For Quick Alerts
ALLOW NOTIFICATIONS  
For Daily Alerts

ಹಸಿವು ನೀಗಿಸಲು ಆರೋಗ್ಯಕರ ತಿಂಡಿಗಳು

By Hemanth Amin
|

ಹಸಿವು ಎನ್ನುವುದು ಪ್ರತಿಯೊಬ್ಬರ ದೌರ್ಬಲ್ಯ. ಹಸಿವನ್ನು ಯಾರಿಂದಲೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಮನುಷ್ಯನಿಗೆ ಆಹಾರ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ತುಂಬಾ ಸಮಯದವರೆಗೆ ಆಹಾರ ಸೇವಿಸದಿರುವ ಪರಿಣಾಮ ಆಹಾರ ಕೊರತೆ, ಸುಸ್ತು, ಬಳಲಿಕೆ. ಇದರ ಪರಿಣಾಮವಾಗಿ ದೇಹದ ವ್ಯವಸ್ಥೆಗಳ ಕೆಲಸಕ್ಕೆ ಅಡೆತಡೆ ಉಂಟುಮಾಡಬಹುದು.

ಇಂದಿನ ದಿನಗಳಲ್ಲಿ ನಾವು ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಾಗಿ ವ್ಯಸ್ತರಾಗಿರುವ ಕಾರಣದಿಂದ ಸರಿಯಾದ ರೀತಿಯಲ್ಲಿ ಊಟ ಮಾಡಲು ಸಮಯವೇ ಸಿಗುವುದಿಲ್ಲ. ಇದು ಹಲವಾರು ಮಂದಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವು ಹಸಿವಿನಿಂದ ಇದ್ದರೂ ತಕ್ಷಣಕ್ಕೆ ಆರೋಗ್ಯಕರವಲ್ಲದ ಏನಾದರೂ ತಿನ್ನುತ್ತೇವೆ. ಹಸಿವಿನಿಂದಾಗಿ ಇಂದು ಹೆಚ್ಚಿನ ಜನರು ಫಾಸ್ಟ್ ಫುಡ್, ಬೇಯಿಸಲು ಸಿದ್ಧ ಆಹಾರ ಮತ್ತು ಪ್ಯಾಕೇಜ್ ಆಹಾರ ತಿನ್ನುತ್ತಾರೆ. ಇಂತಹ ಅನಾರೋಗ್ಯಕರ ಆಹಾರ ಸೇವಿಸುವುದನ್ನು ತಪ್ಪಿಸಲು ಹಸಿವನ್ನು ನೀಗಿಸಲು ಆರೋಗ್ಯಕರ ಆಹಾರ ಸೇವಿಸಿ.

Healthy snacks to curb hunger

ಹಸಿವು ನೀಗಿಸಲು ಕೆಲವೊಂದು ಆರೋಗ್ಯಕರ ಆಹಾರಗಳನ್ನು ಪಟ್ಟಿ ಮಾಡಲಾಗಿದೆ.
1. ಹಣ್ಣು ಮತ್ತು ಜ್ಯೂಸ್
ದಿನಕ್ಕೊಂದು ಸೇಬು ವೈದ್ಯರಿಂದ ದೂರವಿಡುತ್ತದೆ' ಎನ್ನುವ ಮಾತಿದೆ. ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು. ಸೇಬಿನೊಂದಿಗೆ ಇತರ ಹಣ್ಣುಗಳಾದ ಬಾಳೆಹಣ್ಣು, ಸಿಟ್ರಸ್ ಹಣ್ಣುಗಳು ಇತ್ಯಾದಿ ತುಂಬಾ ಉಪಯೋಗಿ ಮತ್ತು ಹಸಿವು ನೀಗಿಸುತ್ತದೆ. ಹಣ್ಣುಗಳಲ್ಲಿ ಅಗಾಧ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಾಂಶಗಳಿವೆ. ಇದು ಹಸಿವು ನೀಗಿಸುವ ಆರೋಗ್ಯಕರ ಆಹಾರಗಳು. ಹಣ್ಣಿನ ಜ್ಯೂಸ್ ಗಳು ಸುಲಭವಾಗಿ ಸಿಗುವುದರಿಂದ ಹಸಿವು ನೀಗಿಸಲು ಇದು ಒಂದು ಒಳ್ಳೆಯ ಆಯ್ಕೆ.

