For Quick Alerts
ALLOW NOTIFICATIONS  
For Daily Alerts

ಈ ವಿಧಾನ ಪಾಲಿಸಿದರೆ ಹೊಟ್ಟೆಯ ಬೊಜ್ಜು ಕರಗುವುದು

|
ನಗರ ಪ್ರದೇಶಗಳಲ್ಲಿನ ಹೆಚ್ಚಿನ ಜನರಿಗೆ ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆ ಅಂದರೆ ಹೊಟ್ಟೆಯ ಬೊಜ್ಜು. ಕಂಪ್ಯೂಟರ್ ಮುಂದೆ 7-8 ಗಂಟೆ ಕಾಲ ಕೂತಲ್ಲಿಯೇ ಕೂತು ಕೆಲಸ ಮಾಡುವುದು, ಕುರುಕಲು ತಿಂಡಿ, ಬರ್ಗರ್, ಪಿಜ್ಜಾ ಪ್ರೇಮ, ವ್ಯಾಯಾಮ ಮಾಡದಿರುವುದು ಈ ಎಲ್ಲದರಿಂದ ದೊರೆಯುವ ಫಲವೇ ಹೊಟ್ಟೆಯ ಬೊಜ್ಜು.

ಈ ರೀತಿಯ ಬೊಜ್ಜು ಆಕರ್ಷಕ ಮೈಕಟ್ಟನ್ನು ಹಾಳು ಮಾಡುವುದು ಮಾತ್ರವಲ್ಲ, ದೇಹದ ಆರೋಗ್ಯವನ್ನು ಹಾಳು ಮಾಡುವುದು. ಆದ್ದರಿಂದ ಹೊಟ್ಟೆ ಬರಲು ಅವಕಾಶ ಕೊಡದಿರುವುದು ಒಳ್ಳೆಯದು, ಒಂದು ವೇಳೆ ಬಂದಿದ್ದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಒಂದೇ ತಿಂಗಳಿನಲ್ಲಿ ಬೊಜ್ಜು ರಹಿತ ಹೊಟ್ಟೆಯನ್ನು ಪಡೆಯಬಹುದು.

ವ್ಯಾಯಾಮ: ಬೊಜ್ಜು ಹೊಟ್ಟೆ ಕರಗಿಸಬೇಕೆಂದು ಬಯಸುವವರು ಮೊದಲು ಮಾಡಬೇಕಾದ ಕೆಲಸವೆಂದರೆ ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡಬೇಕು. ವ್ಯಾಯಾಮಗಳಲ್ಲಿ ಓಡುವುದು, ನಡೆಯುವುದು, ಈಜುವುದು, ಸೈಕ್ಲಿಂಗ್ ಹೀಗೆ ನಿಮಗೆ ಯಾವುದು ಹೆಚ್ಚು ಖುಷಿ ಕೊಡುತ್ತದೆಯೊ ಅದನ್ನು ಮಾಡಿ, ಆಗ ವ್ಯಾಯಾಮ ಮಾಡಲು ಬೋರಾಗುವುದಿಲ್ಲ. ವೀಕೆಂಡ್ ಗೆ ಸುಮ್ಮನೆ ಮಲಗುವ ಬದಲು ದೂರ ಬೈಕ್ ರೈಡ್ ಮಾಡಿ.

ಸ್ನಾಯುಗಳನ್ನು ಬಿಗಿಗೊಳಿಸಿ: ಹೊಟ್ಟೆ ಬೊಜ್ಜು ಕರಗಿಸಲು ಕ್ರಂಚಸ್, ಬೆನ್ನು ನೆಲಕ್ಕೆ ತಾಗುವಂತೆ ಮಲಗಿ ಎರಡು ಕಾಲುಗಳನ್ನು ಎತ್ತಿ 5 ನಿಮಿಷ ಹಿಡಿಯುವ ವ್ಯಾಯಾಮ ಮಾಡಬಹುದು. ಹೀಗೆ ಹೊಟ್ಟೆಗೆ ಒತ್ತಡ ಬೀಳುವ ವ್ಯಾಯಾಮ ಮಾಡಿದರೆ ಹೊಟ್ಟೆ ಬೊಜ್ಜು ಕರಗುವುದು. ಮೊದ ಮೊದಲು ಮೈ ಕೈ ಈ ವ್ಯಾಯಾಮ ಮಾಡಿದ ನಂತರ ಹೊಟ್ಟೆ ಸ್ವಲ್ಪ ನೋವಾಗುತ್ತದೆ, ನಂತರ ಏನೂ ಆಗುವುದಿಲ್ಲ. ಈ ವ್ಯಾಯಾಮವನ್ನು ಖಾಲಿ ಹೊಟ್ಟೆಯಲ್ಲಿ ಮಾಡಿದರೆ ಒಳ್ಳೆಯದು.

