Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಕರೀನಾ ಕಪೂರ್ ಎದೆ, ಸೊಂಟ, ಪೃಷ್ಠದ ರಹಸ್ಯ ಬಯಲು

ಹೇಳಿಕೇಳಿ ಆಕೆಯದ್ದು ಝೀರೋ ಸೈಝ್ ಫಿಗರ್. ಆದರೆ ಆಕೆ ಈ ಸೌಂದರ್ಯಕ್ಕಾಗಿ, ಈ ಗಾತ್ರ ಉಳಿಸಿಕೊಳ್ಳಲು ತುಂಬಾ ಶ್ರಮಪಡುತ್ತಿದ್ದಾರೆ ಎಂದರೆ ನಂಬಲೇಬೇಕು. ಕರೀನಾ ಸೌಂದರ್ಯದ ಹಿಂದೆ ಶ್ರಮವಿದೆ. ಫಿಟ್ ನೆಸ್ ಕಾಪಾಡುವ ತಪವಿದೆ. ಅವರ ಸುಂದರ ದೇಹದ ಹಿಂದಿನ ರಹಸ್ಯದಲ್ಲಿ ಚಂದದ ದಿನಚರಿಯೊಂದಿದೆ ಎಂದರೆ ನಂಬಲೇ ಬೇಕು.
ಸೊನ್ನೆ ಗಾತ್ರ ಯಾನೆ ಝೀರೋ ಸೈಝ್ ಅಂದ್ರೆನು ಗೊತ್ತೆ? ಎದೆಯ ಗಾತ್ರ 31.5 ಇಂಚು, ಸೊಂಟದ ಸುತ್ತಳತೆ 23 ಇಂಚು ಮತ್ತು 32 ಇಂಚು ಪೃಷ್ಠದ ಗಾತ್ರವಿದ್ದರೆ ಅದು ಝೀರೋ ಸೈಝ್. ಅದು ಕರೀನಾ ಕಪೂರ್ ಬಳಿಯಿದೆ.
ಆಕೆ ಅನುಸರಿಸುವ ಪಥ್ಯ ಮತ್ತು ಫಿಟ್ ನೆಸ್ ಮಂತ್ರ ಸರಳವಾಗಿದೆ ಆದರೆ ಅಷ್ಟೇ ಪರಿಣಾಮಕಾರಿ. ಒಮ್ಮೊಮ್ಮೆ ಫಿಟ್ ನೆಸ್ ಗಾಗಿ ಕಠಿಣ ಹಾದಿ ಅನುಸರಿಸುವುದುಂಟು. ನಂಬಿದರೆ ನಂಬಿ. ಎಲ್ಲಾದರೂ ಡಯೆಟ್ ಮೂಲಕ ಫ್ಯಾಟ್ ಕರಗಿಸಿಕೊಳ್ಳಲು ಸಾಧ್ಯವಾಗದಿದ್ದರೆ ಸರ್ಜರಿ ಮೂಲಕ ಹೆಚ್ಚಿನ ಫ್ಯಾಟ್ ತೆಗೆಸುತ್ತಾರಂತೆ!
ಅತಿರೇಕದ ಫಿಟ್ ನೆಸ್ ಮತ್ತು ಪಥ್ಯವನ್ನೂ ಮಾಡುತ್ತಾರೆ. ಹೀಗೆ ಒಮ್ಮೆ ಕಠಿಣ ಪಥ್ಯ ಮಾಡಿ ಹಮ್ಮರ್ ಗಾಡಿಯನ್ನು ಅಪಘಾತ ಮಾಡಿದ್ದರು. ದೇಹ ತೂಕವಿಳಿಸಲು ಮಾಡಿದ ಪಥ್ಯದಿಂದಾಗಿ ಆಕೆಗೆ ಸ್ಟೇರಿಂಗ್ ಹಿಡಿಯಲು ತ್ರಾಣವಿರಲಿಲ್ಲ.
ಕರೀನಾ ಕಪೂರ್ ಸಸ್ಯಹಾರಿ. ಪರೋಟ, ಚೀಸ್, ಪಾಸ್ಟಾ ಸಲಾಡ್, , ಚೈನಿಸ್ ಫುಡ್, ಸೂಪ್, ಹಸಿರು ತರಕಾರಿ ಸಲಾಡ್, ಹಣ್ಣು, ಗಿಣ್ಣು ಇತ್ಯಾದಿ ಪೌಷ್ಠಿಕ ಆಹಾರ ಅವರಿಗಿಷ್ಠ.
