For Quick Alerts
ALLOW NOTIFICATIONS  
For Daily Alerts

ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ ಜಿಮ್ ಬಿಡಿ

By Super
|

ಇಂದು ಉತ್ತಮ ಮೈಕಟ್ಟು ಹೊಂದಿರುವುದು ಆರೋಗ್ಯದ ಅಗತ್ಯಕ್ಕಿಂತಲೂ ಇನ್ನೊಬ್ಬರನ್ನು ಮೆಚ್ಚಿಸಲು ಒಂದು ಆಭರಣದಂತೆ ಪರಿಗಣಿಸಲಾಗುತ್ತಿದೆ. ಸಿಕ್ಸ್ ಪ್ಯಾಕ್, ಬೈಸೆಪ್ಸ್, ವಿ ಶೇಪ್, ಇವೆಲ್ಲಾ ವ್ಯಾಯಾಮಶಾಲೆಗೆ ಹೋಗುತ್ತಿರುವವರ ನಿತ್ಯದ ಜಪಗಳಾಗಿವೆ. ಕೆಲಕಾಲದ ವ್ಯಾಯಾಮದಿಂದ ದಪ್ಪನಾದ ತೋಳು, ಕೊಬ್ಬು ಕರಗಿದ ಹೊಟ್ಟೆ, ವಿಭಿನ್ನ ಶೈಲಿಯ ಟೀ ಶರ್ಟ್ ಅನ್ನು ಇನ್ನೇನು ಹರಿಯುತ್ತದೆ ಎಂಬಷ್ಟು ಬಿಗಿಯಾಗಿ ಧರಿಸಿ ಅನಗತ್ಯವಾಗಿ ಕೈಗಳನ್ನು ಹುರಿಗಟ್ಟುತ್ತಾ ಮಾಂಸಖಂಡಗಳನ್ನು ತೋರುತ್ತಾ ಅಲೆಯುವುದು ಇಂದು ಸಾಮಾನ್ಯವಾಗಿ ಕಾಣುವ ದೃಶ್ಯವಾಗಿದೆ. ಮೆದುಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು 12 ಯೋಗಾಸನಗಳು

ಆದರೆ ವಾಸ್ತವವಾಗಿ ಇವೆಲ್ಲಾ ಬಲವಂತವಾಗಿ ಪಡೆದುಕೊಂಡ ಸ್ನಾಯುಗಳೇ ಹೊರತು ನಿಜವಾದ ಆರೋಗ್ಯವಲ್ಲ. ಇದನ್ನು ಕಾರಿನ ಬಂಪರ್ ಗೆ ಹೋಲಿಸಬಹುದು. ಬಂಪರ್ ಅನ್ನು ಗಟ್ಟಿಯಾಗಿಸುವುದರಿಂದ ಕಾರಿನ ಇಂಜಿನ್ ನ ಕ್ಷಮತೆ ಹೆಚ್ಚುವುದೇ? ಸರ್ವಥಾ ಇಲ್ಲ. ಅಂತೆಯೇ ನಮ್ಮ ಆರೋಗ್ಯ ಸ್ನಾಯುಗಳ ಹುರಿಗಟ್ಟುವಲ್ಲಿ ಇಲ್ಲ! ಬದಲಿಗೆ ಉತ್ತಮ ಆರೋಗ್ಯದ ಪರಿಣಾಮವಾಗಿ ಸ್ನಾಯುಗಳು ಹುರಿಗಟ್ಟುತ್ತವೆ. ಈ ಸುಲಭ ಸತ್ಯವನ್ನು ಮನಗಂಡರೆ ದುಬಾರಿ ವ್ಯಾಯಾಮಶಾಲೆ ಅಥವಾ ಮನೆಯ ಯೋಗಾಭ್ಯಾಸ ಎರಡರಲ್ಲಿ ಯಾವುದು ಉತ್ತಮ ಎಂಬ ಆಯ್ಕೆ ಸುಲಭವಾಗುತ್ತದೆ. ಯೋಗಾಭ್ಯಾಸವನ್ನು ಮನೆಯಲ್ಲಿ ಮಾಡಲು ಸಾಧ್ಯವಿಲ್ಲದಿದ್ದರೆ ಹತ್ತಿರದ ಯೋಗಶಾಲೆಗೂ ಸೇರಬಹುದು. ಈ ನಿರ್ಧಾರ ಸರಿ ಎನ್ನಲು ಹದಿನೈದು ಕಾರಣಗಳನ್ನು ಇಲ್ಲಿ ನೀಡಲಾಗಿದೆ...

