For Quick Alerts
ALLOW NOTIFICATIONS  
For Daily Alerts

ಒಂದೇ ವಾರದಲ್ಲಿ ಕಪ್ಪು ಕಲೆ ನಿವಾರಿಸುತ್ತದೆ ಟಮೋಟೋ: ನೀವು ಟ್ರೈ ಮಾಡಿ ನೋಡಿ

|

ಕಣ್ಣಿನ ಸುತ್ತ ಆಗುವ ಕಪ್ಪು ವರ್ತುಲವೇ ನಿಮಗೆ ನದ್ರೆಯ ಸಮಸ್ಯೆ ಇದೆ ಮತ್ತು ಸರಿಯಾಗಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಮುಖ್ಯವಾಗಿ ಈ ಕಪ್ಪು ವರ್ತುಲವು ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ ಮತ್ತು ನೀವು ತುಂಬಾ ಬಳಲಿದಂತೆ ಕಾಣುತ್ತದೆ. ಸ್ವಚ್ಛವಾಗಿರುವ ಮತ್ತು ಆರೋಗ್ಯಯುತವಾಗಿರುವ ಚರ್ಮವನ್ನು ಪಡೆಯುವುದಕ್ಕಾಗಿ ನೀವು ಕೆಲವು ಚರ್ಮದ ಕಾಳಜಿಯನ್ನು ತೆಗೆದುಕೊಳ್ಳಬೇಕಾದ ಅಭ್ಯಾಸ ಹೊಂದಬೇಕು.
ಹೆಚ್ಚಿನವರು ಸನ್ ಸ್ಕ್ರೀನ್ ಅನ್ನು ಬಳಸುತ್ತಾರೆ. ಇದು ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ ಮತ್ತು ಕೆಲವರು ಕಣ್ಣಿನ ಕ್ರೀಮ್ ಬಳಸುತ್ತಾರೆ. ಆದರೆ ಸರಿಯಾದ ಕಾಳಜಿ ಇಲ್ಲದೆ ಉಂಟಾಗುವ ಡಾರ್ಕ್ ಸರ್ಕಲ್ ನಿವಾರಣೆಗೆ ಕೆಲವು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೆಲವು ಸುಲಭವಾಗಿರುವ ಸಲಹೆಗಳನ್ನು ಅನುಸರಿಸಿ ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಡಾರ್ಕ್ ಸರ್ಕಲ್ ವಿರುದ್ಧ ಹೋರಾಟ ನಡೆಸುವ ಸಾಮರ್ಥ್ಯ ಹೊಂದಿರುವ ಪದಾರ್ಥಗಳಲ್ಲಿ ಬಹಳ ಪ್ರಮುಖವಾಗಿರುವ ಒಂದು ಪದಾರ್ಥವೆಂದರೆ ಅದು ಟಮೋಟೋ .

Tomato Home Remedies
ನೈಸರ್ಗಿಕ ಬ್ಲೀಚ್

ನೈಸರ್ಗಿಕ ಬ್ಲೀಚ್

ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ ಮಾಡುವ ಮತ್ತು ಚರ್ಮಕ್ಕೆ ಬಿಳುಪುಗೊಳಿಸುವ ಸಾಮರ್ಥ್ಯವನ್ನು ಟಮೋಟೋ ಹೊಂದಿದೆ. ಟಮೋಟೋ ಹಣ್ಣಿನಲ್ಲಿರುವ ಈ ಗುಣದಿಂದಾಗಿ ಕಣ್ಣಿನ ಸುತ್ತ ಆಗುವ ಕಪ್ಪು ವರ್ತುಲದ ನಿವಾರಣೆಗೆ ಇದು ಸಹಕರಿಸುತ್ತದೆ. ಟಮೋಟೋ ಹಣ್ಣು ವಿಟಮಿನ್ ಸಿಗಳಿಂದ ಶ್ರೀಮಂತವಾಗಿದೆ. ಹಾಗಾಗಿ ಚರ್ಮದ ಪದರ ಮತ್ತು ನೋಟವನ್ನು ಸುಂದರಗೊಳಿಸುವುದಕ್ಕೆ ಇದು ಸಹಕಾರಿ. ಟಮೋಟೋ ಹಣ್ಣುಗಳಲ್ಲಿರುವ ಲೈಕೋಪಿನ್ ಗಳು ಸೂರ್ಯನ ಯುವಿ ಕಿರಣಗಳಿಂದಾಗುವ ಚರ್ಮಕ್ಕೆ ಆಗುವ ಹಾನಿಯನ್ನು ತಡೆಯುತ್ತದೆ. ಟಮೋಟೋ ಹಣ್ಣುಗಳಲ್ಲಿರುವ ಆಂಟಿಏಜಿಂಗ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳು ಚರ್ಮವನ್ನು ಆರೋಗ್ಯಯುತವಾಗಿ ಮತ್ತು ಯೌವ್ವನಯುತವಾಗಿ ಇರುವುದಕ್ಕೆ ನೆರವು ನೀಡುತ್ತದೆ.

