For Quick Alerts
ALLOW NOTIFICATIONS  
For Daily Alerts

ಸ್ಲಿಮ್ ಅಂಡ್ ಫಿಟ್ ದೇಹ ಸೌಂದರ್ಯ ನಿಮ್ಮದಾಗಬೇಕೆ?

|

ಮಾಡಲ್ ಗಳ ಬಿಕಿನಿ ಮೈಮಾಟವನ್ನು ನೋಡುವಾಗ ಇಷ್ಟೊಂದು ಆಕರ್ಷಕವಾದ ಮೈಮಾಟ ಪಡೆಯುವುದು ಹೇಗೆ ಎಂಬ ಯೋಚನೆ ಬರುತ್ತದೆ, ನಮ್ಮ ಈ ಬೊಜ್ಜನ್ನು ಕರಗಿಸಿ ಈ ರೀತಿಯ ಮೈಕಟ್ಟು ಪಡೆಯಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತೇವೆ ಅಲ್ವಾ? "ಬಿಕಿನಿ ದೇಹ" ಎಂಬುದು ಕಡಲಿನಿಂದ ಪ್ರೇರಿತವಾದ ಒಂದು ಕಲ್ಪನೆಯಾಗಿದೆ. ಬೀಚ್ ಗೆ ಪ್ರವಾಸ ಹೋಗುವಾಗ, ಟೂ ಪೀಸ್ ನಲ್ಲಿ ಕಾಣಿಸಿಕೊಳ್ಳುವ ಯೋಚನೆಯೇನಾದರೂ ನಿಮ್ಮ ಮನದಲ್ಲಿ ಮೂಡಿದ್ದರೆ, ಈ ಬರಹವನ್ನು ನೀವು ಖಂಡಿತಾ ಮೆಚ್ಚುವಿರಿ. ಆದರೆ, ನೀವು ಒಂದು ವಿಷಯವನ್ನು ಮಾತ್ರ ನೆನಪಿಟ್ಟುಕೊಳ್ಳಲೆಬೇಕು. ಟೂ ಪೀಸ್ ಅನ್ನು ಧರಿಸಿಕೊಳ್ಳುವುದು ಅಂತಹ ದೊಡ್ಡ ವಿಷಯವೇನಲ್ಲ. ಆದರೆ, ಆ ಟೂ ಪೀಸ್ ಅನ್ನು ಧರಿಸಿಕೊಂಡ ಬಳಿಕವೂ ನೀವು ಆ ಉಡುಗೆಯಲ್ಲಿ ಮಾದಕವಾಗಿ ಕಾಣಬೇಕಾದರೆ ಮಾತ್ರ ನೀವು ಒಂದಿಷ್ಟು ಪರಿಶ್ರಮವನ್ನು ಪಡಲೇಬೇಕಾಗುತ್ತದೆ.

ಮತ್ಸ್ಯ ಕನ್ಯೆಯಂತೆ ಸೆಕ್ಸಿಯಾಗಿ, ಜೊತೆಗೆ ಅರೋಗ್ಯಯುತವಾಗಿ ಕಾಣಿಸಿಕೊಳ್ಳುವoತಾಗಬೇಕಾದರೆ, ನೀವು ಮೊದಲು ಅತಿಯಾದ ಉಪವಾಸ ಅಥವಾ ಅತಿಯಾದ ಆಹಾರ ಸೇವನೆಯ ಅಭ್ಯಾಸಕ್ಕೆ ಬಲಿಯಾಗದಂತೆ ಎಚ್ಚರವಹಿಸಿ. ಅತ್ಯುತ್ತಮ ಫಲಿತಾಂಶವನ್ನು ಸಾಧಿಸಲು, ನೀವು ಆರೋಗ್ಯಯುತವಾದ ಜೀವನ ಶೈಲಿಯನ್ನು ಸಾಧಿಸಬೇಕಾಗುತ್ತದೆ. ಸ್ಲಿಮ್ ಅಂಡ್ ಫಿಟ್ ದೇಹವನ್ನು ಹೊಂದಲು ಪೂರಕವಾಗುವಂತಹ ಕೆಲವು ಅತ್ಯುತ್ತಮ ತಾಲೀಮುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