ಯೋಗಾಭ್ಯಾಸದಿಂದ ಮನ, ದೇಹ ಮತ್ತು ಚೈತನ್ಯ ಉತ್ತಮಗೊಳ್ಳುತ್ತದೆ

ಯೋಗಾಭ್ಯಾಸದಿಂದ ಮನ, ದೇಹ ಮತ್ತು ಚೈತನ್ಯ ಉತ್ತಮಗೊಳ್ಳುತ್ತದೆ

ನಿರಂತರವಾದ ಯೋಗಾಭ್ಯಾಸದಿಂದ ದೇಹದ ಸಕಲ ಅಂಗಗಳು ಉತ್ತಮ ವ್ಯಾಯಾಮ ಪಡೆಯುತ್ತವೆ. ಜೊತೆಗೇ ಆ ಕ್ಷಣದಲ್ಲಿ ದೇಹದ ಧನಾತ್ಮಕ ಶಕ್ತಿ ಸಂಗ್ರಹವಾಗಿ ನಿಮ್ಮ ಚೈತನ್ಯವನ್ನು ಹೆಚ್ಚಿಸುತ್ತವೆ. ವ್ಯಾಯಾಮ ಶಾಲೆಯಲ್ಲಿ ದೇಹದ ಸ್ನಾಯುಗಳನ್ನು ಹುರಿಗಟ್ಟಿಸಲು ಮಾಡುವ ಬಲವಂತದ ವ್ಯಾಯಾಮ ಚೈತನ್ಯವನ್ನು ಹುರಿದುಂಬಿಸುವುದಿಲ್ಲ.

ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಾಗುತ್ತದೆ

ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಾಗುತ್ತದೆ

ಯೋಗಾಭ್ಯಾಸ ನಿಧಾನವಾದ ಚಟುವಟಿಕೆಯಾಗಿದ್ದು ಪ್ರತಿ ಆಸನದಲ್ಲಿ ದೇಹದ ಸ್ನಾಯುಗಳು, ನರಮಂಡಲ, ದುಗ್ದಗ್ರಂಥಿಗಳು, ಜೀರ್ಣಾಂಗಗಳು ಮತ್ತು ಮೂಳೆಗಳು ಹೆಚ್ಚಿನ ಸೆಳೆತಕ್ಕೆ ಒಳಗಾಗಿ ಉತ್ತಮ ವ್ಯಾಯಾಮ ಪಡೆಯುತ್ತವೆ. ರಕ್ತಪರಿಚಲನೆ ಉತ್ತಮಗೊಂಡು ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಹೃದಯಬಡಿತ ಹೆಚ್ಚುತ್ತಾ ಅರೋಗ್ಯಕರವಾಗುತ್ತದೆ. ಸ್ನಾಯುಗಳು ಉತ್ತಮಗೊಳ್ಳುತ್ತವೆ. ನಿರಾಳವಾದ ಶರೀರದಿಂದಾಗಿ ವಿವಿಧ ಅಂಗಗಳ ಕ್ಷಮತೆ ಹೆಚ್ಚುತ್ತದೆ. ಇದೇ ವೇಳೆ ವ್ಯಾಯಾಮಶಾಲೆಯಲ್ಲಿ ಸ್ನಾಯುಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವುದರಿಂದ ಮೆದುಳಿನ, ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ.

ಯೋಗಾಭ್ಯಾಸದಿಂದ ಜೀವನವನ್ನು ಸುಲಭವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ

ಯೋಗಾಭ್ಯಾಸದಿಂದ ಜೀವನವನ್ನು ಸುಲಭವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ

ಪ್ರತಿಯೊಬ್ಬರ ಶರೀರದ ರಚನೆಯಲ್ಲಿ ಕೊಂಚ ವ್ಯತ್ಯಾಸವಿದ್ದೇ ಇರುತ್ತದೆ. ನಾವೆಲ್ಲರೂ ಇನ್ನೊಬ್ಬರಿಗೆ ಹೋಲಿಸಿಕೊಂಡು ಅಸೂಯೆಪಡುತ್ತೇವೆ. ಆದರೆ ವಾಸ್ತವವಾಗಿ ಶರೀರದ ಗಾತ್ರ ಮತ್ತು ಸ್ನಾಯುಗಳ ಪ್ರದರ್ಶನ ಕೇವಲ ಒಣಪ್ರತಿಷ್ಠೆಯಾಗಿದೆಯೇ ಹೊರತು ನಿಜವಾದ ಆರೋಗ್ಯ ಅಥವಾ ನೆಮ್ಮದಿಯಲ್ಲ. ಯೋಗಾಭ್ಯಾಸದ ಮೂಲಕ ನಮ್ಮ ನಿಜವಾದ ಶರೀರ ಪ್ರಾಪ್ತವಾಗುವುದರ ಮೂಲಕ ನಮ್ಮಲ್ಲಿನ ನೈಜ ಶಕ್ತಿಯ ಅರಿವುಂಟಾಗುತ್ತದೆ. ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಅರಿವಾಗುತ್ತದೆ. ತನ್ಮೂಲಕ ಜೀವನದಲ್ಲಿ ನಮ್ಮಿಂದ ಸಾಧ್ಯವಾಗುವ ಗುರಿಯತ್ತ ಸಾಗಲು ನೆರವಾಗುತ್ತದೆ. ಇದೇ ವ್ಯಾಯಾಮಶಾಲೆಯಲ್ಲಿ ಸ್ನಾಯುಗಳನ್ನು ಹುರಿಗಟ್ಟಿಸುವ ಮೂಲಕ ಏನೋ ಜೀವನದಲ್ಲಿ ದೊಡ್ಡದನ್ನು ಸಾಧಿಸಬಹುದು ಎಂಬ ಭ್ರಮೆಯನ್ನು ಉಂಟುಮಾಡುತ್ತದೆ. ಆದರೆ ಎಷ್ಟೇ ಕಷ್ಟಪಟ್ಟರೂ ವ್ಯಾಯಾಮಶಾಲೆಯ ಗೋಡೆಗಳ ಮೇಲೆ ಅಂಟಿಸಿರುವ ದೈತ್ಯಶರೀರದ ಠೊಣಪರ ಕಾಲುಭಾಗಕ್ಕೂ ತಲುಪಲಾಗದೇ ಅನಾವಶ್ಯಕವಾದ ನಿರಾಶೆಗೆ ಒಳಗಾಗುತ್ತಾರೆ. ಇದು ದೈನಂದಿನ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಋಣಾತ್ಮಕ ಶಕ್ತಿಯನ್ನು ತುಂಬಿ ಜೀವನವನ್ನು ದುಸ್ತರವಾಗಿಸುತ್ತದೆ.

