನೋವನ್ನು ಇವುಗಳಿಂದ ತಡೆಯಿರಿ

ಕಿವಿಗಳನ್ನು ಕೆಳಕ್ಕೆ ಎಳೆಯುವುದು ಮತ್ತು ತೀಡುವುದು:
ನಿಮ್ಮ ಕಿವಿಗಳನ್ನು ಮೇಲಿನಿಂದ ಕೆಳಗಿನವರೆಗೂ ಒತ್ತಿ. ಒಂದೆರಡು ಸಲ ಕಿವಿಗಳನ್ನು ಎಳೆದು, ಗಡಿಯಾರದ ದಿಕ್ಕಿನಲ್ಲಿ ಮತ್ತು ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ. ಇದರಿಂದ ಕಿವಿಗಳ ಸುತ್ತಲೂ ಇರುವ ಒತ್ತಡವು ಬಿಡುಗಡೆಯಾಗುತ್ತದೆ. ಮೆದುಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು 12 ಯೋಗಾಸನಗಳು

ತೋಳುಗಳನ್ನು ಮುಂದಕ್ಕೆ ಚಾಚುವುದು
ನಿಮ್ಮ ತೋಳುಗಳನ್ನು ನಿಮ್ಮ ತಲೆಯ ಮೇಲೆಕ್ಕೆತ್ತಿ ಮತ್ತು ಹಸ್ತಗಳು ಆಕಾಶದತ್ತ ನೋಡುತ್ತಿರಲಿ. ಹಸ್ತಗಳನ್ನು ಆಕಾಶದ ಕಡೆಗೆ ಒತ್ತಿ. ನಂತರ ನಿಮ್ಮ ತೋಳುಗಳನ್ನು ನಿಮ್ಮ ಇಬ್ಬದಿಯಲ್ಲಿ ಚಾಚಿ ಬೆರಳುಗಳನ್ನು ಹಿಂದಕ್ಕೆ ತನ್ನಿ. ವಿದಾಯ ಹೇಳುವ ರೀತಿಯಲ್ಲಿ ಎರಡು ಸಲ ನಿಮ್ಮ ಹಸ್ತಗಳನ್ನು ಮೇಲುಕೆಳಗೆ ತಿರುಗಿಸಿ, ಭುಜಗಳಲ್ಲಿ ಬಾಹುಗಳಲ್ಲಿ ಇರುವ ಒತ್ತಡಕ್ಕೆ ವಿದಾಯ ಹೇಳಿ ಬಿಡಿ.

ಭುಜಗಳ ಸುತ್ತು
ನಿಮ್ಮ ತೋಳುಗಳನ್ನು ಎರಡು ಕಡೆಗಳಿಗೂ ಚಾಚಿ. ಕಿರುಬೆರಳು ಹೆಬ್ಬೆಟ್ಟಿನ ಕೆಳಭಾಗವನ್ನು ಒತ್ತಲಿ. ತೋಳುಗಳನ್ನು, ಹಸ್ತವನ್ನು ಸ್ತಬ್ಧವಾಗಿಟ್ಟುಕೊಂಡು ಭುಜಗಳನ್ನು ಗಡಿಯಾರದ ದಿಕ್ಕಿನೆಡೆಗೆ ಮತ್ತು ಗಡಿಯಾರದ ದಿಕ್ಕಿನ ವಿರುದ್ಧದ ಕಡೆಗೆ 5 ಸಲ ತಿರುಗಿಸಿ.

ಹಸ್ತಗಳನ್ನು ಒತ್ತಿ
ನಿಮ್ಮ ಹಸ್ತಗಳ ಕೆಳಭಾಗವನ್ನು ನಿಮ್ಮಎದೆಯ ಮುಂದಕ್ಕೆ ತನ್ನಿ. ಅವುಗಳನ್ನು ಬಲವಾಗಿ ಒತ್ತಿ, ಭುಜಗಳನ್ನು ಸ್ತಬ್ಧವಾಗಿಡಿ. ಎರಡು ಸಲ ಬಲವಾಗಿ ಒತ್ತಿ ಸಡಿಲಗೊಳಿಸಿ ಹಸ್ತಗಳನ್ನು ಹಿಂದಕ್ಕೆ ತಿರುಗಿಸಿ ಮತ್ತೆ ಬಲವಾಗಿ ಒತ್ತಿ ಸಡಿಲಗೊಳಿಸಿ. ಎರಡು ಸಲ ಮಾಡಿ.

ಎಂಟು ಆಕಾರದ ಮೊಣಕೈ
ನಿಮ್ಮ ಕೈಗಳನ್ನು ಎದೆಯ ಮುಂದೆ ತಂದು ನಿಮ್ಮ ಬೆರಳುಗಳನ್ನು ಒಂದರೊಳಗೊಂದು ಜೋಡಿಸಿ. ನಿಮ್ಮ ಹಸ್ತಗಳನ್ನು ನಿಮ್ಮ ಎದೆಯ ಮುಂದಿಟ್ಟು ನಿಮ್ಮ ಮೊಣಕೈ ಮತ್ತು ಭುಜದಿಂದ ಮಲಗಿರುವ ಎಂಟು ಸಂಖ್ಯೆಯನ್ನು ಗಾಳಿಯಲ್ಲಿ ಬರೆಯಿರಿ. ಹೊಟ್ಟೆಯ ಬೊಜ್ಜು ಕರಗಿಸಲು ಪ್ರಯತ್ನಿಸಿ ಹನುಮಾನಾಸನ!

ಭುಜಗಳ ವಿಸ್ತರಣ
ನಿಮ್ಮ ಬಲಗೈಯನ್ನು ತಲೆಯ ಮೇಲಿರಿಸಿ. ಎಡಗೈಯಿಂದ ಬಲವಾಗಿ ಬಲಮಂಡಿಯನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಎಡಗೈಯನ್ನು ಅಲುಗಾಡಿಸದೆ ಬಲಗೈಯನ್ನು ತಲೆಯಿಂದ ಸೊಂಟದವರೆಗೆ ಮತ್ತು ಸೊಂಟದಿಂದ ತಲೆಯವರೆಗೆ ಕೆಲವು ಸಲ ತನ್ನಿ. ಈಗ ಎಡಗೈಯಿಂದ ಇದನ್ನು ಪುನರಾವರ್ತಿಸಿ.

ಆಗಾಗ ವಿರಾಮವನ್ನು ತೆಗೆದುಕೊಳ್ಳಿ
ಇಡೀ ದಿನ ಈ ಸಾಧನಗಳನ್ನು ಬಳಸುತ್ತಲೇ ಇರುತ್ತೀರಿ ಎಂದು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಬಲವಂತವಾಗಿ ಆದರೂ ಸರಿ, ಆಗಾಗ ವಿರಾಮವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಭಂಗಿಯನ್ನು ಬದಲಿಸುತ್ತಿರಿ. ಈ ಸರಳವಾದ ಯೋಗದ ವ್ಯಾಯಾಮಗಳನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಮತ್ತು ಓರ್ವ ಸ್ಮಾರ್ಟ್ ಫೋನ್ ಯೋಗಿಯಾಗಿ!
www.artofliving.org

English summary

Smart Yoga for smart phone Users

Is your mobile phone causing pain in the neck? Or the head? Or the shoulders? Here are a few yoga stretches and exercises to strengthen and relax the strained back and neck muscles. Practice these regularly to get rid of that annoying interrupting pain and spasm while texting or chatting up with loved ones!
X
Desktop Bottom Promotion