1 . ಕೆಲವು ಶಕ್ತಿವರ್ಧಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಿರಿ

1 . ಕೆಲವು ಶಕ್ತಿವರ್ಧಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಿರಿ

ಪರಿಪೂರ್ಣವಾದ ಸ್ಲಿಮ್ ಅಂಡ್ ಫಿಟ್ ದೇಹವನ್ನು ಪಡೆಯಲೇಬೇಕೆಂಬ ಹಠದಿಂದ, ಅತೀ ಕಠಿಣವಾದ ವ್ಯಾಯಾಮಗಳಲ್ಲಿ ಘಂಟೆಗಟ್ಟಲೆ ತೊಡಗಿಸಿಕೊಳ್ಳಬೇಡಿರಿ. ಅತಿಯಾಗಿ ಬೆವರುವಂತೆ ಮಾಡುವ, ಕೊನೆಯಿಲ್ಲದ ನಿಮ್ಮ ದೈಹಿಕ ಶ್ರಮವು ನಿಮಗೆ ಇಚ್ಚಿತ ಫಲಿತಾಂಶವನ್ನು ನೀಡುವುದಿಲ್ಲ, ಬದಲಾಗಿ, ನೀವು ಆಯಾಸದಿಂದ ಬಳಲುವಂತೆ, ಕುಗ್ಗಿಹೋಗುವoತೆ ಮಾಡುತ್ತದೆ. ಇದಕ್ಕೆ ಬದಲಾಗಿ, ಹೃದಯ ಸಂಬಂಧೀ ವ್ಯಾಯಾಮಗಳನ್ನು, ಅರ್ಥಾತ್ ಹೃದಯವನ್ನು ಹೆಚ್ಚು ಶ್ರಮಕ್ಕೊಳಪಡಿಸುವ ವ್ಯಾಯಾಮವನ್ನು ಮಿತವಾಗಿ ಮಾಡಿರಿ ಹಾಗೂ ಕೆಲವು ಶಕ್ತಿಯನ್ನು ಪ್ರಚೋದಿಸುವ ಕ್ರಿಯೆಗಳಲ್ಲಿ, ಆರಂಭದ ಹಂತದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು.

ಇಂತಹ ಶಕ್ತಿ ಪ್ರಚೋದಕ ತರಬೇತಿ ಕಾರ್ಯದಲ್ಲಿ ವಾರಕ್ಕೆ ಕನಿಷ್ಟ ಎರಡು ಬಾರಿಯಾದರೂ ತೊಡಗಿಕೊಳ್ಳಿರಿ ಹಾಗೂ ಕೇವಲ ನಿಮ್ಮ ಶರೀರದ ಯಾವುದೋ ಒಂದು ನಿರ್ಧಿಷ್ಟ ಸ್ನಾಯುವಿನತ್ತ ಮಾತ್ರವೇ ಗಮನವನ್ನು ಕೇoದ್ರೀಕರಿಸದೇ, ನಿಮ್ಮ ಸಂಪೂರ್ಣ ಶರೀರವನ್ನು ಗಮನದಲ್ಲಿರಿಸಿಕೊಳ್ಳಿರಿ.

2. ಶಾಪಿಂಗ್ ನ ಅವಧಿಯಲ್ಲಿ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳಿರಿ

2. ಶಾಪಿಂಗ್ ನ ಅವಧಿಯಲ್ಲಿ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳಿರಿ

ಜಿಮ್ ಗೆ ತೆರಳಲು ಸಮಯದ ಅಭಾವವೇ ?! ಹಾಗಿದ್ದಲ್ಲಿ ತುಸು ಜಾಣರಾಗಿರಿ ಮತ್ತು ದಿನಸಿಯ ಶಾಪಿಂಗ್ ನಲ್ಲಿ ತೊಡಗಿಸಿಕೊಳ್ಳಿರಿ. ನಿಮ್ಮ ತೋಳುಗಳನ್ನು ಶಕ್ತಿಯುತವಾಗಿರಿಸಲು, ದಿನಸಿ ವಸ್ತುಗಳು ತುಂಬಿರುವ ಚೀಲವನ್ನು ಹೊತ್ತುಕೊಂಡು ಓಡಾಡಿರಿ. ಒಂದೇ ಕೈಗೆ ಉoಟಾಗುವ ಶ್ರಮವನ್ನು ತಪ್ಪಿಸಲು, ಆಗಾಗ್ಗೆ, ನಿಮ್ಮ ದಿನಸಿ ಚೀಲವನ್ನು ಒಂದು ಕೈನಿಂದ ಮತ್ತೊಂದು ಕೈಗೆ ವರ್ಗಾಯಿಸುತ್ತಿರಿ. ಇದರ ಜೊತೆಗೆ ಇಂತಹ ತುಸು ಭಾರವಾದ ಚೀಲವನ್ನು ಹೊತ್ತುಕೊಂಡು ಮಾರುಕಟ್ಟೆಯಲ್ಲಿ ನೀವು ಬಿರುಸಾದ ನಡಿಗೆಯಲ್ಲಿ ತೊಡಗಿಕೊಂಡರೆ, ಅದೂ ಕೂಡ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

