For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಮೇಲೆ ಡಯಾಬಿಟಿಸ್ ಪ್ರಭಾವವೇನು?

By Dr. Arpandev Bhattacharyya
|
Pregnancy Diabetes Types

ಗರ್ಭಿಣಿಯರ ಮೇಲೆ ಡಯಾಬಿಟಿಸ್ ಪ್ರಭಾವವೇನು?

ಮಧುಮೇಹವುಳ್ಳ ಗರ್ಭಿಣಿಯರ ಮೇಲೆ ಪ್ರಸೂತಿ ತಜ್ಞರು ಹಾಗೂ ಮಧುಮೇಹ ಚಿಕಿತ್ಸೆ ನೀಡುತ್ತಿರುವ ವೈದ್ಯರು ಇಬ್ಬರು ವಿಶೇಷ ಕಾಳಜಿವಹಿಸುವುದು ಅಗತ್ಯ. ಡಯಾಬಿಟಿಕ್ ಗರ್ಭಾವಸ್ಥೆಗಳಲ್ಲಿ ಎರಡು ವಿಧ ಇದೆ.ಒಂದು ಟೈಪ್ 1 ಅಥವಾ ಟೈಪ್ 2 ಮಧುಮೇಹ ಇದೆ ಎಂದು ಗರ್ಭಿಣಿಗೆ ತಿಳಿದಿರುತ್ತದೆ. ಹಾಗೂ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಇದನ್ನು pre-gestational Diabetes ಎಂದು ಕರೆಯಲಾಗುತ್ತದೆ. ಇನ್ನೊಂದು ಗರ್ಭಾವಸ್ಥೆ ಅವಧಿಯಲ್ಲಿ ಡಯಾಬಿಟಿಸ್ ತಗುಲಿಕೊಂಡು ತೊಂದರೆಗೆ ಒಳಪಟ್ಟರೆ ಅದನ್ನು Gestational Diabetes ಎನ್ನಲಾಗುತ್ತದೆ. ಗರ್ಭಿಣಿಯರು ತಮಗೆ ಡಯಾಬಿಟಿಸ್ ಇದೆಯೇ ಇಲ್ಲವೇ ಎಂಬುದರ ಬಗ್ಗೆ ಪರೀಕ್ಷೆ ಮಾಡಿಸಿಕೊಂಡ ನಂತರ, ತಮ್ಮ ಪ್ರಸೂತಿ ತಜ್ಞರೊಡನೆ ಈ ಬಗ್ಗೆ ಸಮಾಲೋಚನೆ ನಡೆಸತಕ್ಕದ್ದು. ಪ್ರಸವದ ನಂತರ(GTT) 6 ವಾರಕ್ಕೊಮ್ಮೆ ಬಾಣಂತಿಯರು ರಕ್ತ ಪರೀಕ್ಷೆ(ಸಕ್ಕರೆ ಅಂಶ ಪತ್ತೆಗೆ) ಮಾಡಿಸಿಕೊಳ್ಳಬೇಕು. ಇದರಿಂದ ಡಯಾಬಿಟಿಸ್ ನ ನಿಯಂತ್ರಣ ಹಾಗೂ ನಿರ್ಮೂಲನೆ ಸಾಧ್ಯ.

ಗರ್ಭಾವಸ್ಥೆಯಲ್ಲಿ ಯಾರಿಗೆ ಸಕ್ಕರೆ ಕಾಯಿಲೆ ಬೇಗ ತಗಲುತ್ತದೆ?

ಸ್ಥೂಲಕಾಯ, ನಿಮ್ಮ ಕುಟುಂಬದಲ್ಲಿ ಮಧುಮೇಹಿಗಳ ಚರಿತ್ರೆ, ಅಧಿಕ ರಕ್ತದೊತ್ತಡ, ಕಳೆದ ಗರ್ಭಾವಸ್ಥೆಯಲ್ಲಿ ಭಾರಿ ತೂಕದ ಮಗುವಿಗೆ ಜನ್ಮಕೊಟ್ಟಿರುವುದು, 35 ವರ್ಷಗಳ ನಂತರ ಗರ್ಭ ಧರಿಸಿರುವವರು, ಪ್ರಸವಕ್ಕೆ ಮುನ್ನ ಗರ್ಭಚೀಲದಲ್ಲೇ ಮಗು ಸಾವನ್ನಪ್ಪಿರುವುದು ಇವೆ ಮುಂತಾದ ಪ್ರಕರಣಗಳಲ್ಲಿ ಯಾವುದಾದರು ಒಂದು ನಿಮಗೆ ಹೋಲಿಕೆಯಾದಲ್ಲಿ ನೀವು ಡಯಾಬಿಟಿಸ್ ಅಪಾಯ ಎದುರಿಸಲು ಸಿದ್ಧರಾಗಬೇಕು. ರೋಗದ ಲಕ್ಷಣಗಳು ಲಕ್ಷಣಗಳು ಕಾಣಿಸಿಕೊಂಡ ನಂತರ ಚಿಕಿತ್ಸೆ ಪಡೆದರಾಯಿತು ಎಂದು ಉದಾಸೀನ ಮಾಡಿದರೆ ಜೀವಕ್ಕೆ ಆಪತ್ತು ಒದಗಿ ಬರಬಹುದು. ಆದ್ದರಿಂದ, ಗರ್ಭಿಣಿಯರು ಹೆಚ್ಚಿನ ಕಾಳಜಿ ತೆಗೆದುಕೊಂಡು, ಡಯಾಬಿಟಿಸ್ ಗೆ ಚಿಕಿತ್ಸೆ ಪಡೆಯಬೇಕು.