ಕರೀನಾ ಕಪೂರ್ ದಿನಕ್ಕೆ ಎರಡು ಗಂಟೆ ಯೋಗ ಮತ್ತು ಕಾರ್ಡಿಯೊ ವ್ಯಾಯಾಮಗಳನ್ನು ಮಾಡುತ್ತಾರಂತೆ. ಇದು ಆಕೆಯ ಫಿಗರ್ ಮೆಂಟೇನ್ ಮಾಡಲು ನೆರವಾಗಿದೆ. ಜೊತೆಗೆ ಆಕೆ ಮಾಡುವ ಯೋಗಾಸನಗಳು ಈ ಕೆಳಗಿನಂತಿವೆ.
* ಸೂರ್ಯ ನಮಸ್ಕಾರ(50 ಬಾರಿ)
* ಪ್ರಾಣಾಯಮ, ಹಠ ಯೋಗ
* ನೌಕಾಸನ(ಸ್ನಾಯು ಸಂಬಂಧಿತ)
* ಭುಜಂಗಾಸನ(ಬೆನ್ನಿನ ಆರೋಗ್ಯಕ್ಕಾಗಿ)
* ಕಪಾಲಭಾತಿ(ಉಸಿರಾಟ ಸಂಬಂಧಿತ)
* ಪರ್ವತಾಸನ ಮತ್ತು ವೀರಭದ್ರಾಸನ(ಕಾಲು ಮತ್ತು ತೋಳಿನ ಸೌಂದರ್ಯಕ್ಕೆ)
ಕರೀನಾ ಕಪೂರ್ ಮುಂಜಾನೆ ಹಣ್ಣು ತಿನ್ನುತ್ತಾರೆ ಅಥವಾ ಹಾಲು ಕುಡಿತಾರೆ. ಕಾಫಿ ಟೀ ಕುಡಿಯುವ ಅಭ್ಯಾವಿಲ್ಲ. ಹಾಲಿನೊಂದಿಗೆ ಪರೋಟಾ ಅಥವಾ ಬ್ರೆಡ್ ಸ್ಲೈಸ್ ತಿನ್ನುತ್ತಾರೆ. ಪ್ರತಿ ಮೂರು ಗಂಟೆಗೊಮ್ಮೆ ಸ್ಯಾಂಡ್ವಿಚ್ ಇತ್ಯಾದಿ ಸ್ನಾಕ್ಸ್ ಮಿತವಾಗಿ ಸೇವಿಸುತ್ತಾರೆ.
ಸಾಕಷ್ಟು ಹಸಿರು ತರಕಾರಿಯೊಂದಿಗೆ ದಾಲ್ ಮತ್ತು ಚಪಾತಿಯನ್ನು ಮಧ್ಯಾಹ್ನ ತಿನ್ನುತ್ತಾರೆ. ಅಕ್ಕಿ ಮತ್ತು ಫ್ಯಾಟ್ ಹೆಚ್ಚಿರುವ ಆಹಾರವನ್ನು ಅವರು ಸೇವಿಸುವುದಿಲ್ಲ. ಆಕೆಗೆ ಚೀಸ್ ಅಂದ್ರೆ ಇಷ್ಟ. ಪ್ರತಿದಿನ ಸ್ವಲ್ಪವಾದರೂ ಚೀಸ್ ತಿನ್ನಲೇಬೇಕಂತೆ.
ಡಯೆಟ್ ಮಾಡುವುದು ದಿನನಿತ್ಯದ ಕ್ರಿಯೆಗಳನ್ನು ಅವಲಂಬಿಸಿದೆಯಂತೆ. ಹೆಚ್ಚು ಕೆಲಸ ಮಾಡಿದರೆ ಕಡಿಮೆ ಪಥ್ಯ ಸಾಕು. ಸುಮ್ಮನೆ ಮನೆಯಲ್ಲಿದ್ದರೆ ಕಠಿಣ ಪಥ್ಯ ಕ್ರಮ ಅನುಸರಿಸುವುದು ಒಳಿತು ಅನ್ನೋದು ಅವರ ಕಿವಿಮಾತು. ಇದು ಕರೀನಾ ಕಪೂರ್ ಎದೆ, ಸೊಂಟ, ಪೃಷ್ಠದ ಝೀರೋ ಸೈಝ್ ಹಿಂದಿನ ರಹಸ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
