For Quick Alerts
ALLOW NOTIFICATIONS  
For Daily Alerts

ಮೊಡವೆ ಮರೆಮಾಚಲು ಇಲ್ಲಿದೆ ಪಂಚ ಸೂತ್ರಗಳು

By Manu
|

ಮೊಡವೆಗಳ ಸಮಸ್ಯೆ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಹೆಚ್ಚಿನ ಸಿಹಿ ಮತ್ತು ಬೆಣ್ಣೆಯುಕ್ತ ಆಹಾರಗಳು ಮುಖದಲ್ಲಿ ಮೊಡವೆಗಳನ್ನು ಉಂಟುಮಾಡಲು ಕಾರಣವಾಗಿವೆ. ಅಂದವಾದ ಮುಖದಲ್ಲಿ ಮೊಡವೆಯಿಂದ ಜೀವನ ಬೇಸರವೆನಿಸುತ್ತದೆ ಇನ್ನು ಮೊಡವೆ ಹೊರಟು ಹೋದರಂತೂ ಅದರ ಕಲೆ ಹಾಗೆಯೇ ಉಳಿದುಕೊಂಡು ನಿಮ್ಮ ಚಿಂತೆಯನ್ನು ದೊಡ್ಡದಾಗಿಸುತ್ತದೆ. ನಿಮ್ಮ ಮುಖದ ತ್ವಚೆಯ ದೊಡ್ಡ ಶತ್ರು ಎಂದೆನಿಸಿರುವ ಮೊಡವೆಯಿಂದ ಮುಕ್ತಿ ಪಡೆದುಕೊಳ್ಳಲು ಕೇವಲ ರಾಸಾಯನಿಕ ಪರಿಹಾರಗಳನ್ನೇ ನಿಮ್ಮದಾಗಿಸಿಕೊಳ್ಳಬೇಡಿ. ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

ಮೊಡವೆಗಳ ಮೇಲೆ ಪರಿಣಾಮ ಬೀರಿ ಅದನ್ನು ಹೋಗಲಾಡಿಸಲು ಕೆಲವೊಂದು ಮನೆಮದ್ದುಗಳಿದ್ದು ಅವುಗಳನ್ನು ಬಳಸಿದರೆ ನಿಮ್ಮ ತ್ವಚೆಗೂ ಯಾವುದೇ ಹಾನಿಯುಂಟಾಗುವುದಿಲ್ಲ ಅಂತೆಯೇ ಮೊಡವೆ ಸಮಸ್ಯೆ ಕೂಡ ಹೇಳಹೆಸರಿಲ್ಲದಂತೆ ನಿವಾರಣೆಯಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಮನೆಮದ್ದುಗಳ ಪ್ರಯೋಗಗಳನ್ನು ಮೊಡವೆಗಳ ನಿವಾರಣೆಗೆ ನಾವು ನೀಡುತ್ತಿದ್ದು ಇದರಿಂದ ಮೊಡವೆ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೂದಲಿಗೆ ಹೇಗೆ ಕೊಬ್ಬರಿ ಎಣ್ಣೆ ಅತ್ಯುತ್ತಮವೋ ಅಂತೆಯೇ ಚರ್ಮಕ್ಕೂ ಉತ್ತಮವಾಗಿದೆ. ರಾತ್ರಿ ಮಲಗುವ ಮುನ್ನ ಒಂದು ದೊಡ್ಡಚಮಚ ಕೊಬ್ಬರಿಎಣ್ಣೆಯನ್ನು ಬಿಸಿಮಾಡಿ ನಿಧಾನವಾಗಿ ತ್ವಚೆಗೆ ತಟ್ಟುತ್ತಾ ಹಚ್ಚಿರಿ. ಕೊಂಚ ಹೊತ್ತು ಒಣಗಲು ಬಿಟ್ಟು ಮತ್ತೆ ತಟ್ಟುತ್ತಾ ಹಚ್ಚಿರಿ ಇದೇ ರೀತಿ ನಾಲ್ಕಾರು ಬಾರಿ ಮಾಡಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣಿನಲ್ಲಿರುವ (ಪರಂಗಿ ಹಣ್ಣು )ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ, ಹೀಗೆ ತನ್ನ ಒಳ್ಳೆಯ ಕಾರಣಕ್ಕಾಗಿ ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಅದರಲ್ಲೂ ಮೊಡವೆಗಳ ನಿವಾರಣೆಯಲ್ಲಿ ಅಂತೂ ಒಳ್ಳೆಯ ಮನೆಮದ್ದು. ನೀವು ಮಾಡಬೇಕಾದದು ಇಷ್ಟೇ ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಮೇಲಿನ ಮೊಡವೆಯ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಳ್ಳಿ.

ತುಳಸಿ ಎಲೆಗಳ ಪೇಸ್ಟ್

ತುಳಸಿ ಎಲೆಗಳ ಪೇಸ್ಟ್

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಕೊತ್ತಂಬರಿ ಅಥವಾ ಪುದಿನಾ ರಸ

ಕೊತ್ತಂಬರಿ ಅಥವಾ ಪುದಿನಾ ರಸ

ಒಂದು ಟೀ ಚಮಚದಷ್ಟು ಕೊತ್ತಂಬರಿ ಅಥವಾ ಪುದಿನಾ ರಸವು ನಿಮ್ಮ ತ್ವಚೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಈ ರಸಕ್ಕೆ ಒಂದು ಚಿಟಿಕೆಯಷ್ಟು ಹಳದಿಯನ್ನು ಬೆರೆಸುವುದರಿಂದ ಮೊಡವೆ ಮತ್ತು ಬ್ಲ್ಯಾಕ್ ಹೆಡ್‍ಗಳನ್ನು ನಿವಾರಿಸಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಮಿಶ್ರಣವನ್ನು ಪ್ರತಿದಿನ ಮಲಗುವ ಮೊದಲು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳುವುದನ್ನು ಮರೆಯಬೇಡಿ.

ಅರಿಶಿನದ ಪೇಸ್ಟ್

ಅರಿಶಿನದ ಪೇಸ್ಟ್

2 ಟೀಚಮಚ ಮೊಸರಿನ ಜೊತೆಗೆ 1 ಟೀ ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸಹ ಬೆರೆಸಿ, ಚೆನ್ನಾಗಿ ಕಲೆಸಿಕೊಳ್ಳಿ. ನಂತರ ಇದನ್ನು ಮುಖದ ಮೇಲೆ ಲೇಪಿಸಿಕೊಂಡು, ಒಣಗಲು ಬಿಡಿ. ಈ ಮಾಸ್ಕನ್ನು ವಾರಕ್ಕೆ ಎರಡು ಬಾರಿ ಬಳಸಿ. ಆಗ ಮೊಡವೆಗಳು ನಿವಾರಣೆಯಾಗಲು ನೆರವಾಗುತ್ತವೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಅಧಿಕವಾಗಿರುತ್ತದೆ, ಮತ್ತು ಇದು ಒಳ್ಳೆಯ ಎಕ್ಸ್‌ಫೋಲಿಯೇಟರ್ ಆಗಿ ಸಹ ಕೆಲಸ ಮಾಡುತ್ತದೆ.

English summary

Five Home remedies to get rid of acne overnight in kannada

Pimples are a normal skin condition that affect many people. Pimples are an inflammation of the skin in which the sebaceous glands (oil glands) become infected with bacteria, swell up, and fill with pus. There are a lot of lotions and medicines on the market to treat pimples but they can take time. Many natural methods are effective in treating pimples within a very short time period.
Story first published: Monday, November 23, 2015, 20:24 [IST]
X
Desktop Bottom Promotion