ಯೋಗಾಭ್ಯಾಸದಿಂದ ನಿಮ್ಮ ಕಾರ್ಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ

ಯೋಗಾಭ್ಯಾಸದಿಂದ ನಿಮ್ಮ ಕಾರ್ಯದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ

ಯೋಗಾಭ್ಯಾಸದ ಶಾಲೆಯಲ್ಲಿ ಕನ್ನಡಿಯೇ ಇರುವುದಿಲ್ಲ, ಗಮನಿಸಿದ್ದೀರಾ? ಏಕೆಂದರೆ ನಿಮ್ಮ ಗಮನ ನಿಮ್ಮ ಆಸನದ ನಿರ್ವಹಣೆಯ ಕುರಿತು ಇರುತ್ತದೆಯೇ ಹೊರತು ಈ ಆಸನ ಅನುಸರಿಸುವಾಗ ನಿಮ್ಮ ಸ್ನಾಯುಗಳು ಹೇಗೆ ಕಾಣುತ್ತವೆ ಎಂದು ಗಮನಿಸುವುದಿಲ್ಲ. ಇದಕ್ಕೆ ತದ್ವಿರುದ್ದವಾಗಿ ವ್ಯಾಯಾಮಶಾಲೆಗಳಲ್ಲಿ ಬ್ಯೂಟಿ ಸೆಲೂನ್ ಗಳಲ್ಲಿರುವುದಕ್ಕಿಂತಲೂ ಹೆಚ್ಚು ಕನ್ನಡಿಗಳಿರುತ್ತವೆ. ಇವುಗಳ ಮೂಲಕ ವ್ಯಾಯಾಮ ಮಾಡುವಾಗ ತನ್ನ ಸ್ನಾಯು ಎಷ್ಟು ಹುರಿಗಟ್ಟಿತು ಎಂದು ನೋಡುತ್ತಾ ಆತ್ಮವಂಚನೆ ಮಾಡಿಕೊಳ್ಳುವುದು ಕಂಡುಬರುತ್ತದೆ. ಇನ್ನೊಂದು ತೊಂದರೆ ಎಂದರೆ ಕನ್ನಡಿಯ ಮೂಲಕ ಬೇರೆಯವರು ಏನು ಮಾಡುತ್ತಿದ್ದಾರೆ ಎಂದು ಗಮನಿಸುವುದು. ಇದು ಅನಾವಶ್ಯಕ ಹೋಲಿಕೆಗೆ ಕಾರಣವಾಗಿ ಮಾನಸಿಕ ನೆಮ್ಮದಿಯನ್ನು ಇನ್ನಷ್ಟು ಕದಡುತ್ತದೆ.

ಯೋಗಾಭ್ಯಾಸದಿಂದ ಆರೋಗ್ಯಕರ ಮತ್ತು ಸುದೃಢ ಮೈಕಟ್ಟು ದೊರಕುತ್ತದೆ

ಯೋಗಾಭ್ಯಾಸದಿಂದ ಆರೋಗ್ಯಕರ ಮತ್ತು ಸುದೃಢ ಮೈಕಟ್ಟು ದೊರಕುತ್ತದೆ

ಯೋಗಾಭ್ಯಾಸದಿಂದ ಶರೀರದ ಎಲ್ಲಾ ಸ್ನಾಯುಗಳು ಉತ್ತಮ ಸೆಳೆತಕ್ಕೆ ಒಳಗಾಗುವುದರಿಂದ ದೇಹ ಸ್ಥೂಲಕಾಯವನ್ನು ಪಡೆಯದೇ ಸೂಕ್ತ ಆಕಾರದಲ್ಲಿರುತ್ತದೆ. ಆದರೆ ವ್ಯಾಯಾಮಶಾಲೆಯಲ್ಲಿ ಬೆಳೆಯುವ ಸ್ನಾಯುಗಳಿಂದಾಗಿ ದೇಹ ನೈಸರ್ಗಿಕ ಆಕೃತಿಯನ್ನು ಕಳೆದುಕೊಂಡು ಗುಂಪುಗುಂಪಾಗಿರುತ್ತದೆ.

