For Quick Alerts
ALLOW NOTIFICATIONS  
For Daily Alerts

ನಡುಗೆಯೇನು ಸಾಮಾನ್ಯ ಅಂದುಕೊಂಡಿರಾ?

By Super
|

ನಾವು ಆರೋಗ್ಯದಿಂದಿರಲು ಮತ್ತು ತೂಕವನ್ನು ಕಮ್ಮಿಮಾಡಿಕೊಳ್ಳಲು ವಾಕಿಂಗ್ ಮಾಡುವುದಕ್ಕಿಂತಾ ಬೇರೆ ಯಾವ ವ್ಯಾಯಾಮಗಳಿಲ್ಲ. ವಾಕಿಂಗ್ ಮಾಡುವುದು ಸರಳ, ಸುಲಭ ಮತ್ತು ವಿನೋದವೂ ಆಗಿರುತ್ತದೆ. ಇದು ಹೆಚ್ಚು ಶ್ರಮವಿಲ್ಲದೆ ಯಾವಾಗಲೂ ಕಾರ್ಯನಿರತವಾಗಿರಲು ಮತ್ತು ಸೂಕ್ತವಾದ ಆರೋಗ್ಯದಿಂದರಲು ಬಯಸುವ ಎಲ್ಲಾ ವಯಸ್ಸಿನ ಜನರಿಗೆ ಒಂದು ಅತ್ಯುತ್ತಮ ಮಾರ್ಗ. ಈ ಒಂದು ವ್ಯಾಯಾಮಕ್ಕೆ ನಮಗೆ ಯಾವ ಉಪಕರಣಗಳ ಅಗತ್ಯವೂ ಸಹ ಇರುವುದಿಲ್ಲ ಮತ್ತು ಇದರಲ್ಲಿ ಸ್ವಲ್ಪವೂ ಸಂಶಯವಿಲ್ಲ.

ನಿಮ್ಮ ಸ್ಕೂಟರ್ ಅಥವಾ ಮೋಟಾರ್ ಸೈಕಲ್ಲನ್ನು ಆದಷ್ಟೂ ಪಕ್ಕಕ್ಕಿಟ್ಟು ನಿಮ್ಮಹತ್ತಿರ ಪೆಡೋಮೀಟರ್ ಇದ್ದರೆ ಅದನ್ನು ಧರಿಸಿ ನಿಮ್ಮ ಒಳ್ಳೆಯ ಆರೋಗ್ಯ ಮತ್ತು ಆರೋಗ್ಯಕರ ಜೀವನ ಬೇಕಿದ್ದರೆ ವಾಕಿಂಗ್ ಪ್ರಾರಂಭಿಸಿ.

 1: ನಿಮ್ಮ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ

1: ನಿಮ್ಮ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ

ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಅತಿ ದೊಡ್ಡ ಹಂತಕ - ಹೃದಯಕ್ಕೆ ತಗಲುವ ರೋಗವನ್ನು ತಡೆಯಬಹುದು. ನಿಯಮಿತವಾಗಿ ವಾಕಿಂಗ್ ಮಾಡುವವರಿಗೆ ಹೃದಯಕ್ಕೆ ತಗಲುವ ರೋಗದ ಬೆಳವಣಿಗೆಯನ್ನು ತಗ್ಗುವಹಾಗೆ ಮಾಡುತ್ತದೆ. ಅದಲ್ಲದೆ ನಿಯಮಿತ ವಾಕಿಂಗ್ ಮಾಡಿದಾಗ ಹೃದಯಾಘಾತ ಮತ್ತು ಬೈಪಾಸ್ ಚಿಕಿತ್ಸೆಯಾಗಿರುವವರು ಬಹಳ ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ಮತ್ತೊಂದು ಹೃದಯಾಘಾತವಾಗುವ ಪರಿಸ್ಥಿತಿಯನ್ನು ಕಡಿಮೆಮಾಡುತ್ತದೆ.

