For Quick Alerts
ALLOW NOTIFICATIONS  
For Daily Alerts

ಮೊಡವೆ ನಿವಾರಣೆಗೆ ಬಾದಾಮಿ ಎಣ್ಣೆ ಹೇಗೆ ಬಳಸಬೇಕು?

|

ಮೊಡವೆ ಎನ್ನುವುದು ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಿನವರಿಗೆ ಕಾಡುವ ಸಮಸ್ಯೆಯಾಗಿದೆ. ಇನ್ನು ಕೆಲವರಿಗೆ ವಯಸ್ಸು 30 ಆದರೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗಿರುವುದಿಲ್ಲ.

How To Use Almond Oil To get Rid Of Acne

ತುಂಬಾ ಸಮಯ ಮೊಡವೆ ಬೀಳುತ್ತಿದ್ದರೆ ಮುಖದಲ್ಲಿ ಕಲೆಗಳು ಉಳಿಯುವುದು ಮಾತ್ರವಲ್ಲ, ರಂಧ್ರಗಳೂ ಬಿದ್ದು ಮುಖದ ಸೌಂದರ್ಯವ ಹಾಳಾಗುವುದು. ಆದ್ದರಿಂದ ಮೊಡವೇ ಬೀಳುವಾಗಲೇ ಆ ಸಮಸ್ಯೆಯನ್ನು ಇಲ್ಲವಾಗಿಸಬೇಕು. ಮೊಡವೆ ಹೋಗಲಾಡಿಸಲು ಹಲವಾರು ನೈಸರ್ಗಿಕವಾದ ವಿಧಾನಗಳಿವೆ. ಇಲ್ಲಿ ನಾವು ಬಾದಾಮಿ ಎಣ್ಣೆ ಬಳಸಿ ಮೊಡವೆ ಸಮಸ್ಯೆ ಹೇಗೆ ಇಲ್ಲವಾಗಿಸುವುದು ಎಂದು ನೋಡೋಣ:
ಮೊಡವೆ ನಿವಾರಣೆಗೆ ಬಾದಾಮಿ ಎಣ್ಣೆ

ಮೊಡವೆ ನಿವಾರಣೆಗೆ ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯನ್ನು ಮೊಡವೆ ಹೋಗಲಾಡಿಸಲು ಮೇಕಪ್‌ ರಿಮೂವರ್‌, ಕ್ಲೆನ್ಸರ್ ಹಾಗೂ ಮಾಯಿಶ್ಚರೈಸರ್ ಆಗಿ ಬಳಸಬಹುದು. ದಿ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್ ಎಣ್ಣೆಯ ಮಾಯಿಶ್ಚರೈಸರ್‌ ಮೊಡವೆ ಸಮಸ್ಯೆ ಮತ್ತಷ್ಟು ಹೆಚ್ಚು ಮಾಡಬಹುದು ಎಂಬ ಎಚ್ಚರಿಕೆ ನೀಡಿದೆ. ಆದರೆ ಕೆಲ ತ್ವಚೆ ತಜ್ಞರು ಬಾದಾಮಿ ಎಣ್ಣೆಯಿಂದ ಮಾಯಿಶ್ಚರೈಸರ್‌ ಮಾಡುವುದು ಒಳ್ಳೆಯದೆಂದು ಹೇಳುತ್ತಾರೆ.

ಇಲ್ಲಿ ನಾವು ನೀಡಿರುವ ವಿಧಾನ ಪ್ರಯೋಗ ಮಾಡುವ ಮುನ್ನ ಸ್ವಲ್ಪ ಪ್ಯಾಚ್‌ ಟೆಸ್ಟ್‌ ಮಾಡಿ, ನಂತರ ಮಾಡಿ. ಏಕೆಂದರೆ ಕೆಲರಿಗೆ ನಟ್‌ ಅಲರ್ಜಿ ಇರುತ್ತದೆ, ಅಂಥವರಿಗೆ ಬಾದಾಮಿ ಎಣ್ಣೆ ಸೂಟ್‌ ಆಗುವುದಿಲ್ಲ, ಇದು ಕೆಲವೇ ಕೆಲವು ಜನರಿಗಷ್ಟೇ. ಉಳಿದಂತೆ ಈ ವಿಧಾನ ಎಲ್ಲಾ ಬಗೆಯ ತ್ವಚೆಯವರು ಬಳಸಬಹುದು. ಇದರಿಂದ ಮೊಡವೆ ನಿಯಂತ್ರಣದ ಜೊತೆಗೆ ಮುಖದ ಕಲೆ ಕೂಡ ಇಲ್ಲವಾಗುವುದು, ಮುಖದಲ್ಲಿ ಹೊಳಪು ಹೆಚ್ಚುವುದು.

ಈಗ ಬಾದಾಮಿ ಎಣ್ಣೆಯನ್ನು ಹೇಗೆ ಬಳಸುವುದು ಎಂದು ನೋಡೋಣ....