ಯೋಗಾಭ್ಯಾಸ ಹೆಚ್ಚು ಸಮರ್ಥವಾಗಿದೆ

ಯೋಗಾಭ್ಯಾಸ ಹೆಚ್ಚು ಸಮರ್ಥವಾಗಿದೆ

ಯೋಗಾಭ್ಯಾಸದಲ್ಲಿ ನಿಮ್ಮ ಶರೀರದ ಭಾರವನ್ನೇ ಉಪಯೋಗಿಸಿ ವಿವಿಧ ಆಸನಗಳನ್ನು ಅನುಸರಿಸಲಾಗುತ್ತದೆ. ಆದರೆ ವ್ಯಾಯಾಮಶಾಲೆಯಲ್ಲಿ ಕೃತಕವಾದ ಭಾರವನ್ನು ದೇಹದ ಮೇಲೆ ಹೇರುವ ಮೂಲಕ ಮೆದುಳಿಗೆ ತಪ್ಪಾದ ಸಂದೇಶವನ್ನು ಬಲವಂತವಾಗಿ ರವಾನಿಸಲಾಗುತ್ತದೆ. ಅಂದರೆ ಈ ಸ್ನಾಯುವಿಗೆ ಇಷ್ಟು ಭಾರ ಹೊರುವ ಅವಶ್ಯಕತೆ ಇದೆ, ತಕ್ಷಣ ಇಲ್ಲಿನ ಸ್ನಾಯುಗಳನ್ನು ಹೆಚ್ಚಿಸು ಎಂಬುದೇ ಆ ಸಂದೇಶ. ನಿರ್ವಾಹವಿಲ್ಲದೇ ಮೆದುಳು ಇಲ್ಲಿನ ಸ್ನಾಯುಗಳನ್ನು ಬೆಳೆಸಬೇಕಾಗುತ್ತದೆ. ಎಲ್ಲಿಯವರೆಗೆ ಈ ತೂಕವನ್ನು ಆ ಸ್ನಾಯು ಎತ್ತುತ್ತಾ ಇರುತ್ತದೆಯೋ ಅಲ್ಲಿಯವರೆಗೆ ಆ ಸ್ನಾಯು ಉಳಿಯುತ್ತದೆ. ಭಾರ ಹೊರುವುದು ಕಡಿಮೆಯಾದ ತಕ್ಷಣ ಆ ಸ್ನಾಯು ಸೆಳೆತ ಕಳೆದುಕೊಂಡು ಜೋಲು ಬೀಳುತ್ತದೆ. ಅಂದರೆ ವಾಸ್ತವವಾಗಿ ನಮಗೆ ಅಗತ್ಯವೇ ಇಲ್ಲದ ಶಕ್ತಿಯನ್ನು ಬಲವಂತವಾಗಿ ಪಡೆದಿದ್ದೇವೆ. ಬದಲಾಗಿ ಯೋಗಾಭ್ಯಾಸದಲ್ಲಿ ಕೇವಲ ಅಗತ್ಯವಿರುವಷ್ಟು ಸ್ನಾಯುಗಳನ್ನು ಮಾತ್ರ ಬೆಳೆಸುವುದರಿಂದ ದೇಹ ಹೆಚ್ಚು ಸಮರ್ಥವಾಗುತ್ತದೆ.

ಯೋಗಾಭ್ಯಾಸವನ್ನು ಎಲ್ಲಿಯೂ ನಿರ್ವಹಿಸಬಹುದು

ಯೋಗಾಭ್ಯಾಸವನ್ನು ಎಲ್ಲಿಯೂ ನಿರ್ವಹಿಸಬಹುದು

ಯೋಗಾಭ್ಯಾಸವನ್ನು ನೀವು ಎಲ್ಲಿದ್ದೀರೋ ಅಲ್ಲಿಯೇ ನಿಮ್ಮ ಅನುಕೂಲಕ್ಕೆ ತಕ್ಕ ಸಮಯದಲ್ಲಿ ನಿರ್ವಹಿಸಬಹುದು. ಇದಕ್ಕೆ ಬೇಕಾಗಿರುವುದು ಒಂದು ಚಾಪೆ ಅಥವಾ ಬಟ್ಟೆ ಅಷ್ಟೇ. ನೀವು ಪ್ರವಾಸದಲ್ಲಿರಿ, ರಜೆಯಲ್ಲಿರಿ,ಬೇರೆಯವರು ನಿಮ್ಮ ಮನೆಗೆ ಅತಿಥಿಗಳಾಗಿ ಬಂದಿರಲಿ, ಯೋಗಾಭ್ಯಾಸಕ್ಕೆ ತಡೆಯುಂಟಾಗದು. ಬದಲಿಗೆ ವ್ಯಾಯಾಮಶಾಲೆಗೆ ದುಬಾರಿ ಬೆಲೆಕೊಟ್ಟು ಪ್ರತಿದಿನ ಅಲ್ಲಿ ಹೋಗಲೇಬೇಕಾದ ಅನಿವಾರ್ಯತೆಗೆ ಒಳಗಾಗುತ್ತೀರಿ. ಅನಿವಾರ್ಯ ಕಾರಣಗಳಿಂದ ಕೆಲದಿನಗಳಿಗೆ ಹೊರಹೋಗಬೇಕಾಗಿ ಬಂದಾಗ ನಿತ್ಯದ ಕ್ರಮ ತಪ್ಪಿ ಈಗಾಗಲೇ ಬೆಳೆದಿರುವ ಸ್ನಾಯುಗಳು ಜೋಲುಬೀಳುವ ಸಾಧ್ಯತೆಯಿದೆ. ಆ ಭಾರದ ಉಪಕರಣಗಳನ್ನು ಜೊತೆಗೆ ಕೊಂಡೊಯ್ಯಲೂ ಆಗದು.

