For Quick Alerts
ALLOW NOTIFICATIONS  
For Daily Alerts

ಮಧುಮೇಹದಿಂದ ಕಿಡ್ನಿ ವೈಫಲ್ಯದ ಸಾಧ್ಯತೆ ಇದೆ-ಇದರ ಲಕ್ಷಣಗಳು ಇಲ್ಲಿದೆ ನೋಡಿ

|

ಮಧುಮೇಹ ಎನ್ನುವುದು ಸೈಲೆಂಟ್ ಕಿಲ್ಲರ್'ಎಂದೇ ಹೇಳಬಹುದು. ಇದು ದೇಹವನ್ನು ಆವರಿಸಿಕೊಂಡರೆ, ಮತ್ತೆ ಅದು ಹಲವಾರು ರೀತಿಯಲ್ಲಿ ಕಾಡುತ್ತಲೇ ಇರುವುದು. ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ, ಆಗ ಜೀವನವನ್ನು ಉತ್ತಮ ರೀತಿಯಲ್ಲಿ ಸಾಗಿಸಬಹುದು. ಆದರೆ ಮಧುಮೇಹದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಆಗ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಧುಮೇಹವನ್ನು ತುಂಬಾ ಗಂಭೀರವಾದ ಸಮಸ್ಯೆ ಎಂದು ಪರಿಗಣಿಸಬೇಕು.

ಮಧುಮೇಹವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಿ ದೇಹದ ಇತರ ಅಂಗಾಂಗಗಳ ಮೇಲೂ ಇದರ ಪರಿಣಾಮ ಆಗುವುದು. ರಕ್ತದಲ್ಲಿ ಸಕ್ಕರೆ ಮಟ್ಟವು ಹೆಚ್ಚಾದರೆ, ಆಗ ರೋಗಿಯ ಕಿಡ್ನಿ ಮೇಲೆ ಕೂಡ ಇದು ಪರಿಣಾಮ ಬೀರುವುದು. ಮಧುಮೇಹ ಚಿಕಿತ್ಸೆ ನೀಡದೆ ಇದ್ದರೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದರೆ, ಆಗ ಅದು ಕಿಡ್ನಿ ವೈಫಲ್ಯಕ್ಕೆ ಕಾರಣ ಆಗುವುದು. ಕಿಡ್ನಿ ಮೇಲೆ ಪರಿಣಾಮ ಬೀರಿದ ವೇಳೆ ಮಧುಮೇಹಿಗಳಲ್ಲಿ ಕೆಲವೊಂದು ಚಿಹ್ನೆಗಳು ಹಾಗೂ ಲಕ್ಷಣಗಳು ಕಾಣಿಸಿಕೊಳ್ಳುವುದು. ಈ ಲಕ್ಷಣಗಳನ್ನು ಕಡೆಗಣಿಸಬಾರದು.

ಮಧುಮೇಹ ಮತ್ತು ಕಿಡ್ನಿ ವೈಫಲ್ಯಕ್ಕೆ ಇರುವ ಸಂಬಂಧ

ಮಧುಮೇಹ ಮತ್ತು ಕಿಡ್ನಿ ವೈಫಲ್ಯಕ್ಕೆ ಇರುವ ಸಂಬಂಧ

ಕಿಡ್ನಿಯು ರಕ್ತವನ್ನು ಶುದ್ಧೀಕರಿಸುವ ಕೆಲಸ ಮತ್ತು ದೇಹದಲ್ಲಿರುವ ಕಲ್ಮಷವನ್ನು ಹೊರಹಾಕುವ ಕಾರ್ಯ ನಿರ್ವಹಿಸುವುದು. ರಕ್ತದಲ್ಲಿ ಸಕ್ಕರೆ ಅಂಶವು ಅಧಿಕವಾಗಿದ್ದರೆ ಆಗ ಕಿಡ್ನಿಯ ಕಾರ್ಯದ ಮೇಲೆ ಇದು ಪರಿಣಾಮ ಬೀರುವುದು ಮತ್ತು ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದು. ಇದಕ್ಕೆ ಸರಿಯಾದ ಚಿಕಿತ್ಸೆ ಮಾಡದೆ ಇದ್ದರೆ ಆಗ ಕಿಡ್ನಿಯು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೆ ಇರಬಹುದು. ಮಧುಮೇಹಿ ಇರುವ ವ್ಯಕ್ತಿಯು ಧೂಮಪಾನ ಮಾಡುತ್ತಲಿದ್ದರೆ ಅಥವಾ ಮದ್ಯಪಾನಿ ಆಗಿದ್ದರೆ ಆಗ ಪರಿಸ್ಥಿತಿಯು ಮತ್ತಷ್ಟು ಕೆಡುವುದು.