ಮೇಕಪ್‌ ರಿಮೂವರ್‌

ಮೇಕಪ್‌ ರಿಮೂವರ್‌

ಮೇಕಪ್‌ ರಿಮೂವರ್‌ ಆಗಿ ಕೆಮಿಕಲ್ ಇರುವ ವಸ್ತುಗಳನ್ನು ಬಳಸುವ ಬದಲು ಇಂಥ ನೈಸರ್ಗಿಕ ವಿಧಾನ ಅನುಸರಿಸುವುದು ಒಳ್ಳೆಯದು. ನೀವು ಸ್ವಲ್ಪ ಬಾದಾಮಿ ಎಣ್ಣೆಯನ್ನು ನಿಮ್ಮ ಬೆರಳಿನಿಂದ ತೆಗೆದು ಮುಖಕ್ಕೆ ಹಚ್ಚಿ ಮೆಲ್ಲನೆ ಹತ್ತಿ ಉಂಡೆಯಿಂದ ಒರೆಸಿ ತೆಗೆಯಿರಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಬಳಸುತ್ತಿದ್ದರೆ ನಿಮಗೆ ಮುಖದಲ್ಲಿ ವ್ಯತ್ಯಾಸ ಕಾಣಬಹುದು.

 ಕ್ಲೆನ್ಸರ್ ಆಗಿ ಬಳಸಿ

ಕ್ಲೆನ್ಸರ್ ಆಗಿ ಬಳಸಿ

ಬಾದಾಮಿ ಎಣ್ಣೆಯನ್ನು ಜೊತೆಗೆ ಕೊಂಡೊಯ್ಯಬಹುದಾದರಿಂದ ಇದನ್ನು ಕ್ಲೆನ್ಸರ್ ಆಗಿಯೂ ಬಳಸಬಹುದು. ಬಾದಾಮಿ ಎಣ್ಣೆಯನ್ನು ಲ್ಯಾವೆಂಡರ್, ಲೆಮನ್ ಆಯಿಲ್, ರೋಸ್‌ ವಾಟರ್ ಇವುಗಳನ್ನು ಮಿಶ್ರ ಮಾಡಿ ಮೊದಲಿಗೆ ನಿಮ್ಮ ಕೈಗೆ ಹಾಕಿ ಪ್ಯಾಚ್‌ ಟೆಸ್ಟ್ ಮಾಡಿ ನಂತರ ಮುಖಕ್ಕೆ ಬಳಸಿ.

ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ ದಿನದಲ್ಲಿ ಎರಡು ಬಾರಿ ಮಾಡಿ.

ಮಾಯಿಶ್ಚರೈಸರ್ ಆಗಿ ಬಳಸಿ

ಮಾಯಿಶ್ಚರೈಸರ್ ಆಗಿ ಬಳಸಿ

ಬಾದಾಮಿ ಎಣ್ಣೆಯನ್ನು ಮಾಯಿಶ್ಚರೈಸರ್ ಆಗಿಯೂ ಬಳಸಿ. ಮೊದಲಿಗೆ ಮುಖವನ್ನು ಸ್ವಚ್ಛ ಮಾಡಿ ಸ್ವಲ್ಪ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಮೆಲ್ಲನೆ ಮಸಾಜ್ ಮಾಡಿ, ಎಣ್ಣೆ ತುಂಬಾ ಬಳಸಬೇಡಿ. ಇದನ್ನು ಮಾಯಿಶ್ಚರೈಸರ್ ಆಗಿ ಬಳಸುವುದರಿಂದ ತೊಳೆಯುವ ಅಗ್ಯತವಿಲ್ಲ. ಇದನ್ನು ಕೈ-ಕಾಲುಗಳಿಗೂ ಹಚ್ಚಿ, ಇದರಿಂದ ತ್ವಚೆ ನುಣಪಾಗುವುದು.

ಹೀಗೆ ಮಾಡುತ್ತಿದ್ದರೆ ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ ಇ ಇರುವುದರಿಂದ ಇದು ತ್ವಚೆಯಲ್ಲಿ ತೇವಾಂಶ ಕಾಪಾಡುತ್ತದೆ, ತ್ವಚೆಯನ್ನು ಮೃದುವಾಗಿಸುತ್ತದೆ, ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಿಸುತ್ತದೆ. ಹೀಗಾಗಿ ಮೊಡವೆ ಕಡಿಮೆಯಾಗುತ್ತದೆ, ಕಲೆಗಳೂ ಮಾಯವಾಗುವುದು, ತ್ವಚೆ ಸೌಂದರ್ಯವೂ ಹೆಚ್ಚುವುದು.

ಸನ್‌ ಟ್ಯಾನ್, ಡಾರ್ಕ್‌ ಸರ್ಕಲ್ ಹೋಗಲಾಡಿಸುತ್ತದೆ

ಸನ್‌ ಟ್ಯಾನ್, ಡಾರ್ಕ್‌ ಸರ್ಕಲ್ ಹೋಗಲಾಡಿಸುತ್ತದೆ

ಬಾದಾಮಿ ಎಣ್ಣೆಯನ್ನು ದಿನಾಲೂ ಬಳಸುತ್ತಿದ್ದರೆ ಸನ್‌ ಟ್ಯಾನ್‌ ಹೋಗಲಾಡಿಸುತ್ತದೆ, ಹಾಗೂ ಡಾರ್ಕ್‌ ಸರ್ಕಲ್‌ ಸಮಸ್ಯೆಯಿದ್ದರೆ ಪ್ರತಿದಿನ ಮಲಗುವಾಗ ಹಚ್ಚಿ ಮಲಗಿ ಈ ರೀತಿ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ಡಾರ್ಕ್‌ ಸರ್ಕಲ್ ಸಮಸ್ಯೆ ಇಲ್ಲವಾಗುವುದು.

English summary

How To Use Almond Oil To get Rid Of Acne

If you are looking for home remedies to get rid of acne and its scar, here is tips to use almond oil for it, have a look.
X
Desktop Bottom Promotion