For Quick Alerts
ALLOW NOTIFICATIONS  
For Daily Alerts

ಸಿಟ್ರಸ್ ಹಣ್ಣುಗಳಲ್ಲಿ ಅಡಗಿದೆ ತೂಕ ಇಳಿಸುವ ತಾಕತ್ತು!

By Arshad
|

ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಾ ಹೋದಂತೆ ಸ್ಥೂಲಕಾಯ ಮತ್ತು ಸೋಮಾರಿತನ ಆವರಿಸುವುದು ನಿಸರ್ಗದ ಒಂದು ವ್ಯಂಗ್ಯವಾಗಿದೆ. ಸವಲತ್ತುಗಳು ಹೆಚ್ಚುತ್ತಾ ಹೋದಂತೆಯೇ ಚಟುವಟಿಕೆ ಕಡಿಮೆಯಾಗುತ್ತಾ ಕೊಂಚ ದಪ್ಪನಿದ್ದವರು ಇನ್ನೂ ಹೆಚ್ಚು ದಪ್ಪನಾಗುತ್ತಾ ಹೋಗುತ್ತಾರೆ. ಉತ್ತಮ ಆಹಾರ ಮತ್ತು ವ್ಯಾಯಾಮಕ್ಕೆ ಸಮಯವೇ ಇಲ್ಲದಿರುವುದು, ಅನಾರೋಗ್ಯಕರವಾದ ಅತಿಹೆಚ್ಚು ಪೋಷಕಾಂಶಗಳ ಸಿದ್ಧ ಆಹಾರಗಳು, ತಡರಾತ್ರಿ ಪಾರ್ಟಿ, ಅತಿಹೆಚ್ಚಿನ ಸಿಹಿ ಸೇವನೆ ಮೊದಲಾದ ಹತ್ತು ಹಲವು ಕಾರಣಗಳಿಂದ ಇಂದು ಹತ್ತರಲ್ಲಿ ಆರು ಜನರಾದರೂ ಸ್ಥೂಲಕಾಯಕ್ಕೆ ತುತ್ತಾಗಿದ್ದಾರೆ. ಇದನ್ನೇನೂ ಯಾರೂ ಬೇಕೆಂದೇ ಆಹ್ವಾನಿಸಿಲ್ಲ, ಆದರೆ ನಮ್ಮ ಸೋಮಾರಿತನಕ್ಕೆ ನಿಸರ್ಗ ನೀಡಿರುವ ಶಿಕ್ಷೆ!

ಸ್ಥೂಲಕಾಯದಿಂದ ಹೊರಬರುವುದು ಹೆಚ್ಚಿನವರೆಲ್ಲರ ಅಪೇಕ್ಷೆ. ಆದರೆ ಇದರ ನಿವಾರಣೆ ಸುಲಭವಲ್ಲ. ಸತತ ವ್ಯಾಯಾಮ ಮತ್ತು ಸೂಕ್ತ ಆಹಾರಗಳನ್ನು ಸೇವಿಸುವುದು ಅಗತ್ಯ. ಸೂಕ್ತ ಆಹಾರಗಳೆಂದರೆ ಯಾವುವು? ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಬಲ್ಲ ಸಾಮರ್ಥ್ಯವಿರುವ ಆಹಾರಗಳೇ ಸೂಕ್ತ ಆಹಾರಗಳು. ಇದನ್ನುಪಟ್ಟಿಮಾಡಲು ಹೋದರೆ ಕಿತ್ತಳೆ ಜಾತಿಯ ಅಂದರೆ ಸಿಟ್ರಿಕ್ ಆಮ್ಲ ಪ್ರಮುಖವಾಗಿರುವ ಸಿಟ್ರಸ್ ಹಣ್ಣುಗಳು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತವೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ಆಹಾರದಲ್ಲಿ ಸಿಟ್ರಸ್ ಹಣ್ಣುಗಳಿರುವಂತೆ ನೋಡಿಕೊಳ್ಳಿ ಎಂದು ಹೇಳುವುದು ಸುಲಭ. ಆದರೆ ಹೇಗೆ? ಮತ್ತು ಯಾವುವು? ಇದಕ್ಕೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಕಷ್ಟವೂ ಅಲ್ಲ. ನಿಮಗೆ ಯಾವ ಹಣುಗಳು ಸೂಕ್ತವೆಂದು ನಿಮ್ಮ ಕುಟುಂಬವೈದ್ಯರು ಅಥವಾ ಆಹಾರ ತಜ್ಞರು ಸಲಹೆ ನೀಡಬಲ್ಲರು. ಏಕೆಂದರೆ ಒಂದು ವೇಳೆ ನೀವು ಯಾವುದಾದರೂ ಔಷಧಿಗಳನ್ನು ಸೇವಿಸುತ್ತಿದ್ದರೆ ಈ ಹಣ್ಣುಗಳನ್ನು ಸೇವಿಸುವುದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು...! ಮುಖ್ಯವಾಗಿ ಹೃದಯ ಬಡಿತದಲ್ಲಿ ಏರುಪೇರು ಉಂಟಾಗಬಹುದು. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

