For Quick Alerts
ALLOW NOTIFICATIONS  
For Daily Alerts

ಮೂಡ್ ಬದಲಾಯಿಸುವ ಸೂಪರ್ ಆಹಾರಗಳು

By Hemanth Amin
|

ಛೇ ಇಂದು ನನ್ನ ಮೂಡ್ ಸರಿಯೇ ಇಲ್ಲ. ಯಾವುದರಲ್ಲೂ ಮನಸ್ಸಿಲ್ಲ ಎನ್ನುವುದನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಆದರೆ ಈ ಮೂಡ್ ಎಂದರೇನು? ಭಾವನೆಗಳು ಮತ್ತು ಹಾರ್ಮೋನುಗಳ ಅಸಮತೋಲನ ತೋರಿಸಲು ಮನುಷ್ಯ ಉಪಯೋಗಿಸುವ ಗುಣಲಕ್ಷಣವೇ ಈ ಮೂಡ್(ಮನೋಭಾವನೆ).
ಮೂಡ್ ಒಳ್ಳೆಯದು ಅಥವಾ ಕೆಟ್ಟದಾಗಿರಬಹುದು. ಇದು ತುಂಬಾ ಉತ್ತೇಜನಕ, ಅಸಮಾಧಾನ, ಇಂದ್ರಿಯ ಮತ್ತು ಪ್ರಣಯದ್ದಾಗಿರಬಹುದು. ಪ್ರತಿಯೊಂದು ಮೂಡ್ ಕೂಡ ನಾವಿರುವ ಪರಿಸ್ಥಿತಿ, ಅದರಲ್ಲಿ ಒಳಗೊಂಡಿರುವ ಜನರು ಮತ್ತು ನಾವು ಹಾದುಹೋಗುವ ಭಾವನೆಗಳನ್ನು ಅವಲಂಬಿಸಿದೆ.
ಆಹಾರದಿಂದ ಮೂಡ್ ನ್ನು ಬದಲಾಯಿಸಬಹುದು. ಕೆಲವೊಂದು ಆಹಾರಗಳು ನೀವು ತುಂಬಾ ರೋಮ್ಯಾಂಟಿಕ್ ಆಗುವಂತೆ, ಮತ್ತೆ ಕೆಲವೊಂದು ಆಹಾರ ನೀವು ತುಂಬಾ ಉತ್ತೇಜಿತರಾಗುವಂತೆ ಮಾಡಬಹುದು. ಒಳ್ಳೆಯ ಮೂಡ್ ಗೆ ಕೆಲವೊಂದು ಸೂಪರ್ ಫುಡ್ ಗಳಿವೆ. ಈ ಆಹಾರಗಳು ಮೂಡ್ ನ್ನು ಬದಲಾಯಿಸುತ್ತದೆ ಮತ್ತು ಕೆಟ್ಟ ಮೂಡನ್ನು ಒಳ್ಳೆಯ ಮೂಡ್ ಮಾಡುತ್ತದೆ. ಇದು ನಿಮ್ಮ ಮೂಡ್ ನ್ನು ಬದಲಾಯಿಸುವುದರೊಂದಿಗೆ ಆರೋಗ್ಯಕ್ಕೂ ಒಳ್ಳೆಯದು. ನಿಯಮಿತವಾಗಿ ಆರೋಗ್ಯಕರ ಆಹಾರ ಕ್ರಮ ಪಾಲಿಸುವುದರಿಂದ ನಿಮ್ಮ ಮೂಡ್ ಒಳ್ಳೆಯದಾಗಿ ನಿಮ್ಮನ್ನು ಸಂತಸ ಹಾಗೂ ಗೆಲುವಿನಿಂದ ಇರುವಂತೆ ಮಾಡುತ್ತದೆ.
ಒಳ್ಳೆಯ ಮೂಡ್ ಗಾಗಿ ಕೆಲವೊಂದು ಸೂಪರ್ ಫುಡ್ಸ್ ಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ. ಮೂಡ್ ನ್ನು ಒಳ್ಳೆಯದಾಗಿಸಲು ಈ ಆಹಾರಗಳು ಒಳ್ಳೆಯ ಪರಿಹಾರ.