ಈ ರೀತಿ ಆಕರ್ಷಕವಾಗಿರುವ ಟಮೋಟೋ ಹಣ್ಣಿನ ಲಾಭಗಳಿಂದಾಗಿ ಡಾರ್ಕ್ ಸರ್ಕಲ್ ನಿವಾರಣೆಗೆ ನೀವು ಮನೆಯಲ್ಲೇ ಟಮೋಟೋ ಬಳಸಿ ಮನೆಮದ್ದುಗಳನ್ನು ತಯಾರಿಸಿಕೊಳ್ಳಬಹುದು. ಆ ಮನೆಮದ್ದುಗಳ ವಿವರವನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

1. ಟಮೋಟೋ ಮತ್ತು ಅಲೊವೆರಾ

1. ಟಮೋಟೋ ಮತ್ತು ಅಲೊವೆರಾ

ಅಲೊವೆರಾದಲ್ಲಿ ಉರಿಯೂತ ತಡೆಯುವ ಗುಣವಿದೆ ಮತ್ತು ಚರ್ಮವನ್ನು ರಕ್ಷಣೆ ಮಾಡುವ ಗುಣವನ್ನು ಅಲೊವೆರಾ ಜೆಲ್ ಹೊಂದಿದೆ. ಹಾಗಾಗಿ ಕಣ್ಣಿನ ಸುತ್ತ ಯಾವುದೇ ರೀತಿಯ ನೋವಿದ್ದಲ್ಲಿ ಇದು ಕಡಿಮೆ ಮಾಡುತ್ತದೆ.

ಬೇಕಾಗುವ ಪದಾರ್ಥಗಳು

1 ಟಮೋಟೋ 1 ಟೇಬಲ್ ಸ್ಪೂನ್ ತಾಜಾ ಅಲೊವೆರಾ ಜೆಲ್

ಬಳಸುವ ವಿಧಾನ

ಟೊಮೆಟೊ ಪೇಸ್ಟ್ ತಯಾರಿಸುವುದಕ್ಕಾಗಿ ಟಮೋಟೋ ಹಣ್ಣುಗಳನ್ನು ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ಅಲೊವೆರಾ ಜೆಲ್ ಅನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕಣ್ಣುಗಳ ಸುತ್ತ ಅಪ್ಲೈ ಮಾಡಿಕೊಳ್ಳಿ. 15 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಒಂದರಿಂದ ಎರಡು ಬಾರಿ ಹಚ್ಚಿಕೊಳ್ಳಿ.

2. ಟಮೋಟೋ ಮತ್ತು ಲಿಂಬೆ ರಸ

2. ಟಮೋಟೋ ಮತ್ತು ಲಿಂಬೆ ರಸ

ಚರ್ಮವನ್ನು ತಿಳಿಗೊಳಿಸುವ ಸಾಮರ್ಥ್ಯವಿರುವ ಅತ್ಯುತ್ತಮ ವಸ್ತುಗಳಲ್ಲಿ ಲಿಂಬೆ ಕೂಡ ಒಂದು. ಇದರಲ್ಲಿರುವ ಸಿಟ್ರಿಕ್ ಆಸಿಡ್ ಆಂಟಿ ಏಜಿಂಗ್ ಮತ್ತು ಆಂಟಿ-ಇನ್ಫ್ಲಮೇಟರಿ ಅಂದರೆ ಉರಿಯೂತ ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅದೇ ಕಾರಣಕ್ಕೆ ಡಾರ್ಕ್ ಸರ್ಕಲ್ ಗಳ ನಿವಾರಣೆಗೆ ಇದೊಂದು ಅತ್ಯುತ್ತಮ ಮನೆಮದ್ದಾಗಿದೆ.