ಒಂದು ವೇಳೆ ನಿಮ್ಮ ಆರೋಗ್ಯ ಉತ್ತಮವಾಗಿದ್ದು ಕೇವಲ ಸೋಮಾರಿತನದಿಂದ ಸ್ಥೂಲಕಾಯಕ್ಕೆ ತುತ್ತಾಗಿದ್ದರೆ ಸಿಟ್ರಸ್ ಹಣ್ಣುಗಳ ಸೇವನೆ ನಿಮ್ಮ ಪ್ರಯತ್ನಗಳಿಗೆ ನೆರವು ನೀಡುತ್ತದೆ. ಈ ಹಣ್ಣುಗಳ ಸೇವನೆಯಿಂದ ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ (LDL) ನಿವಾರಿಸಿ ರಕ್ತಪರಿಚಲನೆ ಉತ್ತಮಗೊಳಿಸಲು ನೆರವಾಗುತ್ತದೆ. ಉತ್ತಮಗೊಂಡ ರಕ್ತಪರಿಚಲನೆ ತೂಕ ಇಳಿಸುವ ಜೊತೆಗೇ ಹತ್ತು ಹಲವು ವಿಧದಲ್ಲಿ ಆರೋಗ್ಯವನ್ನು ಸುಧಾರಿಸುತ್ತದೆ. ಬನ್ನಿ, ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಸಿಟ್ರಸ್ ಹಣ್ಣುಗಳ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ:

ರಕ್ತಕಿತ್ತಳೆ (Blood Oranges)

ರಕ್ತಕಿತ್ತಳೆ (Blood Oranges)

ನೋಡಲು ಕಿತ್ತಳೆ ಹಣ್ಣಿನಂತೆಯೇ ಇದ್ದರೂ ಕತ್ತರಿಸಿದಾಗ ಒಳಭಾಗದಲ್ಲಿ ರಕ್ತದಂತೆ ಕೆಂಪಗಿರುವ ಕಾರಣ ರಕ್ತಕಿತ್ತಳೆ ಎಂಬ ಹೆಸರು ಬಂದಿದೆ. ಅತಿ ಹುಳಿಯಾಗಿದ್ದರೂ ಈ ಹಣ್ಣಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳಿವೆ. ಪ್ರಮುಖವಾಗಿ ಆಂಥೋಸಯಾನಿನ್ ಮತ್ತು ಕ್ಯಾರೋಟಿನಾಯ್ಡ್ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಚರ್ಮ, ಉಗುರು, ನರಗಳು ಉತ್ತಮ ಪೋಷಣೆ ಪಡೆಯುತ್ತವೆ. ಇವುಗಳಲ್ಲಿರುವ ಚಿಕಿತ್ಸಕ ಗುಣಗಳು ತೂಕ ಇಳಿಸಲೂ ಪೂರಕವಾಗಿವೆ. ಅಲ್ಲದೇ ಇದು ಹೆಚ್ಚಿನ ಸಕ್ಕರೆಯನ್ನು ಬಳಸುವ ಕಾರಣ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನೂ ನಿಯಂತ್ರಿಸುತ್ತದೆ.

ಲಿಂಬೆಹಣ್ಣು

ಲಿಂಬೆಹಣ್ಣು

ಬೀಜವಿಲ್ಲದಿದ್ದರೆ ಸಂಜೀವಿನಿಯೇ ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲ್ಪಟ್ಟ ಲಿಂಬೆಹಣ್ಣಿನ ಆರೋಗ್ಯಕಾರಿ ಗುಣಗಳು ಒಂದೆರಡಲ್ಲ. ಮೂಳೆಗಳಿಗೆ ದೃಢತೆ ನೀಡುವುದು, ಕೊಲೆಸ್ಟ್ರಾಲ್ ನಿಯಂತ್ರಿಸುವುದು ಮೊದಲಾದ ಗುಣಗಳಿವೆ. ತನ್ನ ಉರಿಯೂತ ನಿವಾರಕ ಗುಣದಿಂದಾಗಿ ದೇಹದ ಹಲವು ತೊಂದರೆಗಳನ್ನು ನಿವಾರಿಸುತ್ತದೆ. ಇದರಲ್ಲಿ ಕ್ಯಾನ್ಸರ್ ಕಣಗಳನ್ನು ಅಭಿವೃದ್ದಿಗೊಳ್ಳಲು ಬಿಡದೇ ಕ್ಯಾನ್ಸರ್ ತಡೆಯುವ ಗುಣವಿದೆ. ತೂಕ ಇಳಿಸಲು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿ ಕುಡಿಯುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.

