For Quick Alerts
ALLOW NOTIFICATIONS  
For Daily Alerts

ಮಾವಿನ ಎಲೆ ಮಧುಮೇಹ ನಿಯಂತ್ರಿಸಬಲ್ಲದು!

By Super Admin
|

ಮಧುಮೇಹವೆನ್ನುವ ರೋಗ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ವಯಸ್ಸು ಮತ್ತು ಲಿಂಗ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಕಾಡಲು ಆರಂಭಿಸಿದೆ. ಹಿಂದೆ ಮಧುಮೇಹವೆನ್ನುವುದು ಕೇವಲ ವಯಸ್ಸಾದವರಿಗೆ ಬರುವ ರೋಗವಾಗಿತ್ತು. ಆದರೆ ಹೀಗ ಆಗಿಲ್ಲ. ಪ್ರತಿಯೊಬ್ಬರನ್ನೂ ಇದು ಕಾಡುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಈ ರೋಗವು ಆವರಿಸುತ್ತದೆ. ದಿನೇ ದಿನೇ ಮಧುಮೇಹಕ್ಕೆ ಒಳಗಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಾ ಇದೆ. ಸದ್ದಿಲ್ಲದೆ ಸದ್ದುಮಾಡುವ 'ಮಧುಮೇಹದ' ಬಗ್ಗೆ ಇರಲಿ ಎಚ್ಚರ!

ನಾವು ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡು ಸೂಕ್ತವಾದ ಆಹಾರ ತಿನ್ನದಿರುವುದೇ ಇದಕ್ಕೆ ಕಾರಣವಾಗಿದೆ. 50 ದಾಟಿದವರಲ್ಲಿ ಈ ರೋಗವು ಸಾಮಾನ್ಯವೆನ್ನುವಂತಾಗಿದೆ. ಇದಕ್ಕಾಗಿ ಪ್ರತೀ ದಿನವೂ ಔಷಧಿ ತೆಗೆದುಕೊಳ್ಳಬೇಕು. ಇದು ದೇಹವನ್ನು ಬಿಡದೇ ಕಾಡುವಂತಹ ರೋಗವಾಗಿದೆ.

Diabetes

ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲ ಕೆಲವೊಂದು ಮನೆಮದ್ದುಗಳು ಇವೆ. ಮಾವಿನ ಎಲೆಗಳನ್ನು ಬಳಸಿಕೊಂಡು ಮಾಡುವಂತಹ ಗಿಡಮೂಲಿಕೆಯ ಮದ್ದನ್ನು ಬಳಸಿದರೆ ಮಧುಮೇಹ ನಿಯಂತ್ರಣದಲ್ಲಿಡಬಹುದು. ಇದು ಹೇಗೆಂದು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು
*ಮಾವಿನ ಎಲೆ-2
*ಹಾಲು 1 ಚಮಚ ಮಾವಿನ ಎಲೆ: ಮಧುಮೇಹ, ಅಸ್ತಮಾ ರೋಗಕ್ಕೆ ರಾಮಬಾಣ

ಈ ನೈಸರ್ಗಿಕ ಚಿಕಿತ್ಸೆಯು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯೆಂದು ಸಾಬೀತಾಗಿದೆ. ಇದನ್ನು ನಿಯಮಿತವಾಗಿ ಸೇವಿಸುತ್ತಾ ಸರಿಯಾದ ಆಹಾರ ಕ್ರಮ ಪಾಲಿಸಿ ವ್ಯಾಯಾಮ ಮಾಡುತ್ತಲಿರಬೇಕು.
ತಯಾರಿಸುವ ಹಾಗೂ ಸೇವಿಸುವ ವಿಧಾನ
• ಹೇಳಿದಷ್ಟು ಪ್ರಮಾಣದ ಮಾವಿನ ಎಲೆಗಳನ್ನು ತೊಳೆದು 15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.
•ತಣ್ಣಗಾದ ನೀರು ಹಾಗೂ ಎಲೆಯನ್ನು ರಾತ್ರಿಯಿಡಿ ಹಾಗೆ ಬಿಟ್ಟುಬಿಡಿ.


•ಬೆಳಿಗ್ಗೆ ಈ ನೀರನ್ನು ಮತ್ತೆ ಕುದಿಸಿ. ಎಲೆಗಳನ್ನು ತೆಗೆದು, ಹೇಳಿದಷ್ಟು ಪ್ರಮಾಣದ ಬಿಸಿ ಹಾಲನ್ನು ಹಾಕಿಕೊಳ್ಳಿ. ಈ ಮಿಶ್ರಣವನ್ನು ಒಂದು ಕಪ್ ಗೆ ಹಾಕಿಕೊಳ್ಳಿ.
•ಮಧುಮೇಹದ ಔಷಧಿ ಈಗ ಕುಡಿಯಲು ಸಿದ್ಧವಾಗಿದೆ.
•ಪ್ರತೀ ದಿನ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ.
ಯಾವುದಕ್ಕೂ ನಿಮ್ಮ ಫ್ಯಾಮಿಲಿ ವೈದ್ಯರ ಬಳಿ ಸಲಹೆ ಪಡೆದುಕೊಳ್ಳಿ
English summary

Common Leaves Can Reduce Diabetes Symptoms In A Month!

People with diabetes have to follow a strict diet and take strong medications to control the symptoms. So, it is always better to look for home remedies that can treat diabetes effectively. Here is a herbal remedy for diabetes, made using mango leaves, that can be very effective.
Story first published: Wednesday, September 14, 2016, 20:31 [IST]
X
Desktop Bottom Promotion