Latest Updates
-
ನವರಾತ್ರಿ ಸಂಭ್ರಮ: ಕೇವಲ 30 ನಿಮಿಷದಲ್ಲಿ ಪರಿಸರಸ್ನೇಹಿ ಪೂಜಾ ಮಂಟಪ ಅಲಂಕರಿಸುವ ಸುಲಭ ಟಿಪ್ಸ್! -
ನವರಾತ್ರಿ ಉಪವಾಸ: ಗಾರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯಕರ ಡಯಟ್ ಪ್ಲಾನ್ ಇಲ್ಲಿದೆ -
ನವರಾತ್ರಿ ಗರ್ಬಾ ಡ್ರೆಸ್ ರೆಡಿ ಇಲ್ಲವೇ? ಬೆಂಗಳೂರು, ಮುಂಬೈ, ಅಹಮದಾಬಾದ್ನಲ್ಲಿ ಬಾಡಿಗೆಗೆ ಪಡೆಯಲು ಬೆಸ್ಟ್ ಸ್ಥಳಗಳು ಮತ್ತು ಟಿಪ್ಸ್ ಇಲ್ಲಿದೆ! -
ನವರಾತ್ರಿ ಉಪವಾಸದ ಆಯಾಸ, ಕಾಲು ನೋವು ಕಾಡ್ತಿದೆಯಾ? ಗರ್ಬಾ ಡ್ಯಾನ್ಸ್ಗೆ ಸಿದ್ಧರಾಗಲು ಇಲ್ಲಿದೆ 8 ನಿಮಿಷಗಳ ಮ್ಯಾಜಿಕ್ ವರ್ಕೌಟ್ -
ನವರಾತ್ರಿ ಗರ್ಬಾ ಸಂಭ್ರಮ: ನಕಲಿ ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆಡಿ! -
ದೆಹಲಿ AQI ಏರಿಕೆ: ಮನೆಯೊಳಗೆ 'ಏರ್ ಶೀಲ್ಡ್' ಸಿದ್ಧಪಡಿಸಿ, ಕೇವಲ 20 ನಿಮಿಷದಲ್ಲಿ ಧೂಳಿನಿಂದ ಬಚಾವಾಗಿ! -
ನವರಾತ್ರಿ ಹಬ್ಬದ ಸಂಭ್ರಮ: ಕುತ್ತು ಹಿಟ್ಟು, ಸಿಹಿ ತಿಂಡಿ ಕೊಳ್ಳುವಾಗ ಈ ತಪ್ಪು ಮಾಡಬೇಡಿ! -
ಶಾರ್ದೀಯ ನವರಾತ್ರಿ 2026: ಘಟಸ್ಥಾಪನೆ ಮುಹೂರ್ತ, ಬಣ್ಣಗಳ ಪಟ್ಟಿ ಮತ್ತು ಹಬ್ಬದ ಫ್ಯಾಷನ್ ಟಿಪ್ಸ್ ಇಲ್ಲಿದೆ! -
ಮಂಡಿ ನೋವಿನ ಚಿಂತೆಯೇ ಬೇಡ: ಗರ್ಬಾ ಆಡುವ ಮುನ್ನ ಈ 7 ನಿಮಿಷದ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು!
ಹಣೆ ಮತ್ತು ಕೆನ್ನೆಯಲ್ಲಿ ಮೊಡವೆಯೇ? ಹೊಟ್ಟೆ ಆರೋಗ್ಯ ಕಡೆ ಗಮನ ನೀಡಿ
ಮುಖದಲ್ಲಿ ತುಂಬಾ ಮೊಡವೆ ಸಮಸ್ಯೆಯೇ? ಹಾಗಾದರೆ ಹೊಟ್ಟೆ ಆರೋಗ್ಯ ಕಡೆ ಗಮನ ನೀಡಿ, ಹೌದು ಹೊಟ್ಟೆಯ ಆರೋಗ್ಯಕ್ಕೂ-ಮೊಡವೆಗೂ ಸಂಬಂಧವಿದೆ.

ನಾವು ತಿನ್ನುವ ಆಹಾರಕ್ಕೂ ನಮ್ಮ ತ್ವಚೆ ಸಮಸ್ಯೆಗೂ ಸಂಬಂಧವಿದೆ, ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದ ಮೊಡವೆ ಸಮಸ್ಯೆ ಬರುವುದು. ಅದರ ಜೊತೆಗೆ ಹೊಟ್ಟೆಯ ಆರೋಗ್ಯ ಕೂಡ ತ್ವಚೆ ಮೇಲೆ ಪ್ರಭಾವ ಬೀರುತ್ತದೆ.
ಕೆಲವೊಂದು ಆಹಾರಗಳು ಅಲರ್ಜಿಯನ್ನು ಉಂಟು ಮಾಡುತ್ತದೆ ಅಂಥ ಆಹಾರ ಸೇವಿಸಿದಾಗ, ಮದ್ಯ, ಔಷಧ, ಕರಿದ ಆಹಾರ, ಬಣ್ಣ ಹಾಕಿರುವ ಆಹಾರ, ಅತ್ಯಧಿಕ ಮಾಂಸಾಹಾರ ಸೇವನೆ ಇವೆಲ್ಲಾ ಮೊಡವೆ, ಮತ್ತಿತರ ತ್ವಚೆ ಸಮಸ್ಯೆ ಹೆಚ್ಚಿಸುತ್ತದೆ.