2: ಲೈಂಗಿಕ ಆರೋಗ್ಯಕ್ಕೆ ಉತ್ತೇಜನಕೊಡುತ್ತದೆ

2: ಲೈಂಗಿಕ ಆರೋಗ್ಯಕ್ಕೆ ಉತ್ತೇಜನಕೊಡುತ್ತದೆ

ಚುರುಕಾದ ವಾಕಿಂಗ್ ಪ್ರತಿದಿನವೂ ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮ ಸಂಗಾತಿಯೊಡನೆ ಲೈಂಗಿಕ ಚಟುವಟಿಕೆಗಳಿಗೆ ಉತ್ತೇಜನಕೊಡುತ್ತದೆ. ವಾಕಿಂಗ್ ನಿಮ್ಮ ರಕ್ತಚಲನೆಯನ್ನು ವೃದ್ಧಿಸುತ್ತದೆ.

3: ನಿಮ್ಮ ದೇಹವು ಆರೋಗ್ಯಪೂರ್ಣವಾಗಿರುತ್ತದೆ

3: ನಿಮ್ಮ ದೇಹವು ಆರೋಗ್ಯಪೂರ್ಣವಾಗಿರುತ್ತದೆ

ನೀವು ಯೋಗ್ಯವಾದ ಆರೋಗ್ಯದಿಂದಿರಬೇಕಾದರೆ ಮತ್ತು ನಿಮ್ಮ ಭೌತಿಕ ಚಟುವಟಿಕೆಗಳಿಗೆ ಸಮಯವಿಲ್ಲದಿದ್ದರೆ ಆಗ ನಿಮಗೆ ಬಿಡುವು ಸಿಕ್ಕಿದಾಗೆಲ್ಲಾ ವಾಕಿಂಗ್ ಮಾಡಿರಿ. ಉತ್ತಮ ಅರೋಗ್ಯದಿಂದರಲು ನಿಯಮಿತ ವಾಕಿಂಗ್ ಮಾಡುವುದು ಅತ್ಯಂತ ಸರಳವಾದ ಮಾರ್ಗ.

4: ವಾಕಿಂಗ್ ಏರೋಬಿಕ್ ವ್ಯಾಯಾಮದ ರೂಪವಾಗಿದೆ

4: ವಾಕಿಂಗ್ ಏರೋಬಿಕ್ ವ್ಯಾಯಾಮದ ರೂಪವಾಗಿದೆ

ನಿಯಮಿತ ವಾಕಿಂಗ್ ಮಾಡುವುದು ಒಂದು ಏರೋಬಿಕ್ ವ್ಯಾಯಾಮವಾಗಿದ್ದು ಅದು ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುವುದು, ದೈಹಿಕವಾಗಿ ಯೋಗ್ಯವಾಗಿರುವಂತೆ ಮಾಡುವುದು ಮತ್ತು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯಮಾಡುತ್ತದೆ.

5: ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ

5: ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ

ನಿಯಮಿತ ವಾಕಿಂಗ್ ನಿಮ್ಮ ದೇಹವನ್ನು ಸರಿಪಡಿಸಲು ಮತ್ತು ಆರೋಗ್ಯದಿಂದಿರಲು ನಿಮ್ಮ ಉತ್ತಮ ಮನಸ್ಥಿತಿಯ ಅರಿವನ್ನುಂಟುಮಾಡುತ್ತದೆ. ಇದು ನಿಮ್ಮ ಜೈವಿಕ ಆರೋಗ್ಯ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಸಹಾಯಮಾಡುತ್ತದೆ.

