For Quick Alerts
ALLOW NOTIFICATIONS  
For Daily Alerts

ನವರಾತ್ರಿ ವಿಶೇಷ: ಮಧುಮೇಹಿಗಳಿಗೆ ಉಪವಾಸದ 12 ಸುರಕ್ಷಿತ ಮಾರ್ಗಗಳು

By Divya Pandith
|

ಹಿಂದೂಗಳ ಪವಿತ್ರ ಹಬ್ಬವಾದ ನವರಾತ್ರಿಯಲ್ಲಿ ಉಪವಾಸ ಕೈಗೊಳ್ಳುವುದು ಒಂದು ಪ್ರಮುಖ ಪದ್ಧತಿ. ಮಂಗಳಕರವಾದ ಈ ಪದ್ಧತಿಯನ್ನು ಅನೇಕರು ಅನುಸರಿಸುತ್ತಾರೆ. ಕೆಲವರು ಮೂರುದಿನಗಳ ಕಾಲ ಉಪವಾಸ ಕೈಗೊಂಡರೆ ಇನ್ನು ಕೆಲವರು ಒಂಬತ್ತು ದಿನಗಳಕಾಲ ಉಪವಾಸ ಕೈಗೊಳ್ಳುತ್ತಾರೆ. ಈ ಪದ್ಧತಿ ವೈಜ್ಞಾನಿಕವಾಗಿ ಹಾಗೂ ಧಾರ್ಮಿಕವಾಗಿಯೂ ಹೆಚ್ಚು ಶ್ರೇಷ್ಠತೆಯನ್ನು ಪಡೆದುಕೊಂಡಿದೆ.

ಹಬ್ಬ ಸಮೀಪಿಸುತ್ತಿರುವುದರಿಂದ ಅನೇಕ ಮಧುಮೇಹಿಗಳಿಗೆ ಉಪವಾಸದ ವಿಚಾರ ಕೆಲವು ಸಂದಿಗ್ಧವಾದ ಗೊಂದಲ ಉಂಟು ಮಾಡುತ್ತಿರ ಬಹುದು. ಉಪವಾಸ ಕೈಗೊಂಡರೆ ಆರೋಗ್ಯ ಹದಗೆಡುವುದು. ಆರೋಗ್ಯವನ್ನು ಪರಿಗಣಿಸಿದರೆ ಪವಿತ್ರ ಪದ್ಧತಿಗೆ ಅಪಚಾರ ಉಂಟಾಗುವುದು. ಈ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲವು ಆಹಾರ ಕ್ರಮವನ್ನು ನಿರ್ವಹಿಸಬಹುದು.

ಆರೋಗ್ಯದ ದೃಷ್ಟಿಯಿಂದ ನವರಾತ್ರಿಯ ಸಮಯದಲ್ಲಿ ಈ ಆಹಾರಗಳಿಂದ ದೂರವಿರಿ

ಹಬ್ಬದ ಸಂದರ್ಭದಲ್ಲಿ ಮಾಂಸ, ಧಾನ್ಯ, ಈರುಳ್ಳಿ, ಬೆಳ್ಳುಳ್ಳಿ, ಮಧ್ಯಪಾನವನ್ನು ಸ್ವೀಕರಿಸಬಾರದು, ಅಲ್ಲದೆ ಸಾಮಾನ್ಯ ಉಪ್ಪಿಗಿಂತ ಕಲ್ಲುಪ್ಪು ಹೆಚ್ಚು ಶುದ್ಧ ಎನ್ನುವ ವಿಚಾರಕ್ಕೆ ಸಾಮಾನ್ಯ ಉಪ್ಪನ್ನು ಬಳಸಬಾರದು. ಬನ್ನಿ ನವರಾತ್ರಿ ಉತ್ಸವದ ಸಮಯದಲ್ಲಿ ಮಧುಮೇಹಿಗಳು ಚಿಂತೆಯಲ್ಲಿದೆ 12 ಸುರಕ್ಷಿತ ವಿಧಾನಗಳ ಮೊರೆ ಹೋಗಬಹುದು. ಅವುಗಳ ವಿವರ ಇಲ್ಲಿದೆ ನೋಡಿ.