ಮಧುಮೇಹಿಗಳಲ್ಲಿ ಕಿಡ್ನಿ ವೈಫಲ್ಯದ ಲಕ್ಷಣಗಳು

ಮಧುಮೇಹಿಗಳಲ್ಲಿ ಕಿಡ್ನಿ ವೈಫಲ್ಯದ ಲಕ್ಷಣಗಳು

ಹೆಚ್ಚಿನ ಮಧುಮೇಹಿಗಳಿಗೆ ಪದೇ ಪದೇ ಮೂತ್ರ ವಿಸರ್ಜನೆ ಅಗತ್ಯತೆ ಕಂಡುಬರಬಹುದು. ಆದರೆ ಕಿಡ್ನಿ ವೈಫಲ್ಯ ಆಗಿರುವಂತಹ ವ್ಯಕ್ತಿಗಳಲ್ಲಿ ಇದು ಮೂತ್ರ ವಿಸರ್ಜನೆ ಸಮಸ್ಯೆ ತೀವ್ರ ಆಗಿರ ಬಹುದು. ಮೂತ್ರದಲ್ಲಿ ಪ್ರೋಟೀನ್ ಅಂಶವು ಹೆಚ್ಚಾಗಿ ಕಂಡು ಬರಬಹುದು. ವೈದ್ಯರು ಕೆಲವು ನಿಯಮಿತ ಪರೀಕ್ಷೆ ಮಾಡುವ ಮೂಲಕ ಇದನ್ನು ಪತ್ತೆ ಮಾಡಬಹುದು.

ದೃಷ್ಟಿ ಮಂದವಾಗುವುದು

ದೃಷ್ಟಿ ಮಂದವಾಗುವುದು

ಕಣ್ಣಿನಲ್ಲಿರುವ ರೆಟಿನಾವು ಸರಿಯಾಗಿ ಕಾರ್ಯನಿರ್ವಹಿಸಬೇಕಿದ್ದರೆ ಆಗ ರಕ್ತವು ಅಲ್ಲಿಗೆ ಸರಬರಾಜು ಆಗುವುದು ಅತೀ ಅಗತ್ಯ ವಾಗಿರುವುದು. ತುಂಬಾ ತೆಳುವಾಗಿರುವಂತಹ ರಕ್ತನಾಳಗಳು ಇಲ್ಲಿಗೆ ರಕ್ತ ಸರಬರಾಜು ಮಾಡುತ್ತದೆ. ದೀರ್ಘ ಕಾಲದ ತನಕ ಮಧುಮೇಹ ದ ಸಮಸ್ಯೆಯಿದ್ದರೆ ಆಗ ಈ ತೆಳು ರಕ್ತನಾಳಗಳಿಗೆ ಹಾನಿ ಆಗುವುದು. ಈ ಪರಿಸ್ಥಿತಿಯಲ್ಲಿ ಡಯಾಬಿಟಿಕ್ ರೆಟಿನೊಪತಿ ಎಂದು ಕರೆಯಲಾಗುತ್ತದೆ. ಕೆಲವು ವರ್ಷಗಳಿಂದ ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ, ಆಗ ಡಯಾಬಿಟಿಕ್ ರೆಟಿನೊಪತಿ ಸಮಸ್ಯೆಯು ಬರುವ ಅಪಾಯವು ಹೆಚ್ಚಾಗಿರುವುದು. ಮಧುಮೇಹ ಇರುವಂತಹ ಜನರು ಆಗಾಗ ಕಣ್ಣಿನ ಪರೀಕ್ಷೆ ಮಾಡಿಕೊಂಡು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಳ್ಳುವುದನ್ನು ತಪ್ಪಿಸಬಹುದು.

