For Quick Alerts
ALLOW NOTIFICATIONS  
For Daily Alerts

ನೀಳವಾಗಿರಬೇಕಾದ ತೋಳಲ್ಲೇಕೆ ಇಷ್ಟೊಂದು ಬೊಜ್ಜು?

|
Arm fat
ತುಂಡು ತೋಳಿನ ಬಟ್ಟೆ ಹಾಕೋದಕ್ಕೆ ಹಿಂಜರಿಯುತ್ತಿದ್ದೀರಾ? ಇದಕ್ಕೆ ತೋಳುಗಳು ಅತಿಯಾದ ದಪ್ಪವಿರುವುದು ಕಾರಣವಿರಬಹುದು. ಒಬ್ಬೊಬ್ಬರಿಗೆ ದೇಹ ಸರಿಯಾದ ತೂಕದಲ್ಲಿದ್ದರೂ ತೋಳುಗಳಲ್ಲಿ ಮಾತ್ರ ಅತಿಯಾದ ಬೊಜ್ಜು ತುಂಬಿಕೊಂಡಿರುತ್ತೆ. ಈ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಕೆಲವೊಂದು ನಿಯಮಗಳನ್ನು ಪಾಲಿಸಿದರೆ ತೋಳಿನ ಬೊಜ್ಜನ್ನು ಬೇಗನೆ ನಿಯಂತ್ರಣಕ್ಕೆ ತರಬಹುದು.

ತೋಳಿನ ಬೊಜ್ಜನ್ನು ಬೇಗನೆ ಕರಗಿಸುವ ಕೆಲವು ಟಿಪ್ಸ್ ಗಳು:

1. ಬೊಜ್ಜು ಕರಗಿಸುವುದು ಎಂದಾಕ್ಷಣ ನೆನಪಿಗೆ ಬರುವುದು ವ್ಯಾಯಾಮ. ಅತಿಯಾಗಿ ಸೇರಿಕೊಂಡಿರುವ ಬೊಜ್ಜನ್ನು ಬೈಸಿಪ್ಸ್, ಟ್ರೈಸಿಪ್ಸ್ ಮತ್ತು ಇನ್ನಿತರ ತೋಳಿಗೆ ಮಾಡಬಹುದಾದಂತ ವ್ಯಾಯಾಮಗಳನ್ನು ಮಾಡಬಹುದು. ಡಂಬಲ್ಸ್ ನಲ್ಲಿ ತೋಳಿನ ವ್ಯಾಯಾಮ ಮಾಡಿದರೆ ತುಂಬಾ ಪರಿಣಾಮಕಾರಿ.

2. ಏರೊಬಿಕ್ಸ್ ಕೂಡ ತೋಳಿನ ಬೊಜ್ಜು ಕರಗಿಸುವಲ್ಲಿ ಅತಿ ಸಹಕಾರಿ. ಇದನ್ನು ದಿನಕ್ಕೆ ಎರಡು ಬಾರಿ ಅಭ್ಯಾಸ ಮಾಡಿದರೆ ಖಂಡಿತ ತೋಳುಗಳು ಒಂದು ಹಂತ ಕಡಿಮೆಯಾಗುತ್ತದೆ.

3. ಒಳ್ಳೆಯ ಆಹಾರ ಸೇವನೆಯೂ ಬೊಜ್ಜನ್ನು ಕರಗಿಸುವ ಸುಲಭ ಮಾರ್ಗ. ಕೊಬ್ಬಿನಂಶ ಹೆಚ್ಚಿರುವ ಆಹಾರಗಳ ಬದಲು ಕಾರ್ಬೊಹೈಡ್ರೇಡ್ ಮತ್ತು ಪ್ರೊಟೀನ್ ಇರುವ ಆಹಾರ ಸೇವನೆಯತ್ತ ಗಮನ ಹರಿಸಬೇಕು. ಈ ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮ ಖಂಡಿತ ಬೊಜ್ಜಿನ ನಿರ್ಣಾಮಕ್ಕೆ ಸಹಾಯ ಮಾಡುತ್ತದೆ.

4. ಕೈಗಳ ಅಥವಾ ತೋಳುಗಳ ಬೊಜ್ಜನ್ನು ಕರಗಿಸಿ ಮೂಳೆಗಳು ಬಲಿಷ್ಠಗೊಳ್ಳುವಂತೆ ಮಾಡಲು ಬಗ್ಗಿ ಮಾಡುವ ವ್ಯಾಯಾಮಗಳನ್ನು ಅನುಸರಿಸಬಹುದು. ನೆಲದ ಮೇಲೆ ಕಾಲು ಚಾಚಿ ಕೂತು ಮಂಡಿಯನ್ನು ಮಡಚದೆಯೇ ಕಾಲಿನ ಹೆಬ್ಬೆರಳನ್ನು ಅಂಗೈನಿಂದ ಮುಟ್ಟಿಸಿ ಹೀಗೆ ಸುಮಾರು ಬಾರಿ ಮಾಡಬೇಕು.

5. ಹೆಚ್ಚಿನ ಕ್ಯಾಲೊರೀಗಳು ಕರಗುವಂತೆ ಮಾಡಲು ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಮೇಲೆ ಎತ್ತುವುದು, ಆ ಕಡೆ ಈ ಕಡೆ ಕೈಗಳನ್ನು ಆಡಿಸುವುದು, ಹೀಗೆ ಕೈಗಳ ವ್ಯಾಯಾಮವನ್ನು ಸುಮ್ಮನೆ ಕೂತಿದ್ದಾಗಲೋ, ಸಮಯ ಸಿಕ್ಕಾಗಲೆಲ್ಲಾ ಮಾಡುತ್ತಿದ್ದರೆ ಬೊಜ್ಜು ತಾನಾಗೇ ಇಲ್ಲವಾಗುತ್ತದೆ.

English summary

ಬೊಜ್ಜಿನ ಸಮಸ್ಯೆ | ತೋಳಿನ ಅತಿಯಾದ ಬೊಜ್ಜು ಕರಗಿಸಲು ಸುಲಭ ಮಾರ್ಗ | Obesity problem | Lose arm fat fast

The very reason why people avoid wearing short clothes is because they feel that the saggy muscle looks unattractive and add to the obese look. See what you can do to get rid of the arm fat.
Story first published: Thursday, August 11, 2011, 12:25 [IST]
X
Desktop Bottom Promotion