ಯೋಗಾಭ್ಯಾಸ ದೇಹಕ್ಕೆ ಮೃದುವಾಗಿ ಸ್ಪಂದಿಸುತ್ತದೆ

ಯೋಗಾಭ್ಯಾಸ ದೇಹಕ್ಕೆ ಮೃದುವಾಗಿ ಸ್ಪಂದಿಸುತ್ತದೆ

ಯೋಗಾಭ್ಯಾಸದಲ್ಲಿ ಸುಲಭದಿಂದ ಕಠಿಣವಾದ ಆಸನಗಳಿದ್ದರೂ ಯಾವುದೂ ದೇಹವನ್ನು ಹಿಂಡಿ ಹಿಪ್ಪೆ ಮಾಡುವುದಿಲ್ಲ. ಅಷ್ಠಾಂಗ ಎಂಬ ಆಸನ ಅತ್ಯಂತ ಕಠಿಣವಾಗಿದ್ದು ದೇಹವನ್ನು ಅತಿ ಹೆಚ್ಚಾಗಿ ಸೆಳೆಯುತ್ತದೆ. ಆದರೆ ಈ ಹಂತದಲ್ಲಿಯೂ ದೇಹ ನಿತ್ರಾಣವಾಗುವುದಿಲ್ಲ. ಈ ಹಂತಕ್ಕೆ ಬರುವ ಮುನ್ನ ಇನ್ನೂ ನೂರಾರು ಆಸನಗಳನ್ನು ಹಂತಹಂತವಾಗಿ ದಾಟಿಕೊಂಡು ಬರಬೇಕಾದುದರಿಂದ ದೇಹ ನೈಸರ್ಗಿಕವಾದ ಬೆಳವಣಿಗೆಯನ್ನು ಪಡೆಯುತ್ತದೆ. ಆದರೆ ವ್ಯಾಯಾಮಶಾಲೆಯಲ್ಲಿ ವಿವಿಧ ತೂಕದ ಭಾರಗಳನ್ನು ಬಲವಂತವಾಗಿ ಹೇರುವ ಮೂಲಕ ಸ್ನಾಯುಗಳ ಕೃತಕ ಬೆಳವಣಿಗೆಯನ್ನೇ ಪಡೆಯಲಾಗುತ್ತದೆ. ಭಾರಗಳನ್ನು ಎತ್ತುವಾಗ ಜೊತೆಗೆ ಇನ್ನೊಬ್ಬರು ಇರಲೇ ಬೇಕು. ಆದರೂ ಕೊಂಚ ಎಡವಿ ಭಾರದ ಸಮತೋಲನ ತಪ್ಪಿ ಅನಾಹುತವಾಗಬಹುದು. ಕೆಲದಿನಗಳ ಪ್ರಯತ್ನದಿಂದ ಭಾರವನ್ನು ಲೀಲಾಜಾಲವಾಗಿ ಎತ್ತಿರುವ ಹುಂಬತನದಿಂದ ಯಾರೂ ಸಹಾಯಕ್ಕೆ ಇಲ್ಲದಿರುವಾಗ ಹೆಚ್ಚಿನ ಭಾರವನ್ನು ಪ್ರಯತ್ನಿಸುವ, ಬಳಿಕ ವಿಫಲಗೊಂಡು ಭಾರದ ಅಡಿ ಕುಸಿಯುವ, ತನ್ಮೂಲಕ ಪ್ರಾಣಕ್ಕೇ ಅಪಾಯ ತಂದೊಡ್ಡುವ ಸಂಭವವಿದೆ.