ಡಯಟ್: ಕೊಬ್ಬಿನಂಶವಿರುವ ಆಹಾರ ತಿನ್ನಬಾರದು, ಹಾಗಂತ ಪಥ್ಯ ಊಟ ಮಾಡಬೇಕಾಗಿಲ್ಲ, ಅಧಿಕ ನಾರಿನಂಶವಿರುವ ಆಹಾರವನ್ನು ಮಿತಿಯಲ್ಲಿ ತಿನ್ನಬೇಕು. ಕೊಬ್ಬಿನಂಶವಿರುವ ಆಹಾರವನ್ನು ಅಪರೂಪಕ್ಕೆ, ತುಂಬಾ ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು. ಈ ರೀತಿಯ ಡಯಟ್ ಪಾಲಿಸಿದರೆ ಆಕರ್ಷಕ ಮೈಕಟ್ಟನ್ನು ಪಡೆಯುವುದು ಕಷ್ಟದ ವಿಷಯವಲ್ಲ.

ಮದ್ಯ ವರ್ಜಿಸಬೇಕು: ಕೆಲವರಿಗೆ ಮದ್ಯ ವರ್ಜಿಸಲು ಕಷ್ಟವಾಗಬಹುದು, ಆದರೆ ಬೊಜ್ಜು ರಹಿತ ಹೊಟ್ಟೆ ಬೇಕೆಂದು ಬಯಸುವುದಾದರೆ ಮದ್ಯ ವರ್ಜಿಸಲೇಬೇಕು. ಏಕೆಂದರೆ ಮದ್ಯ ಕುಡಿದರೆ ಹೊಟ್ಟೆ ಹಸಿವು ಹೆಚ್ಚಾಗುವುದು, ಜೀರ್ಣಕ್ರಿಯೆ ಸಾಮರ್ಥ್ಯ ಕಡಿಮೆಯಾಗುವುದು, ಇದರಿಂದ ಹೊಟ್ಟೆ ಬರಲಾಂಭಿಸುತ್ತದೆ.

ತುಂಬಾ ನೀರು ಕುಡಿಯಬೇಕು: ದಿನದಲ್ಲಿ 8-10 ಲೋಟ ನೀರು ಕುಡಿಯಬೇಕು. ನೀರು ದೇಹದಲ್ಲಿರುವ ಅಧಿಕ ಸೋಡಿಯಂ ಅಂಶವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ, ಅಲ್ಲದೆ ನೀರು ಕುಡಿದರೆ ಮಿತಿ ಮೀರಿ ಊಟ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹದಲ್ಲಿ ಅಧಿಕ ಬೊಜ್ಜು ಶೇಖರವಾಗುವುದು ತಪ್ಪುತ್ತದೆ.

ಒತ್ತಡ ಕಡಿಮೆ ಮಾಡಬೇಕು: ಆಫೀಸ್ ಎಂದ ಮೇಲೆ ಟಾರ್ಗೆಟ್, ಡೆಡ್ ಲೈನ್ ಇದ್ದೇ ಇರುತ್ತದೆ. ಇವುಗಳು ಮಾನಸಿಕ ಒತ್ತಡವನ್ನು ಹೆಚ್ಚು ಮಾಡಿ, ಕಾಯಿಲೆ ತರುವುದು. ಒತ್ತಡ ಹೆಚ್ಚಾದಾಗ appetite ಹಾರ್ಮೋನ್ ಹೆಚ್ಚಾಗುತ್ತದೆ, ಈ ಹಾರ್ಮೋನ್ ಹೊಟ್ಟೆ ಬೊಜ್ಜು ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಆದ್ದರಿಂದ ಯೋಗ ಮತ್ತು ಪ್ರಾಣಯಾಮದ ಮುಖಾಂತರ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.

English summary

Guidelines To Get Rid Of Belly Fat | Tips For Health | ಬೊಜ್ಜು ರಹಿತ ಹೊಟ್ಟೆಗಾಗಿ ಕೆಲ ಸಲಹೆಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Belly stomach one of the major problem to urban people. Life style, work nature, pressure, diet these are the main reason for belly stomach. Here are few guidelines, which will help you to get belly stomach.
Story first published: Tuesday, July 3, 2012, 11:29 [IST]
X
Desktop Bottom Promotion