3. ನಿಮ್ಮ ಅವಶ್ಯಕತೆಯನ್ನು ಮನಗಾಣಿರಿ

3. ನಿಮ್ಮ ಅವಶ್ಯಕತೆಯನ್ನು ಮನಗಾಣಿರಿ

ದೃಢತೆಯನ್ನು ಹೊಂದಲು ಕೈಗೊಳ್ಳುವ ಯಾವುದೇ ಮಾರ್ಗವನ್ನು ಅನುಸರಿಸುವ ಮೊದಲು ನಿಮ್ಮನ್ನೇ ನೀವು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ನಾನು ನಿಜಕ್ಕೂ ದೃಢಕಾಯನಾಗಿದ್ದೇನೆಯೇ? ತೂಕವನ್ನು ಕಳೆದುಕೊಳ್ಳುವ ಅವಶ್ಯಕತೆಯು ನನಗಿದೆಯೇ? ಹೌದಾದರೆ ಎಷ್ಟು ತೂಕವನ್ನು ಕಳೆದುಕೊಳ್ಳಬೇಕು? ದೇಹದ ಯಾವ ಭಾಗ ಅಥವಾ ಸ್ನಾಯುವಿನತ್ತ ಹೆಚ್ಚು ಗಮನಹರಿಸಬೇಕು ? ಈ ಎಲ್ಲಾ ಪ್ರಶ್ನೆಗಳಿಗೆ ನೀವು ಉತ್ತರವನ್ನು ಪಡೆದುಕೊoಡಾಗ, ಸ್ಲಿಮ್ ಅಂಡ್ ಫಿಟ್ ಮೈಕಟ್ಟಿಗೆ ಆಹಾರಕ್ರಮದ ಬಗ್ಗೆ ಮತ್ತು ನೀವು ಕೈಗೊಳ್ಳಬೇಕಾಗಿರುವ ವ್ಯಾಯಾಮದ ಬಗ್ಗೆ ಯೋಜನೆಯನ್ನು ರೂಪಿಸಲು ನಿಮಗೆ ಸುಲಭವಾಗುತ್ತದೆ.

