ಮಧುಮೇಹ ಹೊಂದಿರುವ ಯುವಜನರಲ್ಲಿ ಕಣ್ಣಿನ ಕಾಯಿಲೆ ಅಪಾಯ ಹೆಚ್ಚು!

By: Hemanth
Subscribe to Boldsky

ಮಧುಮೇಹವೆನ್ನುವುದು ಜನರನ್ನು ಇನ್ನಿಲ್ಲದಂತೆ ಕಾಡುವಂತಹ ಸಮಸ್ಯೆಯಾಗಿದೆ. ಅದರಲ್ಲೂ ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ಟೈಪ್ 2 ಮಧುಮೇಹವು ಕಾಣಿಸಿಕೊಳ್ಳುತ್ತಿದೆ. ಟೈಪ್ 2 ಮಧುಮೇಹವನ್ನು ಹೊಂದಿರುವ ಜನರಲ್ಲಿ ಕಣ್ಣಿನ ಕಾಯಿಲೆಯ ಅಪಾಯ ಹೆಚ್ಚಿದೆ ಎಂದು ಅಧ್ಯಯನಗಳು ಹೇಳಿವೆ.

ಡಯಾಬಿಟಿಕ್ ರೆಟಿನೋಪತಿ ಎನ್ನುವುದು ಸಾಮಾನ್ಯವಾಗಿ ಕಂಡುಬರುವಂತಹ ಕಣ್ಣಿನ ಕಾಯಿಲೆಯಾಗಿದೆ. ರೆಟಿನಾಲ್‌ನ ರಕ್ತನಾಳಗಳಲ್ಲಿ ರಕ್ತದ ಗ್ಲೂಕೋಸ್ ಮಟ್ಟವು ಹೆಚ್ಚಾದಾಗ ಈ ಕಾಯಿಲೆಯು ಕಾಣಿಸಿಕೊಳ್ಳುವುದು. 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಮಧುಮೇಹವನ್ನು ಹೊಂದಿರುವಂತಹ ಶೇ.80ರಷ್ಟು ಮಂದಿಯಲ್ಲಿ ಈ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ.

ವ್ಯಕ್ತಿಯೊಬ್ಬನಲ್ಲಿ ಟೈಪ್ 2 ಡಯಾಬಿಟಿಸ್ ಎಷ್ಟು ಬೇಗ ಕಾಣಿಸಿಕೊಳ್ಳುತ್ತದೆಯಾ ಅಷ್ಟು ವೇಗ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಕಣ್ಣಿನ ಸಮಸ್ಯೆಯು ಕಾಣಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ.  ತಿಂಗಳೊಳಗೆ 'ಟೈಪ್-2 ಮಧುಮೇಹ' ನಿಯಂತ್ರಣಕ್ಕೆ! ಇಲ್ಲಿದೆ ನೋಡಿ ಟಿಪ್ಸ್     

Diabetes

ಯುವ ಜನರಲ್ಲಿ ಕಾಣಿಸಿಕೊಳ್ಳುವಂತಹ ಮಧುಮೇಹವು ಡಯಾಬಿಟಿಕ್ ರೆಟಿನೋಪತಿಗೆ ಬೇಗನೆ ಬಲಿಯಾಗುತ್ತಾರೆ ಎಂದು ಮದ್ರಾಸ್ ಡಯಾಬಿಟಿಕ್ ರಿಸರ್ಚ್ ಫೌಂಡೇಶನ್ ನ ಮುತ್ತುಸ್ವಾಮಿ ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ. ಮೊನೊಸಿಟೆ ಚೆಮೊಟಾಕ್ಟಿಕ್ ಪ್ರೋಟೀನ್ 1(ಎಂಸಿಪಿ-1) ಮತ್ತು ಕ್ಯಾಥೆಸ್ಪಿನ್-ಡಿ, ಮಟ್ಟವು ಮಧುಮೇಹದ ರೋಗಿಗಳಲ್ಲಿ ಡಯಾಬಿಟಿಕ್ ರೆಟಿನೋಪತಿ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ ಎಂದು ಜರ್ನಲ್ ಆಫ್ ಡಯಾಬಿಟಿಸ್ ಆ್ಯಂಡ್ ಇಟ್ಸ್ ಕಾಂಪ್ಲಿಕೇಶನ್ ನಲ್ಲಿ ಬರೆಯಲಾಗಿದೆ. 

Eye Disease

ಟೈಪ್ 2 ಡಯಾಬಿಟಿಸ್ ಇರುಂತಹ ರೋಗಿಗಗಳಲ್ಲಿ ಎಂಸಿಪಿ-1 ಮತ್ತು ಕ್ಯಾಥೆಪ್ಸಿನ್-ಡಿ ಮಟ್ಟವು ಹೆಚ್ಚಾಗಿದ್ದರೆ ಅಂತವರಲ್ಲಿ ಡಯಾಬಿಟಿಕ್ ರೆಟಿನೋಪತಿ ಬೆಳೆಯುವ ಸಾಧ್ಯತೆ ಅಧಿಕವಾಗಿದೆ ಎಂದು ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ. ಹದಿಹರೆಯದ ರೋಗಿಗಗಳಲ್ಲಿ ಡಯಾಬಿಟಿಕ್ ರೆಟಿನೋಪತಿ ಬೆಳವಣಿಗೆಯನ್ನು ತಪ್ಪಿಸಲು ಬೇಕಾಗಿರುವಂತಹ ಕ್ರಮ ತೆಗೆದುಕೊಳ್ಳಲು ಮುಂದಿನ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಂಶೋಧನೆಗಳು ಹೇಳಿವೆ.

English summary

Youngsters With Diabetes More At Risk Of Eye Disease

Young adults with Type 2 diabetes may be at an increased risk of developing an eye disease, according to researchers.Diabetic retinopathy -- the most common form of eye disease -- occurs when changes in blood glucose levels cause changes in retinal blood vessels. It is one of the late complications of diabetes and usually affects up to 80 per cent of people who have had diabetes for 20 years or more.
Subscribe Newsletter