For Quick Alerts
ALLOW NOTIFICATIONS  
For Daily Alerts

  ಆರು ಆರೋಗ್ಯಕರ ಉಪಹಾರದ ಧಾನ್ಯಗಳು

  By Hemanth P
  |

  ಒಂದು ಬೌಲ್ ಪೂರ್ತಿ ಆರೋಗ್ಯಕರ ಧಾನ್ಯಗಳ ಉಪಹಾರವು ನಿಮ್ಮ ಕ್ಯಾಲರಿ ಎಣಿಕೆ ಸೇರುತ್ತದೆ ಎಂದು ನಿಮಗೆ ತಿಳಿದಿದೆಯಾ? ಉಪಹಾರದ ಧಾನ್ಯಗಳಲ್ಲಿ ಅದರಲ್ಲೂ ಬಣ್ಣ ಹಾಕಿದ ಮತ್ತು ಸಕ್ಕರೆ ಮಿಶ್ರಿತ ವಿಧಗಳಲ್ಲಿರುವ ಸಕ್ಕರೆ ಮಟ್ಟದ ಬಗ್ಗೆ ವೈದ್ಯರು ಕೆಲವು ಸಮಯದಿಂದ ಚರ್ಚೆ ನಡೆಸುತ್ತಿದ್ದಾರೆ. ನೀವು ಯಾವುದೇ ರೀತಿಯ ಧಾನ್ಯಗಳನ್ನು ಖರೀದಿಸುವ ಮೊದಲು ಅದರಲ್ಲಿ ಒಳಗೊಂಡಿರುವ ಪೌಷ್ಠಿಕಾಂಶಗಳನ್ನು ಗಮನಿಸಿ.

  ಕೆನೆ ಅಥವಾ ಅರೆ ಕೆನೆಯಿರುವ ಹಾಲಿನೊಂದಿಗೆ ಧಾನ್ಯಗಳನ್ನು ಉಪಹಾರಕ್ಕೆ ತಿಂದರೆ ಆಗ ಆರೋಗ್ಯಕರ ಜೀವನ ಶೈಲಿ ಪಾಲಿಸಬಹುದು ಮತ್ತು ಹೆಚ್ಚುವರಿ ಸಕ್ಕರೆ ದೇಹಕ್ಕೆ ಸೇರುವುದನ್ನು ತಡೆಯಬಹುದು. ಆದರೆ ಈಗಲೂ ನಿಮಗೆ ಉಪಹಾರದಲ್ಲಿ ಸಕ್ಕರೆ ಅಂಶ ಬೇಕೆಂದು ಅನಿಸಿದರೆ ಆಗ ನೀವು ಹಣ್ಣು(ಒಣಹಣ್ಣುಗಳು)ಗಳಾದ ಬಾಳೆಹಣ್ಣು, ಒಣದ್ರಾಕ್ಷಿ ಅಥವಾ ಸಿಟ್ರಸ್ ಇರುವ ಹಣ್ಣುಗಳನ್ನು ಬಳಸಬಹುದು.

  ಬೆಳಗ್ಗೆ ಎದ್ದು ಏನು ತಿನ್ನಬೇಕು? 20 ಐಡಿಯಾ!

  ಆರು ಆರೋಗ್ಯಕರ ಉಪಹಾರದ ಧಾನ್ಯಗಳು

  ಈ ಉಪಾಹಾರ ಸೇವಿಸಿದರೆ ಆಗ ನಿಮಗೆ ದಿನದ ಮಧ್ಯೆ ಮತ್ತೆ ತಿಂಡಿ ತಿನ್ನಬೇಕೆಂದು ಅನಿಸದು. ಇದರೊಂದಿಗೆ ದೈನಂದಿನ ವ್ಯಾಯಾಮ ಮಾಡುವುದರಿಂದ ನೀವು ಹೆಚ್ಚಿನ ಲಾಭ ಪಡೆಯಬಹುದು. ಇದು ತೂಕ ಕಳಕೊಳ್ಳಲು ನಿಮಗೆ ನೆರವಾಗಬಹುದು.

  1. ಪೋರಿಡ್ಜ್

  1. ಪೋರಿಡ್ಜ್

  ಪೋರಿಡ್ಜ್ ತುಂಬಾ ಆರೋಗ್ಯಕರ ಆಹಾರ. ಇದರಲ್ಲಿ ಮಿನರಲ್ ಮತ್ತು ನಾರಿನಾಂಶ ಸಮೃದ್ಧವಾಗಿದ್ದು, ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಸಿಹಿಯಾಗಿಸಬೇಕಾದರೆ ಸ್ವಲ್ಪ ಬೆಲ್ಲ ಹಾಕಿ ಅಥವಾ ತಾಜಾ ಹಣ್ಣುಗಳು, ಒಣ ದ್ರಾಕ್ಷಿ ಮತ್ತು ಬಾದಾಮಿ ಹಾಕಬಹುದು.