2. ಒಂದು ದೊಡ್ಡ ಬಟ್ಟಲು ಸೂಪ್
ಸೂಪ್ ಹೆಚ್ಚಿನ ಪೌಷ್ಠಿಕಾಂಶಗಳಿರುವ ಆರೋಗ್ಯಕರ ಆಹಾರ. ಸೂಪ್ ನ್ನು ಸುಲಭವಾಗಿ ಮತ್ತು ಪ್ರತಿಯೊಂದು ತರಕಾರಿಯಿಂದಲೂ ಇದನ್ನು ತಯಾರಿಸಬಹುದು. ಕೆಲವೊಂದು ತರಕಾರಿಗಳನ್ನು ಕತ್ತರಿಸಿ ಅದನ್ನು ಉಪ್ಪು ಮತ್ತು ಕರಿಮೆಣಸಿನ ಹುಡಿ ಹಾಕಿ ನೀರಿನಲ್ಲಿ ಬೇಯಿಸಬೇಕು. ಇದು ತುಂಬಾ ಸರಳ ಮತ್ತು ಆರೋಗ್ಯಕರ ಸೂಪ್. ಇತರ ಆರೋಗ್ಯಕರ ಪರ್ಯಾಯವೆಂದರೆ ಬಾದಾಮಿ ಸೂಪ್, ಮೆಕ್ಕೆಜೋಳದ ಸೂಪ್, ಟೊಮೆಟೊ ಸೂಪ್ ಮತ್ತು ಇತ್ಯಾದಿಗಳು. ಇದನ್ನು ತುಂಬಾ ಕಡಿಮೆ ಸಮಯದಲ್ಲಿ ತಯಾರಿಸಿ ಹಸಿವನ್ನು ನೀಗಿಸಬಹುದು.

3. ತಟ್ಟನೆ ತಯಾರಾಗುವ ಸ್ಯಾಂಡ್ವಿಚ್
ಸ್ಯಾಂಡ್ವಿಚ್ ನ್ನು ತುಂಬಾ ಸುಲಭ ಮತ್ತು ವೇಗವಾಗಿ ತಯಾರಿಸಬಹುದು. ಒಂದು ಪ್ಯಾಕೆಟ್ ಬ್ರೆಡ್, ಸ್ವಲ್ಪ ತರಕಾರಿಯಿದ್ದರೆ ಸ್ಯಾಂಡ್ವಿಚ್ ತಯಾರು. ಇದನ್ನು ಖಾರ, ಸಿಹಿ ಮತ್ತು ನಿಮ್ಮ ಇಷ್ಟದ ಎಲ್ಲಾ ತರಕಾರಿಗಳನ್ನು ಬಳಸಿ ಇದನ್ನು ತಯಾರಿಸಬಹುದು. ತೋಫು, ಮಶ್ರೂಮ್ ಮತ್ತು ಪನೀರ್ ನಿಂದ ಸ್ಯಾಂಡ್ವಿಚ್ ನ್ನು ತಯಾರಿಸಬಹುದು. ಹಸಿವನ್ನು ನೀಗಿಸಲು ಸ್ಯಾಂಡ್ವಿಚ್ ತುಂಬಾ ಆರೋಗ್ಯಕರ ಆಹಾರ. ಗೋಧಿಯಿಂದ ಮಾಡದ ಬ್ರೆಡ್ ಮತ್ತು ಹೆಚ್ಚಿನ ಚೀಸ್ ಬಳಸುವುದರಿಂದ ಸ್ಯಾಂಡ್ವಿಚ್ ಕೂಡ ಇತರ ಅನಾರೋಗ್ಯಕರ ಫಾಸ್ಟ್ ಫುಡ್ ನಂತಾಗಬಹುದು.