4 . ಸುದೀರ್ಘವಾಗಿ ಕೈಕಾಲುಗಳನ್ನು ಚಾಚುವುದರ ಮೂಲಕ cellulite ಅನ್ನು ನಿವಾರಿಸಿರಿ

4 . ಸುದೀರ್ಘವಾಗಿ ಕೈಕಾಲುಗಳನ್ನು ಚಾಚುವುದರ ಮೂಲಕ cellulite ಅನ್ನು ನಿವಾರಿಸಿರಿ

ಇತರ ಯಾವುದೇ ಕೊಬ್ಬಿನ ಸಂಚಯನದಂತೆ, cellulite ಕೂಡ ನಿಮ್ಮ ಆಸೆಗೆ ಸಂಪೂರ್ಣ ತಿಲಾಂಜಲಿ ಇಡುವಂತೆ ಮಾಡಬಹುದು. ಈ cellulite ನ ನಿವಾರಣೆಗಾಗಿ, ನಿಮ್ಮ ಶರೀರವನ್ನು, ವಿಶೇಷವಾಗಿ ನಿಮ್ಮ ಕೈ, ಕಾಲುಗಳನ್ನು ದೀರ್ಘವಾಗಿ ಎಳೆಯುವುದಕ್ಕೆ ಅಥವಾ ಚಾಚುವುದಕ್ಕೆ ಪ್ರಯತ್ನಿಸಿರಿ. ಹೀಗೆ ಮಾಡುವುದರಿಂದ ನಿಮ್ಮ ದೇಹದ ಸ್ನಾಯುಗಳ ಉದ್ದಳತೆಯಲ್ಲಿ ಬದಲಾವಣೆಯಾಗುತ್ತದೆ ಹಾಗೂ ಇದರಿಂದ ನಿಮ್ಮ ಶರೀರದಲ್ಲಿರುವ ಕೊಬ್ಬಿನಂಶವು ಎಲ್ಲಾ ಭಾಗಗಳಿಗೂ ಹಂಚಲ್ಪಟ್ಟು, ನಿಮ್ಮ ಶರೀರದ ಯಾವುದೋ ಒಂದು ಭಾಗ ಮಾತ್ರ ಕೊಬ್ಬಿನಿಂದ ಊದಿಕೊಳ್ಳುವುದನ್ನು ತಡೆಯುತ್ತದೆ.

ಸುದೀರ್ಘ ಶ್ವಾಸೋಚ್ವಾಸದೊoದಿಗೆ, ನಿಮ್ಮ ಸ್ನಾಯುಗಳ ಚಾಚುವಿಕೆಯನ್ನು ಕನಿಷ್ಟ 2 ರಿಂದ 3 ನಿಮಿಷಗಳ ಕಾಲ ಮಾಡಲು ಪ್ರಯತ್ನಿಸಿರಿ. ಇದಕ್ಕೂ ಹೆಚ್ಚು ಸಾಧ್ಯವಿಲ್ಲ ಎನ್ನಿಸುವಷ್ಟರಮಟ್ಟಿಗೆ ನಿಮ್ಮ ಕೈಕಾಲುಗಳನ್ನು ಚಾಚಲು, ಎಳೆಯಲು ಪ್ರಯತ್ನಿಸಿರಿ. ಇದು ನಿಮ್ಮ ಶರೀರದ ಬಾಗುವಿಕೆಯನ್ನು, ನಿಮ್ಮ ಸ್ನಾಯುಗಳ ಉದ್ದಳತೆಯನ್ನು ಹೆಚ್ಚಿಸಲು ಹಾಗೂ ನಿಮ್ಮ ದೇಹದ ಎಲ್ಲ cellulite ಗಳನ್ನು ನಿವಾರಿಸಲು ನೆರವಾಗುತ್ತದೆ.

5 . ಆರೋಗ್ಯಯುತ ಅಹಾರಕ್ರಮವನ್ನು ಪಾಲಿಸಿರಿ

5 . ಆರೋಗ್ಯಯುತ ಅಹಾರಕ್ರಮವನ್ನು ಪಾಲಿಸಿರಿ

ನೀವು ಜಿಮ್ ನಲ್ಲಿ 2 ತಾಸುಗಳನ್ನು ಕಳೆದು ಹೊರಬಂದ ನಂತರ ಜಂಕ್ ಫುಡ್ ಗಳನ್ನು ತಿನ್ನುವವರಾಗಿದ್ದರೆ, ಅಂತ್ಯದಲ್ಲಿ ಅನಿಷ್ಟ ಫಲಿತಾಂಶಗಳು ಉಂಟಾದರೆ, ಬಹುಶಃ ನೀವು ನಂತರ ಯಾವುದೋ ಬೆಡಗಿಯ ಕನಸು ಕಾಣುತ್ತಾ ಅವಳಂತೆ ಆಗಲು ಬಯಸಿದರೆ ಅದಕ್ಕೆ ಅರ್ಥವಿರುವುದಿಲ್ಲ. ಕೇವಲ ವ್ಯಾಯಾಮದಿಂದ ಮಾತ್ರವೇ ಎಲ್ಲವೂ ಸಾಧಿತವಾಗುವುದಿಲ್ಲ. ಯಾಕೆಂದರೆ, ಮಾದಕವಾದ ದೇಹವನ್ನು ಹೊಂದುವ ಕ್ರಿಯೆಯು ನಿಮ್ಮ ಆಹಾರಕ್ರಮದೊoದಿಗೂ ಕೂಡ ತಳುಕು ಹಾಕಿಕೊಂಡಿದೆ. ಆಹಾರವನ್ನೇ ಬಿಟ್ಟುಬಿಡುವ ಅಥವಾ ಸಿಕ್ಕಾಪಟ್ಟೆ ಜಂಕ್ ಆಹಾರಗಳನ್ನು ಸೇವಿಸುವoತಹ ಅತಿರೇಕಗಳನ್ನು ಬಿಟ್ಟುಬಿಡಿರಿ. ಬಾಯಲ್ಲಿ ನೀರೂರಿಸುವoತೆ ಮಾಡುವ ಸ್ಲಿಮ್ ಅಂಡ್ ಫಿಟ್ ದೇಹವನ್ನು ಪಡೆಯಲು ವ್ಯಾಯಾಮದೊಂದಿಗೆ, ನಿಮ್ಮ ಜೀವನಶೈಲಿಯಲ್ಲಿ ಆರೋಗ್ಯಯುತವಾದ ಆಹಾರ ಸೇವನೆಯ ಹವ್ಯಾಸವನ್ನೂ ಕೂಡ ರೂಢಿಸಿಕೊಳ್ಳಬೇಕು.