ಸಣ್ಣ ಅಂತರದಲ್ಲಿ ಆಹಾರವನ್ನು ಸ್ವೀಕರಿಸಿ

ಸಣ್ಣ ಅಂತರದಲ್ಲಿ ಆಹಾರವನ್ನು ಸ್ವೀಕರಿಸಿ

ಮಧುಮೇಹಿಗಳು ನವರಾತ್ರಿಯ ಉಪವಾಸ ಹಾಳಾಗದಂತೆ ಕೆಲವು ಗಂಟೆಗೊಮ್ಮೆ ತರಕಾರಿ ಅಥವಾ ಹಣ್ಣುಗಳನ್ನು ಸ್ವೀಕರಿಸಬಹುದು. ಹೀಗೆ ಮಾಡುವುದರಿಂದ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಬಹುದು.

ನಾರಿನಂಶ ಸಮೃದ್ಧವಾಗಿರಲಿ

ನಾರಿನಂಶ ಸಮೃದ್ಧವಾಗಿರಲಿ

ಅಲ್ಪಾವಧಿಯಲ್ಲಿ ನೀವು ಸ್ವೀಕರಿಸುವ ಹಣ್ಣು ಹಾಗೂ ತರಕಾರಿಗಳು ನಾರಿನಂಶ (ಫೈಬರ್) ಸಮೃದ್ಧವಾಗಿರಬೇಕು. ಆಗ ಸಂಪೂರ್ಣವಾಗಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಟೀ ಮತ್ತು ಕಾಫಿ ಕುಡಿಯದಿರಿ

ಟೀ ಮತ್ತು ಕಾಫಿ ಕುಡಿಯದಿರಿ

ಉಪವಾಸದ ಸಮಯದಲ್ಲಿ ಹೆಚ್ಚಿನವರು ಟೀ ಮತ್ತು ಕಾಫಿಯ ಮೊರೆ ಹೋಗುತ್ತಾರೆ. ನೀವು ಈ ಪದ್ಧತಿಯಿಂದ ದೂರವಿರಬೇಕು. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇರುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು.

ಸಾಕಷ್ಟು ನೀರನ್ನು ಸೇವಿಸಿ

ಸಾಕಷ್ಟು ನೀರನ್ನು ಸೇವಿಸಿ

ಉಪವಾಸದ ಸಂದರ್ಭದಲ್ಲಿ ನಾವು ಹೆಚ್ಚು ನೀರನ್ನು ಸೇವಿಸಬೇಕು. ಆಗ ದೇಹದಲ್ಲಿ ನೀರಿನಂಶ ಕಡಿಮೆಯಾಗದೆ ಆರೋಗ್ಯವಾಗಿರಬಹುದು. ಆರೋಗ್ಯಕ್ಕೆ ಅನುಕೂಲವಾಗುವಷ್ಟು ನೀರನ್ನು ಸೇವಿಸುತ್ತಲಿರಿ.

ಎಳ್ಳನೀರು ಕುಡಿಯಿರಿ

ಎಳ್ಳನೀರು ಕುಡಿಯಿರಿ

ತೆಂಗಿನಕಾಯಿ ನೀರು/ಎಳ್ಳನೀರು ಸಕ್ಕರೆ ಮುಕ್ತ ಪಾನೀಯ. ಇದು ದೇಹಕ್ಕೆ ಬೇಕಾದ ಆಂಟಿಆಕ್ಸಿಡೆಂಟ್, ಅಮೈನೋ ಆಮ್ಲ, ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಇತರ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇದರ ಸೇವನೆಯಿಂದ ಹೆಚ್ಚು ಉತ್ಸಾಹ ಹಾಗೂ ಶಕ್ತಿಶೀಲರಾಗಿ ಓಡಾಡಬಹುದು.

ಮಜ್ಜಿಗೆ

ಮಜ್ಜಿಗೆ

ಯಾವುದೇ ಸಕ್ಕರೆ ಅಮಶವಿಲ್ಲದೆ ಎಲೆಕ್ಟ್ರೋಲೈಟ್‍ಗಳಿಂದ ಸಮೃದ್ಧವಾದದ್ದು ಮಜ್ಜಿಗೆ. ದೇಹದಲ್ಲಿ ನೀರಿನಂಶದ ಪ್ರಮಾಣವನ್ನು ಕಾಪಾಡುತ್ತದೆ. ಮಧುಮೇಹಕ್ಕೆ ಜಲಸಂಚಲನ ಅತ್ಯುತ್ತಮ ಮೂಲವಾಗಿದೆ.