6: ನಿಮ್ಮ ರಕ್ತದೊತ್ತಡ ಕಡಿಮೆ ಮಾಡುತ್ತದೆ

6: ನಿಮ್ಮ ರಕ್ತದೊತ್ತಡ ಕಡಿಮೆ ಮಾಡುತ್ತದೆ

ವಾಕಿಂಗ್ ಶಾರೀರಿಕ ಚಟುವಟಿಕೆಯಂತೆ ರೋಗಿಗಳಲ್ಲಿ ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. ಅಧಿಕ ರಕ್ತದೊತ್ತಡ ಒಂದು "ಮೂಕ ಕೊಲೆಗಾರ"ನಾಗಿರುವುದರಿಂದ ಈ ಸಮಸ್ಯೆಯಿಂದ ದೂರವಿರಲು ನಿಯಮಿತವಾಗಿ ವಾಕಿಂಗ್ ಮಾಡಲೇ ಬೇಕು. ವಾಕಿಂಗ್ ರಕ್ತಸಂಚಾರವನ್ನು ಉತ್ತಮಗೊಳಿಸಲು ಸಹಾಯಮಾಡುವುದಲ್ಲದೆ ಲಭ್ಯವಿರುವ ಆಮ್ಲಜನಕ (Oxygen) ವನ್ನು ಸ್ನಾಯುಗಳಿಗೆ ಒದಗಿಸುವುದರಿಂದ ರಕ್ತನಾಳಗಳಿಗೆ ಹೆಚ್ಚು ವಿಶ್ರಾಂತಿ ದೊರೆಯುತ್ತದೆ. ಹಾಗೂ ರಕ್ತದೊತ್ತಡವು ಸುಧಾರಿಸುತ್ತದೆ.

7: ನಿಮ್ಮ ಮೂಳೆಯ ಆರೋಗ್ಯ ಉತ್ತಮಗೊಳ್ಳುತ್ತದೆ

7: ನಿಮ್ಮ ಮೂಳೆಯ ಆರೋಗ್ಯ ಉತ್ತಮಗೊಳ್ಳುತ್ತದೆ

ವಾಕಿಂಗ್ ಮಾಡುವುದರಿಂದ ನಿಮ್ಮ ಮೂಳೆಯ ಸಾಂದ್ರತೆ ಹೆಚ್ಚಲು ಸಹಾಯಮಾಡುತ್ತದೆ. ಹಾಗೂ ಮೂಳೆಯ ಕ್ಷೀಣಿಸುವುದನ್ನು ನಿಧಾನಮಾಡುತ್ತದೆ. ಈ ಸರಳ ವ್ಯಾಯಾಮದಿಂದ ಬೆನ್ನುಮೂಳೆ, ಕಾಲುಗಳು ಮತ್ತು ಸೊಂಟದ ಭಾಗಗಳಿಗೆ ತುಂಬಾ ಒಳ್ಳೆಯ ಪ್ರಭಾವಬೀಳುತ್ತದೆ.

 8: ಮಧುಮೇಹದ ಆಪತ್ತನ್ನು ಕಡಿಮೆ ಮಾಡುತ್ತದೆ

8: ಮಧುಮೇಹದ ಆಪತ್ತನ್ನು ಕಡಿಮೆ ಮಾಡುತ್ತದೆ

ಮಧುಮೇಹದಿಂದ ಬಳಲುತ್ತಿರುವವರು ನಿಯಮಿತ ವಾಕಿಂಗ್ನಿಂದ ಬಿ.ಎಮ್.ಐ.(Body and Mass Index) ಮಟ್ಟವನ್ನು ಸುಧಾರಿಸಲು ಸಹಾಯಮಾಡುತ್ತದೆ ಮತ್ತು ದೇಹದಲ್ಲಿರುವ ಇನ್ಸುಲಿನ್ ಸರಿಯಾದ ಮಟ್ಟದಲ್ಲಿಟ್ಟುಕೊಳ್ಳಲು ಸಹಾಯಮಾಡುತ್ತದೆ. ಇದರಿಂದ ಇನ್ಸುಲಿನ್ ಸಮರ್ಥವಾಗಿ ಬಳಕೆಯಾಗುವುದಲ್ಲದೆ ಸಕ್ಕರೆಯ ಮಟ್ಟವನ್ನು ಸುಧಾರಿಸಲು ಸಹಾಯವಾಗುತ್ತದೆ.

9: ಖಿನ್ನತೆಯಿಂದ ಕೊರಗುವುದನ್ನು ತಡೆಗಟ್ಟುತ್ತದೆ

9: ಖಿನ್ನತೆಯಿಂದ ಕೊರಗುವುದನ್ನು ತಡೆಗಟ್ಟುತ್ತದೆ

ವಾಕಿಂಗ್ ಮಾಡುವುದರಿಂದ ನಿಮ್ಮ ಮನಸ್ಥಿತಿಯು ವೃದ್ಧಿಸುತ್ತದೆ ಮತ್ತು ಖಿನ್ನತೆಯನ್ನು ತಡೆಯಲು ಸಹಾಯಮಾಡುತ್ತದೆ. ಅಲ್ಲದೆ ನಿಯಮಿತವಾಗಿ ವಾಕಿಂಗ್ ಮಾಡುವವರು ಖಿನ್ನತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಬಲ್ಲರು.