6. ಮಾದಕವಾದ ತೊಡೆಗಳಿಗಾಗಿ

6. ಮಾದಕವಾದ ತೊಡೆಗಳಿಗಾಗಿ

ಮಾಟವಾದ, ಸೆಕ್ಸಿಯಾದ ತೊಡೆಗಳಿಲ್ಲದಿದ್ದರೆ, ನಿಮ್ಮ ಸ್ಲಿಮ್ ಅಂಡ್ ಫಿಟ್ ದೇಹದ ಕಲ್ಪನೆಯು ಖಂಡಿತವಾಗಿಯೂ ಅಪೂರ್ಣವಾಗಿರುತ್ತದೆ. ಶಕ್ತಿಯುತವಾದ ತೊಡೆಗಳನ್ನು ಪಡೆಯಲು, ಕೆಲವು ಪೃಷ್ಟಕ್ಕೆ ಸಂಬoಧಿಸಿದ ವ್ಯಾಯಾಮಗಳು (hip exercises), ಕಾಲುಗಳ ಮೇಲೆ ನವಿರಾದ ಒತ್ತಡ ಹೇರುವುದು, ಮತ್ತು leg -curl ವ್ಯಾಯಾಮಗಳನ್ನು ಮಾಡಲು ಪ್ರಯತ್ನಿಸಿರಿ.

7 . Pilates

7 . Pilates

ಬಳುಕುವ, ಮಾಟವಾದ ಅಂಗಸೌಷ್ಟವವನ್ನು ಹೊಂದಲು ಬಯಸುವಿರಾದರೆ, ಕೆಲವು pilate (ದೈಹಿಕ ದೃಢತೆಗಾಗಿ ವಿಶೇಷ ಸಲಕರಣೆಗಳನ್ನು ಉಪಯೋಗಿಸಿ ಮಾಡುವ ವ್ಯಾಯಾಮ) ಗಳನ್ನು ಪ್ರಯತ್ನಿಸಿ. Pilate ವ್ಯಾಯಾಮದ ಒಂದು ವಿಧವಾಗಿದ್ದು, ಇದು ನಿಮ್ಮ ಸ್ನಾಯುಗಳಿಗೆ ಶಕ್ತಿಯನ್ನು ತುಂಬುವುದು ಮಾತ್ರವಲ್ಲದೆ, ನಿಮ್ಮ ದೇಹದ ಬಳುಕುವಿಕೆಯನ್ನೂ ಕೂಡ ಹೆಚ್ಚಿಸುತ್ತದೆ.

