For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಬ್ಲ್ಯಾಕ್ ಹೆಡ್‌ಗಳ ಕಿರಿಕಿರಿಗೆ ಮನೆ ಔಷಧಿ

By Divya
|

ಸಾಮಾನ್ಯವಾಗಿ ಮೂಗಿನ ಮೇಲೆ ಮತ್ತು ಮೂಗಿನ ಅಕ್ಕಪಕ್ಕದ ಚರ್ಮದಲ್ಲಿ ಕಪ್ಪುಚುಕ್ಕೆಗಳು (Blackhead) ಕಾಣಿಸಿಕೊಳ್ಳುತ್ತವೆ. ಎಣ್ಣೆಚರ್ಮದವರಿಗೆ ಈ ತೊಂದರೆ ಅತಿಹೆಚ್ಚು. ಎಷ್ಟು ತೊಳೆದರೂ ಸುಲಭವಾಗಿ ಹೋಗದೇ ಇರುವ ಈ ಚುಕ್ಕೆಗಳು ವಾಸ್ತವವಾಗಿ ಚರ್ಮದಾಳಕ್ಕೆ ಇಳಿದು ಕೇವಲ ತುದಿಯ ಕಪ್ಪುಚುಕ್ಕೆಯಂತೆ ಕಾಣುವ ಕಲೆಗೆ ಬ್ಲ್ಯಾಕ್ ಹೆಡ್‌ಗಳು ಎನ್ನುತ್ತಾರೆ. ಚಿಕ್ಕ ಗುಳ್ಳೆಯಂತಹಾ ಆಕಾರವಿರುವ ಈ ಕಪ್ಪುಕಲೆಗಳು ವಾಸ್ತವವಾಗಿ ನಮ್ಮ ಚರ್ಮದ ರಂಧ್ರವನ್ನು ತುಂಬಿರುವ ಸೆಬಮ್ (sebum) ಎಂಬ ಕೊಳೆ.

ಈ ಕಪ್ಪುಚುಕ್ಕೆಗಳು ಹೆಚ್ಚಾಗಿ ಮೂಗು, ಕಣ್ಣುಗಳು, ಹಾಗೂ ಕೆಳತುಟಿಯ ಕೆಳಭಾಗದ ಮೇಲೆ ಕಾಣಿಸಿಕೊಳ್ಳುತ್ತವೆ. ಅವು ಸಹಜವಾಗಿಯೇ ತ್ವಚೆಯನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತವೆ ಹಾಗೂ ತ್ವಚೆಯು ಅನಾರೋಗ್ಯಕರವಾಗಿ ಕಾಣಿಸಿಕೊಳ್ಳುವ೦ತೆ ಮಾಡುತ್ತವೆ. ಮೂಗಿನ೦ತಹ ಮುಖದ ಭಾಗಗಳ ಮೇಲೆ ಈ ಕಪ್ಪುಚುಕ್ಕೆಗಳು ಉ೦ಟಾಗುತ್ತವೆಯಾದ್ದರಿ೦ದ ಅವು ಮುಖವನ್ನು ಬಹಳಷ್ಟು ಕುರೂಪವಾಗಿ ಕಾಣುವ೦ತೆ ಮಾಡುತ್ತವೆ.