10: ಜಾಗೃತಾವಸ್ತೆಯನ್ನು ಹೆಚ್ಚಿಸುತ್ತದೆ

10: ಜಾಗೃತಾವಸ್ತೆಯನ್ನು ಹೆಚ್ಚಿಸುತ್ತದೆ

ಈ ಸರಳ ಏರೋಬಿಕ್ ವ್ಯಾಯಾಮ ಕೂಡ ನಿಮ್ಮ ಮನಸ್ಸಿನ ಜಾಗರೂಕತೆ ಸುಧಾರಿಸಲು ಸಹಾಯ ಮಾಡುತ್ತದೆ. ವಾಕಿಂಗ್ನಿಂದ ಮೆದುಳಿಗೆ ಆಮ್ಲಜನಕದ ಪರಿಚಲನೆ ಮತ್ತು ಲಭ್ಯತೆಯನ್ನು ಸುಧಾರಿಸಿ ಜಾಗೃತಾವಸ್ಥೆಯನ್ನು ಹೆಚ್ಚಿಸುತ್ತದೆ. ಮಾನಸಿಕ ಜಾಗರೂಕತೆಗೆ ಮತ್ತೊಂದು ಕಾರಣ ವಾಕಿಂಗ್ ಮಾಡುವಾಗ ಬಿಡುಗಡೆಯಾಗುವ ಮೂತ್ರಜನಕಾಂಗೀಯ ರಾಸಾಯನಿಕಗಳು.

11: ನಿದ್ರೆಯನ್ನು ಸುಧಾರಿಸುತ್ತದೆ

11: ನಿದ್ರೆಯನ್ನು ಸುಧಾರಿಸುತ್ತದೆ

ವಾಕಿಂಗ್ ಹಗಲಿನ ಶಕ್ತಿಯನ್ನು ವೃದ್ಧಿಸಲು ಸಹಾಯಮಾಡುತ್ತದೆ. ಇದರಿಂದ ದೀರ್ಘವಾದ ಮತ್ತು ಗಾಢವಾದ ನಿದ್ರೆಮಾಡಲು ಸಹಾಯವಾಗುತ್ತದೆ. ನಿಮಗೆ ಒಳ್ಳೆಯ ನಿದ್ರೆ ಬರಬೇಕೆಂದಿದ್ದರೆ ನಿಮ್ಮ ವಾಕಿಂಗ್ ಮಾಡುವುದನ್ನು ನಿದ್ರೆ ಮಾಡುವ ಮೊದಲು ಯೋಜನೆಯನ್ನು ಹಾಕಿಕೊಳ್ಳಿರಿ.

12: ಒತ್ತಡವನ್ನು ತಡೆಗಟ್ಟುತ್ತದೆ

12: ಒತ್ತಡವನ್ನು ತಡೆಗಟ್ಟುತ್ತದೆ

ವಾಕಿಂಗ್ ಮಾಡುವುದರಿಂದ ನಿಮ್ಮ ಆತಂಕಗಳನ್ನು ಮತ್ತು ಒತ್ತಡಗಳನ್ನು ತಡೆಯುವಮೂಲಕ ನಿಮಗೆ ಉತ್ತಮ ಮಾನಸಿಕ ಸ್ಥಿತಿಯನ್ನು ತರುತ್ತದೆ. ನಿಮಗೆ ಒತ್ತಡದ ಭಾವಬಂದಲ್ಲಿ ಹೊರಾಂಗಣಕ್ಕೆ ಹೋಗಿ ವಾಕಿಂಗ್ ಮಾಡಿ. ವಾಕಿಂಗ್ ಮತ್ತು ತಾಜಾ ಗಾಳಿಯ ಸಂಯೋಜನೆಯಿಂದ ನಿಮ್ಮ ಮನಸ್ಥಿತಿ ತಕ್ಷಣವೇ ವರ್ಧಿಸಿ ನೀವು ವಿಶ್ರಾಂತಿ ತೆಗೆದುಕೊಳ್ಳುವಂತೆ ಮಾಡುತ್ತದೆ.

