Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಕಿವಿಯೊಳಗಡೆ ಮೊಡವೆ ಇದೆಯೇ? ಈ ಮನೆಮದ್ದು ಮಾಡಿದರೆ ಬೇಗನೆ ಒಣಗುವುದು
ಮೊಡವೆ ಮುಖದಲ್ಲಿ ಮಾತ್ರವಲ್ಲ ದೇಹದ ಯಾವುದೇ ಭಾಗದಲ್ಲೂ ಕಾಣಿಸಿಕೊಳ್ಳಬಹುದು. ಬೆನ್ನು, ಎದೆ, ಜನನೇಂದ್ರೀಯ, ತುಟಿ, ಮೂಗಿನ ಒಳಗಡೆ, ಕಿವಿಯೊಳಗಡೆ ಹೀಗೆ ಎಲ್ಲಿ ಬೇಕಾದರೂ ಬರಬಹುದು. ಮುಖದ ಮೇಲೆ ಬರುವ ಮೊಡವೆಗಿಂತ ದೇಹದ ಇತರ ಕಡೆಗಳಲ್ಲಿ ಬರುವ ಮೊಡವೆ ತುಂಬಾ ನೋವಿನಿಂದ ಕೂಡಿರುತ್ತದೆ.
ನಿಮಗೆ ಕಿವಿಯೊಳಗಡೆ ಮೊಡವೆ ಬಂದರೆ ಕಿವಿನೋವಿನಿಂದಾಗಿ ನಿದ್ದೆ ಕೂಡ ದೂರಾಗುವುದು. ಕಿವಿಯೊಳಗಡೆ ಮೊಡವೆ ಬರಲು ಕಾರಣವೇನು? ಇದಕ್ಕೆ ಮನೆಮದ್ದೇನು ನೋಡೋಣ ಬನ್ನಿ:

ಕಿವಿಯೊಳಗಡೆ ಮೊಡವೆಗೆ ಕಾರಣವೇನು?
ಜಿಡ್ಡಿನಂಶ, ಬೆವರು, ಡೆಡ್ ಸ್ಕಿನ್, ಬ್ಯಾಕ್ಟಿರಿಯಾ, ಅಲ್ಲದೆ ಕಿವಿಯೊಳಗಡೆ ಗುಗ್ಗೆ ತುಂಬಿಕೊಂಡಿರುವುದು ಈ ಎಲ್ಲಾ ಕಾರಣಗಳಿಂದ ಕಿವಿಯೊಳಗಡೆ ಮೊಡವೆ ಏಳುವುದು.
ಮೊಡವೆ ಬಂದಾಗ ಮೊದಲ ನಿಯಮವೆಂದರೆ ಅದನ್ನು ಮುಟ್ಟಲು ಹೋಗಬೇಡಿ, ಅದನ್ನು ಜಿವುಟುವುದು ಮಾಡಿದರೆ ಮತ್ತೊಂದಿಷ್ಟು ಮೊಡವೆ ಬರಲು ಕಾರಣವಾಗುವುದು.
ಕಿವಿಯೊಳಗಿನ ಮೊಡವೆ ಸಮಸ್ಯೆಗೆ ಮನೆಮದ್ದು
* ವಾರ್ಮ್ ಕಂಪ್ರೆಸ್
ಒಂದು ಬಟ್ಟೆಯನ್ನು ಬಿಸಿ ನೀರಿಗೆ ಅದ್ದಿ, ಅದನ್ನು ಚಿಕ್ಕದಾಗಿ ಸುರಳಿ ಸುತ್ತಿ, ದೀಪದ ಬತ್ತಿ ಮಾಡುವ ರೀತಿಯಲ್ಲಿ ಮಾಡಿ. ನಂತರ ಅದನ್ನು 10-15 ನಿಮಿಷ ಮೊಡವೆ ಮೇಲೆ ಇಡಿ. ಇದರಿಂದ ಉರಿಯೂತ ಕಡಿಮೆಯಾಗುವುದು, ಮೊಡವೆ ಮೆತ್ತಗಾಗಿ ಬೇಗನೆ ಒಣಗುವುದು.
ಬೆಂಜೊಯೈಲ್ ಪೆರಾಕ್ಸೈಡ್
ಬೆಂಜೊಯೈಲ್ ಪೆರಾಕ್ಸೈಡ್ ಶೇ. 2-10ರಷ್ಟಿರುವ ಕ್ರೀಮ್ ದಿನಕ್ಕೆ ಎರಡು ಬಾರಿ ಹಚ್ಚಿದರೆ ಸಾಕು ಬೇಗನೆ ಒಣಗುವುದು. ಇದರಿಂದ ಬ್ಯಾಕ್ಟರಿಯಾ ಸೋಂಕು ತಡೆಗಟ್ಟಬಹುದು, ಮೊಡವೆ ಬೇಗನೆ ಒಣಗುವುದು.
