For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

By Super
|

ಕೆಲ ವರ್ಷಗಳ ಹಿಂದೆ ಟೀ ಎಂದರೆ ಅತಿ ನುಣ್ಣಗಿನ ಡಸ್ಟ್ ಟೀ ಒಂದೇ ಆಗಿತ್ತು. ದಿನಗಳೆದಂತೆ ವಿವಿಧ ಬಗೆಯ ಟೀಪುಡಿಗಳು ನಮ್ಮ ಅಡುಗೆಮನೆಗಳಿಗೆ ಅಡಿಯಿಟ್ಟವು. ಆದರೆ ಈ ಟೀಪುಡಿಗಳ ಬಳಕೆ ಟೀ ಮಾಡಿ ಕುಡಿಯಲು ಸೀಮಿತವಾಗಿತ್ತು. ಆದರೆ ಇಂದು ಸುಮಾರು ನೂರು ಬಗೆಯ ಟೀಪುಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅದರಲ್ಲೂ ಟೀ ಆಯ್ಕೆಯಲ್ಲಿ ಪೈಪೋಟಿ ನೀಡುವ ಹಸಿರು ಟೀ ಶೀಘ್ರ ಸಮಯದಲ್ಲಿಯೇ ಮನೆಮಾತಾಗಿದೆ. ಕೇವಲ ಕುಡಿಯಲು ಮಾತ್ರವಲ್ಲ, ಸೌಂದರ್ಯ ವೃದ್ಧಿಗೂ ಹಸಿರು ಟೀ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಏಕಾಗಿ ಈ ಹಸಿರು ಟೀ (ಗ್ರೀನ್ ಟೀ) ಇಷ್ಟೊಂದು ಜನಪ್ರಿಯತೆ ಪಡೆದುಕೊಳ್ಳಲು ಸಾಧ್ಯವಾಯಿತು? ಇದಕ್ಕೆ ಉತ್ತರ ಹಸಿರು ಟೀಯಲ್ಲಿನ ಪೋಷಕಾಂಶಗಳಲ್ಲಿ ಅಡಗಿದೆ.

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸ್ವತಂತ್ರವಾಗಿ ಓಡಾಡುತ್ತಾ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಯಂತ್ರಿಸಿ ಕ್ಯಾನ್ಸರ್‌ನಿಂದ ದೇಹವನ್ನು ಮುಕ್ತಿಗೊಳಿಸುತ್ತದೆ. ಜೊತೆಗೇ ಮುಪ್ಪಿಗೆ ಕಾರಣವಾಗುವ ಸಡಿಲವಾದ ಚರ್ಮ, ನೆರಿಗೆ ಮೊದಲಾದವುಗಳು ಮೂಡುವುದನ್ನು ನಿಧಾನಗೊಳಿಸಿ ಮುಪ್ಪನ್ನು ಮುಂದೂಡುತ್ತದೆ. ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!

ತೂಕ ಕಳೆದುಕೊಳ್ಳಲಿಚ್ಛಿಸುವವರು ಹಸಿರು ಟೀ ನಿಯಮಿತವಾಗಿ ಸೇವಿಸುವುದರಿಂದ ಶೀಘ್ರವೇ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗಿ ಶರೀರವನ್ನು ಆರೋಗ್ಯದಲ್ಲಿಡಲು ನೆರವಾಗುತ್ತದೆ.

ಹಸಿರು ಟೀ ಯಿಂದ ಅರೋಗ್ಯದ ಜೊತೆಗೇ ಸೌಂದರ್ಯವೂ ವೃದ್ಧಿಗೊಳ್ಳುತ್ತದೆ. ಹಸಿರು ಟೀ ಉಪಯೋಗಿಸಿದ ಹಲವು ಸೌಂದರ್ಯ ಪ್ರಸಾದನಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಆದರೆ ಬಲುದುಬಾರಿಯಾದ ಈ ಪ್ರಸಾದನಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದಂತೆ ಮನೆಯಲ್ಲಿಯೂ ಇವನ್ನು ತಯಾರಿಸಿಕೊಳ್ಳಬಹುದು. ವಿವಿಧ ಬಗೆಯ ಚರ್ಮಕ್ಕಾಗಿ ವಿವಿಧ ಬಗೆಯ ಹಸಿರು ಟೀ ಬಳಸಿದ ಮುಖದ ಲೇಪನ (face pack) ತಯಾರಿಸಿಕೊಳ್ಳುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಒಣಚರ್ಮದಿಂದ ಸಾಮಾನ್ಯ ಚರ್ಮದ ಕಾಂತಿಗಾಗಿ