Pilate ವ್ಯಾಯಾಮಗಳು ನಿಮ್ಮ ಕಿಬ್ಬೊಟ್ಟೆ, ಬೆನ್ನಿನ ಕೆಳಭಾಗ, ಪೃಷ್ಟಗಳು, ಮತ್ತು ತೊಡೆಗಳು ಮಾತ್ರವಲ್ಲದೇ, ಹೆಚ್ಚು ಗಮನಿಸಲ್ಪಡಬೇಕಾದ ಪ್ರಮುಖ ಸ್ನಾಯುಗಳಿರುವ ದೇಹದ ಭಾಗಗಳ ಮೇಲೂ ಕೂಡ ಪ್ರಭಾವ ಬೀರುತ್ತದೆ. ಈ ತೆರನಾದ ವ್ಯಾಯಾಮಗಳು ಸರಳ ಮಟ್ಟದಿಂದ, ಕಠಿಣ ಮಟ್ಟದವರೆಗೆ ವ್ಯತ್ಯಾಸಗೊಳ್ಳುತ್ತವೆ. ನೀವು ಇಚ್ಚಿತ ಫಲಿತಾಂಶವನ್ನು ಪಡೆಯಲು ಮತ್ತು ಇಂತಹ ವ್ಯಾಯಾಮಗಳಿoದ ನಿಮ್ಮ ಶರೀರಕ್ಕೆ ಸಂಭವಿಸಬಹುದಾದ ಆಘಾತ ಅಥವಾ ಧಕ್ಕೆಯನ್ನು ತಪ್ಪಿಸಲು, ಇವುಗಳ ಪೈಕಿ ನಿಮಗೆ ಸೂಕ್ತವಾದ ಮಾದರಿಯ ವ್ಯಾಯಾಮವನ್ನು ಆರಿಸಿಕೊಳ್ಳುವುದು ಒಳ್ಳೆಯದು.

8. ಮೆಟ್ಟಿಲುಗಳನ್ನು ಉಪಯೋಗಿಸಿರಿ

8. ಮೆಟ್ಟಿಲುಗಳನ್ನು ಉಪಯೋಗಿಸಿರಿ

ಮಹಡಿಗಳನ್ನೇರಲು ಲಿಫ್ಟ್ ಅನ್ನು ಉಪಯೋಗಿಸುವುದನ್ನು ಬಿಟ್ಟುಬಿಡಿರಿ ಮತ್ತು ಎಲ್ಲೆಡೆಯೂ ಮೆಟ್ಟಿಲುಗಳನ್ನು ಬಳಕೆ ಮಾಡಿ. ಪ್ರತೀ ಮೆಟ್ಟಿಲನ್ನು ಏರುವಾಗಲೂ ಸಹ ನಿಮ್ಮ ಹೊಟ್ಟೆಯ ಭಾಗ ಮತ್ತು ಪೃಷ್ಟ ಭಾಗಗಳೂ ಕೂಡ ಈ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿರಿ. ಇದರಿಂದ ನಿಮ್ಮ ಪೃಷ್ಟ ಭಾಗದ ಸ್ನಾಯುವನ್ನು ಕ್ರಿಯಾಶೀಲವಾಗಿರಿಸಿದoತಾಗುತ್ತದೆ. ನಿಮ್ಮ ಭುಜಗಳ ಕಡೆಗೂ ಗಮನ ಹರಿಸಿರಿ. ಅವು ನಿಮ್ಮ ಪೃಷ್ಟಗಳೊಂದಿಗೆ ಸರಳರೇಖೆಯಲ್ಲಿರಬೇಕೇ ಹೊರತು, ಸಮತೋಲನವನ್ನು ಕಾಪಾಡುವುದಕ್ಕೋಸ್ಕರ ಬಾಗಿರಬಾರದು. ಇದು ವ್ಯಾಯಾಮದ ಅತಿ ಸರಳವಾದ ಒಂದು ವಿಧವಾಗಿದ್ದು, ಇದನ್ನು ಎಲ್ಲಿ ಬೇಕಾದರೂ ಕೈಗೊಳ್ಳಬಹುದು.

