For Quick Alerts
ALLOW NOTIFICATIONS  
For Daily Alerts

ದೇಹಕ್ಕೆ ಅತ್ಯವಶ್ಯಕ 7 ರೀತಿಯ ಸೂಪ್

|
Soup Diet
ಡಯಟ್ ಗೆಂದು ದೀರ್ಘ ಕಾಲ ಒಂದೇ ರೀತಿಯ ಆಹಾರ ಸೇವಿಸಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ಕೆಲವು ಆಹಾರ ವಿಧಾನ ಅನುಸರಿಸಿದರೆ ಫಿಟ್ ಆಗಿರುವುದಲ್ಲದೆ ದೇಹಕ್ಕೆ ಪೋಷಕಾಂಶವೂ ದೊರೆತು ಆಹಾರದ ರುಚಿಯನ್ನೂ ಅನುಭವಿಸಬಹುದು.

ಚಳಿಗಾಲದಲ್ಲಿ ಬಿಸಿ ಬಿಸಿಯಾಗಿ ತಿನ್ನುವುದೇ ಸೂಕ್ತ. ಆದ್ದರಿಂದ ಈ ಕಾಲಕ್ಕೆ ತಕ್ಕಂತೆ 7 ದಿನಗಳ ಸೂಪ್ ಡಯಟ್ ಅನುಸರಿಸಿದರೆ ನೀವು ಫಿಟ್ ಆಗಿರಬಹುದು.

* ಪ್ರೊಟೀನ್ ಸೂಪ್: ಉತ್ತಮ ಪ್ರೊಟೀನ್ ಅಂಶ ನಿಮ್ಮ ದೇಹಕ್ಕೆ ಬೇಕೆಂದರೆ ಬೇಳೆ ಸೂಪ್ ಸೂಕ್ತ. ಸೊಯಾ ಬೀನ್ ಅಥವಾ ತೊಗರಿ ಬೇಳೆಯನ್ನು ಚೆನ್ನಾಗಿ ಬೇಯಿಸಿ ಬಸಿದು ಆ ನೀರಿಗೆ ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ನಿಂಬೆರಸ, ಜೀರಿಗೆ ಮತ್ತು ಉಪ್ಪನ್ನು ಬೆರೆಸಿ ಕುಡಿದರೆ ತೂಕ ಕಡಿಮೆಗೊಳ್ಳುತ್ತದೆ. ನಿಂಬೆಯಿಂದ ದೇಹದಲ್ಲಿನ ಬೊಜ್ಜು ಕರಗುತ್ತದೆ. ಇದರಲ್ಲಿನ ಸಾಂಬಾರು ಪದಾರ್ಥಗಳು ಜೀರ್ಣಕ್ರಿಯೆಗೆ ಸಹಕಾರಿ.

* ವಿಟಮಿನ್ ಸೂಪ್: ವಿಟಮಿನ್ ನಿಮ್ಮ ದೇಹಕ್ಕೆ ಹೆಚ್ಚು ಬೇಕೆಂದಿದ್ದರೆ ಕ್ಯಾರೆಟ್, ಎಲೆಕೋಸು, ಮೂಲಂಗಿ ಸೂಪ್ ಸೂಕ್ತ. ಪಾಲಾಕ್ ಸೂಪ್ ಇನ್ನೂ ಒಳ್ಳೆಯದು. ಈ ಸೂಪ್ ಗಳಿಗೆ ಸಾಂಬಾರು ಪದಾರ್ಥಗಳೂ ಬೇಕಿಲ್ಲ. ರಾತ್ರಿ ಹೊತ್ತು ಇದನ್ನು ಸೇವಿಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು.

* ಫೈಬರ್ ಸೂಪ್:
ಕೆಂಪಕ್ಕಿ ಅಥವಾ ಸಿಹಿ ಗೆಣಸಿನ ಸೂಪ್ ನಿಮ್ಮ ದೇಹಕ್ಕೆ ಅಗತ್ಯವಿದ್ದಷ್ಟು ಕಾರ್ಬೊಹೈಡ್ರೇಡ್ ಒದಗಿಸುವುದರೊಂದಿಗೆ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಮತ್ತು ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಒಳ್ಳೆಯದು.

* ಸಾಂಬಾರು ಮತ್ತು ಗಿಡಮೂಲಿಕೆ ಸೂಪ್: ತುಂಬಾ ಮೈಭಾರವೆನಿಸಿದ್ದರೆ ಅಥವಾ ತುಂಬಾ ಒತ್ತಡದಿಂದಿದ್ದರೆ ನೀರಿಗೆ ಜೀರಿಗೆ, ಮೆಣಸು, ಹುಣಸೆಹಣ್ಣು, ಸ್ವಲ್ಪ ಏಲಕ್ಕಿ, ಧನ್ಯಾ ಪುಡಿ, ಕೊತ್ತಂಬರಿ, ಪುದೀನಾ, ಸಬ್ಬಕ್ಕಿ ಸೊಪ್ಪು, ಈರುಳ್ಳಿ ಶುಂಠಿ, ಸ್ವಲ್ಪ ಸಕ್ಕರೆ ಬೆರೆಸಿ ಸೂಪ್ ಮಾಡಿದರೆ ತೂಕ ಕಡಿಮೆಗೊಳ್ಳುತ್ತದೆ. ಈ ಸೂಪ್ ಉಸಿರಾಟದ ತೊಂದರೆ ಮತ್ತು ಮಲಬದ್ಧತೆಯನ್ನೂ ನೀಗಿಸುತ್ತದೆ.

* ಆಂಟಿಯಾಕ್ಸಿಡಂಟ್ ಸೂಪ್: ಹುಣಸೆ ಹಣ್ಣು ಅಥವಾ ಮಾವಿನ ಹಣ್ಣನ್ನು ಮಸೆದು ಇದಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನಿನ ರಸ, ಉಪ್ಪು ಬೆರೆಸಿ ಕುಡಿದರೆ ಫಿಟ್ ಆಗಿ ಇರಬಹುದು.

ಈ ಏಳೂ ದೂಪ್ ಗಳು ಕೂಡ ನಿಮ್ಮ ಆರೋಗ್ಯವನ್ನು ಸುಭದ್ರವಾಗಿಡಲು ಸಹಕಾರಿ. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಮತ್ತು ಬೊಜ್ಜು ಕರಗಲು ಅನುವಾಗುವ ಎಲ್ಲಾ ಅಂಶಗಳೂ ಸಿಗುತ್ತದೆ.

English summary

Soup Diet | Quick Weight Loss Diet | ಸೂಪ್ ಡಯಟ್ | ಬೇಗನೆ ತೂಕ ಇಳಿಸುವ ಡಯಟ್

Planning on eating according to seasons will help you stay fit, enjoy food and balance nutrition. Winter season is the season of eating and drinking something hot and boiled. What else can suffice your choice than the 7 day diet called the soup diet. Take a look to know more.
Story first published: Thursday, December 22, 2011, 11:53 [IST]
X
Desktop Bottom Promotion