ನಿಮ್ಮ ಹೊಟ್ಟೆಯ ಆರೋಗ್ಯ ಸರಿಯಿಲ್ಲ ಎಂದು ಹೇಳುವ ತ್ವಚೆ ಸಮಸ್ಯೆಗಳಿವು
ಕಜ್ಜಿ, ತುರಿಕೆ
ನಿಮ್ಮ ಹೊಟ್ಟೆಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದು ನಿಮ್ಮ ತ್ವಚೆ ಮೇಲೆ ಕಂಡು ಬರುವುದು. ಅಲರ್ಜಿ, ಕಜ್ಜಿ, ತುರಿಕೆ ಈ ಬಗೆಯ ತೊಂದರೆಗಳು ಕಂಡು ಬರುವುದು.
ಹಣೆ ಮತ್ತು ಕೆನ್ನೆಯಲ್ಲಿ ಮೊಡವೆ ಸಮಸ್ಯೆ
ಹೊಟ್ಟೆಯಲ್ಲಿ ಏನಾದರೂ ಸಮಸ್ಯೆಯಿದ್ದಾಗ ಹಣೆ ಹಾಗೂ ಕೆನ್ನೆಯಲ್ಲಿ ಮೊಡವೆ ಕಂಡು ಬರುವುದು. ಬ್ಯಾಕ್ಟಿರಿಯಾ ಸೋಂಕು, ಅನ್ನನಾಳದಲ್ಲಿ ಸಮಸ್ಯೆ, ಹೊಟ್ಟೆಯಲ್ಲಿ ಕಡಿಮೆ ಆಮ್ಲ ಉತ್ಪತ್ತಿ ಈ ಎಲ್ಲಾ ಕಾರಣಗಳಿಂದ ಮೊಡವೆ ಕಂಡು ಬರುವುದು.
ಜೀರ್ಣಕ್ರಿಯೆಯಲ್ಲಿ ತೊಂದರೆ
ಮುಖದಲ್ಲಿ ಮೊಡವೆ, ದೊಡ್ಡ-ದೊಡ್ಡ ರಂಧ್ರಗಳು ಇವೆಲ್ಲಾ ಹೊಟ್ಟೆಯಲ್ಲಿ ಉರಿಯೂತ, ಆಗಾಗ ಮಲ ವಿಸರ್ಜನೆ, ಗ್ಯಾಸ್ಟ್ರಿಕ್ ಸಮಸ್ಯೆ ಈ ರೀತಿಯಿದ್ದಾಗ ಉಂಟಾಗುವುದು.
ಸೋರಾಸಿಸ್
ಸೋರಾಸಿಸ್‌ನಿಂದ ತ್ವಚೆಯಲ್ಲಿ ಪ್ಯಾಚ್ ಪ್ಯಾಚ್ ಉಂಟಾಗುವುದು. ಸೋರೋಸಿಸ್ ಅತ್ಯಧಿಕ ಮಾನಸಿಕ ಒತ್ತಡದಿಂದ ಕೂಡ ಉಂಟಾಗುವುದು. ಹೊಟ್ಟೆಯಲ್ಲಿ ಉರಿಯೂತ ಹಾಗೂ ಸೋರೋಸಿಸ್‌ಗೆ ಸಂಬಂಧವಿದೆ. ಈ ರೀತಿಯಾದಾಗ ತ್ವಚೆಯಲ್ಲಿ ಗುಳ್ಳೆಗಳು ಕಂಡು ಬರುವುದು.
ಹೊಟ್ಟೆಯ ಆರೋಗ್ಯ ವೃದ್ಧಿಸಲು ಟಿಪ್ಸ್
* ಮಾನಸಿಕ ಒತ್ತಡದಿಂದ ಹೊಟ್ಟೆಯ ಆರೋಗ್ಯ ಹಾಳಾಗುವುದು. ಯೋಗ ಮತ್ತು ಧ್ಯಾನ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ.
* ಪ್ರತಿದಿನ ವ್ಯಾಯಾಮ ಮಾಡಿ
* ಪ್ರೊಬಯೋಟಿಕ್ ಆಹಾರ ಸೇವಿಸಿ. ಮೊಸರು, ಮಜ್ಜಿಗೆ, ಯೋಗರ್ಟ್, ಗಂಜಿ , ಇಡ್ಲಿ ಈ ಬಗೆಯ ಆಹಾರ ಸೇವಿಸಿ.
* ಅತ್ಯಧಿಕ ಸಕ್ಕರೆ ಸೇವಿಸಿ.
* ಹಣ್ಣು, ತರಕಾರಿ, ಮೊಳಕೆ ಬರಿಸಿದ ಕಾಳು, ದವಸಧಾನ್ಯಗಳು ಇವುಗಳನ್ನು ಸೇವಿಸಿ.
* ಧೂಮಪಾನ, ಮದ್ಯ, ಜಂಕ್‌ಫುಡ್, ಸಂಸ್ಕರಿಸಿದ ಆಹಾರ ಇವುಗಳನ್ನು ದೂರವಿಡಿ.
* ಕೃತಕ ಬಣ್ಣ ಹಾಕಿದ ಆಹಾರ ದೂರವಿಡಿ.



Click it and Unblock the Notifications