9. ಧಾರಾಳವಾಗಿ ನೀರನ್ನು ಕುಡಿಯಿರಿ

9. ಧಾರಾಳವಾಗಿ ನೀರನ್ನು ಕುಡಿಯಿರಿ

ಪ್ರತಿದಿನ ಮುಂಜಾನೆ ನೀವು ಕನಿಷ್ತ ಪಕ್ಷ ಒಂದು ಲೋಟದಷ್ಟಾದರೂ ನೀರು ಕುಡಿದಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಇದರಿಂದ ನಿಮ್ಮ ದೇಹದ ಎಲ್ಲಾ ಜೀವಕೋಶಗಳಿಗೂ ಆಮ್ಲಜನಕ ಮತ್ತು ನೀರಿನ ಲಾಭವು ದೊರೆತು ಅವು ಮರುಜೀವವನ್ನು ಪಡೆಯಲು ಸಹಾಯಕವಾಗುತ್ತದೆ. ಅತಿಯಾಗಿ ನೀರು ಕುಡಿಯುವುದು, ನಿಮಗೆ ಬೇಸರ ತರಿಸುತ್ತದೆ ಎಂದಾದರೆ, ನೀರಿಗೆ ಒಂದು ಸ್ವಲ್ಪ ಲಿಂಬೆ ರಸವನ್ನು ಸೇರಿಸಿರಿ. ಇದರಿಂದ ನೀರು ಹುಳಿಯಾಗಿ ರುಚಿಯಾಗುತ್ತದೆ ಅಲ್ಲದೇ ಲಿoಬೆಹಣ್ಣಿನ ರಸಯುಕ್ತ ನೀರು ತಲೆಸುತ್ತುವಿಕೆ ಮತ್ತು ಆಯಾಸವನ್ನೂ ದೂರ ಮಾಡುತ್ತದೆ.

10. ಸ್ಲಿಮ್ ಅಂಡ್ ಫಿಟ್ ದೇಹಕ್ಕಾಗಿ ಕೊನೆಯ ಕೆಲವು ಸೂತ್ರಗಳು

10. ಸ್ಲಿಮ್ ಅಂಡ್ ಫಿಟ್ ದೇಹಕ್ಕಾಗಿ ಕೊನೆಯ ಕೆಲವು ಸೂತ್ರಗಳು

ನೀವು ಸೇವಿಸುವ ಸೋಡಿಯಂನ ಪ್ರಮಾಣವು ನಿಜಕ್ಕೂ ಕಡಿಮೆ ಪ್ರಮಾಣದಲ್ಲಿರಲಿ ಹಾಗೂ ನಿಮ್ಮ ಆಹಾರಕ್ಕೆ ಯಾವುದೇ ರೀತಿಯಲ್ಲಿ ಹೆಚ್ಚಿನ ಉಪ್ಪನ್ನು ಸೇರಿಸಬೇಡಿರಿ.

11 . ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮ

11 . ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮ

ನಿಮ್ಮೆಲ್ಲಾ ಕೆಲಸ ಕಾರ್ಯಗಳ ಕೊನೆಯಲ್ಲಿ ಮಾತ್ರವೇ ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಬೇಕೇ ವಿನಃ ಕೆಲಸದ ಆರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಅಲ್ಲ.

12 . ಆಹಾರ

12 . ಆಹಾರ

ದಿನವೊಂದಕ್ಕೆ 5 ರಿಂದ 6 ಸಾರಿ ಸಣ್ಣ ಸಣ್ಣ ಘಟಕಗಳ ರೂಪದಲ್ಲಿ ಆಹಾರವನ್ನು ತೆಗೆದುಕೊಳ್ಳಿರಿ. ಹೀಗೆ ಮಾಡುವುದರಿಂದ ಚರ್ಬಿಯನ್ನು ದೂರವೇ ಇಟ್ಟನ್ತಾಗುತ್ತದೆ.

13. ಉಪಹಾರ

13. ಉಪಹಾರ

ನೀವು ಬೆಳಗ್ಗೆ ಎದ್ದ ಒಂದು ಘಂಟೆಯೊಳಗಾಗಿ ನಿಮ್ಮ ಉಪಹಾರವನ್ನು ಪೂರೈಸಿರಿ. ಇದು ನೀವು ಮತ್ಸ್ಯಕನ್ಯೆಯ ಮೈಮಾಟವನ್ನು ಹೊಂದಲು ಮತ್ತು ಆರೋಗ್ಯವಾಗಿರಲು ಅತಿ ಮುಖ್ಯವಾಗಿದೆ.

English summary

Top 13 Tips To Get Slim And Fit Body

If you want to a flaunt a fit, fabulous and healthy you this bikini season then make sure you don't fall prey to fasts and fad diets. To achieve best results you need to follow a healthy lifestyle and today we share some of the best exercise that will help you attain a fit and gorgeous bikini body.
X
Desktop Bottom Promotion