For Quick Alerts
ALLOW NOTIFICATIONS  
For Daily Alerts

ಒಬೆಸಿಟಿ ಹೋಗಲಾಡಿಸಲು ನೈಸರ್ಗಿಕ ವಿಧಾನ

|
Control Obesity With Natural Remedies
ಒಬೆಸಿಟಿ ಅಥವಾ ಬೊಜ್ಜು ನಗರ ಪ್ರದೇಶದಲ್ಲಿ ಜನರಲ್ಲಿ ಹೆಚ್ಚಾಗಿ ಕಂಡು ಸಮಸ್ಯೆ. ಅದಕ್ಕೆ ಕಾರಣ ಜೀವನ ಶೈಲಿ, ವ್ಯಾಯಾಮ ಮಾಡದಿರುವುದು ಮತ್ತು ಆಹಾರಕ್ರಮ. ಈಗ ಒಬೆಸಿಟಿಯನ್ನು ಹೋಗಲಾಡಿಸಲು ಅನೇಕ ಔಷಧಿಗಳು ಬಂದಿದ್ದರೂ ಅವುಗಳನ್ನು ಸೇವಿಸುವುದರಿಂದ ಅಡ್ಡ ಪರಿಣಾಮ ಕೂಡ ಉಂಟಾಗಬಹುದು. ಆದರೆ ಇಲ್ಲಿದೆ ಕೆಲವು ನೈಸರ್ಗಿಕ ವಿಧಾನ ಇವುಗಳನ್ನು ಪಾಲಿಸಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ವ್ಯಾಯಾಮ:

* ಪ್ರತಿ ನಿತ್ಯ 4 ಕಿಲೋ ಮೀಟರ್ ನಡೆಯುವುದರಿಂದ ತಿಂಗಳಿಗೆ 2.5ಕೆಜಿ ತೂಕವನ್ನು ಕಡಿಮೆ ಮಾಡಬಹುದು.
* ಮನೆ ಸ್ವಚ್ಛತೆಯನ್ನು ಮಾಡುವುದು, ಮನೆಯ ಗಾಡಿಗಳನ್ನು ತೊಳೆಯುವುದು ಇವೆಲ್ಲವೂ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.
* ಆಫೀಸ್ ನಲ್ಲಿ ಲಿಫ್ಟ್ ನಲ್ಲಿ ಹೋಗುವ ಬದಲು ಮೆಟ್ಟಿಲುಗಳನ್ನು ಬಳಸುವುದು ಸೂಕ್ತ.
* ಜಾಗಿಂಗ್, ಮನೆಯ ಮೆಟ್ಟಿಲುಗಳನ್ನು ಹತ್ತುವುದು ಹೀಗೆ ಇತರ ವ್ಯಾಯಾಮಗಳನ್ನು ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು.

ಇಷ್ಟೇ ಅಲ್ಲ ಈ ಕೆಳಗಿನ ವಿಧಾನವು ಕೂಡ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

1. ಆಹಾರ ಕ್ರಮದಲ್ಲಿ ತಾಜಾ ಹಣ್ಣುಗಳು ಮತ್ತು ಜ್ಯೂಸ್ , ಫ್ರೂಟ್ ಸಲಾಡ್, ಓಟ್ಸ್, ನಾರಿನಂಶ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು.

2. ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಜೀನು ಮತ್ತು ಒಂದು ಚಮಚ ನಿಂಬೆರಸ ಹಾಕಿ ದಿನಾವೂ ಬೆಳಗ್ಗೆ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.

3. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಬಹುದು.

4. ಬೆಳಗ್ಗೆ ಗ್ರೀನ್ ಟೀ ಅಥವಾ ಶುಂಠಿ ಟೀಯನ್ನು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.

5. ಹುರುಳಿಕಾಳನ್ನು ಚಿಕ್ಕ ಬಟ್ಟಲಿನಲ್ಲಿ ರಾತ್ರಿ ನೆನೆ ಹಾಕಿರಬೇಕು. ಬೆಳಗ್ಗೆ ಎದ್ದು ಆ ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು.

ಈ ಮೇಲಿನ ಸಲಹೆಗಳು ಒಬೆಸಿಟಿ ಕಡಿಮೆ ಮಾಡಿ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

English summary

Control Obesity With Natural Remedies | Tips For Reduce Obesity | ನೈಸರ್ಗಿಕ ವಿಧಾನ ಬಳಸಿ ಒಬೆಸಿಟಿಯ ನಿಯಂತ್ರಣ | ಒಬೆಸಿಟಿ ಕಡಿಮೆ ಮಾಡಲು ಕೆಲ ಸಲಹೆ

Obesity is a problem is caused due to excessive intake of foods, less or no physical activity, lack of sleep, genes or medications. But this has negative effect on health. To redusce obesity can follow some natural and simple ways.
Story first published: Friday, December 9, 2011, 10:58 [IST]
X
Desktop Bottom Promotion