ಟ್ಯಾಂಜೆರಿನ್ (ಕಿತ್ತಳೆ ಬಣ್ಣದ ಮೂಸಂಬಿ)

ಟ್ಯಾಂಜೆರಿನ್ (ಕಿತ್ತಳೆ ಬಣ್ಣದ ಮೂಸಂಬಿ)

ಸಾಮಾನ್ಯವಾಗಿ ಮೂಸಂಬಿ ಹಸಿರು ಬಣ್ಣದಲ್ಲಿದ್ದರೆ ಟ್ಯಾಂಜೆರಿನ್ ಕಿತ್ತಳೆ ಬಣ್ಣದಲ್ಲಿರುತ್ತದೆ. ಇದರಲ್ಲಿ ನೋಬಿಲೆಟಿನ್ (Nobiletin) ಎಂಬ ಪೋಷಕಾಂಶವಿದ್ದು ಕೊಬ್ಬನ್ನು ಕರಗಿಸಲು ಸಮರ್ಥವಾಗಿದೆ. ಆದ್ದರಿಂದ ಟ್ಯಾಂಜೆರಿನ್ ಸೇವಿಸುವ ಮೂಲಕ ಹೆಚ್ಚಿನ ಶ್ರಮವಿಲ್ಲದೇ ಶೀಘ್ರವೇ ಹೆಚ್ಚಿನ ತೂಕವನ್ನು ಕಳೆದುಕೊಳ್ಳಬಹುದು.

ಹಸಿರು ಲಿಂಬೆ (Lime)

ಹಸಿರು ಲಿಂಬೆ (Lime)

ಲಿಂಬೆಯ ಇನ್ನೊಂದು ಜಾತಿಯಾದ ಹಸಿರು ಲಿಂಬೆ ಸಹಾ ತೂಕವಿಳಿಸಲು ಸಮರ್ಥವಾಗಿದೆ. ಇದರಲ್ಲಿರುವ ಲೆಮನಾಯ್ಡ್ ಎಂಬ ಪೋಷಕಾಂಶ ಹೊಟ್ಟೆಯ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತದೆ. ಮುಖ್ಯವಾಗಿ ಇದರಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಹೊಟ್ಟೆಯುಬ್ಬರ, ಕರುಳ ಉರಿ ಮೊದಲಾದ ತೊಂದರೆಗಳಿಂದ ಕಾಪಾಡುತ್ತದೆ. ಪ್ರತಿದಿನ ಈ ಲಿಂಬೆಯ ಕೆಲವು ಹನಿಗಳನ್ನು ಹಾಲಿಲ್ಲದ ಚಹಾದೊಂದಿಗೆ ಸೇವಿಸಿದರೆ ಹೆಚ್ಚಿನ ಕೊಬ್ಬು ಕರಗಿಸಲು ನೆರವಾಗುತ್ತದೆ.

ಬೆರ್ರಿಗಳು

ಬೆರ್ರಿಗಳು

ಬ್ಲಾಕ್ ಬೆರಿ, ಬ್ಲೂ ಬೆರಿ ಮತ್ತು ರಾಸ್ಪ್ ಬೆರಿಗಳಲ್ಲಿಯೂ ಹಲವು ಉತ್ತಮ ಪೋಷಕಾಂಶಗಳಿದ್ದು ಸಕ್ಕರೆ ಕಡಿಮೆ ಇರುವ ಕಾರಣ ಸಿಟ್ರಸ್ ಹಣ್ಣುಗಳ ಪಟ್ಟಿಗೆ ಸೇರಿಸಬಹುದಾಗಿದೆ. ಇದರಲ್ಲಿ ಬಾಳೆಹಣ್ಣು ಮತ್ತು ಮಾವಿನ ಹಣ್ಣಿನಲ್ಲಿರುವುದಕ್ಕಿಂತ ಕಡಿಮೆ ಸಕ್ಕರೆ ಇರುವುದರಿಂದ ಮಧುಮೇಹಿಗಳಿಗೂ ಸೂಕ್ತವಾಗಿವೆ. ಇವು ರಕ್ತವನ್ನು ಶುದ್ದೀಕರಿಸಿ ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತವೆ. ಅಲ್ಲದೇ ಹಸಿವನ್ನು ಹೆಚ್ಚಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ. ಕೊಬ್ಬನ್ನು ಹೆಚ್ಚು ಕಬಳಿಸುವ ಮೂಲಕ ತೂಕ ಇಳಿಸಲೂ ನೆರವಾಗುತ್ತವೆ.