ಒಣಚರ್ಮದಿಂದ ಸಾಮಾನ್ಯ ಚರ್ಮದ ಕಾಂತಿಗಾಗಿ

ಚರ್ಮದ ಹೊರಪದರದಿಂದ ಸತ್ತ ಜೀವಕೋಶಗಳನ್ನು ನಿವಾರಿಸಲು ಸಕ್ಕರೆ ಉತ್ತಮವಾಗಿದೆ. ಜೊತೆಗೇ ಚರ್ಮದ ಹೊರಪದರದ ಸೂಕ್ಷ್ಮರಂಧ್ರಗಳಲ್ಲಿ ತುಂಬಿಕೊಂಡಿದ್ದ ಧೂಳಿನ ಕಣಗಳನ್ನೂ ಸಕ್ಕರೆಯ ಅತಿಸೂಕ್ಷ್ಮ ಕಣಗಳು ನಿವಾರಿಸುತ್ತವೆ.

ಮುಖಲೇಪವನ್ನು ಈ ರೀತಿ ತಯಾರಿಸಿ

ಮುಖಲೇಪವನ್ನು ಈ ರೀತಿ ತಯಾರಿಸಿ

ಒಂದು ಚಿಕ್ಕ ಚಮಚ ಕ್ರೀಂ, ಒಂದು ಚಿಕ್ಕ ಚಮಚ ಸಕ್ಕರೆ ಸೇರಿಸಿ ಮಿಶ್ರಣ ತಯಾರಿಸಿ. ಉತ್ತಮ ಪರಿಣಾಮಕ್ಕಾಗಿ ಕಂದು ಸಕ್ಕರೆಯನ್ನು ಬಳಸಿ.ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ (ಒಣಚರ್ಮಕ್ಕೆ ಒಂದು, ಸಾಮಾನ್ಯ ಚರ್ಮಕ್ಕೆ ಎರಡು ಚಮಚ). ಈ ಲೇಪನವನ್ನು ಮುಖದ ಮೇಲೆ ವೃತ್ತಾಕಾರದಲ್ಲಿ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಸೂಕ್ಷ್ಮಸಂವೇದಿ ಚರ್ಮದ ಕಾಂತಿ ಹೆಚ್ಚಿಸಲು

ಸೂಕ್ಷ್ಮಸಂವೇದಿ ಚರ್ಮದ ಕಾಂತಿ ಹೆಚ್ಚಿಸಲು

ಮೊಸರಿನಲ್ಲಿರುವ ವಿಟಮಿನ್ ಡಿ, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಚರ್ಮದ ಆರೈಕೆಗೂ ಉತ್ತಮವಾಗಿದೆ. ಜೊತೆಗೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನೂ ನೀಡುತ್ತದೆ. ಕಾಂತಿರಹಿತವಾದ ಚರ್ಮ, ಬಿಸಿಲಿಗೆ ಒಣಗಿದ ಗುರುತುಗಳು ಮತ್ತು ಗಾಢಗೊಂಡಿರುವ ಚರ್ಮದ ಬಣ್ಣವನ್ನು ತಿಳಿಗೊಳಿಸಲು ನೆರವಾಗುತ್ತದೆ.

ಮುಖಲೇಪವನ್ನು ಈ ರೀತಿ ತಯಾರಿಸಿ

ಮುಖಲೇಪವನ್ನು ಈ ರೀತಿ ತಯಾರಿಸಿ

ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಮುಪ್ಪು ಆವರಿಸುವುದನ್ನು ದೂರಮಾಡಲು

ಮುಪ್ಪು ಆವರಿಸುವುದನ್ನು ದೂರಮಾಡಲು

ವಯಸ್ಸಾಗುತ್ತಿದ್ದಂತೆಯೇ ನೆರೆತ ಕೂದಲು, ಮುಖದ ಚರ್ಮದಲ್ಲಿ ನೆರಿಗೆ, ಜೋಲುಬಿದ್ದ ಚರ್ಮ, ಕಪ್ಪು ಕಲೆಗಳು ಮೊದಲಾದ ತೊಂದರೆಗಳಿಗೆ ಹಸಿರು ಟೀ ಅಧ್ಬುತವಾದ ಫಲವನ್ನು ನೀಡುತ್ತದೆ. ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳ ಜೊತೆಗೇ ಆರ್ದ್ರತೆಯ ಅಗತ್ಯವನ್ನೂ ಪೂರೈಸುತ್ತದೆ.