ಉರಿಯೂತ

ಉರಿಯೂತ

ಪಾದಗಳು ಮತ್ತು ಪಾದದ ನರಗಳಲ್ಲಿ ಊತ ಕಾಣಿಸಿಕೊಳ್ಳುವುದು ಕೂಡ ಈ ಸಮಸ್ಯೆಯ ಒಂದು ಲಕ್ಷಣ ಆಗಿದ್ದು, ಇದನ್ನು ಕಡೆಗಣಿಸಬಾರದು. ಊತವು ಪಾದಗಳಲ್ಲಿ ಕಾಣಿಸಿಕೊಳ್ಳುವುದು. ಈ ವೇಳೆ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಅನಿವಾರ್ಯ ಆಗಿದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಮಧುಮೇಹವು ಕಿಡ್ನಿ ಮೇಲೆ ಪರಿಣಾಮ ಬೀರಲು ಆರಂಭಿಸಿದ ಮೇಲೆ ದೇಹದಲ್ಲಿ ಮತ್ತೊಂದು ರೀತಿಯ ಲಕ್ಷಣವು ಕಾಣಿಸುವುದು. ಅದೇನೆಂದರೆ ಅಧಿಕ ರಕ್ತದೊತ್ತಡ. ಮಧುಮೇಹವು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ರಕ್ತದೊತ್ತಡವು ಹೆಚ್ಚಾಗುವುದು. ರಕ್ತನಾಳಗಳು ಕುಗ್ಗುವ ಪರಿಣಾಮದಿಂದಾಗಿ ಸರಿಯಾಗಿ ರಕ್ತ ಪರಿಚಲನೆಗೆ ಸಮಸ್ಯೆ ಆಗುವುದು.

ಮಧುಮೇಹ ತಪ್ಪಿಸಲು ಕೆಲವು ವಿಧಾನಗಳು

ಮಧುಮೇಹ ತಪ್ಪಿಸಲು ಕೆಲವು ವಿಧಾನಗಳು

*ದಿನದಲ್ಲಿ ಸುಮಾರು 30 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡಿ.

*ರಕ್ತದೊತ್ತಡದ ಮೇಲೆ ಯಾವಾಗಲೂ ಗಮನವಿಡಿ.

*ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಸೇವಿಸಿ.

*ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಿ.

*ಮಧುಮೇಹದ ಆರಂಭಿಕ ಲಕ್ಷಣಗಳು ಇದ್ದರೆ, ತಕ್ಷಣವೇ ಕ್ರಮ ತೆಗೆದುಕೊಳ್ಳಿ.

*ದೇಹದ ತೂಕ ಅಧಿಕವಾಗಿದ್ದರೆ ಕೂಡಲೇ ಅದನ್ನು ತಗ್ಗಿಸಿ.

ಸಾಕಷ್ಟು ನೀರು ಕುಡಿಯಿರಿ.

*ಒತ್ತಡದ ಮಟ್ಟ ಕಡಿಮೆ ಮಾಡಿ.

*ಕಾರ್ಬೊನೇಟೆಡ್ ಪಾನೀಯ ಮತ್ತು ಕೃತಕ ಜ್ಯೂಸ್ ಗಳ ಸೇವನೆ ಆದಷ್ಟು ಮಟ್ಟಿಗೆ ಕಡಿಮೆ ಮಾಡಿ.

*ಧೂಮಪಾನ ತ್ಯಜಿಸಿ.

*ನಾರಿನಾಂಶ ಹೆಚ್ಚು ಸೇವಿಸಿ

*ಹೆಚ್ಚು ಸಕ್ಕರೆ ಸೇವನೆ ಮಾಡಬೇಡಿ.

*ಸಂಸ್ಕರಿಸಲ್ಪಟ್ಟಿರುವಂತಹ ಆಹಾರ ಸೇವನೆ ಮಾಡಬೇಡಿ.

English summary

Diabetes can cause Kidney Failure: Know the symptoms

Diabetes is a serious health condition which can become deadly in some cases. Is disturbs the sugar levels of the patient which affects the other parts of the body as well. The kidneys of a diabetic patient also get affected due to the increased levels of sugar in the blood. Untreated diabetes can lead to higher levels of sugar in the blood which can even lead to kidney failure. There are some signs and symptoms which a diabetic patient may experience when his or her kidneys get affected. These symptoms should not be ignored.
X
Desktop Bottom Promotion