ಕುಂಕ್ವಾಟ್ ಹಣ್ಣು

ಕುಂಕ್ವಾಟ್ ಹಣ್ಣು

ಚಿಕ್ಕ ಕಿತ್ತಳೆಯೊಂದು ತೊಂಡೇಕಾಯಿಯ ಆಕೃತಿ ಪಡೆದಂತಿರುವ ಕುಂಕ್ವಾಟ್ ಹಣ್ಣು ಸಹಾ ತೂಕ ಇಳಿಸಲು ಉತ್ತಮವಾಗಿದೆ. ಇದರ ವಿಶೇಷತೆ ಎಂದರೆ ಇದರ ಸಿಪ್ಪೆ ಸಹಾ ತಿನ್ನಲು ಯೋಗ್ಯವಾಗಿದ್ದು ಹಲವು ವಿಧದಲ್ಲಿ ಆರೋಗ್ಯಕ್ಕೆ ಸಹಕಾರಿಯಾಗಿವೆ. ಮುಖ್ಯವಾದಿ ಇದರಲ್ಲಿ ಲ್ಯೂಟೀನ್ (lutein) ಎಂಬ ಪೋಷಕಾಂಶವಿದ್ದು ಕೊಬ್ಬು ಕರಗಿಸಲು ನೆರವಾಗುತ್ತದೆ. ಇದಕ್ಕೆ ಜಿಯಾಕ್ಸಾಂಥಿನ್(zeaxanthin) ಮತ್ತು ವಿಟಮಿನ್ ಎ ಪೋಷಕಾಂಶಗಳು ಪೂರ್ಣ ಸಹಕಾರ ನೀಡುತ್ತವೆ. ಅಲ್ಲದೇ ಇವು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲೂ ನೆರವಾಗುತ್ತವೆ.

ಚಕ್ಕೋತ (Grapefruit)

ಚಕ್ಕೋತ (Grapefruit)

ಚಿಕ್ಕಂದಿನಲ್ಲಿ ಕ್ರಿಕೆಟ್ ಬಾಲ್ ಇಲ್ಲದಿದ್ದಾಗ ಬಾಲಿನ ಬದಲಿಗೆ ಬಳಸುತ್ತಿದ್ದ ಚಕ್ಕೋತ ಹಣ್ಣು ನೆನಪಿದೆಯೇ? ಕ್ರಿಕೆಟ್ ಆಟಕ್ಕಿಂತಲೂ ಹೆಚ್ಚಾಗಿ ಇದು ನಮ್ಮ ಮೂಳೆಗಳಿಗೆ ಉತ್ತಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗುವ ಮೂಲಕ ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತವೆ. ಇದನ್ನು ಅಳೆಯುವ ಮಾಪಕ BMD (Bone Mineral Density) ಶೀಘ್ರವೇ ಉತ್ತಮಗೊಳ್ಳುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಅಲ್ಲದೇ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ (osteoporosis) ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ. ಅಲ್ಲದೇ ಇದರ ಪೋಷಕಾಂಶಗಳು ಕ್ಯಾನ್ಸರ್ ಮತ್ತು ಹೃದಯ ತೊಂದರೆಗಳು ಬರದಂತೆ ತಡೆಯುತ್ತವೆ. ದಿನಕ್ಕೊಂದು ಲೋಟ ಚಕ್ಕೋತದ ರಸ ಅಥವಾ ಕೆಲವು ಎಸಳು ಚಕ್ಕೋತವನ್ನು ತಿನುವುದರಿಂದ ಕೇವಲ ಹದಿಮೂರು ವಾರಗಲಲ್ಲಿ ಇಪ್ಪತ್ತು ಪೌಂಡು (ಸುಮಾರು ಒಂಭತ್ತು ಕೇಜಿ) ತೂಕವನ್ನು ಕಳೆದುಕೊಳ್ಳಲು ಸಾಧ್ಯ ಎಂದು ಸಂಶೋಧನೆಯೊಂದು ತಿಳಿಸಿದೆ.

English summary

Citrus Fruits The Best Formula For Weight Loss

Citrus Fruits are the best way to lose weight and especially citrus fruits are an ideal way to lose weight in a healthy way. Now, you must be wondering how citrus fruits help in weight loss. These fruits abound in minerals and vitamins and are a perfect weight-loss source. Thus, by incorporating a number of citrus fruits in your daily diet, you can get rid of your excess calories.
Story first published: Saturday, October 31, 2015, 18:50 [IST]
X
Desktop Bottom Promotion