For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ದೇಹಕ್ಕೆ ಬೇಕು ಕೊಲೆಸ್ಟ್ರಾಲ್!

|
How Much Cholesterol Healthy For Body
ನಗರ ಪ್ರದೇಶದವರಲ್ಲಿ ಹೆಚ್ಚಿನವರ ಪ್ರಮುಖ ಸಮಸ್ಯೆ ಕೊಲೆಸ್ಟ್ರಾಲ್‌. ಕೊಲೆಸ್ಟ್ರಾಲ್ ಹೆಚ್ಚಾದಂತೆ ದೇಹದ ತೂಕ ಹೆಚ್ಚಾಗುವುದು, ಕಾಯಿಲೆ ಕಸಾಲೆಗಳು ಉಂಟಾಗುತ್ತದೆ. ಆದ್ದರಿಂದ ಕೊಲೆಸ್ಟ್ರಾಲ್ ಇಲ್ಲದ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಆದರೆ ದೇಹದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕೊಲೆಸ್ಟ್ರಾಲ್ ಪ್ರಮುಖ ಪಾತ್ರವಹಿಸುತ್ತದೆ.

ಕೊಲೆಸ್ಟ್ರಾಲ್ ದೇಹದಲ್ಲಿ ಈ ಕೆಳಗಿನ ಕಾರ್ಯಗಳಿಗೆ ಸಹಾಯಮಾಡುತ್ತದೆ.

* ಜೀವ ಕೋಶಗಳ ಕೋಶ ಭಿತ್ತಿಯ ರಚನೆ ಮತ್ತು ನಿರ್ವಹಣೆ.
* ಲೈಂಗಿಕ ಹಾರ್ಮೋನುಗಳ ಉತ್ಪಾದನೆ
* ಆಹಾರವನ್ನು ಜೀರ್ಣ ಮಾಡಲು ಅಗತ್ಯವಾದ ಪಿತ್ತರಸದ ಲವಣಗಳನ್ನು ಉತ್ಪಾದಿಸುವುದು
* ವಿಟಮಿನ್ ಡಿ ಯ ಉತ್ಪಾದನೆ

ಕೊಬ್ಬಿನ ಆಹಾರವನ್ನೇ ಸೇವಿಸಬಾರದು ಅನ್ನುವುದು ತಪ್ಪು. ಆರೋಗ್ಯವಂತರಾಗಿರಲು ಈ ಕೆಳಗಿನಂತೆ ಕೊಬ್ಬಿನಂಶ ಸೇವಿಸುವುದು ಒಳ್ಳೆಯದು.

ಒಳ್ಳೆಯ ಕೊಬ್ಬು: ಒಮೆಗಾ 3 ಮತ್ತು ಒಮೆಗಾ 6 ನಂತಹ ಕೊಬ್ಬಿನಂಶಗಳು ಆರೋಗ್ಯವಾಗಿರಲು ಅವಶ್ಯಕ. ಈ ಕೊಬ್ಬಿನಂಸ ಮೀನಿನಲ್ಲಿ ಕಂಡು ಬರುತ್ತದೆ. ಅಲ್ಲದೆ ಸಸ್ಯ ಮೂಲದಿಂದ ದೊರೆಯುವ ಕೊಬ್ಬಿನಂಶವನ್ನು ಸೇವಿಸಬೇಕು. ಈ ಕೊಬ್ಬುಗಳು ನಿಮ್ಮ HDL (High Density Lipoprotein) ಅನ್ನು ಹೆಚ್ಚಿಸಿ ಮತ್ತು LDL (Low Density Lipoprotein) ಅನ್ನು ಕಡಿಮೆ ಮಾಡುತ್ತವೆ. ಇದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ಉಂಟಾಗುತ್ತದೆ.

ಸರಿಯಾದ ಪ್ರಮಾಣದ ಕೊಬ್ಬು ಸೇವಿಸಿ: ಆರೋಗ್ಯವಂತ ವಯಸ್ಕರು ತಮ್ಮ ಅಗತ್ಯದ ಕ್ಯಾಲರಿಗಳಲ್ಲಿ ಶೇ. 30 ಕ್ಕಿಂತ ಹೆಚ್ಚಿನ ಭಾಗವನ್ನು ಕೊಬ್ಬಿನಿಂದ ಪಡೆಯಬಾರದು.

ಸಮತೋಲನ ಆಹಾರಸೇವಿಸಿ: ಆರೋಗ್ಯಕರ ಆಹಾರವೆಂದರೆ ಹಣ್ಣು ತರಕಾರಿ ಪ್ರತಿದಿನ ಇರಬೇಕು; ಕಾಳುಗಳು ದ್ವಿದಳಧಾನ್ಯ ಮತ್ತು ಬೀನ್ಸ್ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಸಿಹಿತಿಂಡಿ ಮತ್ತು ಅಧಿಕ ಕೊಬ್ಬಿರುವ ಆಹಾರವನ್ನು ಮಿತಿಯಾಗಿ ಸೇವಿಸಿದರೆ ಒಳ್ಳೆಯದು. ಮಿತಿಯಲ್ಲಿ ಕೊಬ್ಬಿನಂಶವಿರುವ ಆಹಾರದ ಸೇವಿಸಿ, ಪ್ರತಿನಿತ್ಯ ವ್ಯಾಯಾಮ ಮಾಡುವುದು ಅವಶ್ಯಕ.

English summary

How Much Cholesterol Healthy For Body | Tips For Health | ದೇಹಕ್ಕೆ ಎಷ್ಟು ಪ್ರಮಾಣ ಕೊಲೆಸ್ಟ್ರಾಲ್ ಒಳ್ಳೆಯದು | ಆರೋಗ್ಯಕ್ಕಾಗಿ ಕೆಲ ಸಲಹೆ

In Cholesterol there is good and bad cholesterol . Good cholesterol is essential for body. It helps to proper function of the body. Here is a brief about cholesterol.
Story first published: Tuesday, May 29, 2012, 10:51 [IST]
X
Desktop Bottom Promotion