ಮುಖದ ಸುಕ್ಕು, ರಂಧ್ರದ ಪರಿಹಾರಕ್ಕೆ ಇಲ್ಲಿದೆ ಮನೆಮದ್ದು

ಹೀಗಾಗಿ, ಯಾರು ತಾನೇ ಈ ಕಪ್ಪುಚುಕ್ಕೆಗಳನ್ನು ನಿವಾರಿಸಿಕೊಳ್ಳಲು ಬಯಸಲಾರರು ಹೇಳಿ ?! ಒ೦ದು ವೇಳೆ ಈ ಕಪ್ಪುಚುಕ್ಕೆಗಳನ್ನು ನೋವಿಲ್ಲದೆ ನೈಸರ್ಗಿಕವಾಗಿ ಹಾಗೂ ಶಾಶ್ವತವಾಗಿ ಹೋಗಲಾಡಿಸಲು ಸಾಧ್ಯವೆ೦ದಾದಲ್ಲಿ ಅದಕ್ಕಿ೦ತ ಸ೦ತಸದ ಸ೦ಗತಿಯು ಬೇರೇನಿದ್ದೀತು ?!! ಹೀಗಾಗಿ, ಈ ಕಪ್ಪುಚುಕ್ಕೆಗಳ ಪರಿಹಾರಕ್ಕಾಗಿ ರಾಮಬಾಣದ೦ತೆ ಕೆಲಸ ಮಾಡುವ ಕೆಲವೊ೦ದು ಅಪೂರ್ವವಾದ ಮನೆಮದ್ದುಗಳ ಕುರಿತು ಮಾಹಿತಿಯನ್ನು ನಾವಿಲ್ಲಿ ಹ೦ಚಿಕೊಳ್ಳಲಿದ್ದೇವೆ...ಮುಂದೆ ಓದಿ..

ನಿಂಬೆ ಮತ್ತು ಸಕ್ಕರೆಯ ಸ್ಕ್ರಬ್

ನಿಂಬೆ ಮತ್ತು ಸಕ್ಕರೆಯ ಸ್ಕ್ರಬ್

ಈ ಸ್ಕ್ರಬ್ ಮಾಡಿದರೆ ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ ಬೇಗನೆ ಗುಣವಾಗುತ್ತದೆ. ನಿಂಬೆ ರಸಕ್ಕೆ ಸ್ವಲ್ಪ ಸಕ್ಕರೆ ಹಾಕಿ ಅದರಿಂದ ಮುಖವನ್ನು ತಿಕ್ಕಿ ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.

ಅರಿಶಿಣ ಪುಡಿ

ಅರಿಶಿಣ ಪುಡಿ

ಒಂದು ಚಮಚ ಪುದೀನಾ ರಸಕ್ಕೆ ಒಂದು ಚಮಚ ಅರಿಶಿಣ ಪುಡಿ ಹಾಕಿ ಕೆನ್ನೆ, ಮೂಗಿನ ಸಮೀಪ ಮತ್ತು ಗಲ್ಲಕ್ಕೆ ಹಾಕಿ ಉಜ್ಜಿದರೆ ಬ್ಲ್ಯಾಕ್ ಹೆಡ್ಸ್ ಅನ್ನು ಸುಲಭವಾಗಿ ಹೋಗಲಾಡಿಸಬಹುದು.

ಹಸಿ ಆಲೂಗಡ್ಡೆ

ಹಸಿ ಆಲೂಗಡ್ಡೆ

ಹಸಿ ಆಲೂಗಡ್ಡೆ ಮೊಡವೆಗಳಿಗೆ ಉತ್ತಮವಾದ ಆರೈಕೆಯಾಗಿದೆ. ಬ್ಲ್ಯಾಕ್ ಹೆಡ್ ನಿವಾರಣೆಗೂ ಈ ಆಲುಗಡ್ಡೆಯನ್ನು ಬಳಸಬಹುದು. ಆಲುಗಡ್ಡೆಯ ತೆಳುವಾದ ಬಿಲ್ಲೆಯನ್ನು ಕತ್ತರಿಸಿಕೊಂಡು ಬ್ಲ್ಯಾಕ್ ಹೆಡ್ ಇರುವಲ್ಲಿ ಸ್ವಲ್ಪ ಒತ್ತಡದಲ್ಲಿ ಕೊಂಚ ಸಮಯ ಉಜ್ಜಬೇಕು. ಸ್ವಲ್ಪ ಸಮಯ ಬಿಟ್ಟು ದಟ್ಟನೆಯ ಟವಲ್ ಉಪಯೋಗಿಸಿ ಒಣಗಿದ ಆಲುಗಡ್ಡೆಯ ರಸವನ್ನು ಒರೆಸಿ ತೆಗೆಯಬೇಕು. ಇದು ಬ್ಲ್ಯಾಕ್‌ಹೆಡ್‌ಗಳನ್ನು ತನ್ನೊಂದಿಗೆ ಸೆಳೆದುಕೊಂಡು ಬರುತ್ತದೆ. ತಣ್ಣನೆಯ ನೀರಿನಲ್ಲಿ ಬಳಿಕ ಮುಖ ತೊಳೆದುಕೊಳ್ಳಬೇಕು.