ಯೋಗಾಭ್ಯಾಸದಿಂದ ದೇಹದ ನೋವುಗಳು ಮಾಯವಾಗುತ್ತವೆ

ಯೋಗಾಭ್ಯಾಸದಿಂದ ದೇಹದ ನೋವುಗಳು ಮಾಯವಾಗುತ್ತವೆ

ನೋವು ಎಂದರೆ ನಮ್ಮ ನರಮಂಡಲ ಮೆದುಳಿಗೆ ಕಳುಹಿಸುವ ಸಂಕೇತ. ಈ ಜಾಗದಲ್ಲಿ ಪೆಟ್ಟಾಗಿದೆ, ಈಗ ಇದರ ಮೇಲೆ ಭಾರ ನೀಡಬೇಡಿ ಎಂಬುದೇ ಇದರ ಅರ್ಥ. ಕೆಲವರಿಗೆ ದೇಹದ ಯಾವುದೋ ಭಾಗದಲ್ಲಿ ವರ್ಷಗಳಿಂದ ನೋವಿದ್ದು ಆ ಭಾಗಕ್ಕೆ ಭಾರ ನೀಡುವುದನ್ನೇ ಕೈದುಗೊಳಿಸಿರುತ್ತಾರೆ. ವ್ಯಾಯಾಮಶಾಲೆಯಲ್ಲಿ ಈ ಭಾಗದ ಮೇಲೆ ಒತ್ತಡ ಬೀಳುವ ಯಾವುದೇ ಚಟುವಟಿಕೆ ಈ ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಟ್ರೆಡ್ ಮಿಲ್ ಮೊದಲಾದ ಉಪಕರಣಗಳಲ್ಲಿ ಯಾವುದೋ ಕ್ಷಣದಲ್ಲಿ ಆದ ಮರೆವಿನಿಂದ ಆಗುವ ಅನಾಹುತ ದುಬಾರಿಯಾಗಿ ಪರಿಣಮಿಸಬಹುದು. ಆದರೆ ಯೋಗಾಭ್ಯಾಸದಲ್ಲಿ ದೇಹದ ಸಕಲ ಅಂಗಗಳಿಗೆ ಉತ್ತಮ ರಕ್ತಪರಿಚಲನೆ ಮತ್ತು ಕೀಲುಗಳಲ್ಲಿ ಜಾರುಕ ಉತ್ಪತ್ತಿಯಾಗುವುದರಿಂದ ಉತ್ತಮ ಬೆಳವಣಿಗೆ ಪಡೆದು ನೋವಿನ ಸೂಚನೆ ಕಳುಹಿಸುವ ಅಗತ್ಯವೇ ಇಲ್ಲವಾಗುತ್ತದೆ. ನಿಧಾನವಾಗಿ ವರ್ಷಗಳಿಂದ ಕಾಡುತ್ತಿದ್ದ ನೋವು ಮಾಯವಾಗಿ ಜೀವನದಲ್ಲಿ ಉಲ್ಲಾಸ ತುಂಬುತ್ತದೆ.

ಯೋಗಾಭ್ಯಾಸದಿಂದ ಶ್ವಾಸಕ್ರಿಯೆ ಉತ್ತಮಗೊಳ್ಳುತ್ತದೆ

ಯೋಗಾಭ್ಯಾಸದಿಂದ ಶ್ವಾಸಕ್ರಿಯೆ ಉತ್ತಮಗೊಳ್ಳುತ್ತದೆ

ಯೋಗಾಭ್ಯಾಸದ ಎಲ್ಲಾ ಆಸನಗಳಲ್ಲಿ ಉಸಿರಾಟವನ್ನು ಪೂರ್ಣವಾಗಿ ತೆಗೆದುಕೊಳ್ಳಲು ಹೇಳಲಾಗುತ್ತದೆ. ಇದರಿಂದ ನಮ್ಮ ಶ್ವಾಸಕೋಶಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಿ ಹೆಚ್ಚಿನ ಪ್ರಮಾಣದ ಆಮ್ಲಜನಕ ಪೂರೈಸುತ್ತವೆ. ಇದು ಕಷ್ಟಕರವಾದ ಅಥವಾ ಹೆಚ್ಚಿನ ಶಕ್ತಿ ಬೇಡುವ ಆಸನಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ವ್ಯಾಯಾಮಶಾಲೆಯಲ್ಲಿ ಬಲವಂತವಾಗಿ ಮಾಡುವ ವ್ಯಾಯಾಮಗಳಿಂದ ಅನಿವಾರ್ಯವಾಗಿ ಶ್ವಾಸ ಹೆಚ್ಚುತ್ತದೆ ಇದು ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ.

ಯೋಗಾಭ್ಯಾಸದಿಂದ ಮನಸ್ಸು ನಿರಾಳವಾಗುತ್ತದೆ

ಯೋಗಾಭ್ಯಾಸದಿಂದ ಮನಸ್ಸು ನಿರಾಳವಾಗುತ್ತದೆ

ನಿತ್ಯದ ಒತ್ತಡಗಳಿಂದ ಮನಸ್ಸು ಹೊರಬರಲು ಮೆದುಳಿಗೆ ವಿಶ್ರಾಂತಿ ಮತ್ತು ಕೆಲವು ರಸದೂತಗಳ ಅಗತ್ಯವಿದೆ. ಮನೆಗೆ ಬಂದು ಸುಮ್ಮನೇ ಮಲಗಿದರೆ ವಿಶ್ರಾಂತಿ ದೊರಕಬಹುದೇ ವಿನಃ ಈ ರಸದೂತಗಳು ಲಭ್ಯವಾಗುವುದಿಲ್ಲ. ಬದಲಿಗೆ ಯೋಗಾಭ್ಯಾಸದ ಕೆಲವು ಆಸನಗಳನ್ನು ಅನುಸರಿಸುವುದರಿಂದ ಮೆದುಳಿಗೆ ಪೂರ್ಣ ವಿಶ್ರಾಂತಿ ದೊರೆತು ಮನಸ್ಸು ನಿರಾಳವಾಗುತ್ತದೆ. ದುಗುಡ ಕಡಿಮೆಯಾಗುತ್ತದೆ. ಸಮಸ್ಯೆಗಳನ್ನು ಎದುರಿಸಲು ನಿರಾಳ ಮನಸ್ಸು ಅಗತ್ಯ. ಅದೇ ವ್ಯಾಯಾಮಶಾಲೆಯಲ್ಲಿನ ಯಾವುದೇ ಚಟುವಟಿಕೆ ಮೆದುಳಿಗೆ ಈ ರಸದೂತಗಳನ್ನು ನೀಡುವುದಿಲ್ಲ.