13: ಗರ್ಭಪಾತವಾಗುವುದನ್ನು ತಡೆಯುತ್ತದೆ

13: ಗರ್ಭಪಾತವಾಗುವುದನ್ನು ತಡೆಯುತ್ತದೆ

ಗರ್ಭಾವಸ್ಥೆಯಲ್ಲಿ ವಾಕಿಂಗ್ ಮಾಡಿದರೆ ಆಯಾಸ ಮತ್ತು ಇತರ ಗರ್ಭಾವಸ್ಥೆಗೆ ಸಬಂಧಪಟ್ಟ ಸಮಸ್ಯೆಗಳನ್ನು ಕದಿಮೆ ಮಾಡಲು ಸಹಾಯವಾಗುತ್ತದೆ. ಇದರಿಂದ ಸುಲಭವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಮತ್ತು ಗರ್ಭಧಾರಣೆಯ ಸಮಯದಲ್ಲಿ ಬರಬಹುದಾದ ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ. ವಾಕಿಂಗ್ ಮಾಡುವುದರಿಂದ ಗರ್ಭಪಾತವನ್ನು ತಡೆಯಬಹುದು.

 14: ದೇಹದ ಕೊಬ್ಬನ್ನು ಕಡಿಮೆಮಾಡುತ್ತದೆ

14: ದೇಹದ ಕೊಬ್ಬನ್ನು ಕಡಿಮೆಮಾಡುತ್ತದೆ

ವಾಕಿಂಗ್ ಮಾಡುವುದರಿಂದ ನೀವು ನಿಮ್ಮ ಆರೋಗ್ಯಕರ ತೂಕವನ್ನು ಕಾಪಾಡಲು ಸಹಾಯವಾಗುತ್ತದೆ. ಪ್ರತಿದಿನ ಸುಮಾರು 5000 ಹೆಜ್ಜೆಯ ವಾಕಿಂಗ್ ಮಾಡಿದರೆ ದೇಹದ ಒಟ್ಟಾರೆ ಕೊಬ್ಬು ಮತ್ತು ತೂಕವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.

15: ದೇಹಬಲವನ್ನು ಬೆಳೆಸುತ್ತದೆ

15: ದೇಹಬಲವನ್ನು ಬೆಳೆಸುತ್ತದೆ

ಒಂದು ನಿಯಮಿತ ವೇಗದ ವಾಕಿಂಗ್ ಕಾಯ್ದುಕೊಂಡುಹೋಗುವಲ್ಲಿ ಮಾಂಸಖಂಡಗಳ ಶಕ್ತಿ ಮತ್ತು ಸಹಿಷ್ಣುತೆಯನ್ನು ಸುಧಾರಿಸಲು ಸಹಾಯವಾಗುತ್ತದೆ. ಇದಲ್ಲದೆ ನಿಮ್ಮ ವೈಯುಕ್ತಿಕ ಬಲ ಸಾಮರ್ಥ್ಯವನ್ನು ನಿರ್ಮಿಸಲು ಸಹಾಯಮಾಡುತ್ತದೆ.

16: ನಿಮ್ಮ ಯೌವನವನ್ನು ಮರುಪಡೆಯಬಹುದು

16: ನಿಮ್ಮ ಯೌವನವನ್ನು ಮರುಪಡೆಯಬಹುದು

ವಾಕಿಂಗ್ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ಶರೀರಕ್ಕೆ ಒಳ್ಳೆಯ ಬಲವರ್ಧಕ ಸಾಧನವಾಗಿದೆ. ಇದು ಒತ್ತಡ, ಆತಂಕ ಮತ್ತು ಖಿನ್ನತೆಗಳನ್ನು ಕಡಿಮೆಮಾಡುವ ಮೂಲಕ ನಿಮ್ಮನ್ನು ಪುನರ್ಯೌವನಗೊಳಿಸಲು ಸಹಾಯಮಾಡುತ್ತದೆ. ಅಲ್ಲದೆ ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಭಾವದಿಂದ ಜೀವಿಸಲು ಮತ್ತೆ ಉತ್ತೇಜನಕೊಡುತ್ತದೆ. ವಾಕಿಂಗ್ ನಿಮ್ಮ ಮನಸ್ಥಿತಿಯನ್ನು ಚುರುಕುಗೊಳಿಸುವುದಲ್ಲದೆ ನಿಮ್ಮಲ್ಲಿ ಉತ್ಸಾಹವನ್ನು ತುಂಬುತ್ತದೆ.