4. ಹಾಲು ಮತ್ತು ಹಾಲಿನ ಉತ್ಪನ್ನಗಳು
ಒಂದು ಲೋಟ ಕೆನೆ ತೆಗೆದ ಮತ್ತು ಟೋನ್ಡ್ ಹಾಲು ತುಂಬಾ ಆರೋಗ್ಯಕರ ಮತ್ತು ಇದು ಹೆಚ್ಚುವರಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಹಾಲು ಪ್ರತಿಯೊಂದು ಕಡೆಯಲ್ಲಿ ಸಿಗುವ ಕಾರಣ ಹಸಿವು ನೀಗಿಸಲು ಇದನ್ನು ಉಪಯೋಗಿಸಬಹುದು. ಹಾಲಿನ ಉತ್ಪನ್ನಗಳಾದ ಲಸ್ಸಿ, ಮಿಲ್ಕ್ ಶೇಕ್, ಮೊಸರು, ಮಜ್ಜಿಗೆಯು ಆರೋಗ್ಯಕರ ಉತ್ಪನ್ನಗಳಾಗಿದ್ದು, ಹಸಿವು ನೀಗಿಸಲು ಇದನ್ನು ಬಳಸಬಹುದು ಮತ್ತು ಇದು ದೇಹಕ್ಕೂ ತುಂಬಾ ಒಳ್ಳೆಯದು. ಹಾಲು ಮತ್ತು ಮೊಟ್ಟೆ ಹಸಿವು ನೀಗಿಸಲು ಒಳ್ಳೆಯ ಆಹಾರ. ಮೊಟ್ಟೆಯನ್ನು ಬೇಯಿಸಿ, ಕಾಯಿಸಿ ಅಥವಾ ಸಾಧ್ಯವಾದರೆ ಹಾಗೆಯೇ ಸೇವಿಸಬಹುದು.

5. ಸಲಾಡ್
ಹಲವಾರು ಬಗೆಯ ತರಕಾರಿಗಳನ್ನು ಬಳಸಿ ಸಲಾಡ್ ನ್ನು ಸುಲಭವಾಗಿ ತಯಾರಿಸಬಹುದು. ಕರಿಮೆಣಸಿನ ಹುಡಿ, ಮೆಣಸಿನಕಾಯಿ ಚಕ್ಕೆಗಳು ಮತ್ತು ಆರಿಗಾನೊ ಮುಂತಾದ ಖಾರದ ವಸ್ತುಗಳು ನಿಮ್ಮ ಸಲಾಡ್ ನ್ನು ಸವಿ ಮತ್ತು ಆರೋಗ್ಯಕರವಾಗಿ ಮಾಡಿ ಹಸಿವು ನೀಗಿಸಬಹುದು. ಸಲಾಡ್ ನಲ್ಲಿ ಪೌಷ್ಠಿಕಾಂಶಗಳು ಸಮೃದ್ಧವಾಗಿದೆ ಮತ್ತು ಆರೋಗ್ಯಕರ ಕಾರ್ಬೊಹೈಡ್ರೆಡ್ ಗಳಿವೆ. ಹಸಿವಿನಿಂದ ಇರಬೇಡಿ ಮತ್ತು ಅನಾರೋಗ್ಯಕರ ಆಹಾರ ತಿಂದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ಮಾಡಬೇಡಿ.

ಮೇಲಿರುವ ಆಹಾರಗಳು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಸೇವಿಸಬಹುದು. ಇದು ಸುಲಭವಾಗಿ ಸಿಗುವ ಮತ್ತು ಸುಲಭವಾಗಿ ತಯಾರಿಸಬಹುದಾದ ಆಹಾರಗಳು. ಈ ಆರೋಗ್ಯಕರ ತಿಂಡಿಗಳನ್ನು ಮೆಣಸು ಮತ್ತು ಗಿಡಮೂಲಿಕೆಗಳ ಜತೆಗೆ ಸೇವಿಸಿದರೆ ಆಗ ಅದು ತುಂಬಾ ರುಚಿಕರ ಮತ್ತು ದೇಹಕ್ಕೂ ಒಳ್ಳೆಯದು.

English summary

Healthy snacks to curb hunger

Hunger makes one eat fast foods, ready to cook meals and packaged food. To avoid consuming such unhealthy food, increase intake of more healthy foods to curb hunger.
Story first published: Saturday, November 23, 2013, 15:40 [IST]
X
Desktop Bottom Promotion