ಯೋಗಾಭ್ಯಾಸದಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ

ಯೋಗಾಭ್ಯಾಸದಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ

ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಾನಸಿಕ ಒತ್ತಡಕ್ಕೆ ಎಲ್ಲರೂ ಬಲಿಯಾಗುತ್ತಿದ್ದಾರೆ. ಈ ಒತ್ತಡದಿಂದ ಹೊರಬರಲು ಯಾವುದೇ ವ್ಯಾಯಾಮದಿಂದ ಸಾಧ್ಯವಿಲ್ಲ. ಬದಲಿಗೆ ಧ್ಯಾನ ಅಥವಾ ಶವಾಸನದಂತಹ ಸುಲಭವಾದ ಯೋಗಾಭ್ಯಾಸಗಳಿಂದ ಸಾಧ್ಯವಿದೆ. ಇಂದು ವ್ಯಾಯಾಮಶಾಲೆಗಳಲ್ಲಿರುವ ಅಬ್ಬರದ ಸಂಗೀತ, ಪ್ರಖರ ಬೆಳಕು, ಶ್ರೀಮಂತಿಕೆಯ ಪ್ರದರ್ಶನ, ಹೋಲಿಕೆಯಿಂದ ಇನ್ನೊಬ್ಬರನ್ನು ಕೀಳಾಗಿ ಕಾಣುವುದು ಮೊದಲಾದವು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ.

ಯೋಗಾಭ್ಯಾಸವನ್ನು ಯಾರೂ ಸಾಧಿಸಬಹುದು

ಯೋಗಾಭ್ಯಾಸವನ್ನು ಯಾರೂ ಸಾಧಿಸಬಹುದು

ಯೋಗಾಭ್ಯಾಸವನ್ನು ಯಾವುದೇ ವಯಸ್ಸಿನಲ್ಲಿ, ಪುರುಷ ಮಹಿಳೆ, ಬಡವ ಬಲ್ಲಿದ ಎಂಬ ಬೇಧವಿಲ್ಲದೇ ಯಾವುದೇ ನ್ಯೂನ್ಯತೆ ಇದ್ದವರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸಾಧಿಸಬಹುದು. ಪಾರ್ಕಿನ್ಸನ್ ಕಾಯಿಲೆ, ಕ್ಯಾನ್ಸರ್ ಮೊದಲಾದ ಕಾಯಿಲೆ ಇದ್ದವರೂ ಯೋಗಾಭ್ಯಾಸದಿಂದ ತಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಂಡಿದ್ದಾರೆ. ಹಣ ಇಲ್ಲಿ ಮಾನದಂಡವಲ್ಲ. ಆದರೆ ವ್ಯಾಯಾಮಶಾಲೆಯಲ್ಲಿ ಹಣ, ಪ್ರತಿಷ್ಠೆ, ಹೋಲಿಕೆ, ಅಹಂಭಾವ ಮೊದಲಾದವುಗಳನ್ನೇ ವಿಜೃಂಬಿಸಲಾಗುತ್ತದೆ. ಹಣವಂತರು ತಮ್ಮ ದುಬಾರಿ ಕಾರುಗಳನ್ನು ಪ್ರದರ್ಶಿಸಲು ಈ ವ್ಯಾಯಾಮಶಾಲೆಯನ್ನು ಆಯ್ದುಕೊಳ್ಳುತ್ತಾರೆ. ವ್ಯಾಯಾಮವೆಂದರೆ ಹಣ ಸುರಿಯುವ ವ್ಯಾಪಾರವಾಗಿದೆ.