1. ಡಾರ್ಕ್ ಚಾಕಲೇಟ್

1. ಡಾರ್ಕ್ ಚಾಕಲೇಟ್

ಮೂಡ್ ನ್ನು ಉತ್ತಮಗೊಳಿಸಲು ಡಾರ್ಕ್ ಚಾಕಲೇಟ್ ಅತ್ಯುತ್ತಮ ಸೂಪರ್ ಫುಡ್ ಎಂದು ಪರಿಗಣಿಸಲಾಗಿದೆ. ದೇಹದಲ್ಲಿ ಒತ್ತಡದಿಂದ ಉಂಟಾಗುವ ಹಾರ್ಮೋನ್ ಗಳನ್ನು ಕಡಿಮೆ ಮಾಡಿ ಒಳ್ಳೆಯ ಮೂಡ್ ನ ಹಾರ್ಮೋನ್ ಗಳನ್ನು ಹೆಚ್ಚಿಸುವ ಗುಣ ಡಾರ್ಕ್ ಚಾಕಲೇಟ್ ನ್ಲಲಿದೆ. ಮೂಡ್ ನ್ನು ಉತ್ತಮಪಡಿಸುವ ಈ ಚಾಕಲೇಟ್ ಒಳ್ಳೆಯ ರುಚಿ ಹೊಂದಿದೆ. ಮುಂದಿನ ಸಲ ನಿಮಗೆ ಮೂಡ್ ಸರಿಯಿಲ್ಲವೆಂದು ಅನಿಸಿದಾಗ ಒಂದು ಒಳ್ಳೆಯ ಚಾಕಲೇಟ್ ತಿನ್ನಿ. ಐಸ್ ಕ್ರೀಂ ಮತ್ತು ಪ್ಯಾನ್ ಕೇಕ್ ನಲ್ಲಿರುವ ಚಾಕಲೇಟ್ ಕೂಡ ನಿಮ್ಮ ಮೂಡ್ ಬದಲಾಯಿಸಬಹುದು.

2. ಆರೋಗ್ಯಕರ ಆಹಾರ

2. ಆರೋಗ್ಯಕರ ಆಹಾರ

ಪ್ರತೀ ದಿನ ಸಮತೋಲಿತ ಆಹಾರ ಸೇವನೆಯಿಂದ ಒತ್ತಡ ಕಡಿಮೆಯಾಗಿ ನಿಮ್ಮ ಮೂಡ್ ನ್ನು ಉತ್ತಮಪಡಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆರೋಗ್ಯಕರ ಆಹಾರ ಒಳ್ಳೆಯ ಸೂಪರ್ ಫುಡ್. ಇದು ನಿಮ್ಮ ಮೂಡ್ ನ್ನು ಉತ್ತಮಗೊಳಿಸಿ ನೀವು ಸಂತಸ ಮತ್ತು ಉತ್ತೇಜಿತರಾಗುವಂತೆ ಮಾಡುತ್ತದೆ. ಇದು ನಿಮ್ಮ ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಬೀರದು.

3. ಹಣ್ಣು, ತರಕಾರಿ ಮತ್ತು ಧಾನ್ಯಗಳು

3. ಹಣ್ಣು, ತರಕಾರಿ ಮತ್ತು ಧಾನ್ಯಗಳು

ಧಾನ್ಯಗಳಂತಹ ಇಡೀ ಆಹಾರ, ಹಣ್ಣು ಮತ್ತು ತರಕಾರಿಗಳು ನಿಮ್ಮ ಮೂಡ್ ಉತ್ತಮಪಡಿಸುತ್ತದೆ ಮತ್ತು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡಿ ನೀವು ಸಂತಸದಿಂದ ಇರುವಂತೆ ಮಾಡುತ್ತದೆ. ಧಾನ್ಯಗಳು ಒಳ್ಳೆಯ ಮೂಡ್ ಗೆ ಮಾತ್ರವಲ್ಲದೆ ನಿಮ್ಮ ಆರೋಗ್ಯಕ್ಕೂ ಉತ್ತಮ. ಪ್ರತೀ ದಿನ ಧಾನ್ಯಗಳನ್ನು ತಮ್ಮ ಆಹಾರದಲ್ಲಿ ಬಳಸುವವರಿಗೆ ಕಡಿಮೆ ಒತ್ತಡವಿರುತ್ತದೆ ಮತ್ತು ಮೂಡ್ ಗೆ ಸಂಬಂಧಿಸಿದ ಸಮಸ್ಯೆಗಳು ಬರಲ್ಲ. ಗೋಧಿ, ಅಕ್ಕಿ ಮತ್ತು ಇತರ ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸುಲಭವಾಗಿ ಬಳಸಬಹುದು. ಹಣ್ಣು ಮತ್ತು ಸಲಾಡ್ ಸೇವನೆ ಕೂಡ ತುಂಬಾ ಉಪಕಾರಿ.