ರೆಟಿನಾಯ್ಡ್ ಕ್ರೀಮ್
ಮೊಡವೆ ಬೇಗನೆ ಒಣಗಿಸಲು ಈ ಕ್ರೀಮ್ ಪರಿಣಾಮಕಾರಿ, ಕಿವಿ ಭಾಗವನ್ನು ಮೆಲ್ಲನೆ ಬಟ್ಟೆಯಿಂದ ಒರೆಸಿ, ಮೊದಲಿಗೆ ಸನ್‌ಸ್ಕ್ರೀನ್ ಲೋಷನ್ ಹಚ್ಚಿ ಈ ಕ್ರೀಮ್ ಹಚ್ಚಿ 20 ನಿಮಿಷ ಬಿಟ್ಟ ಮೇಲೆ ತೊಳೆಯಿರಿ.
ನಿಯೋಸ್ಪೋರಿನ್ ಜೆಲ್
ಇದನ್ನು ಶಾಶ್ವತವಾಗಿ ಬಳಸಬೇಡಿ, ತ್ವಚೆ ಹಾಳಾಗುತ್ತದೆ. ಇದು ಬೇಗನೆ ಮೊಡವೆ ಒಣಗಿಸುತ್ತದೆ. ಈ ಜೆಲ್ ಅನ್ನು ದಿನದಲ್ಲಿ 3-4 ಬಾರಿ ಹಚ್ಚಬಹುದು.
ಟೀ ಟ್ರೀ ಆಯಿಲ್
ಟೀ ಟ್ರೀ ಆಯಿಲ್ ಕೂಡ ತುಂಬಾನೇ ಪ್ರಯೋಜನಕಾರಿ. ಇದು ಬ್ಯಾಕ್ಟಿರಿಯಾ ಕೊಲ್ಲುತ್ತದೆ. ಒಂದು ಚಿಕ್ಕ ಕಾಟನ್ ಉಂಡೆ ತೆಗೆದುಕೊಂಡು ಅದನ್ನು ಮೆಲ್ಲನೆ ಅದ್ದಿ,ಮೊಡವೆ ಮೇಲಿಟ್ಟು ಮಲಗಿ, ಬೆಳಗ್ಗೆ ಎದ್ದೇಳುವಾಗ ಮೊಡವೆ ಒಣಗಿರುತ್ತದೆ, ಕೆಲವರಿಗೆ ಒಂದೆರಡು ದಿನ ತೆಗೆದುಕೊಳ್ಳಬಹುದು. ಈ ಮಧ್ಯ ಪದೇ ಪದೇ ಕೈಯಿಂದ ಮುಟ್ಟುವುದು ಮಾಡಬೇಡಿ.
ಜೊಜೊಬೊ ಎಣ್ಣೆ
ಜೊಜೊಬೊ ಎಣ್ಣೆಗೂ ಕಾಟನ್ ಅದ್ದಿ ಕಿವಿಯೊಳಗಡೆ 30 ನಿಮಿಷ ಇಡಿ, ಈ ರೀತಿ ದಿನದಲ್ಲಿ 2-3 ಬಾರಿ ಮಾಡಿ ಬೇಗನೆ ಒಣಗುತ್ತದೆ.
ನಿಂಬೆ ರಸ
ಒಂದು ಚಿಕ್ಕ ಕಾಟನ್ ನಿಂಬೆ ರಸಕ್ಕೆ ಅದ್ದಿ ಅದನ್ನು ಮೊಡವೆ ಮೇಲೆ 20 ನಿಮಿಷ ಇಡಿ, ಈ ರೀತಿ ದಿನದಲ್ಲಿ ಎರಡು ಬಾರಿ , ಬೇಗನೆ ಒಣಗುವುದು.
ಇವೆಲ್ಲಾ ಕಿವಿಯೊಳಗಿನ ಮೊಡವೆ ಸಮಸ್ಯೆ ಹೋಗಲಾಡಿಸಲು ಪರಿಣಾಮಕಾರಿಯಾಗಿದ್ದು, ಮೊಡವೆ ಕಾಣಿಸಿದಾಗ ನೋವು ಅಂತ ಚಿವುಟಿ ಮತ್ತಷ್ಟು ಮೊಡವೆ ಮಾಡಿಕೊಳ್ಳದೆ ಈ ವಿಧಾನ ಅನುಸರಿಸಿ, ಖಂಡಿತ ನಿಮ್ಮ ಸಮಸ್ಯೆ ದೂರಾಗುವುದು.



Click it and Unblock the Notifications