ಯೋಗಾಭ್ಯಾಸದಿಂದ ಏಕಾಗ್ರತೆ ಹೆಚ್ಚುತ್ತದೆ

ಯೋಗಾಭ್ಯಾಸದಿಂದ ಏಕಾಗ್ರತೆ ಹೆಚ್ಚುತ್ತದೆ

ಯೋಗಾಭ್ಯಾಸದಲ್ಲಿ ಮನಸ್ಸನ್ನು ಆಸನದ ಭಂಗಿ ಮತ್ತು ಉಸಿರಿನ ಮೇಲೆ ಕೇಂದ್ರೀಕರಿಸಬೇಕಾದುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಈ ಹೊತ್ತಿನಲ್ಲಿ ನಡೆಯುವ ಹೊರಗಿನ ಚಟುವಟಿಕೆಗಳ ಸದ್ದು ನಿಮ್ಮ ಮೇಲೆ ಯಾವುದೇ ಪ್ರಭಾವವನ್ನು ಬೀರದು. ಇದು ನಿಮ್ಮ ಜೀವನದಲ್ಲಿಯೂ ಏಕಾಗ್ರತೆಯನ್ನು ಮೂಡಿಸಲು ನೆರವಾಗುತ್ತದೆ. ವ್ಯಾಯಾಮಶಾಲೆಯಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ನೀಡಲು ಟೀವಿ, ಅಬ್ಬರದ ಸಂಗೀತ, ಇತರ ಉಪಕರಗಳ ಸದ್ದು, ಇತರರ ಮಾತು ಮೊದಲಾದವು ಬೇಕಾದಷ್ಟಿವೆ. ಇದರಿಂದ ಬಲವಂತವಾಗಿ ಸ್ನಾಯುಗಳಿಗೆ ಮಾಡುವ ವ್ಯಾಯಾಮದ ಜೊತೆಗೇ ಬಲವಂತವಾಗಿ ಮನಸ್ಸನ್ನೂ ನಿಗ್ರಹಿಸಲು ಹೆಣಗಾಡಬೇಕಾಗುತ್ತದೆ. ಇದು ಮೆದುಳನ್ನು ಶೀಘ್ರವಾಗಿ ದಣಿಸುತ್ತದೆ.

ಯೋಗಾಭ್ಯಾಸ ಅನುಸರಿಸುತ್ತಿರುವವರು ಸದಾ ಹಸನ್ಮುಖಿಗಳಾಗಿರುತ್ತಾರೆ

ಯೋಗಾಭ್ಯಾಸ ಅನುಸರಿಸುತ್ತಿರುವವರು ಸದಾ ಹಸನ್ಮುಖಿಗಳಾಗಿರುತ್ತಾರೆ

ಯೋಗಾಭ್ಯಾಸವನ್ನು ಅನುಸರಿಸುವವರು ಎಂದಿಗೂ ಒಬ್ಬರನ್ನೊಬ್ಬರಿಗೆ ಹೋಲಿಸಿಕೊಳ್ಳುವುದಿಲ್ಲ. ಬದಲಿಗೆ ತಮ್ಮ ನೆರವನ್ನು ನೀಡುತ್ತಾ ಸಹಕರಿಸುತ್ತಾ ಇರುತ್ತಾರೆ. ಇದರಿಂದಾಗಿ ಮನಸ್ಸಿನಲ್ಲಿ ಮೂಡುವ ಸಾರ್ಥಕ ಭಾವನೆ ನಿಮ್ಮನ್ನು ಸದಾ ಹಸನ್ಮುಖಿಗಳನ್ನಾಗಿಸುತ್ತದೆ. ಅದೇ ವ್ಯಾಯಾಮಶಾಲೆಯಲ್ಲಿ ಕಷ್ಟ ಪಡುವವರು ತಮ್ಮನ್ನು ಸದಾ ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುತ್ತಾ ಅವರಂತೆ ತಮ್ಮ ಸ್ನಾಯುಗಳು ಬೆಳೆಯಲಿಲ್ಲ ಎಂದು ಹಳಿದುಕೊಳ್ಳುತ್ತಾ, ಅದಕ್ಕಾಗಿ ಇನ್ನಷ್ಟು ಕಷ್ಟ ಪಡುವುದು, ಅನಾರೋಗ್ಯಕರ ಮತ್ತು ದುಬಾರಿಯಾದ ಸ್ನಾಯುವರ್ಧಕ ಔಷಧಿಗಳನ್ನು ಸೇವಿಸುವುದು, ದೈನಂದಿನ ಕೆಲಸಗಳಿಗೆ ತಿಲಾಂಜಲಿ ನೀಡಿ ವ್ಯಾಯಾಮಶಾಲೆಯಲ್ಲಿಯೇ ಹೆಚ್ಚು ಹೆಚ್ಚು ಹೊತ್ತು ಕಳೆಯುವುದು ಮೊದಲಾದ ಮಾನಸಿಕ ನೆಮ್ಮದಿ ಕದಡುವ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ. ಇವರ ಅಕ್ಕಪಕ್ಕ ಸದಾ ಋಣಾತ್ಮಕವಾದ ಚಿಂತನೆಯೇ ಕಂಡುಬರುತ್ತದೆ. ಬದಲಿಗೆ ಯೋಗತರಗತಿಯಲ್ಲಿ ನಿಮ್ಮ ಸುತ್ತಮುತ್ತ ಸದಾ ಧನಾತ್ಮಕವಾಗಿ ಚಿಂತಿಸುವ ಗುಂಪು ಇರುತ್ತದೆ.

English summary

15 Reasons Yoga Is Better Than The Gym

Some people see it as a question…yoga or the gym — which is better? Is there really a question in there? There are about a gazillion reasons a yoga class is better. On the fitness front, by and large, with yoga one can expect increased flexibility, toning, strengthening to a certain degree, meditation and breathing exercises.
X
Desktop Bottom Promotion