For Quick Alerts
ALLOW NOTIFICATIONS  
For Daily Alerts

30ರ ನಂತರ ಮೊಡವೆ ಸಮಸ್ಯೆಯೇ? ಮೊಡವೆ, ಕಲೆ ತಡೆಗಟ್ಟಲು ಏನು ಮಾಡಬೇಕು?

|

ಎಷ್ಟೋ ಜನ ಹದಿಹರೆಯದ ಪ್ರಾಯದಲ್ಲಿ ಯಾವುದೇ ಮೊಡವೆ ಸಮಸ್ಯೆ ಇರಲಿಲ್ಲ, ಆದರೆ 30-40 ಪ್ರಾಯದಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತದೆ.ಅರೇ... ನನಗೆ ಮೊದಲು ಇಂಥ ಯಾವುದೇ ಸಮಸ್ಯೆ ಇರಲಿಲ್ಲ, ಈ ಪ್ರಾಯದಲ್ಲಿ ಏಕೆ ಬರುತ್ತಿದೆ ಎಂದು ಕೇಳುತ್ತಾರೆ.

Adult Acne

ಮೊಡವೆ ಸಮಸ್ಯೆ ಸಾಮಾನ್ಯವಾಗಿ 25 ವರ್ಷದೊಳಗೆ ಕಡಿಮೆಯಾಗುವುದು. ಹದಿ ಹರೆಯದ ಪ್ರಾಯದಿಂದ ಯೌವನ ಪ್ರಾಯದವರಿಗೆ ಕಂಡು ಬಂದು ನಂತರ ಈ ಸಮಸ್ಯೆ ನಿಧಾನಕ್ಕೆ ದೂರಾಗುವುದು. ಅದೇ 30ರ ಮೊಡವೆ ಸಮಸ್ಯೆ ಕಂಡು ಬಂದರೆ ಈ ಮೊಡವೆ ಸಮಸ್ಯೆಯಿಂದಾಗಿ ಮುಖದ ಅಂದವೇ ಹಾಳಾಗುವುದು. ಮುಖದಲ್ಲಿ ರಂಧ್ರಗಳು, ಕಲೆಗಳು ಬೀಳುವುದು, ಟೀನೇಜ್‌ ಮೊಡವೆ ಸಮಸ್ಯೆಗಿಂತ ಇದು ತುಂಬಾ ಗಂಭೀರ ಸ್ವರೂಪದ್ದಾಗಿರುತ್ತೆ. ಇದನ್ನು ಅಡಲ್ಟ್‌ ಏಕ್ನೆ ಎಂದು ಕರೆಯಲಾಗುವುದು.

ಅಡಲ್ಟ್ ಏಕ್ನೆ ಅಂದರೆ ವಯಸ್ಕರಲ್ಲಿ ಕಂಡು ಬರುವ ಮೊಡವೆಗೆ ಕಾರಣವೇನು? ಇದನ್ನು ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ನ್ಯೂಟ್ರಿಷಿಯನಿಸ್ಟ್ ರುಜತಾ ದ್ವಿವೇಕರ್‌ ವಿವರವಾಗಿ ಹೇಳಿದ್ದಾರೆ ನೋಡಿ:

ಅಡಲ್ಟ್‌ ಏಕ್ನೆಯನ್ನು ಗುರುತಿಸುವುದು ಹೇಗೆ?

ಅಡಲ್ಟ್‌ ಏಕ್ನೆಯನ್ನು ಗುರುತಿಸುವುದು ಹೇಗೆ?

ಅಡಲ್ಟ್ ಏಕ್ನೆ ವಯಸ್ಸು 30 ದಾಟಿದವರಲ್ಲಿ ಕಂಡು ಬರುತ್ತದೆ. ಹಣೆ, ಗಲ್ಲ, ಕೆನ್ನೆಯ ಮೇಲ್ಭಾಗ, ಬೆನ್ನು, ಕೈಗಳಲ್ಲಿ ಈ ಮೊಡವೆ ಹೆಚ್ಚಾಗಿ ಕಂಡು ಬರುತ್ತದೆ.

 ಹದಿಹರೆಯದಲ್ಲಿ ಬರುವ ಮೊಡವೆ, ವಯಸ್ಕರಲ್ಲಿ ಬರುವ ಮೊಡವೆಗೆ ವ್ಯತ್ಯಾಸವೇನು?

ಹದಿಹರೆಯದಲ್ಲಿ ಬರುವ ಮೊಡವೆ, ವಯಸ್ಕರಲ್ಲಿ ಬರುವ ಮೊಡವೆಗೆ ವ್ಯತ್ಯಾಸವೇನು?