ಆಲೂಗಡ್ಡೆ ಫೇಸ್ ಪ್ಯಾಕ್-ಬರೀ ಒಂದೇ ತಿಂಗಳಲ್ಲಿ ರಿಸಲ್ಟ್!

ಹಾಲು

ಹಾಲು

ಹಾಲು ಮೂಗಿನ ಮೇಲೆ ಉದ್ಭವಿಸಿರಬಹುದಾದ ಕಪ್ಪುಚುಕ್ಕೆಗಳ ಪಾಲಿಗೆ ಹಾಲು ಒ೦ದು ಅತ್ಯುತ್ತಮ ಮನೆಮದ್ದು. ಏಕೆ೦ದರೆ, ಅದು ನಿಮ್ಮ ಮುಖದ ತ್ವಚೆಯನ್ನು ಅತ್ಯ೦ತ ಕೋಮಲಗೊಳಿಸುತ್ತದೆ ಹಾಗೂ ಬಿಗಿಗೊಳಿಸುತ್ತದೆ ಹಾಗೂ ತನ್ಮೂಲಕ ಕಪ್ಪುಚುಕ್ಕೆಗಳನ್ನು ನೈಸರ್ಗಿಕವಾಗಿ ನಿವಾರಿಸುತ್ತದೆ.

ಗ್ರೀನ್ ಟೀ

ಗ್ರೀನ್ ಟೀ

ತ್ವಚೆಯ ಮೇಲಿನ ಆ ಕೆಟ್ಟ ಕಪ್ಪುಚುಕ್ಕೆಗಳನ್ನು ಶಾಶ್ವತ ನೆಲೆಯಲ್ಲಿ ಉಜ್ಜಿ ತೆಗೆಯುವ ನಿಟ್ಟಿನಲ್ಲಿ ಹಸಿರು ಚಹಾದ ಎಲೆಗಳನ್ನು ಬಳಸಿರಿ ಹಾಗೂ ನಿಮ್ಮ ತ್ವಚೆಯು ನಿಮ್ಮತ್ತ ಮ೦ದಹಾಸ ಬೀರುವುದನ್ನು ಕ೦ಡುಕೊಳ್ಳಿರಿ.

ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ದಾಲ್ಚಿನ್ನಿ ಮತ್ತು ಜೇನು

ದಾಲ್ಚಿನ್ನಿ ಮತ್ತು ಜೇನು

ದಾಲ್ಚಿನ್ನಿಪುಡಿ ಮಿಶ್ರಿತ ಜೇನನ್ನು ಬ್ಲ್ಯಾಕ್ ಹೆಡ್ ಗಳಿರುವಲ್ಲಿ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಚರ್ಮದ ಕಾಂತಿ ಹೆಚ್ಚಿಸಲೂ ಈ ಮಿಶ್ರಣ ನೆರವಾಗುತ್ತದೆ.

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯನ್ನು ಅರೆದು ಪೇಸ್ಟ್ ರೀತಿ ಮಾಡಿ ಅದಕ್ಕೆ ಒಂದು ಚಮಚ ಹಾಲು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಬೇಕು. ಈ ರೀತಿ ವಾರದಲ್ಲಿ 2 ಬಾರಿ ಮಾಡುತ್ತಾ ಬಂದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುವುದು.

English summary

'Effective natural Ingredient Masks To Banish Blackheads

if you've already tried the store-bought blackhead-removal strips and are still not satisfied with the results, then you should read on. As today at Boldsky, we are sharing the recipes of amazingly effective DIY masks that can removed blackhead instantly
X
Desktop Bottom Promotion