17: ನಿಮ್ಮ ಆಯಸ್ಸನ್ನು ಹೆಚ್ಚಿಸುತ್ತದೆ.

17: ನಿಮ್ಮ ಆಯಸ್ಸನ್ನು ಹೆಚ್ಚಿಸುತ್ತದೆ.

ನಿಯಮಿತವಾದ ವಾಕಿಂಗ್ ನಿಮ್ಮ ಆಯಸ್ಸನ್ನು ಹೆಚ್ಚಿಸಲು ನೆರವಾಗುತ್ತದೆ. ಇನ್ನೂ ಮುಖ್ಯವಾಗಿ ವಯಸ್ಸಿಗೆ ಸಂಬಂಧಿಸಿದ ವಿವಿಧ ಪರಿಸ್ಥಿತಿಗಳನ್ನು, ಅಂದರೆ ಅಸ್ತಿಸಂಧಿವಾತ, ಇತ್ಯಾದಿ ಇಂತಹ ಸನ್ನಿವೇಶಗಳನ್ನು ತಡೆಯಲು ಸಹಾಯಮಾಡುತ್ತದೆ.

18: ನಿಮ್ಮ ದೇಹಾರೋಗ್ಯವನ್ನು ಕ್ರಮಪಡಿಸಬಹುದು

18: ನಿಮ್ಮ ದೇಹಾರೋಗ್ಯವನ್ನು ಕ್ರಮಪಡಿಸಬಹುದು

ಕರಾರುವಾಕ್ ವಾಕಿಂಗ್ ನಿಂದ ನಿಮ್ಮ ಶರೀರದ ಆಕಾರ ಮತ್ತು ಕಾಲುಗಳ ಆಕಾರಗಳನ್ನು ಉತ್ತಮಗೊಳಿಸಲು ಸಹಾಯವಾಗುತ್ತದೆ. ಹಾಗೂ ಇದು ನಿಮ್ಮ ಮೊಣಕಾಲುಗಳು, ಕುಳಿತುಕೊಳ್ಳುವ ನಿಮ್ಮ ಕೆಳಭಾಗದ ಮೂಳೆಗಳು, ಮಂಡಿಯ ಹಿಂಭಾಗದಲ್ಲಿರುವ ಸ್ನಾಯು ರಜ್ಜುಗಳು ಇವುಗಳಿಗೆ ಅತ್ಯಂತ ಸಹಕಾರ ನೀಡಿ ನಿಮ್ಮ ನಡಿಗೆಯ ಘನತೆಯನ್ನು ಹೆಚ್ಚುತ್ತದೆ.

ಆದಾಗ್ಯೂ ನೇರ ಮತ್ತು ನೇರ ನಡಿಗೆ ಸಹ ನಿಮ್ಮ ಕಿಬ್ಬೊಟ್ಟೆಗೆ ಸಹಾಯವಾಗುವುದಲ್ಲದೆ ಸೊಂಟ ನೆಟ್ಟಗೆ ಇರುವುದಕ್ಕೆ ಸಹಾಯಮಾಡುತ್ತದೆ.

 20: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

20: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ಒಂದು ಸರಳ ವಾಕಿಂಗ್ ನಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗಲು ಸಹಾಯವಾಗುದಲ್ಲದೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ವಾಕಿಂಗ್ ಮಾಡುವುದರಿಂದ ದಿನಕ್ಕೆ ಸುಮಾರು 300 ಕ್ಯಾಲೋರಿ ಸುಟ್ಟುಹಾಕುವುದಲ್ಲದೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಲು ಸಹಾಯಮಾಡುತ್ತದೆ.

English summary

Top 20 health benefits of walking

Walking is one of the simplest, easiest and fun ways to stay healthy and lose weight. It is ideal for people of all age group, who want to stay active and fit without much effort. So skip your two wheelers, wear your pedometer and begin your journey to good health and healthy life with each step.
X
Desktop Bottom Promotion