ಬೇಕಾಗುವ ಪದಾರ್ಥಗಳು: 1 ಟೇಬಲ್ ಸ್ಪೂನ್ ಟಮೋಟೋ ಹಣ್ಣಿನ ರಸ ಮತ್ತು ಒಂದು ಟೇಬಲ್ ಸ್ಪೂನ್ ಲಿಂಬೆ ರಸ

ಬಳಸುವ ವಿಧಾನ

ಒಂದು ಬೌಲ್‌ನಲ್ಲಿ ಎರಡೂ ಪದಾರ್ಥಗಳನ್ನು ಸೇರಿಸಿ. ಅದರಲ್ಲಿ ಹತ್ತಿಯ ಬಾಲ್ ಅನ್ನು ಅದ್ದಿ ಮತ್ತು ನಿಮ್ಮ ಕಣ್ಣುಗಳ ಸುತ್ತ ಅಪ್ಲೈ ಮಾಡಿಕೊಳ್ಳಿ.10 ನಿಮಿಷ ಹಾಗೆಯೇ ಬಿಡಿ. ನಂತರ ನಿಧಾನವಾಗಿ ಅದನ್ನು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ.

3. ಟೊಮೆಟೊ ಮತ್ತು ಆಲೂಗಡ್ಡೆ

3. ಟೊಮೆಟೊ ಮತ್ತು ಆಲೂಗಡ್ಡೆ

ಆಲೂಗಡ್ಡೆಯಲ್ಲಿರುವ ಕಿಣ್ವ ಮತ್ತು ಕ್ಯಾಟೆಕೋಲೇಸ್ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟಮೊಟೋದಲ್ಲಿರುವ ಬ್ಲೀಚಿಂಗ್ ಗುಣಗಳೊಂದಿಗೆ ಇದನ್ನು ಮಿಶ್ರಣ ಮಾಡಿದಾಗ ಕಪ್ಪು ವರ್ತುಲ ನಿವಾರಣೆಗೆ ಇದು ಸಹಕರಿಸುತ್ತದೆ.

ಬೇಕಾಗುವ ಪದಾರ್ಥಗಳು: 1 ಟಮೋಟೋ ,1 ಆಲೂಗಡ್ಡೆ

ಬಳಸುವ ವಿಧಾನ

ಟಮೋಟೋ ತಿರುಳನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿದಂತೆ ಮಾಡಿಕೊಳ್ಳಿ. ಆಲೂಗಡ್ಡೆಯ ಸಿಪ್ಪೆ ತೆಗೆದು ಅದರ ಪೇಸ್ಟ್ ತಯಾರಿಸಿಕೊಳ್ಳಿ. ಟಮೋಟೋ ಪ್ಯೂರಿ ಮತ್ತು ಆಲೂಗಡ್ಡೆಯ ಪೇಸ್ಟ್ ಎರಡನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಕಣ್ಣುಗಳ ಸುತ್ತ ಈ ಮಿಶ್ರಣವನ್ನು ಅಪ್ಲೈ ಮಾಡಿಕೊಳ್ಳಿ. ಅಲ್ಲಿಯೇ ಒಣಗುವವರೆಗೆ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ದಿನ ಬಿಟ್ಟು ದಿನ ಹೀಗೆ ಅಪ್ಲೈ ಮಾಡಿಕೊಳ್ಳುವುದರಿಂದಾಗಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.

4. ಟಮೋಟೋ, ಸೌತೆಕಾಯಿ ಮತ್ತು ಪುದೀನಾ

4. ಟಮೋಟೋ, ಸೌತೆಕಾಯಿ ಮತ್ತು ಪುದೀನಾ

ಚರ್ಮವನ್ನು ಮೃದುಗೊಳಿಸುವ ಸಾಮರ್ಥ್ಯ ಮತ್ತು ಕಣ್ಣುಗಳ ಸುತ್ತ ನೋವಿದ್ದರೆ ಅದನ್ನು ನಿವಾರಿಸುವ ಸಾಮರ್ಥ್ಯ ಸೌತೆಕಾಯಿಗಿದೆ. ಪುದೀನಾ ನಿಮ್ಮ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ ಮತ್ತು ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲದ ನಿವಾರಣೆಗೆ ಸಹಕರಿಸುತ್ತದೆ.