4. ಕೆಫಿನ್

4. ಕೆಫಿನ್

ಚಹಾ ಮತ್ತು ಕಾಫಿಯಲ್ಲಿರುವ ಕೆಫಿನ್ ಒತ್ತಡ ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ನಿಮ್ಮ ಶಕ್ತಿ ಹೆಚ್ಚಿಸುತ್ತದೆ. ಚಹಾ ಮತ್ತು ಕಾಫಿ ನಿಮ್ಮ ಮೂಡ್ ನ್ನು ಬದಲಾಯಿಸುತ್ತದೆ. ಮೂಡ್ ನ್ನು ಉತ್ತಮಗೊಳಿಸಲಿರುವ ಈ ಪಾನೀಯಗಳು ದೇಹದ ಶಕ್ತಿವರ್ಧಕ ಕೂಡ. ಚಟವಾಗಿಸುವ ಗುಣಹೊಂದಿರುವ ಕೆಫಿನ್ ಹೊಂದಿರುವ ಚಹಾ ಮತ್ತು ಕಾಫಿ ಸೇವನೆ ನಿಯಂತ್ರಣದಲ್ಲಿದ್ದರೆ ಒಳ್ಳೆಯದು. ಅತಿಯಾದ ಕೆಫಿನ್ ಆರೋಗ್ಯಕ್ಕೂ ಒಳ್ಳೆಯದಲ್ಲ.

5. ಸ್ವೀಟ್ ಟೂತ್

5. ಸ್ವೀಟ್ ಟೂತ್

ಸಿಹಿ ತಿಂಡಿಗಳಾದ ಜಾಮ್, ಕೇಕ್ ಮತ್ತು ಇತರ ಬೇಕರಿ ಉತ್ಪನ್ನಗಳು ನಿಮ್ಮ ಮೂಡನ್ನು ಉತ್ತಮಗೊಳಿಸಲು ಒಳ್ಳೆಯ ಆಹಾರ. ಒತ್ತಡ ಕಡಿಮೆ ಮಾಡಲು ಮತ್ತು ನಿಮ್ಮ ಮೂಡ್ ಬದಲಾಯಿಸಲು ಯಾವಾಗಲೂ ಸಿಹಿ ತಿಂಡಿ ತಿನ್ನಿ. ಮೂಡ್ ಉತ್ತಮಗೊಳಿಸಲು ಸಿಹಿ ತಿಂಡಿಗಳು ಸೂಪರ್ ಫುಡ್.

6. ಇತರ ಆಹಾರಗಳು

6. ಇತರ ಆಹಾರಗಳು

ಒಳ್ಳೆಯ ಮೂಡ್ ಗೆ ಇತರ ಆಹಾರಗಳೆಂದರೆ ಮೀನುಗಳು, ಹ್ಯಾಮ್, ಚೀಸ್ ಮತ್ತು ಮಾಂಸ. ಇದು ನಿಮ್ಮ ಮೂಡ್ ನ್ನು ಸುಧಾರಿಸಿ ಉತ್ತಮ ಭಾವನೆ ಮೂಡಿಸುತ್ತದೆ. ಚೆರ್ರಿ ಮತ್ತು ಹಣ್ಣುಗಳು ನಿಮ್ಮ ರೋಮ್ಯಾಂಟಿಕ್ ಮೂಡ್ ನ್ನು ಪ್ರಚೋದಿಸುತ್ತದೆ. ಈ ಪ್ರಣಯ ಪ್ರಚೋದಕ ಆಹಾರಗಳನ್ನು ಕಾಮೋತ್ತೇಜಕಗಳೆಂದು ಕರೆಯಲಾಗುತ್ತದೆ. ಇದರಲ್ಲಿ ಯಾವುದೇ ಆಹಾರವನ್ನು ಪ್ರಯತ್ನಿಸಿ, ಒಳ್ಳೆಯ ಭಾವನೆ ಮತ್ತು ಶಕ್ತಿ ಹೆಚ್ಚಿಸಿ.

English summary

Superfoods for better mood

Moods can be changed drastically due to foods also. There are some foods that can make you feel romantic. Some foods make you feel energetic. Similarly there are some super foods for better mood, they are mood elevators that change your sad mood into good mood.
Story first published: Thursday, November 28, 2013, 11:25 [IST]
X
Desktop Bottom Promotion