Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ವರ್ಕೌಟ್ ಬೆವರಿನಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತಿದೆಯೇ? ತಡೆಗಟ್ಟುವುದು ಹೇಗೆ
ಕೆಲವರಿಗೆ ವ್ಯಾಯಾಮ ಅಥವಾ ವರ್ಕೌಟ್ ಮಾಡೋದ್ರಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇನ್ನೂ ಕೆಲವರಲ್ಲಿ ವ್ಯಾಯಾಮ ಮಾಡೋದ್ರಿಂದ ಮೊಡವೆ ಸಮಸ್ಯೆ ಹೆಚ್ಚಾಗುವುದೂ ಉಂಟು.

ಇದಕ್ಕೆಲ್ಲಾ ಕಾರಣ ಏನಿರಬಹುದು ಅಂತ ನೀವು ಯೋಚಿಸ್ತಿದ್ದೀರಾ? ಅದಕ್ಕೆ ಉತ್ತರ ನೈರ್ಮಲ್ಯದ ಕೊರತೆ. ಹೌದು ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದು ಉತ್ತಮ ಆರೋಗ್ಯ ಪಡೆಯುವುದಕ್ಕಾಗಿ. ಆದ್ರೆ ಜಿಮ್ನಲ್ಲಿ ಮಾಡುವ ಕೆಲವು ಸಣ್ಣ ತಪ್ಪುಗಳಿಂದ ನೀವು ಮೊಡವೆಗಳಂತಹ ಸಮಸ್ಯೆಗೆ ಗುರಿಯಾಗಬಹುದು.
ಹಾಗಾಗಿ ವ್ಯಾಯಾಮದಿಂದ ಉಂಟಾಗುವ ಮೊಡವೆಗಳನ್ನು ತಡೆಯೋದಕ್ಕೆ ಏನ್ ಮಾಡ್ಬೋದು ಅನ್ನೋದನ್ನು ನಾವಿಂದು ಹೇಳ್ತೀವಿ.
ವರ್ಕೌಟ್ ಮೊಡವೆಗಳಿಂದ ಪಾರಾಗಲು ಚರ್ಮ ತಜ್ಞರು ನೀಡುವ ಸಲಹೆಗಳೇನು ಎಂಬುದನ್ನು ಕೆಳಗೆ ನೀಡಲಾಗಿದೆ:
ನಿಮ್ಮ ವ್ಯಾಯಾಮದ ಮೊದಲು
1. ಮೇಕಪ್ ತೆಗೆಯಿರಿ:
ಹೌದು, ವ್ಯಾಯಾಮಕ್ಕೂ ಮುನ್ನ ಮೇಕಪ್ ತೆಗೆಯುವುದನ್ನು ಮರೆಯಬೇಡಿ. ಮೇಕಪ್ ಇಟ್ಟುಕೊಂಡು ವ್ಯಾಯಾಮ ಮಾಡಿದಾಗ, ಆ ಬೆವರಿನಿಂದ ನಿಮ್ಮ ಮುಖದಲ್ಲಿ ಮೊಡವೆಗಳು ಹುಟ್ಟಲು ಕಾರಣವಾಗುತ್ತವೆ. ಆದ್ದರಿಂದ ವ್ಯಾಯಾಮ ಮಾಡುವ ಮುನ್ನ ಮೇಕಪ್ ತೆಗೆಯಿರಿ. ಇದರಿಂದ ಮೊಡವೆಗಳಿಂದ ದೂರವಿರಬಹುದು.
2. ಸ್ವಚ್ಛ ಬಟ್ಟೆಗಳನ್ನು ಧರಿಸಿ:
ವ್ಯಾಯಾಮ ಮಾಡಲು ಯಾವಾಗಲು ತೊಳೆದ ಹಾಗೂ ಸ್ವಚ್ಛವಾದ ಬಟ್ಟೆ ಧರಿಸಿ. ಒಮ್ಮೆ ಧರಿಸಿದ ಬಟ್ಟೆಯಲ್ಲಿ ಚರ್ಮದ ಸತ್ತ ಜೀವಕೋಶಗಳು, ಬ್ಯಾಕ್ಟೀರಿಯಾ ಮತ್ತು ಕೊಳೆಗಳು ನಿಮ್ಮ ಮುಖ ಸೇರಿ ಮೊಡವೆ ಹುಟ್ಟಲು ಕಾರಣವಾಗುತ್ತದೆ. ಆದ್ದರಿಂದ ಒಮ್ಮೆ ವ್ಯಾಯಾಮಕ್ಕೆ ಧರಿಸಿದ ಬಟ್ಟೆಯನ್ನು ತೊಳೆಯದೇ ಮತ್ತೊಮ್ಮೆ ಧರಿಸೋದನ್ನು ಕಡಿಮೆ ಮಾಡಿ. ಇದರಿಂದ ನೀವು ಮೊಡವೆಗಳಿಂದ ಪಾರಾಗಬಹುದು.