ಬೇಕಾಗುವ ಪದಾರ್ಥಗಳು: 1 ಟೋಬಲ್ ಸ್ಪೂನ್ ಟಮೋಟೋ ಪ್ಯೂರಿ, ಒಂದು ಟೇಬಲ್ ಸ್ಪೂನ್ ಸೌತೆಕಾಯಿ ಪೇಸ್ಟ್, 5-6 ಪುದೀನಾ ಎಲೆಗಳು

ಬಳಸುವ ವಿಧಾನ

ಒಂದು ಬೌಲ್ ನಲ್ಲಿ ಟಮೋಟೋ ಪ್ಯೂರಿ ತೆಗೆದುಕೊಳ್ಳಿ. ಅದಕ್ಕೆ ಸೌತೆಕಾಯಿಯ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪುದೀನಾ ಎಲೆಗಳನ್ನು ಕೂಡ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ಅದನ್ನು ಕೂಡ ಮೇಲಿನ ಮಿಶ್ರಣಕ್ಕೆ ಸೇರಿಸಿ. ನಿಮ್ಮ ಕಣ್ಣುಗಳ ಸುತ್ತ ಈ ಮಿಶ್ರಣವನ್ನು ಅಪ್ಲೈ ಮಾಡಿ.10 ರಿಂದ 15 ನಿಮಿಷ ಹಾಗೆಯೇ ಬಿಡಿ. ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ. ವಾರಕ್ಕೆ ಒಂದರಿಂದ ಎರಡು ಬಾರಿ ಹೀಗೆ ಅಪ್ಲೈ ಮಾಡಿಕೊಳ್ಳುವುದರಿಂದಾಗಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

5. ಟಮೋಟೋ, ಕಡಲೆಹಿಟ್ಟು ಮತ್ತು ಲಿಂಬೆ

5. ಟಮೋಟೋ, ಕಡಲೆಹಿಟ್ಟು ಮತ್ತು ಲಿಂಬೆ

ಚರ್ಮವನ್ನು ತಿಳಿಗೊಳಿಸುವುದಕ್ಕೆ ಲಿಂಬೆ ಅತ್ಯುತ್ತಮವಾದದ್ದಾಗಿದೆ. ಇನ್ನು ಕಡಲೆಹಿಟ್ಟು ಕೂಡ ಚರ್ಮವನ್ನು ಸ್ವಚ್ಛಗೊಳಿಸುವುದಕ್ಕೆ ನೆರವು ನೀಡುತ್ತದೆ. ಸತ್ತ ಚರ್ಮದ ಜೀವಕೋಶಗಳನ್ನು ಹೊಡೆದೋಡಿಸಿ ಚರ್ಮದ ಕೊಳಕನ್ನು ನಿವಾರಿಸುವುದಕ್ಕೆ ಇದು ಸಹಕಾರಿ.

ಬೇಕಾಗುವ ಪದಾರ್ಥಗಳು: 2-3 ಟೇಬಲ್ ಸ್ಪೂನ್ ಟಮೋಟೋ ಪ್ಯೂರಿ, 2 ಟೇಬಲ್ ಸ್ಪೂನ್ ಕಡಲೆಹಿಟ್ಟು, 1/2 ಟೇಬಲ್ ಸ್ಪೂನ್ ಲಿಂಬೆ ರಸ

ಬಳಸುವ ವಿಧಾನ

ಒಂದು ಬೌಲ್‌ನಲ್ಲಿ ಟಮೋಟೋ ಪ್ಯೂರಿ ತೆಗೆದುಕೊಳ್ಳಿ ಅದಕ್ಕೆ ಲಿಂಬೆರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಕಡಲೆ ಹಿಟ್ಟನ್ನು ಸೇರಿಸಿ. ಮೂರು ಪದಾರ್ಥಗಳು ಗಂಟುಗಳಾದಂತೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಡಾರ್ಕ್ ಸರ್ಕಲ್ ಇರುವ ಕಣ್ಣುಗಳ ಸುತ್ತ ಇದನ್ನು ಅಪ್ಲೈ ಮಾಡಿಕೊಳ್ಳಿ. 20 ನಿಮಿಷ ಹಾಗೆಯೇ ಬಿಡಿ, ನಂತರ ತೊಳೆಯಿರಿ. ವಾರಕ್ಕೆ 2 ರಿಂದ 3 ಬಾರಿ ಮಾಡುವುದರಿಂದಾಗಿ ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

English summary

Tomato Based Home Remedies To Get Rid Of Dark Circles

Tomato is one of the best natural bleaching agents that can lighten and brighten your skin. This quality of tomato works like a charm to fight the dark circles under your eyes. Rich in vitamin C, tomato helps to improve the texture and appearance of your skin[1] . Lycopene present in tomato protects your skin from the sun[2] . The antibacterial and antiageing properties of tomato also help maintain healthy and youthful skin.
X
Desktop Bottom Promotion