ಮುಖಲೇಪವನ್ನು ಈ ರೀತಿ ತಯಾರಿಸಿ

ಮುಖಲೇಪವನ್ನು ಈ ರೀತಿ ತಯಾರಿಸಿ

ಎರಡು ಚಿಕ್ಕಚಮಚ ಜೇನುತುಪ್ಪಕ್ಕೆ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಮಧ್ಯಮ ಗಾತ್ರದ ಹತ್ತಿಯ ಉಂಡೆಗಳನ್ನು ಮಾಡಿಕೊಂಡು ಮುಖಲೇಪದಲ್ಲಿ ಮುಳುಗಿಸಿ ಇಡಿಯ ಮುಖಕ್ಕೆ ನಯವಾಗಿ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ವಾರಕ್ಕೆರಡು ಬಾರಿ ಈ ಪ್ರಯೋಗವನ್ನು ಪುನರಾವರ್ತಿಸಿ. ಶೀಘ್ರವೇ ಚರ್ಮದ ನೆರಿಗೆ ಕಡಿಮೆಯಾಗಿ ಮುಪ್ಪು ಮುಂದೂಡಿದಂತಾಗುತ್ತದೆ.

ದಿನದ ಕೆಲಸದ ಬಳಿಕ ಹಚ್ಚಿಕೊಳ್ಳಬೇಕಾದ ಮುಖಲೇಪ

ದಿನದ ಕೆಲಸದ ಬಳಿಕ ಹಚ್ಚಿಕೊಳ್ಳಬೇಕಾದ ಮುಖಲೇಪ

ನಿತ್ಯದ ಕೆಲಸದ ನಿಮಿತ್ತ ಮನೆಯಿಂದ ಹೊರಗಿರಬೇಕಾದ ಸಂದರ್ಭದಲ್ಲಿ ವಿವಿಧ ವಾತಾವರಣಗಳಿಗೆ ಒಡ್ಡುವ ಚರ್ಮ ಸಂಜೆ ಮನೆ ಸೇರುವಷ್ಟರಲ್ಲಿ ಕಳಾಹೀನವಾಗಿರುತ್ತದೆ. ಮುಖದ ಚರ್ಮಕ್ಕೆ ಬೆಳಗ್ಗಿನ

ತಾಜಾತನವನ್ನು ನೀಡಲು ಹಸಿರು ಟೀ ಉತ್ತಮ ಪೋಷಣೆ ನೀಡುತ್ತದೆ. ಇದರೊಂದಿಗೆ ಬಾಳೆಹಣ್ಣು ಸೇರಿದರೆ ಈ ಶಕ್ತಿ ಹತ್ತುಪಟ್ಟು ಹೆಚ್ಚುತ್ತದೆ. ಎಣ್ಣೆಚರ್ಮದವರು ಕೊಂಚ ಮುಲ್ತಾನಿ ಮಿಟ್ಟಿ ಸೇರಿಸಿದರೆ ಉತ್ತಮ ಪ್ರಮಾಣದಲ್ಲಿ ಆರ್ದ್ರತೆ ದೊರಕುವುದರಿಂದ ಬೆಳಗ್ಗಿನ ತಾಜಾತನ ಮರುಕಳಿಸುತ್ತದೆ.

ಮುಖಲೇಪವನ್ನು ಈ ರೀತಿ ತಯಾರಿಸಿ

ಮುಖಲೇಪವನ್ನು ಈ ರೀತಿ ತಯಾರಿಸಿ

ಒಂದು ಚಿಕ್ಕ ಚಮಚ ಕಿವುಚಿದ, ಚೆನ್ನಾಗಿ ಕಳಿತ ಬಾಳೆಹಣ್ಣು, ಒಂದು ಚಿಕ್ಕ ಚಮಚ ಮೊಸರು ಸೇರಿಸಿ ಮಿಶ್ರಣ ತಯಾರಿಸಿ. ಇದಕ್ಕೆ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

English summary

Top Green Tea Face Packs For Different Skin Types

Green tea has widely gained popularity in the recent years, due to its health and beauty benefits. Green tea contains high concentration of anti-oxidants, which helps to fight against free radicals in the body. The regular consumption of green tea accelerates the slimming process of the body.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X