  2. ಕಾರ್ನ್ ಫ್ಲೇಕ್ಸ್

  2. ಕಾರ್ನ್ ಫ್ಲೇಕ್ಸ್

  ಇದು ಕಾಬ್ರೋಹೈಡ್ರೇಟ್ಸ್, ಕಬ್ಬಿನಾಂಶ ಮತ್ತು ವಿಟಮಿನ್ ಬಿ ಅಂಶದಿಂದ ಸಮೃದ್ಧವಾಗಿದೆ. ಇದು ಶಾಲೆಗೆ ಹೋಗುವ ಮಕ್ಕಳಿಗೆ ಮತ್ತು ವಯಸ್ಕರಿಗೆ ಒಳ್ಳೆಯದು. ಇದು ಮಳೆಗಾಲದಲ್ಲಿ ಒಳ್ಳೆಯ ಉಪಹಾರ. ಯಾಕೆಂದರೆ ಗಾಳಿಯಲ್ಲಿರುವ ಹೆಚ್ಚಿನ ತೇವಾಂಶದಿಂದಾಗಿ ದೇಹವು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ.

  3. ಗೋಧಿ ಹೊಟ್ಟು

  3. ಗೋಧಿ ಹೊಟ್ಟು

  ಇದು ಗೋಧಿಯ ಗಂಜಿಯ ಆಧುನೀಕರಣ ಮತ್ತು ಇದನ್ನು ಉಪಹಾರದ ಧ್ಯಾನವಾಗಿ ಪರಿವರ್ತಿಸಲಾಗಿದೆ. ಹೆಚ್ಚುವರಿ ಕ್ಯಾಲ್ಸಿಯಂನ್ನು ಸೇರಿಸದೆ ಇದ್ದರೆ ಇದನ್ನು ಉಪಹಾರದಲ್ಲಿ ಸೇವಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.

  4. ಓಟ್ ಮೀಲ್ಸ್

  4. ಓಟ್ ಮೀಲ್ಸ್

  ಅಧಿಕ ಕೊಲೆಸ್ಟ್ರಾಲ್ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿರುವವರಿಗೆ ಓಟ್ಸ್ ಒಳ್ಳೆಯ ಉಪಹಾರ. ಇದು ದೇಹಕ್ಕೆ ಹೆಚ್ಚುವರಿ ಸಕ್ಕರೆ ಒದಗಿಸಲ್ಲ. ಓಟ್ ಮೀಲ್ಸ್ ನಲ್ಲಿರುವ ಹೆಚ್ಚಿನ ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ ಮತ್ತು ಖಿನ್ನತೆಯಿಂದ ಪಾರು ಮಾಡುತ್ತದೆ.

  5. ಮುಸ್ಲಿ

  5. ಮುಸ್ಲಿ

  ಇದರಲ್ಲಿ ಒಣದ್ರಾಕ್ಷಿ, ಬಾದಾಮಿ ಮತ್ತು ಇತರ ನಾಲ್ಕು ಧಾನ್ಯಗಳು ಇರುವ ಕಾರಣ ಇದು ಉಪಹಾರಕ್ಕೆ ಒಳ್ಳೆಯ ಆಯ್ಕೆ. ಮುಸ್ಲಿಯಲ್ಲಿನ ಉನ್ನತ ಮಟ್ಟದ ಸಕ್ಕರೆಯಾಂಶವು ಬೆಳೆಯುವ ಮಕ್ಕಳು ಮತ್ತು ಕ್ರೀಡಾಳುಗಳಿಗೆ ಅಧಿಕ ಶಕ್ತಿ ನೀಡುತ್ತದೆ. ಹಾಲು ಅಥವಾ ಮೊಸರಿಗೆ ಹಾಕಿ ಇದನ್ನು ತಿನ್ನಬಹುದು. ನೀವಾಗಿಯೇ ಮುಸ್ಲಿಯನ್ನು ತಯಾರಿಸಿ ಸಂಜೆ ತಿಂಡಿಗೆ ಮಕ್ಕಳಿಗೆ ನೀಡಬಹುದು.

  6. ಒಗ್ಗರಣೆ ಅವಲಕ್ಕಿ

  6. ಒಗ್ಗರಣೆ ಅವಲಕ್ಕಿ

  ಅಕ್ಕಿಯಿಂದ ಮಾಡಲ್ಪಡುವಂತಹ ಅವಲಕ್ಕಿ ಭಾರತದಲ್ಲಿ ತುಂಬಾ ಜನಪ್ರಿಯ. ಇದು ತುಂಬಾ ಲಘು ಮತ್ತು ಆರೋಗ್ಯಕರ ಉಪಹಾರ. ಒಗ್ಗರಣೆ ಅವಲಕ್ಕಿಗೆ ಕೇವಲ ಉಪ್ಪು ಮಾತ್ರ ಹಾಕಿ. ಕಾರ್ನ್ ಫ್ಲೆಕ್ಸ್ ಮತ್ತು ಓಟ್ಸ್ ನ್ನು ಹೊರತುಪಡಿಸಿ ಚಾಕಲೇಟ್, ಜೇನು ಮತ್ತು ಹಣ್ಣಿನ ರುಚಿಯ ಉಪಹಾರ ಧಾನ್ಯಗಳು ಮಕ್ಕಳಿಗೆ ಇಷ್ಟವಾಗಬಹುದು. ಇದು ಎಷ್ಟು ಒಳ್ಳೆಯದು ಅಥವಾ ಕೆಟ್ಟದು ಎನ್ನುವುದು ತಿಳಿದುಕೊಳ್ಳಬೇಕಷ್ಟೇ.

  English summary

  6 breakfast cereals healthier than others

  A wholesome breakfast it would make for, while staving off your urge for midday snacking. Even those maintaining a workout routine can derive maximum benefit from this habit, as it also helps them get past their weight loss plateau.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more