3. ಆಯಿಲ್ ಫ್ರೀ ಸನ್ಸ್ಕ್ರೀನ್ ಹಚ್ಚಿ:
ನೀವು ವ್ಯಾಯಾಮ ಮಾಡಲು ಹೊರಗೆ ಹೋಗುವ ಮೊದಲು ಆಯಿಲ್ ಫ್ರೀ ಸನ್ಸ್ಕ್ರೀನ್ ಹಚ್ಚಿ. ಹೌದು, ಸೂರ್ಯನು ನಿಮ್ಮ ಚರ್ಮವನ್ನು ಒಣಗಿಸಿ, ಮೊಡವೆಗಳಿಗೆ ಕಾರಣವಾಗಬಹುದು. ಆದ್ದರಿಂದ ಸನ್ಸ್ಕ್ರೀನ್ ಹಚ್ಚಲು ಮರೆಯದಿರಿ. ಇದು ನಿಮ್ಮನ್ನು ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಅಷ್ಟೇ ಅಲ್ಲ ಮೊಡವೆಗಳಂತಹ ಅನೇಕ ತ್ವಚೆಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
4. ಸ್ವಚ್ಛವಾದ ಟವೆಲ್ ಬಳಸಿ:
ವ್ಯಾಯಾಮದ ವೇಳೆ ಬರುವ ಬೆವರನ್ನು ಒರೆಸಲು ಸ್ವಚ್ಛವಾದ ಟವೆಲ್ ಬಳಸಿ. ಒಮ್ಮೆ ಬಳಸಿದ ಅಥವಾ ಬೇರೆಯವರು ಬಳಸಿದ ಟವೆಲ್ಗಳನ್ನು ಮತ್ತೊಮ್ಮೆ ನೀವು ಬಳಸಿದರೆ, ಮೊಡವೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸ್ವಚ್ಛ ಟವೆಲ್ ಬಳಸಿ. ಜೊತೆಗೆ ಬೆವರನ್ನು ನಿಧಾನವಾಗಿ ಒತ್ತಿ ಒರೆಸಿಕೊಳ್ಳಿ. ಉಜ್ಜುವುದರಿಂದ ಮೊಡವೆ ಹೆಚ್ಚಾಗಬಹುದು.
5. ಉಪಕರಣಗಳನ್ನು ಒರೆಸಿ ಬಳಸಿ:
ವ್ಯಾಯಾಮದ ಉಪಕರಣಗಳನ್ನು ಹಲವಾರು ಜನ ಬಳಸೋದ್ರಿಂದ ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ಎಣ್ಣೆಯಿಂದ ತುಂಬಿರುತ್ತವೆ. ಅದನ್ನು ನೇರವಾಗಿ ಬಳಸಿದರೆ ನಿಮ್ಮ ಕೈ ಮೂಲಕ ಕೀಟಾಣು ನಿಮ್ಮ ಮುಖ ಸೇರುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಉಪಕರಣವನ್ನು ಬಳಸುವ ಮುನ್ನ ಒರೆಸಿ ಬಳಸುವುದು ಉತ್ತಮ.
6. ವ್ಯಾಯಾಮದ ಬಳಿಕ ಸ್ನಾನ ಮಾಡಿ:
ನಿಮ್ಮ ವರ್ಕ್ ಔಟ್ ಆದ ತಕ್ಷಣ ಸ್ನಾನ ಮಾಡಲು ಮರೆಯದಿರಿ. ಇದು ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಬಹುದು. ನಿಮ್ಮ ಆಯ್ಕೆಯ ಯಾವುದೇ ಕ್ಲೆನ್ಸರ್ ತೆಗೆದುಕೊಂಡು ತಕ್ಷಣವೇ ಸ್ನಾನ ಮಾಡೋದ್ರಿಂದ ನೀವು ವರ್ಕೌಟ್ ಮೊಡವೆಗಳಿಂದ ದೂರವಿರಬಹುದು.



Click it and Unblock the Notifications