For Quick Alerts
ALLOW NOTIFICATIONS  
For Daily Alerts

ವ್ಯಾಯಾಮವಿಲ್ಲದೆ ಬೊಜ್ಜು ಕರಗಿಸುವ ಮೆಂತೆ

|
Fenugreek Seed For Weight Loss
ಮೆಂತೆಯನ್ನು ಅಡುಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವು ಆರ್ಯುವೇದ ಔಷಧಿಗಳ ತಯಾರಿಯಲ್ಲಿ ಕೂಡ ಬಳಸಲಾಗುತ್ತದೆ. ಮೆಂತೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ. ಇಷ್ಟು ಮಾತ್ರವಲ್ಲ ಈ ಮೆಂತೆಯಿಂದ ದೇಹದ ತೂಕವನ್ನು ಕೂಡ ಕಡಿಮೆ ಮಾಡಬಹುದಾಗಿದೆ. ದೇಹದ ತೂಕ ಇಳಿಸಲು ಮೆಂತೆ ಬಳಸಬೇಕಾದ ವಿಧಾನದ ಬಗ್ಗೆ ತಿಳಿಯಲು ಮುಂದೆ ಓದಿ.

ಮೆಂತೆಯನ್ನು ಬಳಸುವ ವಿಧಾನ:

1. ಒಂದು ಚಮಚ ಮೆಂತೆ ಕಾಳನ್ನು ಒಂದು ರಾತ್ರಿ ನೆನೆ ಹಾಕಬೇಕು. ಇದನ್ನು ಬೆಳಗ್ಗೆ ಬಿಸಿನೀರಿನಲ್ಲಿ ಹಾಕಿ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಈ ರೀತಿ ತಿಂದರೆ ಹೊಟ್ಟೆ ಶುದ್ಧಿಯಾಗುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಅಲ್ಲದೆ ದೇಹದಲ್ಲಿರುವ ಆಧಿಕ ಕೊಬ್ಬನ್ನು ಕರಗಿಸುತ್ತದೆ.

2. ಮೆಂತೆ ಪುಡಿಯನ್ನು ಕಂದು ಬಣ್ಣ ಬರುವವರೆಗೆ ಹುರಿದು ಪುಡಿ ಮಾಡಬೇಕು. ಅದನ್ನು ಮೊಸರು ಜೊತೆ ಮಿಶ್ರ ಮಾಡಿ ತಿನ್ನಬಹುದು.

3. ಹೊಟ್ಟೆ ಬೊಜ್ಜನ್ನು ನಿಯಂತ್ರಿಸಲು ಬ್ಲಾಕ್ ಟೀ ಮಾಡಿ ಅದರಲ್ಲಿ ಸ್ವಲ್ಪ ಮೆಂತೆ ಪುಡಿ ಹಾಕಿ ಕುಡಿದರೆ ಬೊಜ್ಜು ಹೊಟ್ಟೆ ಬರುವುದಿಲ್ಲ.

ಮೆಂತೆ ಬೊಜ್ಜುನ್ನು ಕರಗಿಸುವಲ್ಲಿ ಹೇಗೆ ಸಹಕಾರಿ?

ಮೆಂತೆಯಲ್ಲಿ ನಾರಿನಂಶ ಅಧಿಕವಿರುತ್ತದೆ. ಆದ್ದರಿಂದ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ಪದೇಪದೇ ಹೊಟ್ಟೆ ಹಸಿವು ಉಂಟಾಗದಂತೆ ತಡೆಯುತ್ತದೆ. ಅಲ್ಲದೆ ಇದರಲ್ಲಿ ಕ್ಯಾಲೋರಿ ಅಂಶ ಕಡಿಮೆ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು ದೇಹದ ತೂಕವನ್ನು ಕೂಡ ನಿಯಂತ್ರಣದಲ್ಲಿಡುತ್ತದೆ.

English summary

Fenugreek Seed For Weight Loss | Tips For Health | ದೇಹದ ತೂಕ ಕಡಿಮೆ ಮಾಡಲು ಮೆಂತೆ | ಆರೋಗ್ಯಕ್ಕಾಗಿ ಕೆಲ ಸಲಹೆ

Fenugreek seeds can also help you lose weight? Fenugreek seeds are rich in fibre and low in calories. Thus, this spice can be used to add flavour and lose weight together.
Story first published: Friday, April 13, 2012, 10:33 [IST]
X
Desktop Bottom Promotion