ಅತಿಯಾಗಿ ತಿನ್ನುವುದನ್ನು ನಿಲ್ಲಿಸಿ

ಅತಿಯಾಗಿ ತಿನ್ನುವುದನ್ನು ನಿಲ್ಲಿಸಿ

ಜನರು ಸಾಮಾನ್ಯವಾಗಿ ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಉಪಹಾರವನ್ನಾಗಿ ತಿನ್ನುತ್ತಾರೆ. ಮಧುಮೇಹಿಗಳು ಹೆಚ್ಚು ಕ್ಯಾಲೋರಿ ಮತ್ತು ಸಕ್ಕರೆ ಪ್ರಮಾಣ ಇರುವ ಆಹಾರವನ್ನು ತಿನ್ನಬಾರದು. ಇವರು ಬೇಯಿಸಿದ ಆಹಾರ ಸೇವಿಸುವುದು ಒಳ್ಳೆಯದು.

ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ

ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ

ಉಪವಾಸದ ಸಂದರ್ಭದಲ್ಲಿ ಆಗಾಗ ಸಕ್ಕರೆ ಪ್ರಮಾಣ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಇಲ್ಲವಾದರೆ ಗಂಭೀರ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳಿರುತ್ತದೆ.

ಇನ್ಸುಲಿನ್ ಪ್ರಮಾಣ ಕಾಯ್ದುಕೊಳ್ಳಿ

ಇನ್ಸುಲಿನ್ ಪ್ರಮಾಣ ಕಾಯ್ದುಕೊಳ್ಳಿ

ಉಪವಾಸ ಕ್ರಮಕ್ಕೆ ಮನಸ್ಸನ್ನು ಸಿದ್ಧಪಡಿಸಿದಂತೆ ಇನ್ಸುಲಿನ್ ಪ್ರಮಾಣದಲ್ಲೂ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುವುದು.

ವ್ಯಾಯಾಮ ಮಾಡಿ

ವ್ಯಾಯಾಮ ಮಾಡಿ

ದೈನಂದಿನ ವ್ಯಾಯಾಮ ಕ್ರಮವನ್ನು ತಪ್ಪಿಸಬಾರದು. 2ನೇ ಬಗೆಯ ಮಧುಮೇಹಿಗಳು ರಾತ್ರಿ ಊಟ ಹೊಂದುವ ಮೊದಲು ಅವಶ್ಯವಾಗಿ 2-3 ಗಂಟೆಗಳ ವ್ಯಾಯಾಮ ಮಾಡಬೇಕು.

ತುರ್ತು ಪರಿಸ್ಥಿತಿಯಲ್ಲಿ ಉಪಹಾರವನ್ನು ಸ್ವೀಕರಿಸಬೇಕು

ತುರ್ತು ಪರಿಸ್ಥಿತಿಯಲ್ಲಿ ಉಪಹಾರವನ್ನು ಸ್ವೀಕರಿಸಬೇಕು

ರಕ್ತದಲ್ಲಿ ಸಕ್ಕರೆ ಮಟ್ಟವು ಶೇ.70 ಮಿ.ಗ್ರಾಂ. ಗಿಂತ ಕಡಿಮೆ ಇದ್ದರೆ ಮಧುಮೇಹಿಗಳು ಉಪವಾಸವನ್ನು ಬಿಟ್ಟು ಉಪಹಾರವನ್ನು ಹೊಂದಬೇಕು.

ವೈದ್ಯರ ಸಲಹೆ ಪಡೆಯಿರಿ

ವೈದ್ಯರ ಸಲಹೆ ಪಡೆಯಿರಿ

ಉಪವಾಸವನ್ನು ಕೈಗೊಳ್ಳುವ ಮೊದಲು ಒಮ್ಮೆ ನೀವು ಸದಾ ತೋರಿಸಿಕೊಳ್ಳುವ ವೈದ್ಯರ ಸಲಹೆ ಹಾಗೂ ತಪಾಸಣೆಗೆ ಒಳಗಾಗುವುದು ಸೂಕ್ತ.

English summary

Navratri Special: Here Are 12 Safe Ways To Fast For Diabetics

For those people who are diabetic, can they observe fasting? As the festival nears, this must be the question in the minds of many diabetics and they must be lingering in a dilemma. Well, there is no hard and fast rule that diabetics cannot fast. They can observe fast provided they take special care about their health during the period.
X
Desktop Bottom Promotion