ಹದಿಹರೆಯದ ಪ್ರಾಯದಲ್ಲಿ ಮೊಡವೆ ಬಂದರೆ ಅದರ ಕಲೆ ಉಳಿಯುವುದಿಲ್ಲ, ಹದಿ ಹರೆಯದ ಪ್ರಾಯದ ಮೊಡವೆ ತ್ವಚೆ ಮೇಲ್ಪದರದಲ್ಲಿ ಕಂಡು ಬರುತ್ತದೆ. ಅದೇ ವಯಸ್ಕರಲ್ಲಿ ಮೊಡವೆ ತ್ವಚೆಯ ಒಳ ಪದರ (ಡರ್ಮಿಸ್ಟ್)ನಲ್ಲಿ ಮೊಡವೆ ಎದ್ದು ಮೇಲಕ್ಕೆ ಬರುತ್ತದೆ. ಇದರಿಂದ ಮೊಡವೆ ಕಲೆ ಆಳವಾಗಿ ಉಳಿದುಕೊಳ್ಳುವುದು.

ಅಡಲ್ಟ್ ಏಕ್ನೆ ಬಂದಾಗ ಏನು ಮಾಡಬಾರದು

ಅಡಲ್ಟ್ ಏಕ್ನೆ ಬಂದಾಗ ಏನು ಮಾಡಬಾರದು

ಅಡಲ್ಟ್ ಏಕ್ನೆ ಬಂದಾಗ ಅದನ್ನು ಚಿವುಟುವುದು, ಮುಟ್ಟುವುದು ಮಾಡಲೇಬಾರದು. ಮೊಡವೆಯನ್ನು ಚಿವುಟುವುದು, ಮುಟ್ಟುವುದು ಮಾಡಿದರೆ ಮೊಡವೆ ಹೆಚ್ಚಾಗಿ ಕಂಡು ಬರುತ್ತದೆ, ಒಂದು ಬರುವಲ್ಲಿ 3-4 ಮೊಡವೆಗಳು ಕಂಡು ಬರುತ್ತದೆ. ಆದ್ದರಿಂದ ಆ ರೀತಿ ಮಾಡಲೇಬೇಡಿ ಎನ್ನುತ್ತಾರೆ ರುಜುತಾ ದ್ವಿವೇಕರ್.

ಅಡಲ್ಟ್ ಏಕ್ನೆ ತಡೆಗಟ್ಟುವುದು ಹೇಗೆ?

ಅಡಲ್ಟ್ ಏಕ್ನೆ ತಡೆಗಟ್ಟುವುದು ಹೇಗೆ?

* ಮಾನಸಿಕ ಒತ್ತಡ ಕಡಿಮೆ ಮಾಡಿ: ವಯಸ್ಕರಾದಾಗ ಹಲವರು ಒತ್ತಡಗಳಿರುತ್ತದೆ, ಆದರೆ ಆ ಒತ್ತಡಗಳನ್ನು ಹೊರಹಾಕದಿದ್ದರೆ ಇದರಿಂದ ಮೊಡವೆ ಮಾತ್ರವಲ್ಲ, ಆರೋಗ್ಯ ಸಮಸ್ಯೆಯೂ ಹೆಚ್ಚುವುದು. ಧ್ಯಾನ, ಯೋಗ, ಹಾಡುವುಗಳನ್ನು ಕೇಳುವುದು, ಪ್ರಾರ್ಥನೆ ಇವೆಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ.

* ನಿದ್ದೆ: ನೀವು ಮಾಮೂಲಿ ಮಲಗುವುದಕ್ಕಿಂತ ಸ್ವಲ್ಪ ಮೊದಲು ಮಲಗಿ. ನಿದ್ದೆ ಮಾನಸಿಕ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಸಾಧ್ಯವಾದರೆ 9.30 ಒಳಗೆ ನಿದ್ದೆ ಮಾಡಿ.

* ವ್ಯಾಯಾಮ ಮಾಡಿ: ಪ್ರತೀ ವಾರ 150 ನಿಮಿಷ ವ್ಯಾಯಾಮ ಮಾಡಿ ಅಂದರೆ ದಿನಾ 30 ನಿಮಿಷ ವ್ಯಾಯಾಮವನ್ನು ವಾರದಲ್ಲಿ 5 ಬಾರಿಯಾದರೂ ಮಾಡಿ.

ಈ ಆಹಾರಗಳನ್ನು ಸೇವಿಸಿ

* ಪ್ರತಿದಿನ ಸ್ವಲ್ಪ ಕೊಬ್ಬರಿ ತಿನ್ನಿ

* ಬಾಳೆ ಹೂವಿನ ಪಲ್ಯವನ್ನು ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಮಾಡಿ.

* ಸೀಸನಲ್‌ ಹಣ್ಣುಗಳನ್ನು ಸೇವಿಸಿ (ಸ್ಮೂತಿ ಅಥವಾ ಜ್ಯೂಸ್‌ ಅಲ್ಲ)

English summary

How To prevent adult acne in kannada: Tips From Nutritionist Rujuta Diwekar

Adult Acne: what are the reason, how can we prevent? here are tips by Nutritionist Rujuta Diwekar, read on...
Story first published: Wednesday, November 9, 2022, 9:35 [IST]
X
Desktop Bottom Promotion