ಗರ್ಭಿಣಿಯರಿಗೆ ಡಯಾಬಿಟಿಸ್ ಚಿಕಿತ್ಸೆ ಪ್ರಾಮುಖ್ಯತೆ ಏಕೆ?

ಮಧುಮೇಹವುಳ್ಳ ಗರ್ಭಿಣಿಯರು ತಪ್ಪದೇ ಸೂಕ್ತ ಕಾಲಕ್ಕೆ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ, ಭ್ರೂಣಕ್ಕೂ ತೊಂದರೆ ಹಾಗೂ ಗರ್ಭಿಣಿಯರು ತೊಂದರೆ ತಪ್ಪಿದ್ದಲ್ಲ.

ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ, ಮಗುವಿನ ದೇಹ ತೂಕ ಸಾಮಾನ್ಯ ಗಾತ್ರಕ್ಕಿಂತ ಹೆಚ್ಚಾಗುತ್ತದೆ ಇದನ್ನು macrosomia ಎನ್ನುತ್ತಾರೆ. ಮಗು ಸ್ಥೂಲವಾದರೆ, ಸಾಮಾನ್ಯ ಹೆರಿಗೆಯಾಗದೆ ಸಿ ಸೆಕ್ಷನ್ (cesarean section) ಮಾಡಬೇಕಾಗುತ್ತದೆ. ಮಗುವಿನ ರಕ್ತದಲ್ಲಿನ ಸಕ್ಕರೆ ಅಂಶ ಅಗತ್ಯಕ್ಕಿಂತ ಕಮ್ಮಿಯಿದ್ದರೆ ಅದನ್ನು hypoglycemia ಎನ್ನಲಾಗುತ್ತದೆ. ಗ್ಲುಕೋಸ್ ಕಮ್ಮಿಯಿದ್ದರೆ ನಳಿಕೆ ಮೂಲಕ ಗ್ಲುಕೋಸ್ ಅನ್ನು ತಾಯಿ ಹಾಗೂ ಮಗುವಿಗೆ ನೀಡಲಾಗುತ್ತದೆ. ಹೆರಿಗೆ ನಂತರ ವೈದ್ಯರ ಸಲಹೆಯಂತೆ ಮಗುವಿಗೆ ಮೊಲೆ ಹಾಲು ನೀಡುವುದನ್ನು ಸ್ತ್ರೀಯರು ರೂಢಿಸಕೊಳ್ಳಬೇಕು. ಇದರಿಂದ ಮಗುವಿಗೆ ಅಗತ್ಯವಾದ ಗ್ಲುಕೋಸ್ ಸಿಗುತ್ತದೆ.

ಕೆಲವೊಮ್ಮೆ, ಸಕ್ಕರೆ ಕಾಯಿಲೆ ಪರಿಣಾಮ ಮಗುವಿಗೆ ಹಳದಿ ಕಾಮಾಲೆ ರೋಗ(jaundice) ತಗಲುವ ಸಾಧ್ಯತೆಯಿರುತ್ತದೆ. ಸೂಕ್ತ ಚಿಕಿತ್ಸೆ ನೀಡಿ ಅದನ್ನು ಪರಿಹರಿಸಬಹುದಾದ್ದರಿಂದ ಭಯಪಡುವ ಅಗತ್ಯವಿರುವುದಿಲ್ಲ. ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿ ಆಮ್ಲಜನಕದ ಕೊರತೆ ಅನುಭವಿಸುವ ಸಂದರ್ಭ ಒದಗಬಹುದು ಇದನ್ನು Respiratory Distress Syndrome ಎನ್ನಲಾಗುತ್ತದೆ.

ಮಗುವಿಗೆ ರಕ್ತದಲ್ಲಿ ಖನಿಜಾಂಶ ಕೊರತೆ ಕಂಡುಬರಬಹುದು. ಖನಿಜಯುಕ್ತ ಆಹಾರವನ್ನು ಹೆಚ್ಚಿಗೆ ನೀಡುವ ಮೂಲಕ ಈ ತೊಂದರೆಯನ್ನು ಪರಿಹರಿಸಬಹುದು. ಒಟ್ಟಿನಲ್ಲಿ ಡಯಾಬಿಟಿಸ್ ವುಳ್ಳ ತಾಯಿ ಮಗುವಿನ ಆರೋಗ್ಯ ಸಂರಕ್ಷಣೆ ಸಾಧ್ಯವಿದ್ದು, ಸೂಕ್ತ ಕಾಲಕ್ಕೆ ವೈದ್ಯರ ಸಲಹೆ ಪಡೆದರೆ, ಸಮಸ್ಯೆಯನ್ನು ದೂರಾಗಿಸಬಹುದು.

English summary

Pregnancy Diabetes | Pregnancy Diabetes Types | Treat Diabetes | ಗರ್ಭಾವಸ್ಥೆ ಡಯಾಬಿಟಿಸ್| ಗರ್ಭಾವಸ್ಥೆ ಮಧುಮೇಹ ಬಗೆ | ಡಯಾಬಿಟಿಸ್ ಚಿಕಿತ್ಸೆ|

Pregnancy Diabetes, is one of the main factors and there are two types of Diabetes - pre-gestational Diabetes and Gestational Diabetes. It is important to treat Diabetes in pregnancy for a safe confinement. Some potential risks to the foetus if sugars are uncontrolled.
X
Desktop Bottom Promotion